ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ಆರಂಭ 14416 ಅಥವಾ 1-800-891-4416ಕ್ಕೆ ಕರೆ ಮಾಡಿ, ಕೌನ್ಸೆಲಿಂಗ್‌ ಪಡೆಯಿರಿ  ಕೇಂದ್ರ ಸರ್ಕಾರದ ಟೆಲಿ ಮನಸ್‌ ಯೋಜನೆಗೆ ರಾಜ್ಯಪಾಲ ಗೆಹ್ಲೋತ್‌ ಚಾಲನೆ

ಬೆಂಗಳೂರು (ಅ.11) : ಕೇಂದ್ರ ಸರ್ಕಾರದ ದೇಶದಾದ್ಯಂತ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ‘ಟೆಲಿ ಮನಸ್‌’ ಯೋಜನೆಗೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಚಾಲನೆ ನೀಡಿದರು. ಸೋಮವಾರ ನಿಮ್ಹಾನ್ಸ್‌ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ನೂತನ ಯೋಜನೆಯು ಉದ್ಘಾಟನೆಗೊಂಡಿತು. ಕೊರೋನಾ ಸಂದರ್ಭದಲ್ಲಿ ಉಂಟಾಗಿದ್ದ ಮಾನಸಿಕ ಆರೋಗ್ಯ ಒತ್ತಡಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಟಿಲಿ ಮನಸ್‌ ಘೋಷಿಸಿತ್ತು. ಈಗಾಗಲೇ ಪ್ರಾಯೋಗಿಕವಾಗಿ ಹಲವು ರಾಜ್ಯಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ರಾಜ್ಯದಲ್ಲಿ ಅಧಿಕೃತವಾಗಿ ರಾಜ್ಯಪಾಲರು ಚಾಲನೆ ನೀಡಿದರು.

ಟೆಲಿ ಮನಸ್‌ನಲ್ಲಿ ಮಾನಸಿಕ ಆರೋಗ್ಯ ಕುರಿತು 24*7 ಟೆಲಿಫೋನ್‌ ನೆರವು ಲಭ್ಯವಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ಲಭ್ಯವಿದೆ. ಮಾನಸಿಕ ಆರೋಗ್ಯ ಜತೆಗೆ ದೈಹಿಕ ಆರೋಗ್ಯ ಸಮಸ್ಯೆ ಇದ್ದಲ್ಲಿ ಇ ಸಂಜೀವಿನಿ, ಆಯುಷ್ಮಾನ್‌ ಭಾರತ್‌ ಸ್ಯಾಸ್ಥ್ಯ ಆರೋಗ್ಯ ಕೇಂದ್ರಗಳ ನೆರವು ಪಡೆದು ಚಿಕಿತ್ಸೆಗೆ ಸೂಚಿಸಲಾಗುತ್ತದೆ. ಯೋಜನೆಗೆ ನಿಮ್ಹಾ®್ಸ… ನೋಡಲ… ಕೇಂದ್ರವಾಗಿದ್ದು, ದೇಶದ ಇತರೆ ಮಾನಸಿಕ ಆರೋಗ್ಯ ಸಂಸ್ಥೆಗಳು ನೆರವು ನೀಡುತ್ತಿವೆ. ಈ ಸಂಸ್ಥೆಗಳಲ್ಲಿ ಟೆಲಿಫೋನ್‌ ಆಪ್ತ ಸಮಾಲೋಚಕರ ತರಬೇತಿ ನೀಡಲಾಗುತ್ತದೆ. ಜತೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿಬಿ) ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್‌ಎಚ್‌ಆರ್‌ಎಸ್‌ಸಿ) ತಾಂತ್ರಿಕ ನೆರವು ನೀಡುತ್ತಿವೆ.

World Mental Health Day: ಮಾನಸಿಕ ಚಿಕಿತ್ಸೆ ಪಡೆಯಲು ಹಿಂಜರಿಕೆ ಏಕೆ..?

ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಅಸ್ಸಾಂ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಛತ್ತೀಸ್‌ಗಢ, ದಾದ್ರಾ ನಗರ ಹವೇಲಿ ಮತ್ತು ದಮನ್‌ ಮತ್ತು ದಿಯು, ಗುಜರಾತ್‌, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ಲಡಾಖ, ಮಹಾರಾಷ್ಟ್ರ, ಮಧ್ಯಪ್ರದೇಶ ಒಡಿಶಾ, ಪಂಜಾಬ್‌, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಟೆಲಿ ಮನಸ್‌ ಆರಂಭಗೊಂಡಿದೆ.

ಸಹಾಯವಾಣಿ : 14416 ಅಥವಾ 1-800-891-4416