ಹೆಚ್ಚು ಹಸಿವಾಗುತ್ತೆ ಅಂತ ಸುಮ್ನಿರ್ಬೇಡಿ, ಡಯಾಬಿಟಿಸ್ ಇದ್ಯಾಂತ ಚೆಕ್ ಮಾಡಿ

ಒಮ್ಮೆ ಮಧುಮೇಹ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮಧುಮೇಹ ಕಾಣಿಸಿಕೊಳ್ಳೋ ಆರಂಭದಲ್ಲೇ ಎಚ್ಚರಿಕೆಯಿಂದ ಇರಬೇಕು. ಮಧುಮೇಹ ಇದೆಯೆಂದು ತಿಳಿದುಕೊಳ್ಳುವುದು ತಡವಾದರೆ ಚಿಕಿತ್ಸೆ ಪಡೆಯಲು ಕಷ್ಟವಾದೀತು. ಹಾಗಿದ್ರೆ ಮಧುಮೇಹವನ್ನು ಹೊಂದಿರಬಹುದು ಎಂದು ಸೂಚಿಸುವ ಚಿಹ್ನೆಗಳು ಯಾವುವು ತಿಳಿಯೋಣ.

Health Tips: Signs That Indicate You Could Have Diabetes Vin

ಮಧುಮೇಹವು ಭಾರತದಲ್ಲಿ ಊಹಿಸುವುದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಕಾಯಿಲೆಯಾಗಿದೆ. ಮಧುಮೇಹವು ಜೀವನಶೈಲಿ ರೋಗವಾಗಿದ್ದು ಅದು ಪ್ರಪಂಚದಾದ್ಯಂತ ಅದರಲ್ಲೂ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ. ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ಪ್ರಕಾರ, 2017ರಲ್ಲಿ 72.9 ಮಿಲಿಯನ್ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದರಲ್ಲಿ ನಗರ ಪ್ರದೇಶಗಳಲ್ಲಿ ಕಾಯಿಲೆಯ ಪ್ರಮಾಣ ಹೆಚ್ಚಿದೆ ಎಂಬುದನ್ನು ಗಮನಿಸಲಾಗಿದೆ. ಆದರೆ ಮಧುಮೇಹವನ್ನು ಅನಿಯಂತ್ರಿತವಾಗುವ ಮೊದಲು ಆರಂಭಿಕ ಹಂತದಲ್ಲಿ ಹೇಗೆ ನಿಭಾಯಿಸಬಹುದು ? ಅದರ ಆಕ್ರಮಣವನ್ನು ಸೂಚಿಸುವ ಯಾವುದೇ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಯಾವುವು ಎಂಬುದನ್ನು ತಿಳಿಯೋಣ.

ಮಧುಮೇಹದ ಚಿಹ್ನೆಗಳು ಮತ್ತು ಲಕ್ಷಣಗಳು
ಮಧುಮೇಹದ (Diabetes) ಸಮಸ್ಯೆ ಕಾಣಿಸಿಕೊಳ್ಳೋ ಮುಂಚೇನೆ ದೇಹದಲ್ಲಿ ಕೆಲವೊಂದು ರೋಗ ಲಕ್ಷಣಗಳು (Symptoms) ಕಾಣಿಸಿಕೊಳ್ಳುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು. ಅವು ಯಾವುವೆಂದು ತಿಳಿಯೋಣ.

ಟೈಪ್-2 ಮಧುಮೇಹ ಇರೋರಿಗೆ ಕ್ಯಾನ್ಸರ್‌ ಕಾಡೋ ಸಾಧ್ಯತೆ ಹೆಚ್ಚಿದ್ಯಾ ?

ಹಸಿವು ಮತ್ತು ಆಯಾಸ: ಹಲವು ಸಂದರ್ಭಗಳಲ್ಲಿ ಸಾಮಾನ್ಯವಾಗಿ ಹಸಿವು (Hunger) ಮತ್ತು ಆಯಾಸ ಕಂಡು ಬರುತ್ತದೆ. ಆದರೆ ಡಯಾಬಿಟಿಸ್‌ ಇರುವವರು ಹೆಚ್ಚು ಹಸಿವು ಮತ್ತು ದಣಿವನ್ನು ಅನುಭವಿಸುತ್ತಾರೆ. ನೀವು ಸ್ವಲ್ಪ ಸಮಯದವರೆಗೆ ಈ ರೋಗ ಲಕ್ಷಣಗಳನ್ನು ಗಮನಿಸುವುದನ್ನು ಮುಂದುವರಿಸಿದರೆ, ನೀವು ಮಧುಮೇಹ ಟೆಸ್ಟ್ ಮಾಡಿಸಿಕೊಳ್ಳುವುದನ್ನು ಮರೆಯದಿರಿ. ಏಕೆಂದರೆ ನೀವು ಆಹಾರ (Food)ವನ್ನು ಸೇವಿಸಿದಾಗ, ನಿಮ್ಮ ದೇಹವು (Body) ಅದನ್ನು ಗ್ಲೂಕೋಸ್ ಆಗಿ ವಿಭಜಿಸುತ್ತದೆ ಮತ್ತು ನಂತರ ಅದನ್ನು ಶಕ್ತಿಗಾಗಿ ಜೀವಕೋಶಗಳು ಬಳಸಿಕೊಳ್ಳುತ್ತವೆ. ಗ್ಲೂಕೋಸ್ ಅನ್ನು ತೆಗೆದುಕೊಳ್ಳಲು ನಿಮ್ಮ ಜೀವಕೋಶಗಳಿಗೆ ಇನ್ಸುಲಿನ್ ಅಗತ್ಯವಿದೆ. ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೆ, ಗ್ಲೂಕೋಸ್ ಜೀವಕೋಶಗಳಿಗೆ ಪ್ರವೇಶಿಸುವುದಿಲ್ಲ. ಇದು ಹಸಿವು ಮತ್ತು ಆಯಾಸಕ್ಕೆ ಕಾರಣವಾಗಬಹುದು.

ಆಗಾಗ ಮೂತ್ರ ವಿಸರ್ಜನೆ, ವಿಪರೀತ ಬಾಯಾರಿಕೆ: ಒಬ್ಬ ಸಾಮಾನ್ಯ ವ್ಯಕ್ತಿಯು ದಿನಕ್ಕೆ ನಾಲ್ಕರಿಂದ ಏಳು ಬಾರಿ ಮಾತ್ರ ಮೂತ್ರ (Urine) ವಿಸರ್ಜನೆ ಮಾಡಬೇಕು ಎಂದು ವೈದ್ಯರು ಸೂಚಿಸುತ್ತಾರೆ. ನೀವು ಮಧುಮೇಹದಿಂದ ಬಳಲುತ್ತಿರುವಾಗ, ನಿಮ್ಮ ದೇಹವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದ್ರವಗಳನ್ನು ಬಳಸುತ್ತದ. ನಿಮ್ಮ ದೇಹವು ಹೆಚ್ಚು ಮೂತ್ರವನ್ನು ಮಾಡಲು ಕಾರಣವಾಗುತ್ತದೆ. ಅಲ್ಲದೆ, ನೀವು ಹೆಚ್ಚಾಗಿ ಮೂತ್ರ ವಿಸರ್ಜಿಸುತ್ತಿರುವ ಕಾರಣ, ನೀವು ಸಾಮಾನ್ಯಕ್ಕಿಂತ ಹೆಚ್ಚು ಬಾಯಾರಿಕೆಯನ್ನು ಅನುಭವಿಸಬಹುದು.

ನಾಲ್ಕು ಕಪ್ ಚಹಾ ಕುಡಿಯೋದ್ರಿಂದ ಡಯಾಬಿಟೀಸ್ ಬರೋದಿಲ್ವಾ?

ಒಣ ಬಾಯಿ ಮತ್ತು ಚರ್ಮದಲ್ಲಿ ತುರಿಕೆ: ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಿರುವುದರಿಂದ, ಆಗಾಗ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದಲ್ಲಿ ತೇವಾಂಶದ ಕೊರತೆ ಕಂಡು ಬರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ನಿಮ್ಮ ಬಾಯಿ ಆಗಾಗ ಒಣಗಲು ಶುರುವಾಗಬಹುದು. ಚರ್ಮದಲ್ಲಿ (Skin) ತೇವಾಂಶದ ಕೊರತೆ ಕಂಡು ಬಂದಾಗ ತುರಿಕೆ ಸಹ ಕಾಣಿಸಿಕೊಳ್ಳಬಹುದು.

ಮಂದ ದೃಷ್ಟಿ: ದೇಹವು ದ್ರವಗಳ ಏರಿಳಿತದ ಮಟ್ಟವನ್ನು ಹೊಂದಿರುವಾಗ, ಕಣ್ಣುಗಳಲ್ಲಿನ ಮಸೂರಗಳು ಊತವನ್ನು ಅನುಭವಿಸಬಹುದು. ಇದು ನಿಮ್ಮ ಕಣ್ಣುಗಳ ದೃಷ್ಟಿಯಲ್ಲಿ ವ್ಯತ್ಯಾಸವನ್ನು ತರಬಹುದು. ಇದು ದೃಷ್ಟಿ ಮಂದವಾಗಲು ಕಾರಣವಾಗುತ್ತದೆ. ಮುಂದಿನ ಬಾರಿ ನೀವು ಕಣ್ಣಿನಲ್ಲಿ (Eyes) ಯಾವುದೇ ಸಮಸ್ಯೆಯನ್ನು ಗಮನಿಸಿದಾಗ ಅಥವಾ ಸರಿಯಾಗಿ ನೋಡಲು ಸಾಧ್ಯವಾಗದಿದ್ದಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

ವಾಸಿಯಾಗಲು ಸಮಯ ತೆಗೆದುಕೊಳ್ಳುವ ಹುಣ್ಣುಗಳು ಅಥವಾ ಕಡಿತಗಳು: ದೇಹದಲ್ಲಿ ಗಾಯವಾಗುವುದು ಸಾಮಾನ್ಯವಾಗಿದೆ. ಇಂಥಾ ಗಾಯಗಳು ಕಡಿಮೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗುವುದು ಸಾಮಾನ್ಯ. ಆದರೆ ಗಾಯ (Injury) ಒಣಗಲು ಅತಿ ಹೆಚ್ಚು ಸಮಯ ತೆಗೆದುಕೊಂಡರೆ ನೀವು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಇದು ಮಧುಮೇಹದ ಸಂಕೇತವೂ ಆಗಿರಬಹುದು. ಅಧಿಕ ರಕ್ತದ ಸಕ್ಕರೆ ಮಟ್ಟವು ನಿಮ್ಮ ರಕ್ತದ ಹರಿವನ್ನು ಹಾನಿಗೊಳಿಸುತ್ತದೆ ಮತ್ತು ನರಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಹುಣ್ಣುಗಳು ಅಥವಾ ಕಡಿತಗಳನ್ನು ಗುಣಪಡಿಸುವಲ್ಲಿ ತೊಂದರೆ ಉಂಟುಮಾಡಬಹುದು.

World Bamboo Day: ಕಳಲೆ ತಿಂದ್ರೆ ಸಾಕು, ಡಯಾಬಿಟಿಸ್ ಭಯ ಬೇಕಿಲ್ಲ

ಕೈ ಕಾಲುಗಳ ಮರಗಟ್ಟುವಿಕೆ: ಕೈ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಮರಗಟ್ಟುವಿಕೆ ಮಧುಮೇಹದ ಮತ್ತೊಂದು ಸಾಮಾನ್ಯ ಸೂಚಕವಾಗಿದೆ, ವಿಶೇಷವಾಗಿ ನೀವು ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿದ್ದರೆ ಇದು ಸಂಭವಿಸುತ್ತದೆ. ಇಂಥಾ ಚಿಹ್ನೆಗಳು ಕಂಡು ಬಂದರೆ ನೀವು ಆದಷ್ಟು ಬೇಗ ಚಿಕಿತ್ಸೆ (Treatment) ಪಡೆದುಕೊಳ್ಳುವುದು ಒಳ್ಳೆಯದು.

ಮಧುಮೇಹವು ಹೆಚ್ಚುತ್ತಿರುವ ಕಾರಣ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯವಾಗಿದೆ. ಮಧುಮೇಹದಿಂದ ದೂರವಿರಲು ಆರೋಗ್ಯಕರ ಆಹಾರ ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡಿ, ಸಮರ್ಪಕ ನಿದ್ರೆಯ ದಿನಚರಿಯನ್ನು ಅನುಸರಿಸಿ. ಮನಸ್ಸಿನ ಒತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ನಿಮ್ಮ ದೇಹವು ಮಧುಮೇಹದ ಯಾವುದೇ ಚಿಹ್ನೆಗಳನ್ನು ಸೂಚಿಸಿದರೆ, ತಕ್ಷಣವೇ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

Health Tips: Signs That Indicate You Could Have Diabetes Vin

Latest Videos
Follow Us:
Download App:
  • android
  • ios