ಬಾಯಿ, ಹಲ್ಲಿನಷ್ಟೇ ಒಸಡಿನ ಆರೋಗ್ಯದ ಕಡೆಗೂ ಇರಲಿ ಕಾಳಜಿ
ಸಾಮಾನ್ಯವಾಗಿ ಎಷ್ಟೋ ಸಣ್ಣ ವಿಚಾರಗಳನ್ನು ನಮ್ಮ ದೈನಂದಿನ ಜೀವನದಲ್ಲಿ ನೆಗ್ಲೆಕ್ಟ್ ಮಾಡುತ್ತೇವೆ. ಆದರೆ ಆರೋಗ್ಯದ ವಿಷಯದಲ್ಲಿ ಹಾಗೆ ಮಾಡುವುದು ಸರಿಯಲ್ಲ. ಆದರೂ ಕೆಲ ವಿಚಾರಗಳಲ್ಲಿ "ಹೇ! ಸರಿ ಹೋಗತ್ತೆ ಬಿಡು' ಎಂದು ತಳ್ಳಿ ಹಾಕುವವರು ಇದ್ದಾರೆ. ಇನ್ನು ಕೆಲವರು ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್‌ನಲ್ಲಿ ಮೆಡಿಸಿನ್ ತೆಗೆದುಕೊಳ್ಳುವವರು ಇದ್ದಾರೆ. ಆದರೆ ಕೆಲ ಸಮಸ್ಯೆಗಳಿಗೆ ಕಿಂಚಿತ್ತು ನೆಗ್ಲೆಕ್ಟ್ ಮಾಡಬಾರದು. ಅದರಲ್ಲೂ ಹಲ್ಲಿನ ವಿಚಾರದಲ್ಲಿ ನಿರ್ಲಕ್ಷಿಸಿದರೆ ಆಪತ್ತು ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಹಲ್ಲಿನ ಕೆಳಭಾಗದಲ್ಲಿರುವ ಒಸಡುಗಳು ಊದಿಕೊಂಡಾಗ ಮತ್ತು ಕೆಂಪಾಗುವಾಗ ಅಥವಾ ಹಠಾತ್ ಆಗಿ ಕಾಣಿಸಿಕೊಳ್ಳುವ ಸಣ್ಣ ಗುಳ್ಳೆಗಳ ಬೆಳವಣಿಗೆ ಇದು ಯಾವುದಾದರು ರೂಗದ ಲಕ್ಷಣವೇ ಎಂದು ಒಮ್ಮೆ ಆಲೋಚನೆ ಬರುವುದು ಸಹಜ. ಹಲ್ಲುಗಳನ್ನು ಸಡಿಲಗೊಳಿಸುವುದರಿಂದ ಅಥವಾ ಒಸಡುಗಳು ದುರ್ಬಲಗೊಳ್ಳುವುದರಿಂದ, ಒಸಡುಗಳಲ್ಲಿ ತುಂಬಾ ರಕ್ತಸ್ರಾವ ಮತ್ತು ನೋವು ಅನುಭವಿಸಬಹುದು. ಇದು ಗಮ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡರೆ ಅದು ಬಾಯಿಯ ಕ್ಯಾನ್ಸರ್ ಇರಬಹುದು.
ಒಸಡಿನಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಊತ ಅಥವಾ ಕೆಂಪು ಗುಳ್ಳೆಗಳು ಕ್ಯಾನ್ಸರ್ ಎಂದು ಹೇಳಲಾಗದು. ಆದರೆ ಇದು ೩ ರಿಂದ ೪ ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ತಜ್ಞರನ್ನು ಭೇಟಿ ಮಾಡಿ ಖಚಿತ ಪಡಿಸಿಕೊಂಡು ಟ್ರೀಟ್ಮಂಟ್ ಪಡೆಯುವುದು ಅತ್ಯವಶ್ಯಕ. ಒಸಡಿನ ಕ್ಯಾನ್ಸರ್ ಬಾಯಿಯ ಕ್ಯಾನ್ಸರ್‌ನ ಒಂದು ವಿಧಾನವಾಗಿದೆ. ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ ಒಂದು ವಿಧವಾಗಿದ್ದು, ಮೇಲಿನ ಅಥವಾ ಕೆಳಗಿನ ಒಸಡುಗಳಲ್ಲಿನ ಜೀವಕೋಶಗಳು ನಿಯಂತ್ರಣದಿAದ ಹೊರಬರಲು ಮತ್ತು ಗಾಯಗಳು ಅಥವಾ ಗೆಡ್ಡೆಗಳನ್ನು ರೂಪಿಸಲು ಪ್ರಾರಂಭಿಸಿದರೆ ಅದು ಹರಡುತ್ತಾ ಹೋದಂತೆ ಕ್ಯಾನ್ಸರ್‌ಗೆ ತಿರುಗುತ್ತದೆ ಎಂದು ತಜ್ಞರು ಅಭಿಪ್ರಯಿಸಿದ್ದಾರೆ.
ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಏನೇನೋ ಮಾಡೋ ಮೊದಲು ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ!
ಪ್ರಾರಂಭದಲ್ಲಿ ಬಾಯಿಯಲ್ಲಿ ಅಥವಾ ತುಟಿಗಳ ಮೇಲೆ ಬಿಳಿ ಅಥವಾ ಕೆಂಪು ಪ್ಯಾಚ್ ರೀತಿ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮೇಲಿನ ಚರ್ಮವು ದಪ್ಪದಾಗಿ ಅಥವಾ ಕ್ರಮೇಣ ನಿರಂತರವಾದ ಹುಣ್ಣು ಅಥವಾ ಸವೆತ ಕಾಣಿಸಿಕೊಳ್ಳಬಹುದು. ಆರಂಭದಲ್ಲಿ ಇದು ಊತ ಮತ್ತು ವಾಸಿಯಾಗದ ಹುಣ್ಣಾಗುತ್ತದೆ. ಅಲ್ಲದೆ ಹುಣ್ಣಿನ ಬಳಿ ಹಲ್ಲುಗಳು ಸಡಿಲಗೊಳ್ಳುತ್ತವೆ. ಕೆಲವೊಮ್ಮೆ ಹಲ್ಲುಗಳು ಸರಿಯಾಗಿ ಹೊಂದಿಕೊಳ್ಳುವುದಿಲ್ಲ.
ಈ ಒಸಡಿನ ಕ್ಯಾನ್ಸರ್ ಸಾಮಾನ್ಯವಾಗಿ ಪ್ಲೇಕ್ ನಿರ್ಮಾಣದಿಂದ ಉಂಟಾಗುತ್ತದೆ. ಸಿಗರೇಟ್, ಭಾಂಗ್ ಸೇದುವ ಅಭ್ಯಾಸವಿರುವ ಅಥವಾ ತಂಬಾಕು, ಗುಟ್ಕಾ, ಹುಕ್ಕಾ ಅಥವಾ ಶುಶ್ ಅನ್ನು ಜಗಿಯುವ ಜನರಲ್ಲಿ ಈ ಬಾಯಿಯ ಕ್ಯಾನ್ಸರ್ ಅಥವಾ ಒಸಡಿನ ಕ್ಯಾನ್ಸರ್‌ಗೆ ಒಳಗಾಗುತ್ತಾರೆ.
ಒಸಡು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು
3-4 ವಾರಗಳವರೆಗೆ ವಾಸಿಯಾಗದ ಬಾಯಿ ಹುಣ್ಣು, ಬಾಯಲ್ಲಿ ಬಿಳಿ ಅಥವಾ ಕೆಂಪು ತೇಪೆ, ಸಡಿಲವಾದ ಹಲ್ಲು. ಬಾಯಲ್ಲಿ ಗಡ್ಡೆಗಳ ಬೆಳವಣಿಗೆ. ಬಾಯಿ ಮತ್ತು ಕಿವಿಯಲ್ಲಿ ನೋವು. ಅಗೆಯಲು ಮತ್ತು ನುಂಗಲು ತೊಂದರೆ. ತುಟಿ, ಒಸಡು, ಕೆನ್ನೆ, ಬಾಯಿಯೊಳಗೆ ಊತ ಅಥವಾ ದಪ್ಪಗಾಗುವುದು. ಅತಿಯಾದ ರಕ್ತಸ್ರಾವ, ಮರಗಟ್ಟುವಿಕೆ. ತುಟಿ, ಮುಖ, ಬಾಯಿ ಅಥವಾ ಕುತ್ತಿಗೆಯಲ್ಲಿ ನೋವು. ತೂಕ ನಷ್ಟ.
ಹಲ್ಲಿನ ಅಂದ ಕೆಡಿಸುವ 'ಪಾಚಿ'ಗೆ ಪರಿಹಾರ ನಮ್ಮಲ್ಲೇ ಇದೆ!
ಮನೆಮದ್ದು
ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಒಸಡಿನ ಸಮಸ್ಯೆ ಹಾಗೂ ಸಡಿಲವಾದ ಹಲ್ಲುಗಳಿಗೆ ನೈಸರ್ಗಿಕವಾಗಿ ಮನೆಯಲ್ಲೇ ಔಷಧವನ್ನು ಮಾಡಬಹುದಾಗಿದೆ.
ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಉರಿಯೂತ ಮತ್ತು ಬಾಯಿಯಲ್ಲಿನ ಬ್ಯಾಕ್ಟೀರಿಯಾಕ್ಕೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಹೈಡ್ರೋಜನ್ ಪೆರಾಕ್ಸೆöÊಡ್
ಇದು ನಂಜು ನಿರೋಧಕ ಔಷಧವಾಗಿದೆ. ಸಣ್ಣ ಕಡಿತ, ಚರ್ಮದ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದನ್ನು ಸ್ವಿಶ್ ಮಾಡುವುದರಿಂದ ಬಾಯಿಯ ಕಿರಿಕಿರಿಯನ್ನು ನಿವಾರಿಸಲು ಮತ್ತು ಒಸಡು ಕಾಯಿಲೆಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಬಾಯಿಗೆ ಹಾಕಿ ಫ್ಲಶ್ ಮಾಡುವುದರಿಂದ ೩% ಹೈಡ್ರೋಜನ್ ಪೆರಾಕ್ಸೆöÊಡ್ ಮತ್ತು ೫% ನೀರನ್ನು ಬೆರೆಸಿ ಫ್ಲಶ್ ಮಾಡಿ ಉಗುಳಬೇಕು. ಹೀಗೆ ಮಾಡುವುದರಿಂದ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ನಿಂಬೆ ಹುಲ್ಲು
ಇದರಲ್ಲಿ ವಿಟಮಿನ್ ಎ, ಸಿ, ಇ ಅಂಶಗಳು ಹೇರಳವಾಗಿದೆ. ಆಂಟಿಮೈಕ್ರೋಓಬಿಯಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿಫAಗಲ್ ಮತ್ತು ಸೋಂಕು ನಿವಾರಕ ಗುಣಲಕ್ಷಣಗಳು ಇದರಲ್ಲಿರುವುದರಿಂದ ಒಸಡು ಸಮಸ್ಯೆಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಅಲ್ಲದೆ ಬಾಯಿಯ ಕುಹರದಿಂದ ಬೆಳೆಯುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಹಲ್ಲು, ಒಸಡುಗಳು ಸೋಂಕಿಗೆ ಒಳಗಾಗದಂತೆ ರಕ್ಷಿಸುತ್ತದೆ. ಲೆಮನ್ ಗ್ರಾಸ್ ಆಯಿಲ್ ಅನ್ನು ಮೌತ್‌ವಾಶ್‌ನಲ್ಲಿ ಬಳಸಲಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದ್ರೆ ಹಲ್ಲಿಗೂ ಎಫೆಕ್ಟ್
ಪೇರಲೆ ಎಲೆ
ಒಸಡಿನ ಸಮಸ್ಯೆಗೆ ಹೆಚ್ಚಾಗಿ ಇದನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಏಕೆಂಧರೆ ಇದರಲ್ಲಿ ಆಂಟಿಮೈಕ್ರೋಓಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಇದು ಬಾಯಿಯ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಮತ್ತು ಪ್ಲೇಕ್ ಸಂಗ್ರಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಲೋವೆರಾ ಜೆಲ್
ಉರಿಯೂತ ಮತ್ತು ಕೆಟ್ಟ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಆಂಟಿ ಮೈಕ್ರೋಬಿಯಲ್ ಗುಣ ಇದರಲ್ಲಿದೆ. ಒಸಡು ಸಮಸ್ಯೆಯಿಂದಾಗಿ ಬಾಯಿಯ ದುರ್ವಾಸನೆಗೆ ಚಿಕಿತ್ಸೆ ನೀಡುತ್ತದೆ. ಅಲ್ಲದೆ ಬಾಯಿಯ ಹುಣ್ಣುಗಳನ್ನು ಗುಣಪಡಿಸುತ್ತದೆ.