Asianet Suvarna News Asianet Suvarna News

Hair Care Tips: ತಲೆಗೆ ಎಣ್ಣೆ ಹಚ್ಚುವಾಗ ಈ ತಪ್ಪು ಮಾಡಬೇಡಿ

ಆಕರ್ಷಕ ಕೂದಲು ಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ ಆಕರ್ಷಕ ಕೂದಲು ಪಡೆಯಬೇಕೆಂದರೆ ಕೂದಲನ್ನು ಅಷ್ಟೇ ಚೆನ್ನಾಗಿ ಆರೈಕೆ ಮಾಡಬೇಕಾಗುತ್ತದೆ. ಆಗ ಮಾತ್ರ ಕೂದಲು ಮೃದುವಾದ(Soften), ಸೊಂಪಾದ ಕೂದಲನ್ನು ಪಡೆಯಲು ಸಾಧ್ಯ. ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಮುಖ್ಯ. ಏಕೆಂದರೆ ಕೂದಲಿನ ತೇವಾಂಶ ಕಾಯ್ದುಕೊಳ್ಳುವುದರ ಜೊತೆಗೆ ಹೊಳಪನ್ನು(Shinning) ಹೆಚ್ಚಿಸುತ್ತದೆ. ಆದರೆ ಎಣ್ಣೆ ಹಚ್ಚುವಾಗ ಸರಿಯಾದ ರೀತಿಯಲ್ಲಿ ಹಚ್ಚಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

Hair Care Tips: Don't do these mistakes while applying Hair Oil
Author
First Published Nov 5, 2022, 11:33 AM IST

ಕೂದಲಿಗೆ ಎಣ್ಣೆ(Oiling Hair) ಹಚ್ಚುವುದು ಬಹಳ ಮುಖ್ಯ. ಎಣ್ಣೆ ಹಚ್ಚುವುದರಿಂದ ಕೂದಲಿನ ಆಯಾಸವನ್ನು(Tiredness) ಕಡಿಮೆ ಮಾಡುವುದಲ್ಲದೆ ಅದರ ಹೊರಪದರದ ಕೋಶಗಳ ನಡುವಿನ ಅಂತರವನ್ನು ತುಂಬುವ ಮೂಲಕ ಕೂದಲು ಕೋಶಕವನ್ನು ಸರ್ಫ್ಯಾಕ್ಟೆöÊಂಟ್‌ಗಳಿAದ ರಕ್ಷಿಸುತ್ತದೆ. ಎಣ್ಣೆ ಹಚ್ಚುವುದರಿಂದ ಕೇವಲ ಕೂದಲಿಗಷ್ಟೇ ಅಲ್ಲದೆ ನೆತ್ತಿಯ(Scalp) ಮೇಲೂ ಪ್ರಯೋಜನಕಾರಿಯಾಗಿದೆ. ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿದಾಗ ಇದು ಎಕ್ಸ್ಫೋಲಿಯೇಶನ್‌ಗೆ(Exfoliation) ಸಹಾಯ ಮಾಡುತ್ತದೆ. ಇದು ಕೆಲವೊಮ್ಮೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ತೆಂಗಿನ ಎಣ್ಣೆ(Coconut Oil), ಬಾದಾಮಿ ಎಣ್ಣೆ(Badam Oil), ಕ್ಯಾಸ್ಟರ್ ಆಯಿಲ್(Castrol Oil), ಈರುಳ್ಳಿ ಎಣ್ಣೆ(Onion Oil) ಮತ್ತು ನೆಲ್ಲಿಕಾಯಿ ಎಣ್ಣೆ(Amla Oil) ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಪರಿಣಾಮಬೀರುವ ಕೆಲವು ಅತ್ಯುತ್ತಮ ಎಣ್ಣೆಗಳಾಗಿವೆ. ಕೂದಲಿಗೆ ಎಣ್ಣೆ ಹಚ್ಚುವುದು ನಿರ್ಜೀವ ಟ್ರೆಸ್‌ಗಳಿಂದ ಹಿಡಿದು ಹಾನಿಗೊಳಗಾದ ತುದಿಗಳವರೆಗೆ ಒತ್ತಡ ನಿವಾರಣೆಗೆ ಎಲ್ಲದಕ್ಕೂ ಪರಿಹಾರವಾಗಿದೆ.

ಕೂದಲು ಹೆಲ್ದಿ, ಶೈನ್ ಆಗಲು ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ

ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯದ ಕಾಪಾಡಿಕೊಳ್ಳಬೇಕು ಎಂದರೆ ಎಣ್ಣೆ ಹಚ್ಚುವುದು ಸರಿಯಾದ ರೀತಿಯಲ್ಲಿರಬೇಕು. ಎಣ್ಣೆ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ. ಈ ಬಗ್ಗೆ ಇಲ್ಲಿದೆ ಕೆಲ ಸಲಹೆಗಳು.

1. ತಲೆಯಲ್ಲಿ ಹೊಟ್ಟು(Dandruff) ಹೊಂದಿದ್ದರೆ ನಿಮ್ಮ ನೆತ್ತಿಗೆ ಎಣ್ಣೆ ಹಾಕಬಾರದು. ಬದಲಾಗಿ ನೆತ್ತಿಯನ್ನು ಸ್ವಚ್ಛಗೊಳಿಸಲು ಅಲೋವೆರಾ ಜೆಲ್(Alovera Gel), ಪುಡಿ ಮಾಡಿದ ಬೇವಿನ ಎಲೆಗಳು(Neem Powder) ಅಥವಾ ಬೇವಿನ ಎಣ್ಣೆಯನ್ನು(Neem Oil) ಬಳಸಿ. ಅಂದರೆ ತಲೆಹೊಟ್ಟು ನಿವಾರಣೆಯಾದ ನಂತರ ನೆತ್ತಿಗೆ ಎಣ್ಣೆಯನ್ನು ಹಚ್ಚಬೇಕು.

2. ತಲೆಯಲ್ಲಿ ಎಣ್ಣೆ ಇದ್ದರೆ ಒಳ್ಳೆಯದು. ಆದರೆ ರಾತ್ರಿಯಿಡೀ(Whole Night) ತಲೆಯಲ್ಲಿ ಎಣ್ಣೆ ಇರುವುದು ಒಳ್ಳೆಯದಲ್ಲ. ಏಕೆಂದರೆ ಎಣ್ಣೆಯು ನಿಮ್ಮ ಕೂದಲಿನ ಕಿರುಚೀಲಗಳನ್ನು ನಿರ್ಬಂಧಿಸುತ್ತದೆ. ರಾತ್ರಿಯಲ್ಲಿ ಔಷಧೀಯ ಎಣ್ಣೆಯನ್ನು ಬಿಡಲು ಹೇಳಿದರೆ ಅದನ್ನು 3-4 ಗಂಟೆಗಳ ಒಳಗೆ ತೊಳೆಯಿರಿ. ಕೂದಲಿನ ಪ್ರಕಾರ ಮತ್ತು ಋತುವಿಗೆ(Season) ಸೂಕ್ತವಾದ ಬೆಚ್ಚಗೆ ಮಾಡಿದ ಎಣ್ಣೆಯನ್ನೇ ಹಚ್ಚಿ. ಅಲ್ಲದೆ ಕೂದಲಿಗೆ ಎಣ್ಣೆಯನ್ನು ಹಗಲಿನಲ್ಲಿ ಹಚ್ಚುವುದು ಉತ್ತಮವಾಗಿ ಮಾಡಲಾಗುತ್ತದೆ. ರಾತ್ರಿಯಿಡೀ ಎಣ್ಣೆ ಹಚ್ಚಿ ಬಿಡುವುದರಿಂದ ಧೂಳು(Dust) ಸಂಗ್ರಹವಾಗುತ್ತದೆ ಮತ್ತು ನಿಮ್ಮ ಕೂದಲನ್ನು ದುರ್ಬಲಗೊಳಿಸುತ್ತದೆ.
ನೀವು ಏನನ್ನಾದರು ತಿನ್ನುವ ನಂತರ ಅಥವಾ ಸೂರ್ಯಾಸ್ತದ ನಂತರ ಎಣ್ಣೆಯನ್ನು ಅನ್ವಯಿಸುವುದನ್ನು ತಪ್ಪಿಸಿ. ಏಕೆಂದರೆ ಕೂದಲಿನ ಕಿರುಚೀಲಗಳು ನೈಸರ್ಗಿಕವಾಗಿ ದಿನದ ಅಂತ್ಯದಲ್ಲಿ ಮುಚ್ಚಲ್ಪಡುತ್ತವೆ ಮತ್ತು ತೈಲವು ಚಯಾಪಚಯಗೊಳ್ಳುವುದಿಲ್ಲ ಅಥವಾ ಚೆನ್ನಾಗಿ ಹೀರಿಕೊಳ್ಳುವುದಿಲ್ಲ. ಅಲ್ಲದೆ ಅಲರ್ಜಿ(Allergy), ಶೀತ, ಕೆಮ್ಮು, ಅಸ್ತಮಾ(Asthma), ಸೈನುಟಿಸ್, ಕುತ್ತಿಗೆ ನೋವು ಸಮಸ್ಯೆಗೆ ಗುರಿಯಾಗಿದ್ದರೆ, ರಾತ್ರಿಯಿಡೀ ಕೂದಲು ಅಥವಾ ನೆತ್ತಿಗೆ ಎಣ್ಣೆ ಹಾಕುವುದನ್ನು ತಪ್ಪಿಸಿ.

ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡ್ಬೋದಾ ?

3. ತಲೆಗೆ ಎಣ್ಣೆ ಹಚ್ಚುವಾಗ ಅತಿಯಾಗಿ ಹಚ್ಚುವುದನ್ನು ತಪ್ಪಿಸಿ. ಕೆಲವರು ತಲೆಗೆ ಎಣ್ಣೆ ಹಚ್ಚಿದರೆ ಮುಖ, ಕುತ್ತಿಗೆ ಮೇಲೆ ಸೋರುತ್ತಿರುತ್ತದೆ. ಹಾಗೆ ಮಾಡುವುದು ತಪ್ಪು. ಸ್ವಲ್ಪ ಎಣ್ಣೆ ಹಚ್ಚಿದರು ಅದರ ಪರಿಣಾಮ ದೀರ್ಘವಾಗಿರುತ್ತದೆ. ಪಾಮ್‌ಫುಲ್‌ನಿಂದ ಅಥವಾ ಆಳವಾದ ಮಸಾಜ್ ಮಾಡವ ಮೂಲಕ ಪ್ರಾರಂಭಿಸಿ. ಜೊತೆಗೆ ಅಗತ್ಯವಿರುವ ಕಡೆ ಸ್ವಲ್ಪ ಹೆಚ್ಚು ಹಚ್ಚಿ. ಕೂದಲಿಗೆ ಹೆಚ್ಚು ಎಣ್ಣೆಯನ್ನು ಬಳಸಿದರೆ ಅದನ್ನು ನಂತರದಲ್ಲಿ ತೊಳೆಯುವುದು ಕಷ್ಟವಾಗುವುದಲ್ಲದೆ ಈ ಸಮಯದಲ್ಲಿ ಶಾಂಪೂ(Shampoo) ಬಳಕೆ ಹೆಚ್ಚಿಸುತ್ತೀರಿ. ಇದರಿಂದ ಕೂದಲಿಗೇ ತೊಂದರೆಯಾಗುತ್ತದೆ.

4. ಒಬ್ಬೊಬ್ಬರ ನೆತ್ತಿ ಒಂದೊAದು ರೀತಿ ಇರುತ್ತೆ. ಕೆಲವರದ್ದು ಒಣ ನೆತ್ತಿ(Dry Scalp) ಇದ್ದರೆ ಇನ್ನು ಕೆಲವರಲ್ಲಿ ಎಣ್ಣೆಯುಕ್ತ ನೆತ್ತಿ(Oily Scalp) ಇರುತ್ತದೆ. ಎಣ್ಣೆಯುಕ್ತ ನೆತ್ತಿ ನಿಮ್ಮದಾಗಿದ್ದರೆ ಮತ್ತೆ ಎಣ್ಣೆಯನ್ನು ಹಚ್ಚಬೇಡಿ. ಒಂದು ವೇಳೆ ನೀವು ಒಣ ಕೂದಲು ಮತ್ತು ಎಣ್ಣೆಯುಕ್ತ ನೆತ್ತಿಯನ್ನು ಹೊಂದಿದ್ದರೂ ಸಹ ಮತ್ತೆ ಎಣ್ಣೆ ಹಚ್ಚಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ಅದು ನಿಮ್ಮ ನೆತ್ತಿಯ ರಂಧ್ರಗಳನ್ನು(Pores) ಮತ್ತಷ್ಟು ಮುಚ್ಚಬಹುದು. ಹಾಗಾಗಿ ಎಣ್ಣೆ ಹಚ್ಚದಿರುವುದು ಒಳ್ಳೆಯದು. ಇದರ ಬದಲಾಗಿ ನೀವು ಅಲೋವೆರಾ ಜೆಲ್‌ನಿಂದ ನೆತ್ತಿಯನ್ನು ಸ್ವಚ್ಛಗೊಳಿಸಿ ಕೂದಲನ್ನು ಮೃದುಗೊಳಿಸಬಹುದು.  

5. ಕೂದಲು ಉದುರುತ್ತದೆ(Hair Fall) ಎಂದು ಬಹುತೇಕ ಜನರು ಎಣ್ಣೆಯನ್ನು ಹಚ್ಚುತ್ತಲೇ ಇರುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಈ ರೀತಿಯ ಸಮಸ್ಯೆ ಇರುವವರು ಎಣ್ಣೆಯಿಂದ ದೂರವಿರಿ. ಉತ್ತಮ ಪೋಷಣೆ ಮತ್ತು ಆಹಾರದಂತೆ, ಎಣ್ಣೆಯು ಬೇರುಗಳನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ಈಗಾಗಲೇ ಕೂದಲು ಉದುರುತ್ತಿದ್ದರೆ ಎಣ್ಣೆ ಹಚ್ಚುವ ಅಗತ್ಯವಿಲ್ಲ. ಬದಲಾಗಿ, ಮೊಸರು(Curd), ನೆನೆಸಿದ ಮೆಂತ್ಯ(Soaked Methi) ಮತ್ತು ಕಲೋಂಜಿ ಬೀಜಗಳನ್ನು ಮಾಸ್ಕ್(Mask) ರೀತಿ ಬಳಸಿ ಅಥವಾ ಮೊಟ್ಟೆಯನ್ನು ಹಚ್ಚಿ. ಇಲ್ಲವೆ ಆವಕಾಡೊ(Avocado) ಅಥವಾ ಬಾಳೆಹಣ್ಣುಗಳನ್ನು(Banana) ಸೇರಿಸಿ. ಇದನ್ನು ನೆತ್ತಿಗೆ ಹಚ್ಚಿ 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

Follow Us:
Download App:
  • android
  • ios