Health Tips : ಐ ಡ್ರಾಪ್ಸ್ ಬಳಸೋ ಮುನ್ನ ಇರಲಿ ಎಚ್ಚರ

ಕಣ್ಣು ನಮ್ಮ ದೇಹದ ಸೂಕ್ಷ್ಮ ಅಂಗ. ಅದ್ರ ರಕ್ಷಣೆ ಬಹಳ ಮುಖ್ಯ. ಕಣ್ಣು ನೋವು ಅಂತಾ ಯಾವಾಗ್ಲೂ ತಂದ ಐ ಡ್ರಾಪ್ ಹಾಕಿದ್ರೆ ಸಮಸ್ಯೆ ಕಡಿಮೆಯಾಗೋ ಬದಲು ದುಪ್ಪಟ್ಟಾಗುತ್ತದೆ. ದೃಷ್ಟಿ ಕಳೆದುಕೊಳ್ಳಬಹುದು ಎಚ್ಚರ..
 

Health Tips Know How Many Days After Opening The Eye Drops Can Be Used

ಬೆಂಗಳೂರಿನಂತಹ ಮಹಾನಗರದಲ್ಲಿ ವಾಹನ ದಟ್ಟಣೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಇದ್ರ ಜೊತೆ ಕಟ್ಟಣ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳಿಂದಾಗಿ ಇಡೀ ದಿನ ಹೊಗೆ, ಧೂಳಿನಲ್ಲಿರುವ ಸ್ಥಿತಿ ನಿರ್ಮಾಣವಾಗಿದೆ. ಇದು ಕಣ್ಣುಗಳಿಗೆ ಹಾನಿಯುಂಟು ಮಾಡ್ತಿದೆ. ವಾಯುಮಾಲಿನ್ಯದ ಜೊತೆ ಜೊತೆಗೆ ಮೊಬೈಲ್, ಟಿವಿ ಸೇರಿದಂತೆ ಗೆಜೆಟ್ ಅತಿಯಾದ ಬಳಕೆಯಿಂದಾಗಿ ಚಿಕ್ಕ ಮಕ್ಕಳಿಗೆ ಕಣ್ಣಿನ ಸಮಸ್ಯೆ ಕಾಡ್ತಿದೆ. 

ಕಣ್ಣಿನಲ್ಲಿ ಉರಿ, ಕಿರಿಕಿರಿಯಾಗ್ತಿದ್ದಂತೆ ನಾವು ವೈದ್ಯರ (Doctor)  ಬಳಿ ಹೋಗುವ ಬದಲು ಮನೆಯಲ್ಲಿರುವ ಡ್ರಾಪ್ (Drop) ಗೆ ಹುಡುಕಾಟ ನಡೆಸ್ತೇವೆ. ಅಲ್ಲೋ ಹಿಂದೆ ವೈದ್ಯರು ನೀಡಿದ ಡ್ರಾಪ್ ಕಣ್ಣಿ (Eye)ಗೆ ಬೀಳುತ್ತದೆ. ಅದನ್ನೇ ಒಂದೆರಡು ದಿನ ಟ್ರೈ ಮಾಡೋಣ ಅಂತಾ ಕಣ್ಣಿಗೆ ಹಾಕಿಕೊಳ್ತೇವೆ. ಕಣ್ಣು ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದು. ಸಣ್ಣ ಧೂಳಿನ ಕಣ ಬಿದ್ರೂ ವಿಪರೀತ ನೋವು, ಕಿರಿಕಿರಿಯಾಗುತ್ತದೆ. ಹಾಗಿರುವಾಗ ನಾವು ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಮಾಡೋದು ತಪ್ಪು. ಎಂದೋ ಬಳಸಿ ಇಟ್ಟ ಡ್ರಾಪನ್ನು ಮತ್ತೆ ಬಳಕೆ ಮಾಡಲೇಬಾರದು. ಕಣ್ಣಿನ ಡ್ರಾಪ್ ಬಳಸುವ ಮುನ್ನ ಕೆಲ ಸಂಗತಿಯನ್ನು ನೀವು ತಿಳಿದುಕೊಳ್ಳಬೇಕು. 

ಮಗು ಬಾಯಿ ತೆರೆದು ಮಲಗ್ತಿದ್ಯಾ, ನಗ್ಬೇಡಿ, ಇದು ದೊಡ್ಡ ಸಮಸ್ಯೆ !

ಐ ಡ್ರಾಪ್ ಮೇಲೆ ಬರೆದ ಮುನ್ನೆಚ್ಚರಿಕೆಯನ್ನು ಸರಿಯಾಗಿ ಓದಿ : ಎಲ್ಲ ಔಷಧಿ ಪಾಕೆಟ್ ಮೇಲೆ ಕೊನೆ ದಿನಾಂಕವನ್ನು ಬರೆದಿರಲಾಗುತ್ತದೆ. ಐ ಡ್ರಾಪ್ ಮೇಲೂ ಈ ಬಗ್ಗೆ ಸೂಚನೆಯಿರುತ್ತದೆ. ಡ್ರಾಪ್ ಮುಚ್ಚಳ ತೆಗೆದ 28 ದಿನಗಳ ನಂತ್ರ ಅದನ್ನು ಬಳಸದಂತೆ ಸೂಚನೆ ನೀಡಲಾಗುತ್ತದೆ.  ಬಾಟಲಿಯ ಸೀಲ್ ಓಪನ್ ಮಾಡಿ 28 ದಿನಗಳ ನಂತರ ಔಷಧವನ್ನು ಬಳಸಿದರೆ, ಅದು ಕಣ್ಣುಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಔಷಧವನ್ನು ದೀರ್ಘಕಾಲದವರೆಗೆ ಬಳಸುವುದರಿಂದ ದೃಷ್ಟಿ ಹೋಗುವ ಅಪಾಯವಿರುತ್ತದೆ. ನಮ್ಮ ಕಣ್ಣುಗಳು ತುಂಬಾ ಸೂಕ್ಷ್ಮವಾಗಿರುವುದರಿಂದ, ಡ್ರಾಪ್ ತೆರೆದ ಒಂದು ತಿಂಗಳ ನಂತರ ಇದನ್ನು ಬಳಸಬಾರದು. ಇದ್ರಿಂದ ಕಣ್ಣಿನಲ್ಲಿ  ಸೋಂಕು ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ಕಣ್ಣಿನ ಡ್ರಾಪ್  ಸುರಕ್ಷಿತವಾಗಿಡಲು ಪ್ರಿಜರ್ವೇಟಿವ್ಸ್ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ, ವೈರಸ್ ಅಥವಾ ಶಿಲೀಂಧ್ರದಿಂದ ಕಣ್ಣಿನ ಹನಿಗಳನ್ನು ರಕ್ಷಿಸಲು ಇದನ್ನು ಬಳಸಲಾಗಿರುತ್ತದೆ. ಪ್ರಿಜರ್ವೇಟಿವ್ಸ್ ಇರುವ ಕಾರಣ ಡ್ರಾಪ್ ನಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ನಿಧಾನವಾಗುತ್ತದೆ. ಕೆಲವೊಮ್ಮೆ ಬ್ಯಾಕ್ಟೀರಿಯಾ ಬೆಳೆಯುವುದಿಲ್ಲ. ಆದ್ರೆ ಅದರ ಸೀಲ್ ಒಡೆದ ನಂತ್ರ ಅದನ್ನು ಹೆಚ್ಚು ದಿನ ಬೆಳಸಿದ್ರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯಿರುತ್ತದೆ. 

ಔಷಧಿ ಎಷ್ಟು ದಿನ ಸುರಕ್ಷಿತವಾಗಿರುತ್ತದೆ? : ಸಾಮಾನ್ಯವಾಗಿ ಎಲ್ಲ ಔಷಧಿಗಳ ಮೇಲೆ ಲಾಸ್ಟ್ ಡೇಟ್ ನಮೂದಿಸಲಾಗುತ್ತದೆ. ಯಾವುದೇ ವ್ಯಕ್ತಿ ಕೊನೆಯ ದಿನಾಂಕದವರೆಗೆ ಅದನ್ನು ಬಳಸಬಹುದು. ಆದ್ರೆ ಐ ಡ್ರಾಪ್ ವಿಷ್ಯದಲ್ಲಿ ಹಾಗಾಲ್ಲ. ಕೊನೆ ದಿನಾಂಕ ಯಾವುದೇ ಇರಲಿ, ನೀವು ಅದ್ರ ಸೀಲ್ ಒಮ್ಮೆ ಒಡೆದ್ರೆ ಮುಗೀತು. ನೀವು 28 ದಿನಗಳವರೆಗೆ ಮಾತ್ರ ಅದನ್ನು ಬಳಸಬಹುದು. ಸೀಲ್ ಒಡೆದ ಕಾರಣ ಔಷಧಿ ಕಲುಷಿತವಾಗುತ್ತದೆ.

ದಿಢೀರ್ ಬಿಪಿ ಹೆಚ್ಚಾದ್ರೆ ಗಾಬರಿ ಬೇಡ, ಕಿಚನ್‌ನಲ್ಲಿರೋ ಈ ಆಹಾರ ತಿನ್ನಿ ಸಾಕು

ದೀರ್ಘಾವಧಿ ಒಂದೇ ಡ್ರಾಪ್ ಬಳಸಿದ್ರೆ ಏನಾಗುತ್ತದೆ? : ಕಣ್ಣಿನ ಡ್ರಾಪನ್ನು ನೀವು ದೀರ್ಘಾವಧಿ ಬಳಕೆ ಮಾಡಿದ್ರೆ ಅನೇಕ ಸಮಸ್ಯೆ ಶುರುವಾಗುತ್ತದೆ. ನಿಮ್ಮ ಕಣ್ಣು ಕೆಂಪಾಗಿದ್ದರೆ, ಕಣ್ಣುಗಳಿಂದ ನೀರು ಬರಲು ಶುರುವಾಗಿದ್ದರೆ, ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ತಿದ್ದರೆ ನಿಮಗೆ ಡ್ರಾಪ್ ನಿಂದ ಸೋಂಕಾಗಿದೆ ಎಂದೇ ಅರ್ಥ. ಸೋಂಕಿನಿಂದ ನಿಮ್ಮ ಕಣ್ಣಿನ ಕಪ್ಪು ಗುಡ್ಡೆ ಬೆಳ್ಳಗಾಗಲು ಶುರುವಾಗುತ್ತದೆ. ಅಲ್ಲಿ ಶಾಶ್ವತವಾಗಿ ಕಲೆ ಬೀಳುವ ಸಾಧ್ಯತೆಯಿರುತ್ತದೆ. ಕೆಲವು ಬಾರಿ ನೀವು ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ. ಕಣ್ಣಿಗೆ ಸೋಂಕಾಗಬಾರದು ಅಂದ್ರೆ ನೀವು ಒಂದು ತಿಂಗಳ ನಂತ್ರ ಡ್ರಾಪ್ ಬಳಕೆ ಮಾಡ್ಬೇಡಿ. ಹಾಗೆಯೇ ಕಣ್ಣಿಗೆ ಡ್ರಾಪ್ ಹಾಕುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಸರಿಯಾಗಿ ಮುಚ್ಚಳ ಹಾಕಿ ಸುರಕ್ಷಿತ ಜಾಗದಲ್ಲಿ ಇಡಿ. ಡ್ರಾಪ್ ತುದಿಯನ್ನು ಕೈನಿಂದ ಸ್ಪರ್ಶಿಸಬೇಡಿ.
 

Latest Videos
Follow Us:
Download App:
  • android
  • ios