ಇಂದು ಜಾಗತಿಕ ಕೈತೊಳೆಯುವ ದಿನವಾಗಿಆಚರಿಸಲಾಗುತ್ತಿದೆ. ಸಾರ್ವಜನಿಕರು ವೈಜ್ಞಾನಿಕ ರೀತಿ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳ ಆಶ್ರಯದಲ್ಲಿ ಆಗಸ್ಟ್ 15 ಅನ್ನು ಜಾಗತಿಕ ಮಟ್ಟದ ಕೈ ತೊಳೆಯುವ ದಿನವಾಗಿ ಆಚರಿಸಲಾಗುತ್ತಿದೆ.

2008ರಿಂದ ಈ ದಿನಾಚರಣೆ ನಡೆಯುತ್ತಿದೆ. ಕೋವಿಡ್‌ ಮಹಾಮಾರಿಯ ಅವಧಿಯಲ್ಲಿ ಈ ದಿನಾಚರಣೆಗೆ ಅತಿ ಮಹತ್ವ ಪಡೆದುಕೊಂಡಿದೆ. ‘ಎಲ್ಲರಲ್ಲೂ ನಡೆಯಲಿ ಕೈ ತೊಳೆಯುವ ಮೂಲಕ ಶುಚಿತ್ವ’ ಎಂಬುದು ಈ ವರ್ಷದ ಸಂದೇಶವಾಗಿದೆ. ವೈಜ್ಞಾನಿಕ ರೂಪದಲ್ಲಿ ಕೈ
ತೊಳೆಯುವಿಕೆ ಕೋವಿಡ್‌ ಪ್ರತಿರೋಧ ಚಟುವಟಿಕೆಗಳಲ್ಲಿ ಪ್ರಧಾನ ಅಂಗವಾಗಿದೆ.

ಫೇಸ್ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ ಉಂಟಾಗಲಿದೆಯೇ?

* ಕೈ ತೊಳೆಯುವುದದಿಂದ ಸೂಕ್ಷ್ಮಾಣು ಜೀವಿಗಳ ಹರಡುವಿಕೆಯನ್ನು ತಡೆಯುವ ಪರಿಣಾಮಕಾರಿ ಮಾರ್ಗವಾಗಲಿದೆ.

* ಕೈ ತೊಳೆಯುವುದರಿಂದ ನಿಮ್ಮನನು ನೀವು ರಕ್ಷಿಸಿಕೊಳ್ಳಿ ಕೋವಿಡ್ ನಿಂದ ಸುರಕ್ಷಿತವಾಗಿರಿ.

* ನೀವು ನಿಯಮಿತವಾಗಿ ಸೋಪಿನಿಂದ ಕೈತೊಳೆಯುತ್ತಿದ್ದರೆ, ನಿಮ್ಮ ಕುಟುಂಬವು ಆರೋಗ್ಯಕರವಾಗಿರುತ್ತದೆ.

ಇನ್ನು ವಿಶ್ವ ಕೈತೊಳೆಯುವ ದಿನಾಚರಣೆಗೆ ದಾವಣಗೆರೆ ಎಸ್ಸೆಸ್ ಹೈಟೆಕ್ ಅಸ್ಪತ್ರೆ ಪೆಥಾಲಜಿ ವಿಭಾಗ‌‌ ಮುಖ್ಯಸ್ಥೆ ಡಾ.ಶಶಿಕಲಾ ಕೃಷ್ಣಮೂರ್ತಿ ಕನ್ನಡದಲ್ಲಿ, ಮಗನಾದ ಮೆಕ್ಯಾನಿಕಲ್ ಇಂಜಿನಿಯರ್ ರಾಹುಲ್ ಕೃಷ್ಣಮೂರ್ತಿ ಇಂಗ್ಲಿಷ್ ನಲ್ಲಿ ಹಾಡಿರುವ ಯೂ ಟ್ಯೂಬ್ ವೀಡಿಯೋ, ಹಾಡಿನ ಆಡಿಯೊ...