ನಾವು ಯೋಚಿಸಿದ್ದೇ ಕನಸಾಗಿ ಬರುತ್ತೆ ಅಂತಾರೆ. ಇನ್ನು ಕೆಲವೊಮ್ಮೆ ಆ ದಿನ ನೋಡಿದ ಜನ, ಊರು, ನಗರ ಎಲ್ಲವೂ ಕನಸಲ್ಲಿ ಬರುತ್ತೆ. ಈ ಕನಸುಗಳು ಬಹಳಷ್ಟು ಸಲ ನಮ್ಮ ಭಾವನೆಗಳ ಪ್ರಲಿತಾಂಶವಾಗಿರುತ್ತದೆ. ಕನಸುಗಳು ಬರೋದು ನಿದ್ರೆಯ ರ್ಯಾಪಿಡ್ ಐ ಮೂವ್‌ಮೆಂಟ್ ಸಂದರ್ಭ. ಮೆದುಳಿನ ಕೆಲಸ ಹೆಚ್ಚಾಗಿದ್ದಾಗ ಎಚ್ಚರವಾದ ಅನುಭವವಾಗುತ್ತದೆ.

ಸಬ್‌ಕಾನ್ಶಿಯಸ್ ಮೈಂಡ್‌ನಲ್ಲಿರುವ ಆಲೋಚನೆಗಳು ಮೆದುಳಿಗೆ ಬಂದು ಅಲ್ಲೊಂದು ಸೀನ್ ಕ್ರಿಯೇಟ್ ಆದಂತಾಗುತ್ತದೆ. ನಿಮಗೆ ಗರ್ಭಿಣಿಯಾಗಿರೋ ಕನಸು ಬೀಳುತ್ತಾ..? ಅದರರ್ಥ ಇಲ್ಲಿದೆ.

ಶೂಟಿಂಗ್‌ಗೆ ಮರಳಿದ ಕರೀನಾಳ ಪ್ರೆಗ್ನೆಂಸಿ ಗ್ಲೋ ಲುಕ್‌ ವೈರಲ್‌!

ನೀವು ಆಲೋಚಿಸದ ವಿಚಾರಗಳನ್ನೂ ಸಬ್‌ಕಾನ್ಶಿಯಸ್ ಮೈಂಡ್ ದಾಖಲಿಸಿಕೊಳ್ಳುತ್ತದೆ. ಪ್ರೆಗ್ನೆಂಟ್ ಕನಸು ಬೀಳೋದು ಅಂದ್ರೆ ನಿಜಕ್ಕೂ ಕೆಲವೊಮ್ಮೆ ಗರ್ಭಿಣಿಯಾಗೋದರ ಸೂಚನೆಯೂ ಹೌದು. ನಿಮಗೆ ಮಕ್ಕಳು ಬೇಕು ಎಂದೆನಿಸಲು ಶುರುವಾದಾಗ, ನಿಮ್ಮ ಮನಸಿನ ಎಲ್ಲೋ ಒಂದು ಕಡೆ ಮಗು ಬೇಕೆಂಬ ಆಸೆ ಬಂದಾಗ ಇಂತಹ ಕನಸುಗಳು ಬರುತ್ತವೆ.

ಯಾರೋ ಗರ್ಭಿಣಿಯಾದಂತೆ ಕಾಣಿಸುವುದು: ನಿಮ್ಮ ಕನಸಲ್ಲಿ ನೀವು ಗರ್ಭಿಣಿ ಎಂದು ಕಾಣಿಸುವುದಕ್ಕೂ, ಯಾರೋ ಬೇರೊಬ್ಬರನ್ನು ಗರ್ಭಿಣಿಯಾಗಿ ನೋಡುವುದಕ್ಕೂ ಅರ್ಥವಿದೆ. ನೀವು ಕನಸಲ್ಲಿ ಕಾಣೋ ವ್ಯಕ್ತಿಯನ್ನು ಮಿಸ್ ಮಾಡಿಕೊಳ್ಳುತ್ತಿರುತ್ತೀರಿ, ಅವರೊಂದಿಗೆ ಮಾತನಾಡುವ ತವಕವೂ ಇರುತ್ತದೆ. ಇದರರ್ಥ ನಿಮಗೆ ಆಪ್ತರು, ಕುಟುಂಬಸ್ಥರಿಂದಲೂ ಗುಡ್‌ನ್ಯೂಸ್ ಸಿಗಬಹುದು. ಗರ್ಭಿಣಿಯಾಗೋ ಕನಸುಗಳು ನಿಮ್ಮ ಆಲೋಚನೆಗಳನ್ನು ಅವಲಂಬಿಸಿಯೇ ಬರುತ್ತವೆ.

ಗರ್ಭಿಣಿ ಅನುಷ್ಕಾ ಶರ್ಮಾ ಮನದಲ್ಲಿ ಏನು ಬಯಕೆಯಿದೆ ಗೊತ್ತಾ?

ಗರ್ಭಿಣಿಯಾಗೋ ಆತಂಕ: ನಿಮಗೆ ಗರ್ಭಿಣಿಯಾಗೋ ಬಗ್ಗೆ ಆತಂಕವಿದ್ದರೆ ಬಹಳಷ್ಟು ಕನಸುಗಳು ಬರಬಹುದು. ಇದು ಅತ್ಯಂತ ನಾರ್ಮಲ್. ನಿಮಗೆ ಹೆಚ್ಚು ಆತಂಕವಿದ್ದರೆ ಪ್ರೆಗ್ನೆನ್ಸಿ ಬಗ್ಗೆ ಕೆಟ್ಟ ಕನಸುಗಳೂ ಬೀಳಬಹುದು.

ಪ್ಲಾನಿಂಗ್ ಇಲ್ಲದೆ ಗರ್ಭಿಣಿಯಾಗುವ ಭಯ: ನೀವು ಗರ್ಭಿಣಿಯಾಗುವ ಬಗ್ಗೆ ಯಾವುದೇ ಫ್ಲಾನ್ ಇಲ್ಲದೆ ಗರ್ಭಿಯಾದ್ದೇನೆ ಎಂದೆನಿಸದರೆ ಆಗಲೂ ಹಲವಾರು ಕನಸು ಬೀಳುತ್ತವೆ. ಈ ಸಂದರ್ಭ ಆತಂಕ, ಚಿಂತೆಯ ಪರಿಣಾಮ ಸ್ವಲ್ಪ ಭಯವಾಗುವ ಕನಸು ಬೀಳಬಹುದು. ಹೀಗೆ ಕನಸು ಬಿದ್ದರೆ ನೀವು ನಿಜಕ್ಕೂ ಗರ್ಭಿಣಿ ಎಂದಲ್ಲ, ಸರಿಯಾದ ಟೆಸ್ಟ್ ಮೂಲಕವೇ ಇದನ್ನು ದೃಢಪಡಿಸಲು ಸಾಧ್ಯ.

ಪೂರ್ವ ಜನ್ಮದಲ್ಲಿ ಏನಾಗಿದ್ದೀರೆಂದು ತಿಳಿಯೋದು ಹೇಗೆ?

ಅವಳಿ ಸಿದ್ಧಾಂತ: ಗರ್ಭಿಣಿಯಾಗೋ ಕನಸು ಬಿದ್ದರೆ ಆಗ ಅವಳಿ ಮಕ್ಕಳಾಗೋ ಸಾದ್ಯತೆಯೂ ಇದೆ ಎನ್ನಲಾಗುತ್ತದೆ. ಆದರೆ ಇದು ನಂಬಿಕೆ ಅಷ್ಟೇ. ನೀವು ಟ್ವಿನ್ಸ್ ಬಗ್ಗೆ ಯೋಚಿಸಿದರಷ್ಟೇ ಈ ರೀತಿ ಕನಸು ಬೀಳುತ್ತದೆ. ಅಥವಾ ಯಾರಾದರೂ ತಾವು ಗರ್ಭ ಧರಿಸಿದ ದಿನಗಳ ಬಗ್ಗೆ ಹೇಳಿದರೂ ಈ ರೀತಿ ಕನಸು ಬೀಳಬಹುದು.