Asianet Suvarna News Asianet Suvarna News

Health Tips : ನಾಚಿಕೆ ಬಿಟ್ಬಿಡಿ, ಪೈಲ್ಸ್ ಕಾಡಿದ್ರೆ ಈ ಆಹಾರದಿಂದ ದೂರವಿರಿ

ಕಣ್ಣಿಗೆ ಕಾಣದ ಆದರೆ ನೋವು ಅನುಭವಿಸಲಾಗದ ರೋಗದಲ್ಲಿ ಪೈಲ್ಸ್ ಕೂಡ ಒಂದು. ಕುಳಿತುಕೊಳ್ಳಲು ಸಾಧ್ಯವಾಗದೆ, ಮಲವಿಸರ್ಜನೆಗೆ ಕಷ್ಟವಾಗುವ ಈ ಮೂಲವ್ಯಾಧಿಗೆ ಸಾಕಷ್ಟು ಔಷಧಿಗಳಿವೆ. ಆಹಾರದಿಂದಲೂ ಇದನ್ನು ನಿಯಂತ್ರಿಸಬಹುದಾಗಿದೆ.
 

Foods to avoid if you are suffering from piles
Author
Bangalore, First Published Mar 7, 2022, 5:00 PM IST | Last Updated Mar 7, 2022, 5:00 PM IST

ಪೈಲ್ಸ್ (Piles) ಅಥವಾ ಮೂಲವ್ಯಾಧಿ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಪೈಲ್ಸ್ ಬಂದಿದೆ ಅಂದ್ರೆ ನಗು (laugh)ವವರೇ ಹೆಚ್ಚು. ಇದು ಅನೇಕರಿಗೆ ತಮಾಷೆ ವಿಷ್ಯ. ಆದ್ರೆ ಪೈಲ್ಸ್ ಬಂದವರಿಗೆ ಹಾಗೂ ಅದ್ರ ನೋವುಂಡವರಿಗೆ (Pain) ಮಾತ್ರ ಅದರ ಕಷ್ಟ ಗೊತ್ತಿರುತ್ತದೆ. ಆದ್ರೆ ಎಷ್ಟೇ ನೋವು ತಿಂದರೂ ಜನರು ಇದನ್ನು ಬೇರೆಯವರಿಗೆ ಹೇಳಲು ನಾಚಿಕೊಳ್ತಾರೆ. ಅನೇಕರು ವೈದ್ಯರ ಬಳಿಗೂ ಹೋಗುವುದಿಲ್ಲ. ಆರಂಭದಲ್ಲಿ ಸಾಮಾನ್ಯ ಎನ್ನಿಸುವ ಈ ಪೈಲ್ಸ್ ದಿನಕಳೆದಂತೆ ಜೀವ ಹಿಂಡುತ್ತದೆ. ಮೂಲವ್ಯಾಧಿ ಇರುವ ರೋಗಿಯ ಗುದದ್ವಾರದ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಊತವಿರುತ್ತದೆ. ಇದಲ್ಲದೆ, ಅನೇಕ ಬಾರಿ ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವದ ಜೊತೆಗೆ ನೋವು ಎದುರಿಸಬೇಕಾಗುತ್ತದೆ. ಇಂದು ಈ ಪೈಲ್ಸ್ ಗೆ ಕಾರಣವೇನು ಹಾಗೆ ಯಾವ ಆಹಾರದಿಂದ ದೂರವಿರಬೇಕು ಎಂಬುದನ್ನು ಹೇಳ್ತೀವಿ.

ಮೂಲವ್ಯಾಧಿಗೆ ಕಾರಣಗಳು : ಪೈಲ್ಸ್ ರೋಗವು ಯಾವುದೇ ವಯಸ್ಸಿನ ವ್ಯಕ್ತಿಗೆ ಕಾಣಿಸಿಕೊಳ್ಳಬಹುದು. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಪೈಲ್ಸ್ ಗೆ ಮುಖ್ಯ ಕಾರಣವೆಂದ್ರೆ ಮಲಬದ್ಧತೆ, ಗ್ಯಾಸ್ ಸಮಸ್ಯೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳು. ಇದಲ್ಲದೆ ನಿಮ್ಮ ಕುಟುಂಬದಲ್ಲಿ ಯಾರಿಗಾದ್ರೂ ಈ ಸಮಸ್ಯೆಯಿದ್ದರೆ ನಿಮಗೂ ಇದು ಬರುವ ಅಪಾಯವಿರುತ್ತದೆ. ಮೊದಲು ಪೈಲ್ಸ್ ಗೆ ಕಾರಣವೇನು ಎಂಬುದನ್ನು ನೀವು ತಿಳಿದುಕೊಂಡರೆ ಅದಕ್ಕೆ ಚಿಕಿತ್ಸೆ ಸುಲಭ. ಪೈಲ್ಸ್ ನಲ್ಲಿ ಅನೇಕ ವಿಧಾನಗಳಿವೆ. ಅದನ್ನೂ ನೀವು ತಿಳಿದಿರಬೇಕಾಗುತ್ತದೆ.

ಮೂಲವ್ಯಾಧಿ ಸಮಸ್ಯೆಯಿರುವವರು ಈ ಆಹಾರದಿಂದ ದೂರವಿರಿ : 
ಮೂಲವ್ಯಾಧಿ ಸಮಸ್ಯೆಯಿರುವವರು ಕೆಲವೊಂದು ಆಹಾರದಿಂದ ದೂರವಿರಬೇಕು. ಆಹಾರದಲ್ಲಿ ನಿಯಂತ್ರಣ ಸಾಧಿಸಿದ್ರೆ ನಿಮ್ಮ ಸಮಸ್ಯೆ ಅರ್ಧದಷ್ಟು ಕಡಿಮೆಯಾದಂತೆ. 

ಡೀಪ್ ಫ್ರೈಡ್ ಮತ್ತು ಸಂಸ್ಕರಿಸಿದ ಆಹಾರ : ಸಂಸ್ಕರಿಸಿದ ಮಾಂಸ, ತ್ವರಿತ ಆಹಾರ ಮತ್ತು ಡೀಪ್ ಫ್ರೈಡ್ ಆಹಾರದಂತಹ ಸಂಸ್ಕರಿಸಿದ ಆಹಾರವು ಸುಲಭವಾಗಿ ಜೀರ್ಣವಾಗುವುದಿಲ್ಲ. ಜೀರ್ಣಕ್ರಿಯೆಗೆ  ಬಹಳ ಸಮಯ ತೆಗೆದುಕೊಳ್ಳುತ್ತದೆ. ಇವುಗಳಲ್ಲಿ ಕಡಿಮೆ ಪ್ರಮಾಣದ ಪೋಷಕಾಂಶವಿರುತ್ತದೆ. ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬಿನ ಪ್ರಮಾಣವು ಹೆಚ್ಚಿರುತ್ತದೆ. ಇದ್ರಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ.
ಮಸಾಲೆಯುಕ್ತ ಆಹಾರ : ಮಸಾಲೆಯುಕ್ತ ಆಹಾರಕ್ಕೆ ರುಚಿ ಹೆಚ್ಚು. ಮಸಾಲೆಯುಕ್ತ ಆಹಾರವನ್ನು ಎಲ್ಲರೂ ತಿನ್ನಲು ಇಷ್ಟಪಡ್ತಾರೆ. ಆದ್ರೆ ಮಸಾಲೆಯುಕ್ತ ಆಹಾರ ನಿಮ್ಮ ಆರೋಗ್ಯಕ್ಕೆ ಹಾನಿಕರ. ಇಂಥ ಆಹಾರ ಸೇವನೆ ನಂತ್ರ ಪೈಲ್ಸ್ ರೋಗಿಗಳು ಮಲವಿಸರ್ಜನೆ ಮಾಡುವಾಗ ಅಸಹನೀಯ ನೋವನ್ನು ಎದುರಿಸುತ್ತಾರೆ. ರಕ್ತಸ್ರಾವವಾಗುವ ಸಾಧ್ಯತೆಯಿರುತ್ತದೆ.

Health Tips: ರಾತ್ರಿ ಉಗುರು ಕತ್ತರಿಸಬಾರದು ಅಂತಾರಲ್ಲ, ಏಕಿರಬಹುದು?

ಮದ್ಯಪಾನ : ಮೂಲವ್ಯಾಧಿ ಸಮಸ್ಯೆಯಿರುವವರು ಅಪ್ಪಿತಪ್ಪಿಯೂ ಮದ್ಯಪಾನ ಮಾಡಬಾರದು. ಆಲ್ಕೋಹಾಲ್ ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ. ಜೊತೆಗೆ ಕರುಳಿನಲ್ಲಿ ನಿರ್ಜಲೀಕರಣದ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಡೈರಿ ಉತ್ಪನ್ನ:  ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಕೆಲವರಿಗೆ ಇದು ಗ್ಯಾಸ್, ಮಲಬದ್ಧತೆ ಮತ್ತು ಕಿಬ್ಬೊಟ್ಟೆಯ ಸೆಳೆತದ ಸಮಸ್ಯೆ ನೀಡುತ್ತದೆ. ಹಾಲು,ಪನ್ನೀರ್ ಸೇರಿದಂತೆ ಡೈರಿ ಉತ್ಪನ್ನಗಳು ಪೈಲ್ಸ್ ಸಮಸ್ಯೆಯನ್ನು ಹೆಚ್ಚು ಮಾಡುತ್ತವೆ. ಪ್ರತಿ ದಿನ ಡೈರಿ ಉತ್ಪನ್ನದ ಸೇವನೆ ನೀವು ಮಾಡ್ತಿದ್ದರೆ ಅದ್ರ ಬಗ್ಗೆ ಗಮನವಿರಲಿ.

ಹಣ್ಣುಗಳು : ಹಣ್ಣುಗಳ ಸೇವನೆ ಪೈಲ್ಸ್ ರೋಗಿಗಳಿಗೆ ಒಳ್ಳೆಯದು. ಆದ್ರೆ ಬಲಿತ ಹಣ್ಣುಗಳ ಸೇವನೆ ಮಾತ್ರ ಮಾಡಬೇಕು. ಕಾಯಿಯಂತಿರುವ ಹಣ್ಣುಗಳ ಸೇವನೆ ಮಾಡಿದ್ರೆ ಪೈಲ್ಸ್ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಎಂದೂ ಬಾಳೆಹಣ್ಣು ಅರ್ಧ ಹಣ್ಣಾಗಿರುವಾಗ ಸೇವೆ ಮಾಡ್ಬೇಡಿ.
ಹೆಚ್ಚು ಉಪ್ಪಿರುವ ಹಾಗೂ ಫೈಬರ್ ಹೆಚ್ಚಿರುವ ಆಹಾರ : ಪೈಲ್ಸ್ ಸಮಸ್ಯೆಯಿಂದ ಬಳಲುವ ರೋಗಿಗಳು ಎಂದೂ ಅಧಿಕ ಉಪ್ಪು ಅಥವಾ ಹೆಚ್ಚು ಉಪ್ಪಿರುವ ಆಹಾರ ಹಾಗೂ ಹೆಚ್ಚು ಫೈಬರ್ ಇರುವ ಆಹಾರವನ್ನು ಸೇವಿಸಬಾರದು.

ಕಾಲಿನಲ್ಲಿ ನೀಲಿ ರಕ್ತನಾಳಗಳಿವೆಯೇ? ಇದು ಯಾವ ರೋಗದ ಲಕ್ಷಣ ಎಂದು ತಿಳಿದಿದೆಯೇ?

ಪೈಲ್ಸ್ ಗೆ ಪರಿಹಾರವೇನು ? 
ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಉಗುರು ಬೆಚ್ಚಗಿನ ನೀರಿನಲ್ಲಿ ಕುಳಿತುಕೊಳ್ಳಬೇಕು. ಗುದದ್ವಾರಕ್ಕೆ ಬೆಚ್ಚನೆಯ ಶಾಖ ನೀಡಿದ್ರೆ ಉರಿ ಕಡಿಮೆಯಾಗುತ್ತದೆ. ಹಾಗೆಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ಪ್ರತಿ ದಿನ ವ್ಯಾಯಾಮ ಮಾಡಬೇಕು. ನೋವು ಹೆಚ್ಚಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು.

Latest Videos
Follow Us:
Download App:
  • android
  • ios