Asianet Suvarna News Asianet Suvarna News

ಮಕ್ಕಳ ತಲೆಯಲ್ಲಿ ಹೇನಿನ ಕಾಟವೇ, ತೆಲೆ ಕೆಡಿಸಿಕೊಳ್ಳಬೇಡಿ, ಈ ಮನೆ ಮದ್ದು ಟ್ರೈ ಮಾಡಿ

ಹೇನಿನ ಸಹವಾಸ ಬೇಡ. ಒಮ್ಮೆ ತಲೆಗೆ ಹತ್ತಿದ್ರೆ ಮುಗೀತು, ಪರ ಪರ ಅಂತ ತುರಿಸಿಕೊಂಡಷ್ಟು ಸಾಲೋದಿಲ್ಲ. ಕೆಲವೊಮ್ಮೆ ಕುತ್ತಿಗೆ ಮೇಲೆಲ್ಲ ಓಡಾಡುವ ಹೇನು ಮುಜುಗರಕ್ಕೀಡು ಮಾಡುತ್ತೆ. ಅದ್ರಿಂದ ತಪ್ಪಿಸಿಕೊಳ್ಳಲು ಕೆಲ ಮನೆ ಮದ್ದನ್ನು ಬಳಸಬಹುದು.
 

Head Lice Home Remedies
Author
First Published Nov 10, 2022, 4:33 PM IST

ಹೇನಿನ ಹೆಸರು ಕೇಳ್ತಿದ್ದಂತೆ ತಲೆ ತುರಿಕೆ ಶುರುವಾಗುತ್ತೆ. ಒಮ್ಮೆ ತಲೆಗೆ ಹೇನು ಹತ್ತಿಕೊಂಡ್ರೆ ಅದ್ರಿಂದ ಹೊರಗೆ ಬರೋದು ಸುಲಭವಲ್ಲ. ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ ಸಮಸ್ಯೆ ಸಾಮಾನ್ಯ. ಮಕ್ಕಳು ಹೇನು ತೆಗೆಯೋಕೆ ಬಿಡೋದಿಲ್ಲ. ಹೇನೆಲ್ಲ ಸೇರಿ ನಿನ್ನನ್ನು ಹೊನ್ನಾರ್ ಗುಂಡಿಗೆ ಎಳೆದುಕೊಂಡು ಹೋಗುತ್ತೆ ಅಂತಾ ಕೆಲ ಪಾಲಕರು ಹೆದರಿಸ್ತಾರೆ. ಹೇನು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗತ್ತೋ ಗೊತ್ತಿಲ್ಲ ಆದ್ರೆ ಹೇನಿನಿಂದ ಮಗುವೊಂದು ಸಾವನ್ನಪ್ಪಿದ್ದು ನಿಜ. ಆಕೆಯ ದೇಹದಲ್ಲಿ ರಕ್ತ ಕಡಿಮೆಯಾಗಿ ಆಕೆ ಸಾವನ್ನಪ್ಪಿದ್ದಳು. ಹೇನು ಭಯಪಡುವಂತಹ ಹುಳುವಲ್ಲ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರನ್ನು ಕೂಡ ಈ ಹೇನು ಕಾಡುತ್ತದೆ. 

ಹೇನು (Lice) ತಲೆಯಲ್ಲಿ ಕೂದಲ ನಡುವೆ ರಕ್ತ (Blood) ಹೀರಿ ಬದುಕುವ ಜೀವಿ. ಇದು ಮೊಟ್ಟೆ (Egg) ಯನ್ನು ಇಡುತ್ತದೆ. ಇದು ಒಬ್ಬರ ತಲೆಯಿಂದ ಇನ್ನೊಬ್ಬರ ತಲೆಗೆ   ನೆಗೆಯುವ, ತೆವಳುವ ಮತ್ತು ಹಾರಬಲ್ಲ ಸಾಮಾರ್ಥ್ಯ ಹೊಂದಿದೆ. ಹೇನಿನ ಮೊಟ್ಟೆ ಪಕ್ವವಾಗಲು ಎಂಟು ದಿನ ಬೇಕು. ಅದರ ಜೀವಿತಾವಧಿ 21 ದಿನಗಳು. ಹೆಣ್ಣು ಹೇನು ದಿನಕ್ಕೆ 5 ಮೊಟ್ಟೆಗಳನ್ನು ಇಡುತ್ತವೆ.  ಕೂದಲಲ್ಲಿ ಬಹುಕಾಲ ಹೇನುಗಳಿದ್ದರೆ ಗಾಯ, ತುರಿಕೆ, ಮೊಡವೆ ಕಾಣಿಸಿಕೊಳ್ಳುತ್ತದೆ. 

Womans Health: ಮಹಿಳೆಯರಿಗೆ ಡಯಾಬಿಟಿಸ್ ಇದ್ರೆ ಮಕ್ಕಳಾಗಲ್ವಾ?

ಹೇನಿಗೆ ಚಿಕಿತ್ಸೆ (Treatment) ಹೇಗೆ ? : ಹೇನನ್ನು ತೆಗೆಯಲು ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾಬೂನು, ಕ್ರೀಮ್, ಶ್ಯಾಂಪೂಗಳು  ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದಲ್ಲದೆ ವೈದ್ಯರು ಸೂಚಿಸುವ ಔಷಧಿಗಳನ್ನು ನೀವು ಖರೀದಿಸಿ ಬಳಸಬಹುದು.
ತಲೆಯಲ್ಲಿ ಹೇನಾದಾಗ ವಿಪರೀತ ತುರಿಕೆಯಾಗುತ್ತದೆ. ಕೂದಲಿನ ಮೇಲೆ ಬಿಳಿ ಬಿಳಿ ಸಿಗುರು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಕಿರಿಕಿರಿ, ನೆತ್ತಿ ಉರಿ ಹಾಗೂ ತುರಿಕೆಯಾಗುತ್ತದೆ. ಮಕ್ಕಳ ತಲೆಯಲ್ಲಿ ಹೇನಿದ್ದರೆ ನೀವು ಅದನ್ನು ಸುಲಭವಾಗಿ ತೆಗೆಯಬಹುದು. 
ಮೊದಲು ಕೂದಲನ್ನು ನೀರಿನಿಂದ ಒದ್ದೆ ಮಾಡಬೇಕು. ನಂತ್ರ ಮಾರುಕಟ್ಟೆಯಲ್ಲಿ ಸಿಗುವ ಹೇನಿನ ಬಾಚಣಿಕೆಯನ್ನು ನೀವು ಬಳಸಬೇಕು. ಕೂದಲನ್ನು ಕೆಳಮುಖವಾಗಿ ಬಾಚಬೇಕು. ನೀವು ಹೀಗೆ ಬೇರಿನಿಂದ ಕೆಳಮುಖವಾಗಿ ಕೂದಲು ಬಾಚಿದ್ರೆ ಹೇನು ಕೆಳಗೆ ಬೀಳುತ್ತದೆ. ಇಲ್ಲವೆ ಬಾಚಣಿಕೆಗೆ ಅಂಟಿಕೊಳ್ಳುತ್ತದೆ. ನೀವು ದಿನಕ್ಕೆ ಮೂರ್ನಾಲ್ಕು ಬಾರಿ ಹೀಗೆ ಬಾಚಿ ಹೇನು ತೆಗೆಯಬೇಕು.ನಾಲ್ಕೈದು ದಿನ ಪದೇ ಪದೇ ಬಾಚಿದ್ರೆ ಹೇನನ್ನು ಸುಲಭವಾಗಿ ತೆಗೆಯಬಹುದು. 

ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅವುಗಳಿಂದ ಪೇಸ್ಟ್ ತಯಾರಿಸಿ ಕೂದಲಿನ ಬೇರುಗಳಿಗೆ ಚೆನ್ನಾಗಿ ಹಚ್ಚಿಕೊಳ್ಳಿ. ಪೇಸ್ಟ್ ಒಣಗಿದ ನಂತರ, ಅದನ್ನು ಚೆನ್ನಾಗಿ ತೊಳೆಯಿರಿ ಮತ್ತು ನೆನೆಸಿದ ಕೂದಲನ್ನು ಬೇರಿನಿಂದ ತುದಿಯವರೆಗೆ ಬಾಚಿ. ಹೀಗೆ ಮಾಡಿದ್ರೂ ತಲೆಯಲ್ಲಿರುವ ಹೇನು ಸಾಯುತ್ತದೆ.

ಟೀ ಟ್ರೀ ಎಣ್ಣೆಯನ್ನು ಕೂಡ ನೀವು ಬಳಕೆ ಮಾಡಬಹುದು. ರಾತ್ರಿ ಟೀ ಟ್ರೀ ಎಣ್ಣೆಯನ್ನು ಕೂದಲಿನ ಬೇರುಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಬೆಳಿಗ್ಗೆ ಶಾಂಪೂ ಮಾಡಿದ ನಂತರ ಕೂದಲನ್ನು ಬಾಚಬೇಕು. ಆದ್ರೆ ಹೇನಿನ ಸಂಖ್ಯೆ ಕೈಮೀರಿದೆ, ತಲೆ ತುಂಬ ಮೊಟ್ಟೆ ಇಟ್ಟಿದೆ ಎಂದಾದ್ರೆ ನೀವು ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಮಲಗಿಕೊಂಡೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡ್ತೀರಾ ? ಎಷ್ಟು ಡೇಂಜರಸ್ ತಿಳ್ಕೊಳ್ಳಿ

ಈ ತಪ್ಪನ್ನು ಮಾಡ್ಬೇಡಿ : ಸೀಮೆ ಎಣ್ಣೆ ಹಾಗೂ ಗ್ಯಾಸೋಲಿನ್ ನಿಂದ ಹೇನು ಸಾಯುತ್ತದೆ ಎನ್ನುವವರಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಇವುಗಳನ್ನು ಕೂದಲಿಗೆ ಹಚ್ಚಬೇಡಿ. ಆಲಿವ್ ಎಣ್ಣೆ, ಬೆಣ್ಣೆ, ಪೆಟ್ರೋಲಿಯಂ ಜೆಲ್ಲಿಯನ್ನು ಕೂಡ ಕೂದಲಿಗೆ ಹಾಕಬೇಡಿ. ಇದ್ರಿಂದ ಹೇನು ಸಾಯುತ್ತದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಹೇನು ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣ, ಹೇನಿರುವ ವ್ಯಕ್ತಿಯಿಂದ ದೂರ ಮಲಗುವುದು ಒಳ್ಳೆಯದು. ಹಾಗೆಯೇ ಅವರ ಬಳಸಿದ ಹಾಸಿಗೆ ಬಟ್ಟೆ ಮತ್ತು ಟವೆಲ್ ಗಳನ್ನು ಬಿಸಿ ನೀರಿನಲ್ಲಿ ತೊಳೆದು ಮರು ಬಳಕೆ ಮಾಡಬೇಕು.

Follow Us:
Download App:
  • android
  • ios