Asianet Suvarna News Asianet Suvarna News

ತಲೆಯ ಗಾಯ ಹಳೆಯದಾಗಿರಬಹುದು. ಆದರ ಇಗ್ನೋರ್ ಮಾಡೋದು ಅಪಾಯ

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಹಾಗೆ ಬ್ರೈನ್ ಟ್ಯೂಮರ್ ಗೆ ಅನೇಕರು ಬಲಿಯಾಗ್ತಿದ್ದಾರೆ. ಇದಕ್ಕೆ ಕಾರಣ ಹಾಗೂ ಲಕ್ಷಣವನ್ನು ಮೊದಲೇ ತಿಳಿದಿದ್ದರೆ ಆರಂಭದಲ್ಲಿಯೇ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದು.
 

Head Injury Can Cause Brain Tumor if ignored in the initial stage
Author
Bangalore, First Published Jul 19, 2022, 4:26 PM IST

ನಮ್ಮ ದೇಹದ ಪ್ರಮುಖ ಅಂಗ ಮೆದುಳು. ಮೆದುಳು ಸರಿಯಾಗಿ ಕಾರ್ಯನಿರ್ವಹಿಸದೆ ಹೋದ್ರೆ ನಮ್ಮ ಆರೋಗ್ಯ ಹದಗೆಟ್ಟಂತೆ. ನಾವು ಆರೋಗ್ಯವಾಗಿರಬೇಕೆಂದ್ರೆ ಮೆದುಳು ಸರಿಯಾಗಿ ಕೆಲಸ ಮಾಡ್ಬೇಕು. ದೇಹದ ಎಲ್ಲ ಅಂಗಗಳನ್ನು ಮೆದುಳು ನಿಯಂತ್ರಿಸುತ್ತದೆ. ತಲೆಗೆ ಪೆಟ್ಟು ಬಿದ್ರೆ ಉಳಿಯೋದು ಕಷ್ಟ. ಅನೇಕ ಬಾರಿ ಬಾಲ್ಯದಲ್ಲಿ ಬಿದ್ದು ಅಥವಾ ಬೇರೆ ಯಾವುದೋ ಕಾರಣದಿಂದ ತಲೆಗೆ ಗಾಯವಾಗಿರುತ್ತದೆ. ನಂತ್ರ ಅದು ಗುಣಮುಖವಾದ ಕಾರಣ ನಾವು ಅದನ್ನು ಮರೆತಿರ್ತೇವೆ. ಆದ್ರೆ ಈ ಗಾಯವೇ ಮುಂದೆ ದೊಡ್ಡ ಸಮಸ್ಯೆಯಾಗಿ ನಮ್ಮನ್ನು ಕಾಡ್ಬಹುದು. ಹಾಗಾಗಿ ಹಿಂದಿನ ಗಾಯವನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ ಎನ್ನುತ್ತಾರೆ ತಜ್ಞರು.  ತಲೆಗೆ ಆದ ಗಾಯ ಮುಂದೆ ಯಾವುದೋ ಪ್ರಮುಖ ಕಾಯಿಲೆಗೆ ಆಹ್ವಾನ ನೀಡಬಹುದು. ಕೆಲವೊಮ್ಮೆ ತಲೆಗಾದ ದೀರ್ಘಕಾಲದ ಗಾಯವು ಕ್ರಮೇಣ ಮೆದುಳಿನ ಗೆಡ್ಡೆಯಾಗಿ ಬೆಳೆಯುತ್ತದೆ. ಗಾಯದಿಂದಾಗಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚಿದೆ. ಮೆದುಳಿನಲ್ಲಿ ಹೆಪ್ಪುಗಟ್ಟುವಿಕೆ ಸಮಸ್ಯೆಯಾದಾಗ ಅದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಅಗತ್ಯವಿದೆ.  ಇಲ್ಲವೆಂದ್ರೆ ಮೆದುಳಿನಲ್ಲಿ ಗೆಡ್ಡೆ ರೂಪುಗೊಳ್ಳುತ್ತದೆ.

ಮೆದುಳಿನ ಗೆಡ್ಡೆ ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ಚಿಕಿತ್ಸೆ ಅಸಾಧ್ಯವಾಗುತ್ತದೆ. ಬ್ರೈನ್ ಟ್ಯೂಮರ್ ಗೆ ಮುಖ್ಯ ಕಾರಣ ಮತ್ತು ಅದರ ಲಕ್ಷಣಗಳೇನು ಎಂಬುದರ ವಿವರ ಇಲ್ಲಿದೆ.  

ಬ್ರೈನ್ ಟ್ಯೂಮರ್ (Brain Tumor) ಎಂದರೇನು? : ಮೆದುಳಿನಲ್ಲಿರುವ ಅನೇಕ ಅಸಹಜ ಕೋಶಗಳು ಒಂದೇ ಸ್ಥಳದಲ್ಲಿ ಒಟ್ಟುಗೂಡಿ ಗಡ್ಡೆಯ ರೂಪವನ್ನು ಪಡೆದಾಗ  ಅದನ್ನು ಬ್ರೈನ್ ಟ್ಯೂಮರ್ ಎಂದು ಕರೆಯಲಾಗುತ್ತದೆ. ಮೆದುಳಿನ ಗೆಡ್ಡೆಗಳಲ್ಲಿ ಎರಡು ವಿಧಗಳಿವೆ. ಹಾನಿಕರವಲ್ಲದ ಗೆಡ್ಡೆಗಳು ಮತ್ತು ಮಾರಣಾಂತಿಕ ಗೆಡ್ಡೆಗಳು. ಕೆಲ ಗಡ್ಡೆ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿಯಲ್ಲ. ಆದರೆ ಮಾರಣಾಂತಿಕ ಗೆಡ್ಡೆ ಕ್ಯಾನ್ಸರ್ ರೂಪವನ್ನು ತೆಗೆದುಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ  ಅದು ಇತರ ಅಂಗಗಳಿಗೆ ಹರಡುತ್ತದೆ.

ಮಣ್ಣಿನ ಪಾತ್ರೆಯಲ್ಲಿ ತುಂಬಿಸಿಟ್ಟ ನೀರು ಕುಡಿದ್ರೆ ಅಸಿಡಿಟಿ ಸಮಸ್ಯೆ ಕಾಡಲ್ಲ

ಬ್ರೈನ್ ಟ್ಯೂಮರ್ (Brain Tumor) ಗೆ ಕಾರಣವೇನು ಗೊತ್ತಾ? : ಬ್ರೈನ್ ಟ್ಯೂಮರ್ ಗೆ ಅನೇಕ ಕಾರಣಗಳಿವೆ. 

ತಲೆ (Head) ಯ ಗಾಯ (Injury) : ಅವುಗಳಲ್ಲಿ ಒಂದು ತಲೆ ಗಾಯ.  ತಲೆ ಗಾಯವು ಆಂತರಿಕವಾಗಿದ್ದರೆ, ಅದು ಕ್ರಮೇಣ ದೊಡ್ಡ ಗಾಯದ ರೂಪವನ್ನು ತೆಗೆದುಕೊಳ್ಳಬಹುದು. ಇದರಿಂದಾಗಿ ಬ್ರೈನ್ ಟ್ಯೂಮರ್ ಸಂಭವಿಸಬಹುದು.

ಆನುವಂಶಿಕ : ಕೆಲವೊಮ್ಮೆ ಕ್ಯಾನ್ಸರ್  ಆನುವಂಶಿಕವಾಗಿ ಬರುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಬ್ರೈನ್ ಟ್ಯೂಮರ್ ಅಥವಾ ಕ್ಯಾನ್ಸರ್ ಇದ್ದರೆ, ಅದನ್ನು ಮಕ್ಕಳಿಗೂ ವರ್ಗಾಯಿಸಬಹುದು.

ವಯಸ್ಸು : ವಯಸ್ಸಾದಂತೆ ಬ್ರೈನ್ ಟ್ಯೂಮರ್ ಅಪಾಯವೂ ಹೆಚ್ಚಾಗುತ್ತದೆ. ವೃದ್ಧಾಪ್ಯದಲ್ಲಿ ಮೆದುಳಿನ ಕಾರ್ಯವು ನಿಧಾನಗೊಳ್ಳುತ್ತದೆ. ದೇಹದ ಇತರ ಅಂಗಗಳೂ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಬ್ರೈನ್ ಟ್ಯೂಮರ್ ಕಾಡುವ ಸಾಧ್ಯತೆಯಿದೆ.

ವಿಕಿರಣ : ರಾಸಾಯನಿಕ ಮತ್ತು ವಿಕಿರಣದ ಕಾರಣದಿಂದಲೂ ಬ್ರೈನ್ ಟ್ಯೂಮರ್ ಕಾಡುತ್ತದೆ. ಮೆದುಳಿನ ಮೇಲೆ ನೇರ ಪರಿಣಾಮ ಬೀರುವ ರಾಸಾಯನಿಕ ಕಾರ್ಖಾನೆಗಳು ಅಥವಾ ವಿಕಿರಣದ ಸಂಪರ್ಕಕ್ಕೆ ಬಂದಾಗ ಬ್ರೈನ್ ಟ್ಯೂಮರ್ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. 
ಅತಿಯಾದ ಆಲ್ಕೋಹಾಲ್, ಧೂಮಪಾನ : ಅತಿಯಾದ ಆಲ್ಕೋಹಾಲ್ ಮತ್ತು ಸಿಗರೇಟ್ ಸೇವನೆಯು ಮೆದುಳಿನ ಗೆಡ್ಡೆಗೆ ಕಾರಣವಾಗಬಹುದು. ಮಿತಿ ಮೀರಿ ಧೂಮಪಾನ ಮಾಡುವ ಜನರಿಗೆ ಬ್ರೈನ್ ಟ್ಯೂಮರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.

ದಾಳಿಂಬೆ ಜೀವ ರಕ್ಷಕ, ಅಂತದ್ದೇನಿದೆ ವಿಶೇಷ ಈ ಕಾಳಿನ ಹಣ್ಣಿನಲ್ಲಿ?

ಬ್ರೈನ್ ಟ್ಯೂಮರ್ ಲಕ್ಷಣಗಳು : ತಲೆ ನೋವು ಅನೇಕ ಕಾರಣಗಳಿಗೆ ಬರುತ್ತದೆ. ಆದ್ರೆ ವಿಪರೀತ ತಲೆ ನೋವು ಪದೇ ಪದೇ ಬರ್ತಿದ್ದರೆ ನೀವು ವೈದ್ಯರ ಬಳಿ ಹೋಗುವುದು ಉತ್ತಮ. ಹೆಚ್ಚಿನ ತಲೆ ನೋವು ಬ್ರೈನ್ ಟ್ಯೂಮರ್ ಲಕ್ಷಣವಾಗಿದೆ. ದೊಡ್ಡ ಶಬ್ಧ ಕೇಳಲು ಅಥವಾ ಹೆಚ್ಚು ಗದ್ದಲವಿರುವ ಪ್ರದೇಶಕ್ಕೆ ಹೋದಾಗ ತೊಂದರೆಯಾಗ್ತಿದ್ದರೆ ಅದನ್ನು ನಿರ್ಲಕ್ಷ್ಯಿಸಬಾರದು. ತಲೆ ನೋವಿನ ಜೊತೆಗೆ ವಾಂತಿಯಾಗ್ತಿದ್ದರೆ ತಲೆ ಸುತ್ತು ಕಾಣಿಸಿಕೊಳ್ಳುತ್ತಿದ್ದರೆ, ಮೂಡ್ ಸ್ವಿಂಗ್ಸ್ ಮತ್ತು ಹಸಿವು ಆಗ್ತಿಲ್ಲ ಎಂದಾದ್ರೆ ಚಿಕಿತ್ಸೆ ಅಗತ್ಯವಿದೆ ಎಂದರ್ಥ. 
 

Follow Us:
Download App:
  • android
  • ios