ಟೈಗರ್ ಶ್ರಾಫ್
ಮಜಬೂತಾದ ದೇಹದ ಸ್ಟನಿಂಗ್ ಡ್ಯಾನ್ಸ್ ಗೆ ಹೆಸರಾದ ಟೈಗರ್ ಶ್ರಾಫ್‌ ದಿನ ಶುರುವಾಗೋದೇ ಎಗ್ ವೈಟ್‌ ನಿಂದ. ಒಂದಲ್ಲ ಎರಡಲ್ಲ ಬರೋಬ್ಬರಿ ಎಂಟರಿಂದ ಹತ್ತು ಮೊಟ್ಟೆಯ ಬಿಳಿ ಭಾಗವನ್ನು ಈ ಪರ್ಫೆಕ್ಟ್‌ ಮ್ಯಾನ್ ಕಬಳಿಸುತ್ತಾರೆ. ಆಮೇಲಿನ ಆಹಾರ ಎಲ್ಲ ಸರಳ ಮತ್ತು ಕಡಿಮೆ ಪ್ರಮಾಣದ್ದು. ಮೊಟ್ಟೆ ಬಿಳಿ ಭಾಗ ತಿನ್ನೋದು ಬಿಟ್ಟರೆ ಈತ ಕಂಪ್ಲೀಟ್ ವೆಜಿಟೇರಿಯನ್‌, ಅಂದ್ರೆ ಎಗ್‌ವೈಟ್ ತಿಂದ್ರೂ ಸಖತ್ತಾಗಿ ಬಾಡಿ ಬಿಲ್ಡ್‌ ಮಾಡಬಹುದು ಅನ್ನೋದು ಪ್ರೂವ್ ಆಯ್ತಲ್ಲ..

ಹೃತಿಕ್ ರೋಷನ್
ಎರಡು ಬ್ರೌನ್ ಬ್ರೆಡ್‌ ಜೊತೆಗೆ ಐದು ಎಗ್‌ವೈಟ್ ತಿನ್ನೋದು, ಆಮೇಲೆ ಒಂದು ಬೌಲ್ ತುಂಬ ಹಣ್ಣುಗಳು. ಇಷ್ಟಿದ್ರೆ ಹೃತಿಕ್ ಬ್ರೇಕ್ ಫಾಸ್ಟ್ ಮುಗಿದ ಹಾಗೆ. ದೇಹದ ಬಗ್ಗೆ ಸಖತ್ ಕಾನ್ಶಿಯಸ್ ಆಗಿರುವ ಈ ಹೀರೋ ಡಯೆಟ್ ಬಗ್ಗೆ ವಹಿಸೋ ಎಚ್ಚರಿಕೆ ಅಷ್ಟಿಷ್ಟಲ್ಲ.

ದೀಪಿಕಾ ಪಡುಕೋಣೆ
ಸೌತ್ ಇಂಡಿಯನ್ ಉಪಹಾರ, ಊಟ ಇಷ್ಟಪಡುವ ಈ ಕನ್ನಡತಿಗೆ ಎಗ್‌ವೈಟ್ ಮೇಲೆ ಮೋಹ ಹೆಚ್ಚು. ದೀಪಿಕಾ ಹಾಗೂ ರಣವೀರ್ ಸಿಂಗ್ ದಿನ ಶುರುವಾಗೋದೇ ಎಗ್ ವೈಟ್ ಸೇವನೆಯಿಂದ. ಜೊತೆಗೆ ಆಮ್ಲೆಟ್ ತಿನ್ನೋ ರೂಢಿಯೂ ಇದೆ.

ಲಾಕ್‌ಡೌನ್‌ ಮುಗಿಯುವ ಮೊದಲು ಈ ತಿಂಡಿಗಳ ರುಚಿ ನೋಡಿ.. 

ಸಲ್ಮಾನ್ ಖಾನ್
ಸಲ್ಲು ಬಾಯ್ ಬಾಡಿ ಬಗ್ಗೆ ಎಷ್ಟು ಹೇಳಿದ್ರೂ ಅಷ್ಟೇ. ದಿನಕ್ಕೆ ಐದು ಎಗ್ ವೈಟ್ ಜೊತೆಗೆ ಹಣ್ಣು, ತರಕಾರಿ, ಹಾಲು ಮತ್ತು ಬ್ರೌನ್ ಬ್ರೆಡ್ ಇವು ದಬಾಂಗ್ ಹೀರೋನ ಬ್ರೇಕ್‌ಫಾಸ್ಟ್ ಚಾರ್ಟ್. ಇದರಲ್ಲಿ ಏನ್ ಮಿಸ್ ಆದ್ರೂ ಎಗ್ ವೈಟ್ ಮಾತ್ರ ಮಿಸ್ ಆಗೋ ಹಾಗಿಲ್ಲ.

ಪ್ರಿಯಾಂಕಾ ಚೋಪ್ರಾ
ಬೆಳಗಿನ ಉಪಹಾರ ಯಾವತ್ತೂ ಎನರ್ಜಿಟಿಕ್ ಆಗಿರಬೇಕು ಅಂತ ನಂಬುವ ಪ್ರಿಯಾಂಕಾ ಎಗ್ ವೈಟ್ ತಿನ್ನೋದನ್ನು ತಪ್ಪಿಸಲ್ಲ. ಪತಿ ನಿಕ್ ಗೂ ಇದನ್ನು ಅಭ್ಯಾಸ ಮಾಡಿಸಿದ್ದಾರೆ. ಆಮೇಲೆ ರೋಟಿ, ಸಬ್ಜೀ ಥರದ ಆಹಾರ. ಎಗ್ ವೈಟ್ ತಿಂದು ಬೋರ್ ಆದ್ರೆ ಆಮ್ಲೆಟ್ ತಿನ್ನೋ ಅಭ್ಯಾಸ.

ನಿಮಗೆ ಗೊತ್ತಿರದ ಭಾರತೀಯ ಆಹಾರ ಸಂಸ್ಕೃತಿ ಇದು!

ಲೀಸ್ಟ್ ಮಾಡ್ತಾ ಹೋದರೆ ಹೆಚ್ಚಿನೆಲ್ಲ ಚಿತ್ರತಾರೆಯರು ಎಗ್ ವೈಟ್ ತಿನ್ನೋದನ್ನು ಅಭ್ಯಾಸ ಮಾಡಿಕೊಂಡಿರೋದು ತಿಳಿಯುತ್ತೆ. ಅದ್ಯಾಕೆ ಎಲ್ಲರ ಡಯೆಟ್ ನಲ್ಲೂ ಮಸ್ಟ್ ಆಂಡ್ ಶುಡ್ ಆಗಿ ಎಗ್ ವೈಟ್ ಇದ್ದೇ ಇರುತ್ತೆ ಅನ್ನೋದಕ್ಕೆ ಕಾರಣ ಬಹಳ.

- ಪ್ರೊಟೀನ್ ಇದೆ, ಕೊಲೆಸ್ಟ್ರಾಲ್ ಇಲ್ಲ
ನಾಲ್ಕೈದು ಎಗ್ ವೈಟ್ ತಿಂದರೆ ಸಾಕಷ್ಟು ಎನರ್ಜಿ ಸಿಗುತ್ತೆ. ಆದರೆ ಕೊಲೆಸ್ಟ್ರಾಲ್ ಇದರಲ್ಲಿಲ್ಲ. ಹಾಗಾಗಿ ನೀವು ಡುಮ್ಮಗಾಗೋ ಸಾಧ್ಯತೆ ಇಲ್ಲ. ಮೊಟ್ಟೆಯ ಹಳದಿ ಭಾಗದಲ್ಲಿ ಸ್ವಲ್ಪ ಕೊಲೆಸ್ಟ್ರಾಲ್ ಇರುತ್ತೆ ಎಂಬ ಮಾತಿದೆ. ಇದರಲ್ಲಿರುವ ರಿಚ್ ಪ್ರೊಟೀನ್ ಸ್ನಾಯುಗಳನ್ನು ಬಲ ಪಡಿಸುತ್ತದೆ. ಲೋ ಕ್ಯಾಲರಿ ಫುಡ್ ಇದು,

- ರಕ್ತದೊತ್ತಡ ಸಮತೋಲನಕ್ಕೆ ಒಳ್ಳೆಯದು
ಬಿಪಿ ಸಮಸ್ಯೆ ಇರುವವರು ಎಗ್ ವೈಟ್ ತಿನ್ನೋದು ಒಳ್ಳೆಯದು. ರಕ್ತದೊತ್ತಡ ಸಮತೋಲನಗೊಳಿಸುವಲ್ಲಿ ಇದರ ಪಾತ್ರ ಮಹತ್ವದ್ದು. ಇದು ಸಂಶೋಧನೆಗಳಿಂದಲೇ ಧೃಡಪಟ್ಟಿದೆ.

- ಹೃದಯ ಸಂಬಂಧಿ ರೋಗಗಳು ಬರಲ್ಲ
ಬ್ಲಡ್ ಪ್ರೆಶರ್ ಸಮತೋಲನಕ್ಕೆ ಬಂದ ಕೂಡಲೇ ಹೃದಯಕ್ಕೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ರಕ್ತನಾಳಗಳನ್ನು ವಿಕಸಿತಗೊಳಿಸುವ ಶಕ್ತಿಯೂ ಇದಕ್ಕಿದೆ. ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿ.

- ಅಗತ್ಯ ವಿಟಮಿನ್ ಗಳಿವೆ
ವಿಟಮಿನ್ ಎ, ಬಿ 12 ಮತ್ತು ವಿಟಮಿನ್ ಡಿ ಎಗ್ ವೈಟ್ ನಲ್ಲಿದೆ. ನಿರಂತರವಾಗಿ ಹಾಗೂ ನಿಗದಿತ ಪ್ರಮಾಣದಲ್ಲಿ ಎಗ್ ವೈಟ್ ತಿನ್ನುತ್ತಿದ್ದರೆ ವಯೋ ಸಹಜ ಸ್ನಾಯು ಸಮಸ್ಯೆಗಳು, ಮೈಗ್ರೇನ್ ತಲೆನೋವು ಇತ್ಯಾದಿ ಸಮಸ್ಯೆಗಳು ಹತ್ತಿರಕ್ಕೂ ಬರಲ್ಲ. ದೃಷ್ಟಿ ಸಮಸ್ಯೆಗಳಿಂದಲೂ ದೂರ ಇರಬಹುದು.