Mosquito Bite: ಸೊಳ್ಳೆ ಕಡಿದು ಊತವಾಗಿದ್ರೆ ಇಲ್ಲಿದೆ ಮನೆ ಮದ್ದು

ಋತು ಬದಲಾಗ್ತಿದ್ದಂತೆ ಸೊಳ್ಳೆ ಕಾಟ ಶುರುವಾಗಿದೆ. ಈ ಸೊಳ್ಳೆಗಳು ಮಾರಕ ರೋಗಗಳನ್ನು ತರುವುದಲ್ಲದೆ ಚರ್ಮದ ಆರೋಗ್ಯಕ್ಕೂ ಹಾನಿಕರ. ಸೊಳ್ಳೆ ಕಡಿತದಿಂದ ನಿಮಗೂ ವಿಪರೀತ ತುರಿಕೆಯಾಗ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ. 
 

Health Tips These Home Remedies To Get Instant Relief From Mosquito Bite roo

 ಈಗ ಅಲ್ಲೊಂದು ಇಲ್ಲೊಂದರಂತೆ ಮಳೆ ಬರಲು ಶುರುವಾಗಿದೆ. ಬೇಸಿಗೆ ಮುಗಿತಾ ಬಂದು, ಮಳೆಗಾಲದ ಆರಂಭದಲ್ಲಿ ಅನಾರೋಗ್ಯ ಕಾಡೋದು ಹೆಚ್ಚು. ಈ ಸಮಯದಲ್ಲಿ ಸೊಳ್ಳೆಗಳು ಕೂಡ ಹೆಚ್ಚಿರುತ್ತವೆ. ಅಲ್ಲಲ್ಲಿ ನೀರು ನಿಂತಿರುವ ಕಾರಣ, ಸೊಳ್ಳೆಗಳು ಸುಲಭವಾಗಿ ಹುಟ್ಟಿಕೊಳ್ಳುತ್ತವೆ. ಈ ಸೊಳ್ಳೆಗಳು ರಾತ್ರಿ ಪೂರ್ತಿ ಸರಿಯಾಗಿ ನಿದ್ರೆ ಮಾಡೋಕೆ ಬಿಡೋದಿಲ್ಲ. ಇನ್ನು ಕೆಲವುಕಡೆ ಹಗಲಿನಲ್ಲೂ ಸೊಳ್ಳೆ ಕಾಟ ಹೆಚ್ಚಿರುತ್ತದೆ. 

ಪಾರ್ಕ್ (Park) ಗಳಂತ ಪ್ರದೇಶದಲ್ಲಿ ಸಂಜೆ ಸಮಯದಲ್ಲಿ ಸೊಳ್ಳೆ (Mosquito) ಗಳ ಅಬ್ಬರ ಹೆಚ್ಚು. ಈ ಸೊಳ್ಳೆ ಕಡಿತದಿಂದ ಉರಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಲವರ ಚರ್ಮ ಸೂಕ್ಷ್ಮವಾಗಿರುವ ಕಾರಣ ಸೊಳ್ಳೆ ಕಡಿತದಿಂದ ಕೈ, ಮೈಗಳ ಮೇಲೆ ಕೆಂಪು ದುದ್ದುಗಳನ್ನು ನಾವು ಕಾಣ್ಬಹುದು. ಅವು ವಿಪರೀತ ಹಿಂಸೆ ನೀಡುತ್ತವೆ. ನಿಮಗೂ ಸೊಳ್ಳೆಯಿಂದ ಕೆಂಪು ದುದ್ದು, ತುರಿಕೆ, ಉರಿಯಾಗ್ತಿದ್ದರೆ ಮನೆ ಮದ್ದನ್ನು ಬಳಸಬಹುದು. ನಾವಿಂದು ಯಾವ ಮನೆ ಮದ್ದು ಸೊಳ್ಳೆ ಕಡಿತಕ್ಕೆ ಸೂಕ್ತ ಎಂಬುದನ್ನು ಹೇಳ್ತೇವೆ.

ಒಂದೇ ಒಂದು ತಿಂಗಳು ಸಕ್ಕರೆ ಬಿಟ್ಟು ನೋಡಿ, HEALTH GOAL ರಿಚ್ ಆಗದಿದ್ದರೆ ಕೇಳಿ!

ಸೊಳ್ಳೆ ಕಡಿತದ ಸಮಸ್ಯೆಯಿಂದ ಹೀಗೆ ತಪ್ಪಿಸಿಕೊಳ್ಳಿ :
ಐಸ್ ಕ್ಯೂಬ್ (Ice Cube) :
ನಿಮ್ಮ ದೇಹದ ಮೇಲೆ ಸೊಳ್ಳೆ ಕಾರಣಕ್ಕೆ ಊತವಾಗಿದ್ದರೆ ನೀವು ಐಸ್ ಕ್ಯೂಬ್ ಬಳಸಬಹುದು. ಸೊಳ್ಳೆ ಕಡಿದ ಜಾಗಕ್ಕೆ ಐಸ್ ಕ್ಯೂಬ್ ಇಡಬೇಕು. ಇದು ಊತವನ್ನು ಹಾಗೂ ಉರಿಯನ್ನು ಬೇಗ ಕಡಿಮೆ ಮಾಡುತ್ತದೆ. ನೀವು ಐಸ್ ಕ್ಯೂಬನ್ನು ಊತದ ಮೇಲೆ ನೇರವಾಗಿ ಇಡಬೇಡಿ. ಒಂದು ತೆಳುವಾದ ಬಟ್ಟೆಯಲ್ಲಿ ಐಸ್ ಸುತ್ತಿ ನಂತ್ರ ಅದನ್ನು ಊತವಾಗಿರುವ ಜಾಗದಲ್ಲಿ ಇಡಿ.

ಅಲೋವೇರಾ (Alovera) : ಅಲೋವೇರಾ ಅನೇಕ ಆರೋಗ್ಯ ಗುಣವನ್ನು ಹೊಂದಿದೆ. ಅದು ತುರಿಕೆ, ಉರಿ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಸೊಳ್ಳೆ ಕಡಿತದ ಸಮಯದಲ್ಲಿ ನೀವು ಆ ಜಾಗಕ್ಕೆ ಅಲೋವೇರಾ ಹಚ್ಚುವುದ್ರಿಂದ ಹೆಚ್ಚು ಲಾಭವಿದೆ. ನೀವು ತಾಜಾ ಅಲೋವೇರಾ ಜೆಲ್ ಬಳಕೆ ಮಾಡಿ. ಊತದ ಮೇಲೆ ಹಚ್ಚಿ 10 – 15 ನಿಮಿಷ ಬಿಡಬೇಕು.

ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್‌ಗಳು

ಜೇನುತುಪ್ಪ (Honey) : ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ತುರಿಕೆ ಕಡಿಮೆ ಮಾಡುತ್ತದೆ. ಸೊಳ್ಳೆ ಕಡಿತ ಜಾಗಕ್ಕೆ ನೀವು ಸ್ವಲ್ಪ ಪ್ರಮಾಣದ ಜೇನುತುಪ್ಪವನ್ನು ಹಚ್ಚಬೇಕು. 10 – 15 ನಿಮಿಷ ಅದನ್ನು ಹಾಗೆ ಬಿಟ್ಟು ನಂತ್ರ ಕ್ಲೀನ್ ಮಾಡಬೇಕು.

ಆಪಲ್ ವಿನೇಗರ್ (Apple Vinegar) : ಒಂದು ಹತ್ತಿಯಲ್ಲಿ ಆಪಲ್ ಸೈಡರ್ ವಿನೆಗರನ್ನು ಅದ್ದಿ ಅದನ್ನುಸೊಳ್ಳೆ ಕಡಿತದ ಜಾಗಕ್ಕೆ ಹಚ್ಚಬೇಕು. ವಿನೆಗರ್‌ನಲ್ಲಿರುವ ಆಮ್ಲೀಯತೆಯು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಅಡುಗೆ ಸೋಡಾ (Baking Soda) : ಸೊಳ್ಳೆ ಕಡಿತದಿಂದ ಆಗಿರುವ ಊತ, ತುರಿಕೆಗೆ ನೀವು ಅಡುಗೆ ಸೋಡಾ ಕೂಡ ಬಳಕೆ ಮಾಡಬಹುದು. ಅಡುಗೆ ಸೋಡಾಕ್ಕೆ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸೊಳ್ಳೆ ಕಡಿದ ಜಾಗಕ್ಕೆ ಹಚ್ಚಿ. 10 -15 ನಿಮಿಷ ಹಾಗೆ ಬಿಡಿ. ನಂತ್ರ ಅದನ್ನು ತೊಳೆಯಿರಿ. ಅಡುಗೆ ಸೋಡಾ ಕೂಡ ಔಷಧಿ ಗುಣಗಳನ್ನು ಹೊಂದಿದ್ದು, ಅದು ಸೊಳ್ಳೆ ಊತವನ್ನು ಕಡಿಮೆ ಮಾಡುತ್ತದೆ.

ಓಟ್ ಮೀಲ್ (Oat Meal) : ಉಪಾಹಾರಕ್ಕಾಗಿ ಹೆಚ್ಚಾಗಿ ಬಳಕೆ ಮಾಡಲಾಗುವ  ಓಟ್ ಮೀಲ್ ಅನ್ನು ನೀವು ತುರಿಕೆಯನ್ನು ಕಡಿಮೆ ಮಾಡಲು ಬಳಸಬಹುದು. ಒಂದು ಪಾತ್ರೆಗೆ ಸಮ ಪ್ರಮಾಣದಲ್ಲಿ ಓಟ್ ಮೀಲ್ ಮತ್ತು ನೀರನ್ನು ಬೆರೆಸಿ ಓಟ್ ಮೀಲ್ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತ್ರ ಸ್ವಚ್ಛಗೊಳಿಸಿದ್ರೆ ಸೊಳ್ಳೆಯಿಂದಾಗುವ ತುರಿಕೆ, ಊತ ಕಡಿಮೆಯಾಗುತ್ತದೆ. 
 

Latest Videos
Follow Us:
Download App:
  • android
  • ios