Forgetting Nature: ಮರೆಯುವ ಗುಣವೇ? ಹಾಗಿದ್ರೆ ನೀವು ಹೆಚ್ಚು ಫ್ಲೆಕ್ಸಿಬಲ್‌ ಮತ್ತು ಸ್ಮಾರ್ಟ್‌

ವಾಹನದ ಕೀ ಎಲ್ಲಿಟ್ಟೆ ಎಂದು ಹುಡುಕುವುದು, ಅಡುಗೆಗೆ ಉಪ್ಪು ಹಾಕಲು ಮರೆಯುವುದು, ಯಾರಿಗಾದರೂ ಸಂದೇಶ ತಲುಪಿಸಲು ಮರೆತುಬಿಡುವುದು… ಹೀಗೆ ಪದೇ ಪದೆ ಏನಾದರೂ ಮರೆತುಹೋದಾಗ ಮುಜುಗರವೆನಿಸುತ್ತದೆ. ಆದರೆ, ಬೇಸರ ಬೇಡ, ಅದರಿಂದ ನಿಮಗೆ ಅನುಕೂಲವೇ ಹೆಚ್ಚು ಎನ್ನುತ್ತಾರೆ ವಿಜ್ಞಾನಿಗಳು.
 

Forgetting nature makes you smarter and flexible

ಕೆಲವು ವರ್ಷಗಳ ಹಿಂದೆ ಲ್ಯಾಂಡ್‌ ಲೈನ್‌ (Land Line) ಫೋನ್‌ ಗಳ ಬಳಕೆ ಹೆಚ್ಚಾಗಿದ್ದ ಸಮಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಪ್ರತಿಯೊಬ್ಬರಿಗೂ ಕನಿಷ್ಠ ಹತ್ತಾದರೂ ಫೋನ್‌ (Phone) ಸಂಖ್ಯೆಗಳು ನೆನಪಿನಲ್ಲಿ ಇರುತ್ತಿದ್ದವು. ಕುಟುಂಬದವರು, ಹತ್ತಿರದವರ ಸಂಖ್ಯೆಗಳು ಬಾಯಲ್ಲೇ ಇರುತ್ತಿದ್ದವು. ಆದರೆ, ಇದು ಸ್ಮಾರ್ಟ್‌ ಫೋನ್‌ (SmartPhone) ಯುಗ. ಕೈಯಲ್ಲೇ ಮೊಬೈಲ್ ಇದ್ದರೂ ಪತಿ-ಪತ್ನಿಯ ಫೋನ್‌ ಸಂಖ್ಯೆ ನೆನಪಿನಲ್ಲಿರಿಸಿಕೊಳ್ಳುವುದೂ ಕಷ್ಟವಾಗಿದೆ.  

ಹೌದು, ವಿಜ್ಞಾನಿಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ನಮ್ಮ ನೆನಪಿನ (Memory) ಶಕ್ತಿಯಲ್ಲಿ ಅಗಾಧ ಬದಲಾವಣೆಯಾಗಿದೆ. ಡಿಜಿಟಲ್‌ (Digital) ಸಾಧನಗಳು ಕೈಗೆಟುಕಿದಂತೆಲ್ಲ ಸ್ಮರಣೆಯ ಶಕ್ತಿಯಲ್ಲಿ ಬದಲಾವಣೆಯಾಗಿರುವುದನ್ನು ಕಾಣಬಹುದು.

ಪದೇ ಪದೆ ಏನನ್ನಾದರೂ ಮರೆತುಹೋಗುವುದು ನಿಮಗೊಬ್ಬರಿಗೇ ಅಲ್ಲ, ಬಹುಸಂಖ್ಯೆಯ ಜನರಲ್ಲಿ ಇದು ಸಾಮಾನ್ಯವಾಗಿದೆ. ಅಚ್ಚರಿಯೆಂದರೆ, ಇದನ್ನೊಂದು ಸಮಸ್ಯೆ (Problem) ಎಂದು ನಾವು ತಿಳಿದುಕೊಳ್ಳುತ್ತೇವೆ. ಆದರೆ, ವಿಜ್ಞಾನಿಗಳು (Scientists) ಇದನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಮಿದುಳಿನ ಸ್ಮರಣೆ ಶಕ್ತಿಯಲ್ಲಾಗಿರುವ ಬದಲಾವಣೆಯು ಬೇರೊಂದು ರೀತಿಯ ಕಲಿಕೆಗೆ ನೆರವಾಗುತ್ತದೆ ಎಂದಿದ್ದಾರೆ.

ಮರೆವು ಎನ್ನುವುದೊಂದು ಕಲಿಕೆ (Learning)
ಏನನ್ನಾದರೂ ಮರೆಯುವುದೆಂದರೆ, ಒಂದು ರೀತಿಯ ಕಲಿಕೆ ಎನ್ನುತ್ತಾರೆ ವಿಜ್ಞಾನಿಗಳು. ನೇಚರ್‌ ರಿವ್ಯೂಸ್‌ ನ್ಯೂರೋಸೈನ್ಸ್‌ (Nature Revies Neuro Science) ಎನ್ನುವ ನಿಯತಕಾಲಿಕದಲ್ಲಿ ಈ ಕುರಿತ ಲೇಖನವನ್ನೂ ಪ್ರಕಟಿಸಿದ್ದಾರೆ. ಮರೆತು ಹೋಗುವುದನ್ನು ನಾವು ಸಾಮಾಜಿಕ ರೀತಿನೀತಿಗಳ ಪ್ರಭಾವದಿಂದ  ಸಾಮಾನ್ಯವಾಗಿ ಮಿದುಳಿನ (Brain) ಯಾವುದೋ ಭಾಗದ ಸಮಸ್ಯೆ ಎಂದುಕೊಳ್ಳುತ್ತೇವೆ, ಅಲ್ಲವೇ? ಆದರೆ, ಮರೆಯುವುದು ಮಿದುಳಿನ ಕ್ರಿಯಾತ್ಮಕ ಲಕ್ಷಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

Raw Banana Health Benefits: ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡಾ ತಿನ್ನಿ

ಮರೆವಿನಿಂದ ಅನುಕೂಲ 
ಯಾವುದೋ ಒಂದು ಘಟನೆ ಅಥವಾ ಹಿಂದಿನ ಚಟುವಟಿಕೆಯನ್ನು ನೆನಪಿಸಿಕೊಳ್ಳುವುದು ಅಥವಾ ಅವುಗಳನ್ನು ಮರೆತುಬಿಡುವುದು ನಮ್ಮ ಪರಿಸರದ ಹಿನ್ನೆಲೆ ಹಾಗೂ ಅಂದಾಜಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಒಂದೊಮ್ಮೆ ನೀವು ಇತರರಿಗಿಂತ ಹೆಚ್ಚು ಪ್ರಮಾಣದಲ್ಲಿ ಮರೆತುಹೋಗುವ ಸ್ವಭಾವ ಹೊಂದಿದ್ದರೆ ಅದರರ್ಥ ನೀವು ಕಡಿಮೆ ಸಾಮರ್ಥ್ಯ ಹೊಂದಿದ್ದೀರಿ ಎಂದಲ್ಲ. ಬದಲಿಗೆ ನೀವು ಅತ್ಯಂತ ಫ್ಲೆಕ್ಸಿಬಲ್‌ (Flexible) ಸ್ವಭಾವ ಹೊಂದಿದ್ದೀರಿ, ಹಾಗೂ ಇತರರಿಗಿಂತ ಹೆಚ್ಚು ಸ್ಮಾರ್ಟ್‌ (Smart) ನಿರ್ಧಾರ(Decision)ಗಳನ್ನು ತೆಗೆದುಕೊಳ್ಳಬಲ್ಲಿರಿ ಎಂದರ್ಥ.

ಹೀಗಾಗಿ, ದಿನದಲ್ಲಿ ಕೆಲವೊಮ್ಮೆಯಾದರೂ ಏನನ್ನಾದರೂ ಮರೆಯುವುದು ನಿಮ್ಮ ಸಹಜ ರೂಢಿಯಾಗಿದ್ದರೆ ಅದಕ್ಕಾಗಿ ಬೇಸರ ಪಟ್ಟುಕೊಳ್ಳುಕೊಳ್ಳಬೇಡಿ. ಮರೆಯುವ ಮೂಲಕ ಬಹುದೊಡ್ಡ ಕಾಣ್ಕೆಯೊಂದು ನಿಮಗೆ ದಕ್ಕಿದೆ. ಏಕೆಂದರೆ, ಅದು ನಿಮಗೆ ಫ್ಲೆಕ್ಸಿಬಲ್‌ ಸ್ವಭಾವವನ್ನು ನೀಡಿದೆ. ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ನಿಮಗಿರುವ ಕಲೆ. ಹೀಗಾಗಿ, ನೀವು ಜೀವನವನ್ನು ಬಹಳ ಸುಲಭವಾಗಿ ಎದುರಿಸಬಲ್ಲಿರಿ.

Female Friends: ಸಂತೋಷದ ಜೊತೆ ಆರೋಗ್ಯಕ್ಕೆ ಅತ್ಯುತ್ತಮ ಮದ್ದು ಗೆಳತಿ

ಕೆಲವು ಜನರಿಗೆ ಮೊಬೈಲ್‌ ಅಥವಾ ಡಿಜಿಟಲ್‌ ಸಾಧನಗಳನ್ನು ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಅಂಥವರು ಹಿಂದಿನ ಕೆಲವು ಕೆಟ್ಟ ಅನುಭವಗಳನ್ನು ಮರೆತಿರುವುದಿಲ್ಲ. ಹಳೆಯ ಕಹಿ(Bad Memory)ಯನ್ನು ಮರೆಯದ ಗುಣ ಅವರನ್ನು ಹೊಸ ಕಲಿಕೆಗೆ ಪ್ರೇರೇಪಿಸುವುದಿಲ್ಲ. ಬದಲಿಗೆ, ತಡೆಯುತ್ತದೆ.

ಸಮತೋಲನದ ಬದುಕಿಗೆ (Balanced Life) ಬೇಕು
ಅಷ್ಟೇ ಅಲ್ಲ, ಸಮತೋಲನದ ಬದುಕಿಗಾಗಿ ಮರೆಯುವ ಗುಣ ಅತ್ಯಗತ್ಯ ಎಂದು ವಿಜ್ಞಾನಿಗಳು ನಂಬುತ್ತಾರೆ. ಹಳೆಯ ನೆನಪುಗಳನ್ನು ಮರೆಯುವುದರಿಂದ ಸ್ಮರಣೆ ಶಕ್ತಿಯ ನಾಶವೇನೂ ಆಗುವುದಿಲ್ಲ ಎನ್ನುವುದನ್ನು ಅಧ್ಯಯನವೂ ಪುರಸ್ಕರಿಸಿದೆ.
ಮಿದುಳಿನ ಕೋಶಗಳಲ್ಲಿ ಸ್ಮರಣೆ ಸಾಮರ್ಥ್ಯ ಹೊಂದಿರುವ “ಎಂಗ್ರಾಮ್‌ (Engram) ಕೋಶʼಗಳು ಒಮ್ಮೆ ಮೈ ಕೊಡವಿ ಎದ್ದು ಮತ್ತೆ ಬೇರೆ ರೀತಿಯಲ್ಲಿ ಪುನರ್‌ ನಿರ್ಮಾಣಗೊಳ್ಳುವಾಗ ಮರೆಯುವ ಕ್ರಿಯೆ ನಡೆಯುತ್ತಿರುತ್ತದೆ. ಇದನ್ನು  ಒಂದು ಹಾರ್ಡ್‌ ಡ್ರೈವ್‌ ಕಳೆದುಹೋಗುವುದಕ್ಕೆ ಹೋಲಿಕೆ ಮಾಡಬಹುದು. ಅದು ಕಳೆದುಹೋಗಿದ್ದರೂ ಅಲ್ಲಿ ದಾಖಲೆಗಳು ಸ್ಟೋರ್‌ ಆಗಿರುತ್ತವೆ, ಆದರೆ ನಿಮಗೆ ಆ ಕ್ಷಣದಲ್ಲಿ ದಕ್ಕುವುದಿಲ್ಲ. ಹೀಗೆಯೇ ಮಿದುಳಿನಲ್ಲೂ ಸಂಭವಿಸುತ್ತದೆ.
ಸೋ, ಇನ್ನು ಮುಂದೆ ದೈನಂದಿನ ಸಣ್ಣಪುಟ್ಟ ಕೆಲಸಕಾರ್ಯಗಳಲ್ಲಿ ಮರೆವಾದರೆ ಬೇಸರಿಸಿಕೊಳ್ಳಬೇಡಿ. ಅದರಿಂದ ಹೆಚ್ಚಿನ ಅನುಕೂಲವಿರುವುದು ನಿಮಗೇ. ಆದರೆ, ಮರೆವಿನ ಸಮಸ್ಯೆ ತೀರ ಹೆಚ್ಚಿದ್ದರೆ ವೈದ್ಯರನ್ನು ಕಾಣಲು ಮರೆಯಬೇಡಿ.


 

Latest Videos
Follow Us:
Download App:
  • android
  • ios