ಸೋರೆ ಕಾಯಿ ಜ್ಯೂಸ್‌

ಹೆಚ್ಚಿನವರ ಅವಜ್ಞೆ ತುತ್ತಾದ ತರಕಾರಿ ಸೋರೆಕಾಯಿ. ಆದರೆ ಇದರಲ್ಲಿ ದೇಹದ ಶುಷ್ಕತೆ ನಿವಾರಿಸುವ ಗುಣ ಇದೆ. ಕಾಮಾಲೆ ಗುಣಪಡಿಸುವ ವಿಶೇಷ ಶಕ್ತಿ ಇದೆ. ಹಳ್ಳಿಗಳಲ್ಲಿ ಇಂದಿಗೂ ಕಾಮಾಲೆ ರೋಗಿಗೆ ಅಲೋಪತಿ ಬದಲಿಗೆ ಮನೆಮದ್ದಿನಂತೆ ಬೇಯಿಸಿದ ಸೋರೆಕಾಯಿ ಹೋಳುಗಳನ್ನು ಯಥೇಚ್ಛವಾಗಿ ನೀಡುತ್ತಾರೆ.

ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್!

ಸೋರೆಕಾಯಿ ಜ್ಯೂಸ್‌ ಬೇಸಿಗೆಗೆ ಅತ್ಯುತ್ತಮ. ಸೋರೆಕಾಯಿಯ ಹೋಳುಗಳ ಜೊತೆಗೆ ಪುದೀನಾ, ಜೀರಿಗೆ, ಪೆಪ್ಪರ್‌, ಉಪ್ಪು, ನಿಂಬೆ ರಸ, ಶುಂಠಿ ಹಾಕಿ ಮಿಕ್ಸಿಗೆ ಹಾಕಿ ಜ್ಯೂಸ್‌ ಮಾಡಿ ಕುಡಿಯಬಹುದು.

ಹಣ್ಣು ಸೇವನೆ

ಕಲ್ಲಂಗಡಿ, ಕರಬೂಜದಂಥ ಹಣ್ಣುಗಳನ್ನು ಚೆನ್ನಾಗಿ ತಿನ್ನಿ. ಸಕ್ಕರೆ ಹಾಕದೇ ಜ್ಯೂಸ್‌ ಮಾಡಿ ಕುಡಿದರೂ ಸೈ. ಹಣ್ಣುಗಳು ದೇಹವನ್ನು ಕೂಲ್‌ ಆಗಿಡುತ್ತವೆ. ಸೌತೆಕಾಯಿಯ ಸೇವನೆಯನ್ನು ಮರೀಬೇಡಿ.

ಸಲ್ಮಾನ್ ಖಾನಿಂದ ಪ್ರಿಯಾಂಕಾ ಚೋಪ್ರಾವರೆಗೂ ಖ್ಯಾತರೆಲ್ಲ ಎಗ್ ವೈಟ್ ತಿನ್ತಾರೇಕೆ?

ನಿಂಬೆ

ನಿಂಬೆರಸದಲ್ಲಿ ವಿಟಮಿನ್‌ ಸಿ ಅಂಶ ಹೆಚ್ಚಾಗಿದೆ. ಬಿಸಿಲಿಗೆ ಇದರ ಜ್ಯೂಸ್‌ ಕುಡಿಯೋದರಿಂದ ಡಿ ಹೈಡ್ರೇಶನ್‌ ನಿಂದ ಹೊರ ಬರಬಹುದು. ಸಕ್ಕರೆ ಬೇಡ ಅನ್ನೋರು ನಿಂಬೂ ಸಾಲ್ಟ್‌ ಜ್ಯೂಸ್‌ ಕುಡೀರಿ.

ಗಂಜಿ ದೇಹಕ್ಕೆ ತಂಪು

ನಿಮ್ಮ ದೇಹ ಎಷ್ಟುಬೇಕು ಅನ್ನುತ್ತೋ ಅಷ್ಟುನೀರು ಕುಡಿಯಿರಿ. ರಾಗಿ ಅಂಬಲಿ ಕುಡೀರಿ, ಹಾಯಾಗಿರುತ್ತೆ. ಕೆಂಪಕ್ಕಿ, ಮಂಗಳೂರು ರೈಸ್‌ ಅಥವಾ ಕುಚ್ಚಿಲಕ್ಕಿ ಗಂಜಿ ಮಾಡಿ ಸ್ವಲ್ಪ ಉಪ್ಪು ಹಾಕಿ ತಿನ್ನಿ. ಅನ್ನಕ್ಕಿಂತ ಗಂಜಿ ಈ ಟೈಮ್‌ ಗೆ ಬೆಸ್ಟ್‌.

ದೀಪಿಕಾ ರಣವೀರ್ ತಿಂಗಳ ಆಹಾರದ ಖರ್ಚಿಷ್ಟು... ! 

ಸಲಾಡ್ಸ್

ನಾನಾ ನಮೂನೆಯ ಸಲಾಡ್ಸ್‌ ರೆಸಿಪಿ ಆನ್‌ಲೈನ್‌ನಲ್ಲಿ ಸಿಗುತ್ತೆ. ದಿನಕ್ಕೊಂದು ರೆಸಿಪಿ ಟ್ರೈ ಮಾಡಿ. ಮತ್ತೇನಿಲ್ಲ, ಈ ಎಲ್ಲ ಸಲಾಡ್ಸ್‌ಗಳೂ ದೇಹದಲ್ಲಿ ನೀರಿನಂಶ ಚೆನ್ನಾಗಿರುವಂತೆ ಮಾಡುತ್ತವೆ. ಇದರಿಂದ ಎಂಥಾ ಸೆಕೆ ಇದ್ರೂ ನೀವು ಕೂಲ್‌ ಆಗಿರ್ತೀರಿ. ತರಕಾರಿ ಹೆಚ್ಚೆಚ್ಚು ದೇಹ ಸೇರೋ ಕಾರಣ ಜೀರ್ಣ ಕ್ರಿಯೆ ಸರಾಗವಾಗಿರುತ್ತೆ. ಫಲಿತಾಂಶ ಬೇಸಿಗೆಯಲ್ಲೂ ಅತ್ಯುತ್ತಮ ಆರೋಗ್ಯ.