ಕೂಲ್ ಆಗಿದ್ದ ಬೆಂಗಳೂರಲ್ಲೇ ಬಿರು ಬಿಸಿಲು, ಆರೋಗ್ಯಕ್ಕೆ ಸರಕಾರ ಕೊಟ್ಟ ಸೂಚನೆ ಪಾಲಿಸಿ, ಅಷ್ಟಕ್ಕೂ ಹೇಳಿದ್ದೇನು?
ಉರಿ.. ಬಿಸಿಲು..ಸೆಕೆ ತಡೆಯೋಕೆ ಆಗ್ತಿಲ್ಲ ಎಂಬ ಮಾತೇ ಎಲ್ಲರ ಬಾಯಲ್ಲಿ ಕೇಳಿ ಬರ್ತಿದೆ. ಕೆಲವರು ಖಾಯಿಲೆ ಬೀಳ್ತಿದ್ದಾರೆ. ಈ ಬೇಸಿಗೆಯಲ್ಲಿ ಫಿಟ್ ಆಂಡ್ ಫೈನ್ ಆಗಿರಬೇಕೆಂದ್ರೆ ಈ ನಿಯಮ ಫಾಲೋ ಮಾಡಿ.
ಸದಾ ಕೂಲ್ ಆಗಿರ್ತಿದ್ದ ಬೆಂಗಳೂರೇ ಕುದಿಯುತ್ತಿದೆ ಅಂದ್ಮೇಲೆ ಇನ್ನು ಸೆಕೆಗೆ ಪ್ರಸಿದ್ಧಿ ಪಡೆದಿರುವ ನಗರಗಳ ಸ್ಥಿತಿ ಹೇಗಿರಬೇಡ ಊಹಿಸಿ. ಈ ವರ್ಷ ಸೂರ್ಯನ ಕೆಂಗಣ್ಣಿಗೆ ನಾವು ಗುರಿಯಾದಂತಿದೆ. ಒಂದೂ ಮಳೆ ಬೀಳದೆ ಜನರು ಕಂಗಾಲಾಗಿದ್ದಾರೆ. ಇಡೀ ದಿನ ಬಿಸಿಲ ಝಳ ಜನರನ್ನು ಹೈರಾಣ ಮಾಡಿದೆ. ಉತ್ತರ ಭಾರತ ಮಾತ್ರವಲ್ಲ ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ಬಿಸಿಲು ಹೆಚ್ಚಾಗಿದ್ದು ತಾಪಮಾನ 38 -40ಕ್ಕೆ ಬಂದು ನಿಂತಿದೆ.
ಏರುತ್ತಿರುವ ತಾಪಮಾನ (Temperature) ದಿಂದಾಗಿ ಶಾಖ ಸಂಬಂಧಿ ಕಾಯಿಲೆ ಹೆಚ್ಚಾಗ್ತಿದೆ. ದಲ್ಲ ಒಂದು ಖಾಯಿಲೆಗೆ ಜನರು ಒಳಗಾಗ್ತಿದ್ದಾರೆ. ವೃದ್ಧರು ಮತ್ತು ಮಕ್ಕಳಿಗೆ ಈ ಸೆಕೆ ಪರಿಣಾಮ ಹೆಚ್ಚು. ಬೇಸಿಗೆ (Summer) ಯಲ್ಲಿ ಕಾಡುವ ಖಾಯಿಲೆ (Disease) ಪರಿಣಾಮ ಹೆಚ್ಚಿರುತ್ತದೆ. ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವ ಅಗತ್ಯವಿರುತ್ತದೆ. ಸೆಕೆಯಿಂದ ಕಾಡುವ ಖಾಯಿಲೆ ಯಾವುದು ಹಾಗೆ ಇದರ ರಕ್ಷಣೆ ಹೇಗೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕು. ಸರ್ಕಾರ ಕೂಡ ಬಿರು ಬೇಸಿಗೆಯಲ್ಲಿ ನಿಮ್ಮ ರಕ್ಷಣೆ ಹೇಗಿರಬೇಕೆಂದು ಸಲಹೆ ನೀಡಿದೆ.
ಕುಟುಂಬದ ಆರೋಗ್ಯ ಚೆನ್ನಾಗಿರ್ಬೇಕಂದ್ರೆ ಮ್ಯಾಗಿ ಸೇರಿ ಈ 9 ಪದಾರ್ಥಗಳನ್ನು ಬೆಳಗಿನ ತಿಂಡಿಗೆ ಮಾಡ್ಲೇಬೇಡಿ!
ಬೇಸಿಗೆಯಲ್ಲಿ ಕಾಡುವ ಖಾಯಿಲೆ :
ಹೀಟ್ ಸ್ಟ್ರೋಕ್ (Heat Stroke) : ಬೇಸಿಗೆಯಲ್ಲಿ ತಾಪಮಾನ 40 ಡಿಗ್ರಿಗಿಂತ ಹೆಚ್ಚಾದಾಗ ಈ ಹೀಟ್ ಸ್ಟ್ರೋಕ್ ನಿಮ್ಮನ್ನು ಕಾಡುತ್ತದೆ. ಹೃದಯ ಬಡಿತದಲ್ಲಿ ಹೆಚ್ಚಳ, ಚರ್ಮ ಸಂಬಂಧಿ ಸಮಸ್ಯೆ, ಕಿರಿಕಿರಿ ಸೇರಿದಂತೆ ಕೆಲ ಸಮಸ್ಯೆಗಳನ್ನು ಜನರು ಅನುಭವಿಸುತ್ತಾರೆ.
ಮೂರ್ಛೆ ಹೋಗುವುದು : ತಾಪ ತಾಳಲಾರದೆ ಕೆಲವರು ಮೂರ್ಛೆ ಹೋಗುತ್ತಾರೆ. ಇದಕ್ಕೆ ಕಾರಣ ನಿರ್ಜಲೀಕರಣ ಮತ್ತು ಬಿಪಿ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆದಾಗ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಜನರು ಇದ್ರಿಂದಾಗಿ ತಲೆಸುತ್ತು, ಮೂರ್ಛೆ ಹೋಗುವುದು, ಸುಸ್ತು, ಅತಿಯಾದ ಬೆವರು ಸೇರಿದಂತೆ ಕೆಲ ಲಕ್ಷಣಗಳನ್ನು ಅನುಭವಿಸುತ್ತಾರೆ.
ಹೀಟ್ ಕ್ಯಾಪ್ (Heat Cap) : ಶಾಖದಿಂದ ಆಗುವ ಸಮಸ್ಯೆಗಳಲ್ಲಿ ಇದೂ ಒಂದು. ಇದ್ರಲ್ಲಿ ಜನರು ಸ್ನಾಯು ಸೆಳೆತಕ್ಕೆ ಒಳಗಾಗ್ತಾರೆ. ಹೊಟ್ಟೆ, ಭುಜ, ಕಾಲುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಇಲ್ಲೆಲ್ಲ ವಿಪರೀತ ನೋವು ಕಾಡುತ್ತದೆ.
ಬೇಸಿಗೆಯಲ್ಲಿ ಸುರಕ್ಷಿತವಾಗಿರಲು ಸರ್ಕಾರದ ಈ ಸಲಹೆ ಪಾಲಿಸಿ :
• ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಾತಾವರಣ ಅತಿ ಬಿಸಿ ಇರುತ್ತದೆ. ಈ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹಾಗೆ ಈ ಟೈಂನಲ್ಲಿ ಅಡುಗೆ ಮಾಡಬೇಡಿ.
• ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ನೀವು ತಿನ್ನಬೇಕು. ಹಾಗೆಯೇ ಹಳಸಿದ ಆಹಾರವನ್ನು ಈ ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಸೇವಿಸಲು ಹೋಗ್ಬೇಡಿ.
• ಅಡುಗೆ ಮಾಡುವ ಸಮಯದಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕು. ಕಿಟಕಿ, ಬಾಗಿಲುಗಳನ್ನು ತೆರೆದು ಗಾಳಿ ಆಡುವಂತೆ ನೋಡಿಕೊಳ್ಳಬೇಕು.
• ಈ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀವು ಸೇವನೆ ಮಾಡಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಆಲ್ಕೋಹಾಲ್, ಕಾಫಿ, ಟೀ, ಬಿಸಿ ಆಹಾರ ಸೇವನೆಯಿಂದ ದೂರ ಇರಿ.
ನೀವು ಪ್ರತಿದಿನ ಬಾಳೆಹಣ್ಣು ತಿನ್ನಲೇಬೇಕೆಂಬುದಕ್ಕೆ 10 ಕಾರಣಗಳು..
• ಬೇಸಿಗೆಯಲ್ಲಿ ತಂಪು ಪಾನೀಯ (Cold Drinks) ಕುಡಿಯುವ ಆಸೆ ಆಗೋದು ಸಹಜ. ಆದ್ರೆ ಫ್ರಿಜ್ ನೀರು, ತಂಪು ಪಾನೀಯ ಆರೋಗ್ಯ ಹಾಳು ಮಾಡುತ್ತದೆ ಎಂಬುದು ನೆನಪಿರಲಿ.
• ನೀರು ಸೇವನೆ ಮಾತ್ರವಲ್ಲ ನೀರು ಸಮೃದ್ಧವಾಗಿರುವ ಆಹಾರ (Water Rich Food), ಹಣ್ಣನ್ನು ನೀವು ಡಯಟ್ ನಲ್ಲಿ ಸೇರಿಸಿಕೊಳ್ಳಿ. ಆಹಾರದಲ್ಲಿ ಸಲಾಡ್, ಸ್ಮೂಥಿಯಂತಹ ತಾಜಾ ಆಹಾರವನ್ನು ಸೇರಿಸಿ.
• ಬೇಸಿಗೆಯಲ್ಲಿ ಜನರು ಕರಿದ ಆಹಾರ ಸೇವನೆ ಮಾಡದಿರುವುದು ಒಳ್ಳೆಯದು. ಸೋಡಿಯಂ ಹೊಂದಿರುವ ಸಂಸ್ಕರಿಸಿದ ಆಹಾರದ ಜೊತೆ ದೇಹದ ಉಷ್ಣತೆ ಹೆಚ್ಚಿಸುವ ಆಹಾರ ಬೇಡ.