Asianet Suvarna News Asianet Suvarna News

ಹುರಿದ ಶುಂಠಿಯಲ್ಲಿದೆ ಆರೋಗ್ಯ ತಂದು ಕೊಡುವ ಅಮೃತ

ಗ್ಯಾಸ್ಟ್ರಿಕ್ ಆಗಿದೆ ಅಂದ ತಕ್ಷಣ ಅನೇಕರು ಶುಂಠಿ ಮೊರೆ ಹೋಗ್ತಾರೆ. ಹಸಿ ಶುಂಠಿಗೆ ಸ್ವಲ್ಪ ಉಪ್ಪು ಸೇರಿಸಿ ತಿಂದ್ರೆ ಸ್ವಲ್ಪ ಹಿತ ಎನ್ನಿಸುತ್ತೆ ಎನ್ನುವವರಿದ್ದಾರೆ. ಶುಂಠಿ ಗುಣಗಳ ಬಗ್ಗೆ ನಮಗೆ ಗೊತ್ತು. ಆದ್ರೆ ಹುರಿದ ಶುಂಠಿ ತಿಂದ್ರೆ ಏನಾಗುತ್ತೆ ಎನ್ನೋದು ಗೊತ್ತಾ?
 

Health Benefits Of Roasted Ginger
Author
Bangalore, First Published Mar 19, 2022, 3:56 PM IST

ಶುಂಠಿ (Ginger) ಮಸಾಲೆ (Spice) ಪದಾರ್ಥಗಳಲ್ಲಿ ಒಂದು. ಅನೇಕ ಅಡುಗೆಗೆ ಇದನ್ನು ಬಳಸಲಾಗುತ್ತದೆ. ಜೀರ್ಣಕ್ರಿಯೆ (Digestion) ಗೆ ಉತ್ತಮ ಔಷಧಿ (Medicine) ಶುಂಠಿ. ಶುಂಠಿಯನ್ನು ಮನೆ ಮದ್ದಾಗಿ (Home Remedy )ಅನೇಕ ರೋಗಗಳಲ್ಲಿ ಬಳಸ್ತಾರೆ. ಕೇವಲ ರೋಗ ಬಂದಾಗ ಮಾತ್ರವಲ್ಲ ರೋಗ ಬರದಂತೆ ತಡೆಯುವ ಶಕ್ತಿಯೂ ಶುಂಠಿಯಲ್ಲಿದೆ. ಶುಂಠಿ  ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು  ಹೊಂದಿದೆ. ಪ್ರತಿ ನಿತ್ಯ ಒಂದು ಸೇಬು ತಿಂದು ಆಸ್ಪತ್ರೆಯಿಂದ ದೂರವಿರಿ ಎನ್ನುವಂತೆ, ಪ್ರತಿದಿನ ಒಂದು ತುಂಡು ಶುಂಠಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ ಎನ್ನುತ್ತಾರೆ ತಜ್ಞರು. ಶುಂಠಿಯನ್ನು ಹಲವು ವಿಧಗಳಲ್ಲಿ ಸೇವಿಸಲಾಗುತ್ತದೆ. ಹಸಿ ಶುಂಠಿ ಸೇವನೆ ಮಾಡುವವರಿದ್ದಾರೆ. ಕೆಲವರು ಅದನ್ನು ಒಣಗಿಸಿ, ಪುಡಿ ಮಾಡಿ ಬಳಸ್ತಾರೆ. ಮತ್ತೆ ಕೆಲವರು ಶುಂಠಿ ಟೀ ಸೇವನೆಯನ್ನು ಇಷ್ಟಪಡ್ತಾರೆ.

ಕೊರೊನಾ ಸಂದರ್ಭದಲ್ಲಿ ಶುಂಠಿ ಕಷಾಯಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಆದರೆ ನೀವು ಎಂದಾದರೂ ಶುಂಠಿಯನ್ನು ಹುರಿದ ಅಥವಾ ಬೇಯಿಸಿ ತಿಂದಿದ್ದೀರಾ? ಇಲ್ಲದಿದ್ದಲ್ಲಿ ಇಂದೇ ಶುಂಠಿ ಹುರಿದು ತಿನ್ನಿ. ಹಸಿ ಶುಂಠಿ ಮಾತ್ರವಲ್ಲ ಹುರಿದ ಶುಂಠಿ ಕೂಡ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. 

ಹುರಿದ ಶುಂಠಿಯ ಪ್ರಯೋಜನಗಳು 

ಕೆಮ್ಮು ಮತ್ತು ಶೀತ ಶಮನ : ಶುಂಠಿಯನ್ನು ಬೇಯಿಸಿ ಅಥವಾ ಹುರಿದು ತಿನ್ನುವುದರಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆ ಕಡಿಮೆಯಾಗುತ್ತದೆ. ಶುಂಠಿಯಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಸ್ ಗುಣಗಳು ಶೀತದ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ. ನೆಗಡಿಯಾಗಿದ್ದರೆ ಒಂದು ತುಂಡು ಹುರಿದ ಶುಂಠಿಯನ್ನು ಸೇವನೆ ಮಾಡಿ.

ಮೈಗ್ರೇನ್ ಗೆ ಪರಿಹಾರ : ತುಂಬಾ ಕಿರಿಕಿರಿ ನೀಡುವ ರೋಗಗಳಲ್ಲಿ ಇದೂ ಒಂದು. ಮೈಗ್ರೇನ್ ಬಂದ್ರೆ ಅದ್ರ ನೋವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಅನೇಕರು ಮೈಗ್ರೇನ್ ಮಾತ್ರೆ ನುಂಗ್ತಾರೆ. ಆದ್ರೆ ಮೈಗ್ರೇನ್ ಗೆ ಮನೆ ಮದ್ದಿದೆ.  ತಲೆನೋವು ಅಥವಾ ಮೈಗ್ರೇನ್ ಸಮಸ್ಯೆ ಇದ್ದರೆ  ಹುರಿದ ಶುಂಠಿಯನ್ನು ನೀವು ಸೇವಿಸಬಹುದು. ಶುಂಠಿ ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದು ತಲೆನೋವು ಮತ್ತು ಮೈಗ್ರೇನ್ ಕಡಿಮೆ ಮಾಡುತ್ತದೆ.

Study Suggests: ಬುದ್ಧಿಮಾಂದ್ಯತೆ ಕಡಿಮೆ ಮಾಡುತ್ತೆ ಈ ವಿಶೇಷ ಚಿಕಿತ್ಸೆ

ಮುಟ್ಟಿನ ನೋವಿನಿಂದ ಮುಕ್ತಿ : ಬೇಯಿಸಿದ ಅಥವಾ ಹುರಿದ ಶುಂಠಿಯನ್ನು ಪಿರಿಯಡ್ಸ್ ಸಮಯದಲ್ಲಿ ಸೇವನೆ ಮಾಡ್ಬಹುದು. ಇದು ನೋವು ಮತ್ತು ಸೆಳೆತದಿಂದ ಪರಿಹಾರ ನೀಡುತ್ತದೆ. ಹುರಿದ ಶುಂಠಿಯನ್ನು ಸೇವಿಸುವುದರಿಂದ ಹೊಟ್ಟೆ ನೋವು ಸಹ ಕಡಿಮೆಯಾಗುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಎನ್ನುವವರು ಹುರಿದ ಶುಂಠಿ ತಿಂದು ನೋಡಿ. 

ಕೀಲು ನೋವಿಗೆ ಶುಂಠಿಯಲ್ಲಿದೆ ಔಷಧಿ : ಹುರಿದ ಶುಂಠಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಬಹುದು. ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ವಿಪರೀತ ಕೀಲುನೋವಿರುವವರು ಶುಂಠಿಯನ್ನು ಹುರಿದು ಸೇವನೆ ಮಾಡ್ತಾ ಬಂದ್ರೆ ಪರಿಣಾಮ ಕಾಣಿಸುತ್ತದೆ. 

ಸಣ್ಣಗಾಗ್ಬೇಕಾ ? ಜಿಮ್‌ಗೆ ಹೋಗಿ ಕಷ್ಟಪಡೋದೇನು ಬೇಡ, ಸಿಂಪಲ್ ಟಿಪ್ಸ್ ಇಲ್ಲಿದೆ

ಮಧುಮೇಹ ನಿಯಂತ್ರಕ : ಹುರಿದ ಶುಂಠಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹದ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಹುರಿದ ಶುಂಠಿ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅದನ್ನು ವಿಪರೀತವಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಅದರಲ್ಲೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಹುರಿದ ಶುಂಠಿ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. 

Follow Us:
Download App:
  • android
  • ios