ಜಿಮ್‌ಗೆ ಹೋಗೋಕೆ ಟೈಂ ಇಲ್ಲ ಅಂದ್ರೆ ಟೆನ್ಷನ್ ಬೇಡ. ಮನೆಯಲ್ಲೇ 30 ನಿಮಿಷ ಡಾನ್ಸ್ ಮಾಡಿ. ಹಂಗೋ, ಹಿಂಗೋ, ಹೆಂಗೆಂಗೋ ಸ್ಟೆಪ್ಸ್ ಹಾಕಿದ್ರೂ ಪರವಾಗಿಲ್ಲ, ದೇಹದ ಎಲ್ಲ ಭಾಗ ಅಲುಗಾಡಿಸಿದ್ರೆ ಸಾಕು.
ಕೊರೊನಾ ನಂತ್ರ ಆರೋಗ್ಯವೇ ಭಾಗ್ಯ ಎಂಬುದು ಜನರ ಅರಿವಿಗೆ ಬಂದಿದೆ. ಆರೋಗ್ಯಕರ ದೇಹ ಮತ್ತು ಮನಸ್ಸಿಗಾಗಿ ಜನರು ನಾನಾ ಕಸರತ್ತು ಮಾಡ್ತಿದ್ದಾರೆ. ಆರೋಗ್ಯವನ್ನು ನಾವು ನಾನಾ ವಿಧದಲ್ಲಿ ಕಾಪಾಡಿಕೊಳ್ಳಬಹುದು. ಉತ್ತಮ ಜೀವನ ಶೈಲಿ, ಆರೋಗ್ಯಕರ ಆಹಾರ ಸೇವನೆ ಸೇರಿದಂತೆ ಯೋಗ, ಜಿಮ್, ಜಾಗಿಂಗ್, ರನ್ನಿಂಗ್ ಹೀಗೆ ಅನೇಕ ವಿಧಾನಗಳಿವೆ. ಅದ್ರಲ್ಲಿ ಡಾನ್ಸ್ ಕೂಡ ಒಂದು. ಬಹುತೇಕರು ನೃತ್ಯವನ್ನು ಮನರಂಜನೆ ಭಾಗವಾಗಿ ನೋಡ್ತಾರೆ. ಆದ್ರೆ ಕೇವಲ ನೃತ್ಯದ ಮೂಲಕವೂ ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಬಹುದು ಅಂದ್ರೆ ನೀವು ನಂಬ್ಲೇಬೇಕು. ಜಿಮ್‌ಗೆ ಹೋಗದೆ ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ಬಯಸಿದರೆ, ಪ್ರತಿದಿನ 30 ನಿಮಿಷಗಳ ಕಾಲ ಆರಾಮವಾಗಿ ಡಾನ್ಸ್ ಮಾಡಿ. ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಸ್ಟಾರ್ ತರ ನೀವು ಡಾನ್ಸ್ ಮಾಡ್ಬೇಕಾಗಿಲ್ಲ. ಹಾಡಿಗೆ ತಕ್ಕಂತೆ ನೀವು ಹೆಜ್ಜೆ ಹಾಕಬೇಕೆಂದೂ ಇಲ್ಲ. ನಿಮ್ಮ ಮನಸ್ಸಿಗೆ ಬಂದ ಸ್ಟೆಪ್ಸ್ ಹಾಕ್ತಾ ನೀವು ಡಾನ್ಸ್ ಮಾಡಬಹುದು. ಡ್ಯಾನ್ಸ್ ದೇಹವನ್ನು ಕ್ರಿಯಾಶೀಲವಾಗಿರಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳ್ತಾರೆ.
ಡಾನ್ಸ್ (Dance) ಕ್ಯಾಲೊರಿ (Calories ) ಗಳನ್ನು ಸುಡುತ್ತದೆ. ಇದು ತೂಕ (Weight )ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಡಾನ್ಸ್ ನಿಂದ ಸಾಕಷ್ಟು ಪ್ರಯೋಜನವಿದೆ. ಇಂದು ನಾವು ನಿಮಗೆ ಡಾನ್ಸ್ ಪ್ರಯೋಜನಗಳ ಬಗ್ಗೆ ಹೇಳ್ತೆವೆ.
ಡಾನ್ಸ್ ನಿಂದಾಗುವ ಪ್ರಯೋಜನಗಳು :
1. ದೇಹದ ಬಲಕ್ಕೆ ಡಾನ್ಸ್ ತುಂಬಾ ಪರಿಣಾಮಕಾರಿಯಾಗಿದೆ. ವರದಿಯೊಂದರ ಪ್ರಕಾರ, 30 ನಿಮಿಷಗಳ ಕಾಲ ನೃತ್ಯ ಮಾಡುವುದರಿಂದ 130 ರಿಂದ 250 ಕ್ಯಾಲೋರಿ ಕರಗುತ್ತವೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ದೇಹವನ್ನು ಬಲಪಡಿಸುತ್ತದೆ.
2. ನೃತ್ಯವು ಮನಸ್ಸು ಹಾಗೂ ದೇಹವನ್ನು ಸಮತೋಲನಗೊಳಿಸುತ್ತದೆ. ಒತ್ತಡಕ್ಕೊಳಗಾಗಿದ್ದಾಗ ಅಥವಾ ಮನಸ್ಸು ಖಿನ್ನತೆಗೊಳಗಾಗಿದ್ದರೆ ಡಾನ್ಸ್ ಮಾಡ್ಬೇಕು. ಇದ್ರಿಂದ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಸಂಪೂರ್ಣ ರಿಲ್ಯಾಕ್ಸ್ ಆಗುತ್ತದೆ ಎನ್ನುತ್ತಾರೆ ತಜ್ಞರು.
3. ಪ್ರತಿ ದಿನ ಡಾನ್ಸ್ ಮಾಡುವುದ್ರಿಂದ ದೇಹದ ಕೆಳಗಿನ ಭಾಗ ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ನೃತ್ಯದಿಂದ ಕಾಲುಗಳಿಗೆ ಸರಿಯಾದ ವ್ಯಾಯಾಮ ಸಿಗುವ ಕಾರಣ ದೇಹದ ಕೆಳ ಭಾಗ ತುಂಬಾ ಸಕ್ರಿಯವಾಗಿರುತ್ತದೆ.
4. ಕೈ, ಬೆನ್ನು ಮತ್ತು ಹೊಟ್ಟೆಯ ಪ್ರತಿಯೊಂದು ಅಂಗಕ್ಕೆ ಡಾನ್ಸ್ ನಿಂದ ಚಲನೆ ಸಿಗುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಡಾನ್ಸ್ ಒಂದು ರೀತಿಯ ವ್ಯಾಯಾಮವೇ ಆಗಿದೆ.
5. ಫಿಟ್ ಆಗಿರಲು ಬಯಸುವವರು ಪ್ರತಿದಿನ 30 ನಿಮಿಷಗಳ ಕಾಲ ನೃತ್ಯ ಮಾಡಿ. ಮೊದಲೇ ಹೇಳಿದಂತೆ, ಬರೀ ತೂಕ ಕರಗಲು ನೀವು ಡಾನ್ಸ್ ಮಾಡ್ತಿದ್ದರೆ ಅದಕ್ಕಾಗಿ ಕ್ಲಾಸ್ ಗಳಿಗೆ ಸೇರುವ ಅಗತ್ಯವಿಲ್ಲ. ನೀವು ಮನೆಯಲ್ಲಿಯೇ, ಯಾವುದೇ ಖರ್ಚಿಲ್ಲದೆ ಆರಾಮವಾಗಿ ಡಾನ್ಸ್ ಮಾಡಬಹುದು. ಮಕ್ಕಳ ಜೊತೆ ಮನಸ್ಸಿಗೆ ಬಂದ ಹಾಗೆ ಕುಣಿದ್ರೂ ಸಾಕು. ಈ ಡಾನ್ಸ್ ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಹಸಿವೇನೆ ಆಗ್ತಿಲ್ಲ ಅಂತ ಸುಮ್ನಿರ್ಬೇಡಿ, ಹೊಟ್ಟೆಯ ಕ್ಯಾನ್ಸರ್ ಕೂಡಾ ಆಗಿರ್ಬೋದು !
ಡಾನ್ಸ್ ಮೂಲಕ ಈ ರೋಗಕ್ಕೆ ಹೇಳಿ ಗುಡ್ ಬೈ :
ನೃತ್ಯವು ದೇಹವನ್ನು ಸದೃಢವಾಗಿಡುವುದಲ್ಲದೆ, ಅನೇಕ ರೋಗಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಬೊಜ್ಜು ಅನೇಕ ರೋಗಗಳ ಮೂಲವಾಗಿದೆ. ನಿಯಮಿತವಾಗಿ ಡ್ಯಾನ್ಸ್ ಮಾಡಿದರೆ ಬೊಜ್ಜು ಕಡಿಮೆಯಾಗುವುದಲ್ಲದೇ ಬೊಜ್ಜಿನ ಸಮಸ್ಯೆಗಳಾದ ಮಧುಮೇಹ ಮತ್ತು ಹೃದ್ರೋಗ ಮತ್ತು ಅಧಿಕ ಕೊಲೆಸ್ಟ್ರಾಲ್ ಅಪಾಯವನ್ನು ಕಡಿಮೆಯಾಗುತ್ತದೆ.
Nudity as Therapy: ಬೆತ್ತಲೆಯಾಗಿರುವುದು ಆರೋಗ್ಯಕ್ಕೆ ಹೇಗೆ ಒಳ್ಳೆಯದು?
ನೃತ್ಯದಿಂದ ಕೆಲ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. 8 ಗಂಟೆಗಿಂತ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರಿಗೆ ದೇಹವನ್ನು ದಂಡಿಸುವ ಅಗತ್ಯವಿದೆ. ಇಲ್ಲವೆಂದ್ರೆ ರಕ್ತಪರಿಚಲನೆ ಸರಿಯಾಗಿ ಆಗದೆ ಸಮಸ್ಯೆಯಾಗುತ್ತದೆ. ಅಂಥವರು ಡಾನ್ಸ್ ಮಾಡಬಹುದು.
