Asianet Suvarna News Asianet Suvarna News

Oral Cancer : ಆರಂಭದಲ್ಲೇ ಪತ್ತೆಯಾದ್ರೆ ಗುಣಪಡಿಸಬಲ್ಲ ಬಾಯಿ ಕ್ಯಾನ್ಸರ್ ಲಕ್ಷಣವೇನು?

ಕ್ಯಾನ್ಸರ್ ಪಟ್ಟಿಯಲ್ಲಿ ಬಾಯಿ ಕ್ಯಾನ್ಸರ್ ಕೂಡ ಸೇರಿದೆ. ಬಾಯಿಯಲ್ಲಿ ಕ್ಯಾನ್ಸರ್ ಕೋಶ ಬೆಳೆದು ಅನೇಕ ಸಮಸ್ಯೆ ತಂದೊಡ್ಡುತ್ತದೆ. ಇದ್ರ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಆರೋಗ್ಯ ಸಚಿವಾಲಯ ಕೂಡ ಎಚ್ಚರಿಕೆ ನೀಡಿದೆ.
 

Health Ministry Has Listed Symptoms Of Oral Cancer roo
Author
First Published Mar 14, 2024, 12:24 PM IST

ಈಗಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ನಾನಾ ರೀತಿಯ ಕ್ಯಾನ್ಸರ್ ಹೆಚ್ಚಿನ ಮಟ್ಟದಲ್ಲಿ ಕಾಣಿಸಿಕೊಳ್ತಿದೆ. ಕ್ಯಾನ್ಸರ್ ಗೆ ತಕ್ಕಂತೆ ಚಿಕಿತ್ಸೆಗೆ ವ್ಯವಸ್ಥೆ ಕೂಡ ಮಾಡಲಾಗ್ತಿದೆ. ಹೊಸ ಹೊಸ ತಂತ್ರಜ್ಞಾನ, ಔಷಧಿಗಳನ್ನು ಪತ್ತೆ ಮಾಡಲಾಗ್ತಿದೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಅಭಿಯಾನಗಳು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತವೆ. 

ನಮ್ಮ ದೇಹಕ್ಕೆ ಆಹಾರ (Food) ತಲುಪಿಸುವ ನಮ್ಮ ಬಾಯಿ (Mouth) ಕೂಡ ಸುರಕ್ಷಿತವಲ್ಲ. ಬಾಯಿ ಕ್ಯಾನ್ಸರ್ (Cancer) ಬಗ್ಗೆ ಆರೋಗ್ಯ ಸಚಿವಾಲಯ ಕೂಡ ಎಚ್ಚರಿಕೆ ನೀಡಿದೆ. ಆರಂಭದಲ್ಲಿಯೇ ಬಾಯಿ ಕ್ಯಾನ್ಸರ್ ಲಕ್ಷಣವನ್ನು ನೀವು ಗುರುತಿಸಿದ್ರೆ ಅದನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅಲ್ಲದೆ ಅದರ ಲಕ್ಷಣಗಳ ಬಗ್ಗೆಯೂ ಮಾಹಿತಿ ನೀಡಿದೆ. 

ಮಕ್ಕಳ ಮೆಮೊರಿ ಕಂಪ್ಯೂಟರ್ ಗಿಂತ ವೇಗವಾಗಬೇಕಾದ್ರೆ… ಬೇಗ ಈ ಕೆಲ್ಸ ಮಾಡಿ!

ಬಾಯಿ ಕ್ಯಾನ್ಸರ್ ಅಂದರೇನು? : ಅಸಹಜ ಜೀವಕೋಶಗಳು  ಬಾಯಿಯೊಳಗೆ ಬೆಳೆದಾಗ ಮತ್ತು ವಿಭಜನೆಯಾದಾಗ ಕ್ಯಾನ್ಸರ್ ಬೆಳವಣಿಗೆಯಾಗುತ್ತದೆ. ತುಟಿಗಳು, ನಾಲಿಗೆ ಅಥವಾ ನಿಮ್ಮ ಬಾಯಿಯ ತಳಭಾಗದಲ್ಲಿ ಕ್ಯಾನ್ಸರ್ ಪ್ರಾರಂಭವಾಗುತ್ತದೆ.  ಆದ್ರೆ ಬಾಯಿಯ ಮೇಲ್ಭಾಗ, ಟಾನ್ಸಿಲ್, ಒಸಡು, ಕೆನ್ನೆ ಮತ್ತು ಲಾಲಾರಸ ಗ್ರಂಥಿಗಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಇದು ತುಂಬಾ ಅಪಾಯಕಾರಿ ಕ್ಯಾನ್ಸರ್ ನಲ್ಲಿ ಒಂದು. ಯಾಕೆಂದ್ರೆ ಆರಂಭದಲ್ಲಿ ಇದ್ರ ಲಕ್ಷಣ ಪತ್ತೆ ಹಚ್ಚುವುದು ಬಹಳ ಕಷ್ಟ. ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗ್ತಿದ್ದರೆ ಅವರು ಲಕ್ಷಣ ಪತ್ತೆ ಹಚ್ಚುವ ಸಾಧ್ಯತೆ ಇರುತ್ತದೆ. ಒಂದ್ವೇಳೆ ನಿಮಗೆ ಬಾಯಿ ಕ್ಯಾನ್ಸರ್ ಕಾಣಿಸಿಕೊಂಡಿದೆ ಎನ್ನುವ ಅನುಮಾನ ಮೂಡಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ನೀವು ಚಿಕಿತ್ಸೆ ಪಡೆಯಬೇಕು. 

ಬಾಯಿ ಕ್ಯಾನ್ಸರ್‌ನ ಲಕ್ಷಣಗಳೇನು? : ನೋವುರಹಿತ ಉಂಡೆ, ಅಥವಾ ನಿಮ್ಮ ಬಾಯಿ, ತುಟಿಗಳು, ಗಂಟಲು ಅಥವಾ ಕುತ್ತಿಗೆಯಲ್ಲಿ ಕೆಂಪು ಅಥವಾ ಬಿಳಿ ತೇಪೆ, ವಾಸಿಯಾಗದ ಬಾಯಿ ಹುಣ್ಣು, ಆಹಾರ ಜಗಿಯಲು, ನುಂಗಲು ಸಮಸ್ಯೆ, ಮಾತಿನಲ್ಲಿ ಬದಲಾವಣೆ, ಸಡಿಲವಾಗುವ ಹಲ್ಲುಗಳು, ತೂಕ ಇಳಿಕೆ, ಬಾಯಿಯಲ್ಲಿ ನೋವು,ಮೂರು ವಾರಕ್ಕಿಂತ ಹೆಚ್ಚು ಸಮಯದಿಂದ ಊದಿಕೊಂಡ ಬಾಯಿ, ರುಚಿ ಪತ್ತೆ ಮಾಡುವಲ್ಲಿ ಸಮಸ್ಯೆ ಈವೆಲ್ಲವೂ ಬಾಯಿ ಕ್ಯಾನ್ಸರ್ ಲಕ್ಷಣವಾಗಿದೆ. ಈ ಲಕ್ಷಣಗಳಿರುವವರೆಲ್ಲ ಬ್ಯಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದರ್ಥವಲ್ಲ. ಆದ್ರೆ ಈ ಲಕ್ಷಣ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. 

ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳು : ಬಾಯಿ ಕ್ಯಾನ್ಸರ್ ಗೆ ಅನೇಕ ಕಾರಣಗಳಿವೆ. ಧೂಮಪಾನ ಅಥವಾ ಮದ್ಯಪಾನ ಮಾಡುವವರಿಗೆ ಈ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.  ಸೂರ್ಯನ ಕಿರಣಗಳ ಅಡಿಯಲ್ಲಿ ದೀರ್ಘ ಸಮಯ ಕಳೆಯುವುದು, ಕಳಪೆ ಆಹಾರ, ಕಳಪೆ ಮೌಖಿಕ ನೈರ್ಮಲ್ಯ ಅಥವಾ ವಸಡು ರೋಗ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಇದಲ್ಲದೆ ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ ಎಪ್ಸ್ಟೀನ್-ಬಾರ್ ವೈರಸ್ ಕೂಡ ಕ್ಯಾನ್ಸರ್ ಕಾರಣವಾಗುತ್ತದೆ. ರಕ್ತ ಸಂಬಂಧಿಗಳಲ್ಲಿ ಬಾಯಿ ಕ್ಯಾನ್ಸರ್ ಇದ್ದರೆ ಅಂಥವರಿಗೆ ಬರುವ ಸಾಧ್ಯತೆ ಇದೆ. ಅದಲ್ಲದೆ ಪಾನ್, ಗುಟ್ಕಾ, ತಂಬಾಕು ಸೇವನೆ ಮಾಡುವವರಲ್ಲಿ ಬಾಯಿ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ.  

ಪ್ರತಿದಿನ 10000 ಸ್ಟೆಪ್ಸ್ ನಡೆದು ನೋಡಿ… ಮಧುಮೇಹ, ಹೃದಯ ಸಮಸ್ಯೆಗೆ ಬೆಸ್ಟ್ ಪರಿಹಾರ!

ಬಾಯಿ ಕ್ಯಾನ್ಸರ್ ಪತ್ತೆ ಹೇಗೆ? : ಬಾಯಿಯಲ್ಲಿ ಕ್ಯಾನ್ಸರ್ ಇದೆ ಎಂಬ ಅನುಮಾನ ಬಂದ್ರೆ ವೈದ್ಯರು ಬಯಾಪ್ಸಿಗೆ ಸಲಹೆ ನೀಡ್ತಾರೆ. ಇಮೇಜಿಂಗ್ ಸ್ಕ್ಯಾನ್‌ಗಳ ಸಹಾಯದಿಂದಲೂ ಇದನ್ನು ಪತ್ತೆ ಹಚ್ಚಲಾಗುತ್ತದೆ. ಉದಾಹರಣೆಗೆ X-ray, PET, CT ಅಥವಾ MRI ಸ್ಕ್ಯಾನ್‌ಗಳು. ಇದಲ್ಲದೆ ಎಂಡೋಸ್ಕೋಪಿ ಮೂಲಕವೂ ಬಾಯಿ ಕ್ಯಾನ್ಸರ್ ಪತ್ತೆ ಮಾಡಲಾಗುತ್ತದೆ. 

ಬಾಯಿ ಕ್ಯಾನ್ಸರ್ ಚಿಕಿತ್ಸೆ : ಬಾಯಿಯಲ್ಲಿ ಕ್ಯಾನ್ಸರ್ ಗಡ್ಡೆ ಯಾವ ಹಂತದಲ್ಲಿದೆ ಎಂಬುದನ್ನು ನೋಡಿ ಅದಕ್ಕೆ ಚಿಕಿತ್ಸೆ ನಡೆಯುತ್ತದೆ. ಸಣ್ಣ ಪ್ರಮಾಣದಲ್ಲಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆ ತೆಗೆಯಲಾಗುತ್ತದೆ. ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಎರಡೂ ಕೆಲವರಿಗೆ ಅವಶ್ಯಕತೆ ಇರುತ್ತದೆ. 

Follow Us:
Download App:
  • android
  • ios