Asianet Suvarna News Asianet Suvarna News

Heart Attack: ಉಸಿರಾಡುವಾಗಲೇ ಹೃದಯಾಘಾತವಾಗೋ ಮುನ್ನೆಚ್ಚರಿಕೆ ಸಿಗುತ್ತೆ!

ಚಳಿಗಾಲದಲ್ಲಿ ಹೃದಯಾಘಾತ ಉಂಟಾಗುವ ಸಮಸ್ಯೆ ಹೆಚ್ಚು.  ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆ ಅಗತ್ಯ. ಹೃದಯಾಘಾತಕ್ಕೂ ಮುನ್ನ ಆಗುವ ಲಕ್ಷಣಗಳನ್ನು ಅರಿತುಕೊಂಡು ಚಿಕ್ಕದೊಂದು ಎಚ್ಚರಿಕೆಯ ಗಂಟೆ ಮೊಳಗಿದರೂ ತಕ್ಷಣ ಕ್ರಮ ಕೈಗೊಳ್ಳಿ.
 

Heart attack sign you can notive when breathe sum
Author
First Published Dec 22, 2023, 7:00 AM IST

ಚಳಿಗಾಲ ಮನಸ್ಸಿಗೆ ಎಷ್ಟು ಮುದ ನೀಡುವ ಸಮಯವೋ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಎಚ್ಚರಿಕೆಯಿಂದ ಇರಬೇಕಾದ ಕಾಲವೂ ಹೌದು. ಚಳಿಗಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಅಧಿಕ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಹೃದಯಕ್ಕೆ ರಕ್ತದ ಪೂರೈಕೆ ಕಡಿಮೆಯಾಗುತ್ತದೆ. ಸಹಜ ಹರಿವು ಇರುವುದಿಲ್ಲ. ಹೀಗಾಗಿ, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಹೃದಯಾಘಾತಕ್ಕೆ ಮುನ್ನ ಸಣ್ಣದೊಂದು ಲಕ್ಷಣವಾದರೂ ಗೋಚರಿಸುತ್ತದೆ. ಅದನ್ನು ಕಡೆಗಣಿಸಬಾರದು. ಹೃದಯ ಸ್ತಂಭನವಾದರೆ ಏನು ಮಾಡಲೂ ಸಾಧ್ಯವಾಗದೆ ಹೋಗಬಹುದು. ಆದರೆ, ಹೃದಯಾಘಾತಕ್ಕೂ ಸ್ವಲ್ಪ ಸಮಯದ ಮುನ್ನ ದೇಹದಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ. ಅವುಗಳ ಬಗ್ಗೆ ಕಣ್ಣಾಗಿರಬೇಕು. ಮೇಯೋ ಕ್ಲಿನಿಕ್ ಚಳಿಗಾಲದ ಆರಂಭದಲ್ಲಿ ಹೃದಯದ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಮಾಹಿತಿ ನೀಡಿದೆ. ಅಷ್ಟಕ್ಕೂ, ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕೊಬ್ಬಿನ ಶೇಖರಣೆಯಿಂದಾಗಿ ಶುರುವಾಗುತ್ತದೆ. ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಕೊಬ್ಬಿನಿಂದ ಕೂಡಿದ ಈ ಮುದ್ದಯನ್ನು ಪ್ಲೇಕ್ ಎಂದು ಕರೆಯಲಾಗುತ್ತದೆ. ಪ್ಲೇಕ್ ಉಂಟಾಗುವ ಪ್ರಕ್ರಿಯೆಯನ್ನು ಅಥೆರೊಸ್ಲ್ಕೆರೊಸಿಸ್ ಎನ್ನಲಾಗುತ್ತದೆ. ಕೆಲವೊಮ್ಮೆ ಈ ಪ್ಲೇಕ್ ಛಿದ್ರವಾಗುತ್ತದೆ. ಆಗಲೇ ಸಮಸ್ಯೆ ಗಂಭೀರವಾಗುತ್ತದೆ.

ಲಕ್ಷಣಗಳ ಬಗ್ಗೆ ಗಮನವಿರಲಿ
ಹೃದಯದಲ್ಲಿ ನಿರ್ಮಾಣವಾಗಿರುವ ಪ್ಲೇಕ್ (Plaque) ಗಳು ಛಿದ್ರವಾದಾಗ ಕ್ಲಾಟ್ (Clot) ರೂಪ ಪಡೆದುಕೊಳ್ಳುತ್ತವೆ. ಇವು ರಕ್ತದ ಹರಿವಿಗೆ ತಡೆಯೊಡ್ಡಿ, ಹೃದಯದ ಮಾಂಸಖಂಡಗಳಿಗೆ (Muscles) ಹಾನಿಯುಂಟು ಮಾಡುತ್ತವೆ. ಈ ಸಮಯದಲ್ಲೇ ಹೃದಯಾಘಾತ (Heart Attack) ಉಂಟಾಗುತ್ತದೆ. ಇದು ಲಘು ಮಟ್ಟದಿಂದ ತೀವ್ರವಾಗಿರಬಹುದು.

Health Tips: ಊಟ ತಿಂಡಿಗೆ ಹೊತ್ತು ಗೊತ್ತಿರಲಿ, ಹೃದಯದ ಆರೋಗ್ಯ ಜೋಪಾನ!

ಹೃದಯಾಘಾತಕ್ಕೂ ಮುನ್ನ ಸಾಮಾನ್ಯವಾಗಿ ಹಲವು ರೀತಿಯ ಲಕ್ಷಣಗಳನ್ನು ಕಾಣಬಹುದು. 
•    ಎದೆನೋವು (Chest Pain): ಏನೋ ಒತ್ತಡವಾದಂತೆ, ಎದೆಯಲ್ಲಿ ಬಿಗಿಯಾದಂತೆ, ಹಿಂಡುವಂತೆ ಬರುವ ನೋವು. 
•    ನೋವು: ನೋವು ಅಥವಾ ಅಸಹಜವಾದ ಹಿಂಸೆ ಭುಜ, ತೋಳು, ಬೆನ್ನು, ಕುತ್ತಿಗೆ, ಹಲ್ಲುಗಳು, ಒಸಡು ಮತ್ತು ಕೆಲವು ಬಾರಿ ಮೇಲಿನ ಹೊಟ್ಟೆಗೆ ವಿಸ್ತರಿಸುವುದು.
•    ಬೆವರು (Sweat) 
•    ತಲೆಸುತ್ತು
•    ಹೃದಯದಲ್ಲಿ ಉರಿ (Burn)
•    ವಾಕರಿಕೆ
ಸೇರಿದಂತೆ ಮುಂತಾದ ಲಕ್ಷಣಗಳು ಕಂಡುಬರಬಹುದು. ಎಷ್ಟೋ ಜನರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ಅಸಾಧ್ಯ ಉರಿಯಾಗಿ, ಅದನ್ನು ಹೊಟ್ಟೆಯುರಿ, ಆಸಿಡಿಟಿಯಿಂದಾದ ಉರಿ ಎಂದು ಭಾವಿಸಿ ಅಪಾಯ ತಂದುಕೊಳ್ಳುತ್ತಾರೆ. ಮೇಯೋ ಕ್ಲಿನಿಕ್ ಪ್ರಕಾರ, ಮಹಿಳೆಯರಲ್ಲಿ ಈ ಮೇಲಿನ ಲಕ್ಷಣಗಳನ್ನು ಹೊರತುಪಡಿಸಿಯೂ ಕೆಲವು ಲಕ್ಷಣಗಳು (Symptoms) ಕಂಡುಬರುವ ಸಾಧ್ಯತೆ ಇರುತ್ತದೆ. ಕುತ್ತಿಗೆ, ತೋಳು, ಬೆನ್ನಿನಲ್ಲಿ ನೋವು ಕಾಣಿಸಬಹುದು. ಕೆಲವು ಬಾರಿ ಮೊಟ್ಟಮೊದಲ ಲಕ್ಷಣವೆಂದರೆ, ಹೃದಯ ಸ್ತಂಭನ (Cardiac Arrest). ಇದು ತೀವ್ರವಾಗಿದ್ದರೆ ಜೀವಕ್ಕೆ (Life) ಹಾನಿಯಾಗಬಹುದು.

ಉಸಿರಾಟದಿಂದ ಪತ್ತೆ
ಹೃದಯಾಘಾತದ ಮುನ್ನ ಬರುವ ಲಕ್ಷಣವನ್ನು ಉಸಿರಾಟದ ಮೂಲಕ ಪತ್ತೆ ಮಾಡಬಹುದು. ಎದೆಯಲ್ಲಿ ನೋವು ಅಥವಾ ಒತ್ತಡವಾದಾಗ (Pressure) ರೆಸ್ಟ್ ತೆಗೆದುಕೊಂಡರೂ ಆರಾಮವೆನಿಸುವುದಿಲ್ಲ.

ಬೆಳಗ್ಗೆದ್ದು ಹಾಲಿಗೆ ಈ ಒಂದ್ ಮಸಾಲೆ ಹಾಕಿ ಕುಡಿದ್ರೆ ಸಾಕು, ಒಂದೇ ವಾರದಲ್ಲಿ ಮಂಡಿನೋವು ಮಾಯ!

ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗುತ್ತಿರುವಾಗ ಅಲ್ಲಿ ಒತ್ತಡ ಸೃಷ್ಟಿಯಾಗುತ್ತದೆ. ಈ ಸಮಯದಲ್ಲಿ ಉಸಿರಾಟದ ಅವಧಿ ಕಡಿಮೆಯಾಗುತ್ತದೆ. ಆಳವಾದ ದೀರ್ಘ ಉಸಿರಾಟ (Long Breath) ಸಾಧ್ಯವಾಗುವುದಿಲ್ಲ. ಹೃದಯಾಘಾತವಾಗುವ ಕೆಲವೇ ಗಂಟೆಗಳ ಮುನ್ನ, ಕೆಲ ದಿನಗಳ ಮುನ್ನ ಅಥವಾ ವಾರಕ್ಕೂ ಮುನ್ನ ಇದನ್ನು ಅನುಭವಿಸಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪದೇ ಪದೆ ನಿಮಗೆ ಕಿರು ಅವಧಿಯ ಉಸಿರಾಟದ (Short Breath) ಅನುಭವವಾಗುತ್ತಿದ್ದರೆ ತಕ್ಷಣ ವೈದ್ಯರ ಬಳಿಗೆ ಹೋಗಿ ಪರೀಕ್ಷೆ (Test) ಮಾಡಿಸಿಕೊಳ್ಳುವುದು ಅಗತ್ಯ. 


ಹೃದಯಾಘಾತಕ್ಕೆ ಮೂಲ ಕಾರಣ ಕೊಬ್ಬು ಸಂಗ್ರಹವಾಗುವುದು. ಹೀಗಾಗಿ, ಕೆಟ್ಟ ಕೊಬ್ಬು (Bad Fat) ದೇಹದಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಉತ್ತಮ. 
 

Latest Videos
Follow Us:
Download App:
  • android
  • ios