ಹಲಸು ತಿಂದು ಬೀಜ ಹೊರಗೆಸೆಯುವ ಮುನ್ನ ಇದನ್ನೊಮ್ಮೆ ಓದಿ

ಹಲಸಿನ ಹಣ್ಣನ್ನು ಹೊಟ್ಟೆಬೀರಿಯುವಷ್ಟು ತಿಂದ ಬಳಿಕ ಅದರ ಬೀಜವನ್ನು ಹೊರಗೆಸೆಯುವ ಅಭ್ಯಾಸ ಅನೇಕರಿಗಿದೆ. ಆದ್ರೆ ಹಲಸಿನ ಬೀಜ ಅನೇಕ ಪೋಷಕಾಂಶಗಳ ಆಗರವಾಗಿದ್ದು, ಆರೋಗ್ಯಕ್ಕೆ ಹಿತಕರ.

Health benefits of jack fruit seeds

ಹಲಸಿನ ಹಣ್ಣನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಹುತೇಕರು, ಅದರ ಬೀಜವನ್ನು ಮಾತ್ರ ನಿರುಪಯುಕ್ತ ಎಂದು ಹೊರಗೆ ಎಸೆಯುತ್ತಾರೆ. ಆದ್ರೆ ನಿಮ್ಗೆ ಗೊತ್ತಾ? ಹಲಸಿನ ಹಣ್ಣು ಮಾತ್ರವಲ್ಲ, ಅದರ ಬೀಜಗಳು ಕೂಡ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ. ಹಲಸಿನ ಬೀಜದಲ್ಲಿ ಪ್ರೋಟೀನ್ ಹಾಗೂ ಪ್ರಮುಖವಾದ ಮೈಕ್ರೋನ್ಯುಟ್ರಿಯೆಂಟ್ಸ್ ಅಧಿಕ ಪ್ರಮಾಣದಲ್ಲಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತವೆ. ಅಷ್ಟೇ ಅಲ್ಲ, ಇದ್ರಿಂದ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳಿವೆ.

ರಕ್ತಹೀನತೆಯನ್ನು ದೂರ ಮಾಡುತ್ತೆ
ಹಲಸಿನ ಬೀಜದಲ್ಲಿ ಕಬ್ಬಿಣಾಂಶವೂ ಅಧಿಕ ಪ್ರಮಾಣದಲ್ಲಿರುವ ಕಾರಣ ರಕ್ತಹೀನತೆಯುಳ್ಳವರಿಗೆ ಹಲಸಿನ ಬೀಜ ಅತ್ಯುತ್ತಮ ಆಹಾರ. ಗರ್ಭಿಣಿಯರು, ಮಹಿಳೆಯರು ಇದನ್ನು ಸೇವಿಸೋದ್ರಿಂದ ದೇಹದಲ್ಲಿ ರಕ್ತದ ಉತ್ಪತ್ತಿ ಹೆಚ್ಚಾಗುತ್ತೆ. ಇದು ಸುಸ್ತನ್ನು ದೂರ ಮಾಡುವ ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.

ಕಿಚನ್ ಎಂಬ ಮೆಡಿಕಲ್‌ನಲ್ಲಿ ಸಿಗುತ್ತೆ ಪೇಯಿನ್ ಕಿಲ್ಲರ್

ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತೆ
ಹಲಸಿನ ಬೀಜದಲ್ಲಿ ನಾರಿನಂಶ ಅತ್ಯಧಿಕವಾಗಿದ್ದು, ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತೆ. ಹಲಸಿನ ಬೀಜದ ಪುಡಿ ಮಲಬದ್ಧತೆ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸುತ್ತೆ. 

ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತೆ
ಹಲಸಿನ ಬೀಜದಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿದ್ದು, ಇದು ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ. ವಿಟಮಿನ್ ಎ ಕೊರತೆಯಿಂದ ಇರುಳು ಕುರುಡುತನ ಕಾಡುತ್ತದೆ. ಹಲಸಿನ ಬೀಜವನ್ನು ನಿಯಮಿತವಾಗಿ ಸೇವಿಸೋದ್ರಿಂದ ಈ ಸಮಸ್ಯೆ ಎದುರಾಗದಂತೆ ತಡೆಯಬಹುದು.

ರಕ್ತ ಹೆಪ್ಪುಗಟ್ಟೋದನ್ನು ತಡೆಯುತ್ತೆ
ಕೆಲವೊಂದು ಮೂಲಗಳ ಪ್ರಕಾರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯನ್ನು ಹಲಸಿನ ಬೀಜದ ಸೇವನೆಯಿಂದ ಪರಿಹರಿಸಬಹುದು. ಹಲಸಿನ ಬೀಜಗಳಲ್ಲಿರುವ ಮ್ಯಾಂಗನೀಸ್ ರಕ್ತ ಹೆಪ್ಪುಗಟ್ಟೋದನ್ನು ಸರಿಪಡಿಸುತ್ತೆ.

ತೂಕ ಇಳಿಸಲು ಸಹಕಾರಿ ಈ ಟೀ ವೆರೈಟಿ

ಲೈಂಗಿಕ ತೃಪ್ತಿ ಹೆಚ್ಚಿಸುತ್ತೆ
ಹಲಸಿನ ಬೀಜದಲ್ಲಿರುವ ಕಬ್ಬಿಣಾಂಶ ಲೈಂಗಿಕ ತೃಪ್ತಿಯನ್ನು ಹೆಚ್ಚಿಸುತ್ತೆ ಎಂದು ಹೇಳಲಾಗುತ್ತೆ. ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಹಲಸಿನ ಬೀಜವನ್ನು ಲೈಂಗಿಕ ಸಮಸ್ಯೆಗಳ ಪರಿಹಾರಕ್ಕೆ ಬಳಸಲಾಗುತ್ತಿತ್ತು.

ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತೆ
ಹಲಸಿನ ಬೀಜದಲ್ಲಿರುವ ಪ್ರೋಟೀನ್ ಸ್ನಾಯುಗಳನ್ನು ಸದೃಢಗೊಳಿಸಲು ನೆರವು ನೀಡುತ್ತೆ. ನೀವು ಹಲಸಿನ ಬೀಜವನ್ನು ನಿತ್ಯದ ಡಯಟ್‍ನಲ್ಲಿ ಪ್ರೋಟೀನ್ ಸಪ್ಲಿಮೆಂಟ್ ಆಗಿ ಬಳಸಬಹುದು. 

ಸುಕ್ಕುಗಳ ವಿರುದ್ಧ ಹೋರಾಡುತ್ತೆ
ಹಲಸಿನ ಬೀಜದಲ್ಲಿರುವ ಆಂಟಿಆಕ್ಸಿಡೆಂಟ್‍ಗಳು ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತವೆ. ವಯಸ್ಸು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರದಂತೆ ತಡೆಯಲು ಯಾವುದೋ ಕ್ರೀಮ್‍ಗಳ ಮೊರೆ ಹೋಗುವ ಬದಲು ನೈಸರ್ಗಿಕ ವಿಧಾನ ಬಳಸಬಹುದು. ತಣ್ಣಗಿನ ಹಾಲಿನಲ್ಲಿ ಹಲಸಿನ ಬೀಜಗಳನ್ನು ಅರೆದು ದಿನದಲ್ಲಿ ಎರಡು ಬಾರಿ ಮುಖಕ್ಕೆ ಹಚ್ಚೋದ್ರಿಂದ ಸುಕ್ಕುಗಳು ದೂರವಾಗುತ್ತವೆ.

ಸದಾ ತಿಂತಾನೆ ಇರ್ಬೇಕು ಎಂಬ ಬಯಕೆಗೆ ಕಡಿವಾಣ ಹಾಕೋದು ಹೇಗೆ?

ಚರ್ಮದ ಕಾಂತಿ ಹೆಚ್ಚುತ್ತೆ
ಹಲಸಿನ ಬೀಜಗಳನ್ನು ಹಾಲು ಹಾಗೂ ಜೇನುತುಪ್ಪದ ಮಿಶ್ರಣದಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ, ಪೇಸ್ಟ್ ಮಾಡಬೇಕು. ಇದನ್ನು ಮುಖದ ಮೇಲೆ ಹಚ್ಚಿ ಡ್ರೈ ಆಗುವ ತನಕ ಬಿಡಬೇಕು. ಆ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಹೀಗೆ ಮಾಡೋದ್ರಿಂದ ಚರ್ಮದ ಕಾಂತಿ ಹೆಚ್ಚುತ್ತೆ.

ಕೂದಲಿನ ಬೆಳವಣಿಗೆಗೆ ಪೂರಕ
ಹಲಸಿನ ಬೀಜದಲ್ಲಿರುವ ಪ್ರೋಟೀನ್ ಕೂದಲಿನ ಆರೋಗ್ಯವನ್ನು ಉತ್ತಮಪಡಿಸುತ್ತೆ. ಇದರಲ್ಲಿರುವ ಕಬ್ಬಿಣಾಂಶ ಸ್ಕಾಲ್ಪ್‍ನಲ್ಲಿ ರಕ್ತಸಂಚಾರ ಉತ್ತಮಪಡಿಸುತ್ತೆ. ಆ ಮೂಲಕ ಕೂದಲಿನ ಆರೋಗ್ಯ ರಕ್ಷಣೆಗೆ ನೆರವು ನೀಡುತ್ತೆ. ಅಲ್ಲದೆ, ಹಲಸಿನ ಬೀಜದಲ್ಲಿರುವ ಪ್ರೋಟೀನ್‍ಗಳು ಹಾಗೂ ಮೈಕ್ರೋನ್ಯುಟ್ರಿಯಂಟ್ಸ್ ಮಾನಸಿಕ ಒತ್ತಡವನ್ನು ತಗ್ಗಿಸುತ್ತವೆ. ಆ ಮೂಲಕ ಕೂದಲುದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. 

ಸೇವಿಸೋದು ಹೇಗೆ?
ಹಲಸಿನ ತೊಳೆಯಿಂದ ಬೇರ್ಪಡಿಸಿದ ಬೀಜಗಳನ್ನು ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಇದರಿಂದ ಹಲಸಿನ ಬೀಜ ಬೇಗ ಹಾಳಾಗೋದಿಲ್ಲ. ಕುಕ್ಕರ್‍ನಲ್ಲಿ ಹಲಸಿನ ಬೀಜಗಳನ್ನು ಹಾಕಿ ಅವು ಸಂಪೂರ್ಣ ಮುಳುಗುವಷ್ಟು ನೀರು ಹಾಕಿ ಸ್ವಲ್ಪ ಉಪ್ಪು ಸೇರಿಸಿ 2 ಸೀಟಿ ಬರುವ ತನಕ ಬೇಯಿಸಬೇಕು. ಬಳಿಕ ಬೀಜದ ಮೇಲ್ಫಾಗದಲ್ಲಿರುವ ಸಿಪ್ಪೆಯನ್ನು ತೆಗೆದು ಸೇವಿಸಬೇಕು. ಹಲಸಿನ ಬೀಜ ರುಚಿಯಾಗಿರುವ ಕಾರಣ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.

Latest Videos
Follow Us:
Download App:
  • android
  • ios