Asianet Suvarna News Asianet Suvarna News

ಈ ಆಹಾರದಿಂದಲೂ ತಲೆನೋವು ಬರಬಹುದು: ತಿನ್ನೋ ಮುನ್ನ ಎಚ್ಚರ!

ನಾವು ಸೇವಿಸುವ ಎಲ್ಲಾ ಆಹಾರವೂ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವೊಮ್ಮೆ ಅಪ್ಪಿತಪ್ಪಿ ತಿಂದರೂ ಅದು ಅಲರ್ಜಿಯಾಗಿಯೋ(Allergy), ವಾಯುವಾಗಿ(Gastric) ಅಥವಾ ತಲೆನೋವಿನ(Headache) ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಬಗ್ಗೆ ಸ್ವತಃ ಮುಂಜಾಗ್ರತೆ ತೆಗೆದುಕೊಳ್ಳುವುದು ಬಹಳ ಮುಖ್ಯ. ನಿಮಗೂ ಹೀಗೆ ಅನುಭವವಾಗಿರಬಹುದು. ಮೈಗ್ರೇನ್ ತಲೆನೋವನ್ನು ಪ್ರಚೋದಿಸುವ ಆಹಾರಗಳು ಇವು. ಈ ಬಗ್ಗೆ ಇಲ್ಲಿದೆ ಮಾಹಿತಿ.

Food that can give you Headache
Author
First Published Nov 26, 2022, 4:19 PM IST

ಕೆಲವೊಮ್ಮೆ ದೀರ್ಘಕಾಲದ ತಲೆನೋವನ್ನು(Long Headache) ನಾವು ಸಹಿಸಿಕೊಳ್ಳುತ್ತೇವೆ. ಒತ್ತಡ(Stress) ಅಥವಾ ಇತರೆ ಅನುವಂಶಿಕ ಪ್ರವೃತ್ತಿಯಿಂದಲೂ ಸಂಭವಿಸುತ್ತದೆ. ಅದಾಗ್ಯೂ ಕೆಲವೊಮ್ಮೆ ನಮ್ಮ ತಲೆನೋವಿನ ಕಾರಣವು ನಮ್ಮ ಆಹಾರದಲ್ಲೂ ಅಡಗಿರಬಹುದು. ಹೌದು ಕೆಲವೊಂದು ಆಹಾರವೂ ತಲೆನೋವನ್ನು ಪ್ರಚೋದಿಸುವ ಸಾಧ್ಯತೆ ಹೆಚ್ಚು.  ಮೈಗ್ರೇನ್ ತಲೆನೋವು ಇದು ಆಗಾಗ್ಗೆ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಕೆಲವೊಮ್ಮೆ ತಲೆನೋವು ಪ್ರಚೋದಿಸುವ ಹಲವು ಆಹಾರಗಳಿವೆ. ಈ ಆಹಾರಗಳಲ್ಲಿ ನಿಖರವಾಗಿ ಏಕೆ ತಲೆನೋವು ಉಂಟಾಗುತ್ತವೆ ಎಂಬುದು ಇನ್ನೂ ತಿಳಿದಿಲ್ಲದ ಸಂಗತಿ. ಆದರೆ ಈ ಆಹಾರಗಳಲ್ಲಿರುವ ಕೆಲವು ಪದಾರ್ಥಗಳು ನರಗಳು(Nerves) ಮತ್ತು ಮೆದುಳಿನ ರಕ್ತನಾಳಗಳೊಂದಿಗೆ(Blood Vessels) ಸಂವಹನ ನಡೆಸಿ ಮೈಗ್ರೇನ್ ತಲೆನೋವನ್ನು ಪ್ರಚೋದಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದಿದೆ.

ಆಹಾರದಲ್ಲಿನ ಕೆಲವು ರಾಸಾಯನಿಕಗಳು(Chemicals) ಮೆದುಳಿನಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು. ಇದು ಮೈಗ್ರೇನ್‌ಗೆ ಕಾರಣವಾಗುವ ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಎಂದು ಒಂದು ಸಿದ್ಧಾಂತವು ಸೂಚಿಸುತ್ತದೆ. ಈ ಆಹಾರಗಳು ಸಿರೊಟೋನಿನ್(Serotonin) ಎಂಬ ನರರಾಸಾಯನಿಕ ಪ್ರಮಾಣವನ್ನು ಬದಲಾಯಿಸುತ್ತವೆ ಎನ್ನಲಾಗುತ್ತದೆ. ಇದು ರಕ್ತನಾಳಗಳು ಮತ್ತು ರಕ್ತದ ಹರಿವಿನಲ್ಲಿನ ಬದಲಾವಣೆಗಳನ್ನು ಉಂಟು ಮಾಡುತ್ತಾ ತಲೆನೋವಿಗೆ ಕಾರಣವಾಗುತ್ತದೆ. 

ಸಾಮಾನ್ಯ ಆಹಾರಗಳಲ್ಲಿನ ಟೈರಮೈನ್(Tyramine) ಮತ್ತು ಫೀನಿಲೆಥೈಲಮೈನ್ ಎಂಬ ಎರಡು ಅಮೈನೋ ಆಮ್ಲಗಳು(Amino Acid) ತಲೆನೋವಿಗೆ ಸಂಬಂಧಿಸಿವೆ ಮತ್ತು ಆಹಾರಗಳು ವಯಸ್ಸಾದಾಗ, ಹುದುಗಿದಾಗ, ದೀರ್ಘಕಾಲದವರೆಗೆ ಸಂಗ್ರಹಿಸಿದಾಗ ಈ ಅಂಶಗಳ ಮಟ್ಟವು ಹೆಚ್ಚಾಗುತ್ತದೆ. ಅಂದರೆ ಆಹಾರಗಳು ತಾಜಾ ಇರುವುದಿಲ್ಲ. ಈ ರೀತಿಯ ಆಹಾರಗಳನ್ನು ಸೇವಿಸಿದಾಗ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುತ್ತವೆ. 

ಹುಬ್ಬುಗಳಲ್ಲಿ ನೋವು ಇದ್ಯಾ? ಇಲ್ಲಿದೆ ನೋಡಿ ಮನೆಮದ್ದು!

1.ಕಾಫಿ(Coffee): ಕಾಫಿ ಇಲ್ಲದೆ ಬೆಳಗ್ಗೆ ಮೂಡ್ ಫ್ರೆಶ್(Mood Fresh) ಎನಿಸುವುದಿಲ್ಲ ಎನ್ನುವವರು ಇದ್ದಾರೆ. ಇದು ದೊಡ್ಡ ತಲೆನೋವನ್ನು ಸಹ ತರಬಹುದು. ಕಾಫಿಯು ಉತ್ತೇಜಕ ಪರಿಣಾಮವನ್ನು ಹೊಂದಿದೆ. ಹೆದರಿಕೆ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಸ್ನಾಯುಗಳ ಸೆಳೆತ ಉಂಟಾಗುವುದಲ್ಲದೆ ತಲೆನೋವು ಉಂಟು ಮಾಡಬಹುದು. ಕಾಫಿಯು ಸೆರೆಬ್ರಲ್ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ.

2. ಕೃತಕ ಸಿಹಿ(Artificial Sweetener): ಕೃತಕ ಸಿಹಿಕಾರಕಗಳನ್ನು ಹೊಂದಿರುವ ಎಲ್ಲಾ ಆಹಾರಗಳು ನಿಮಗೆ ತಲೆನೋವು ನೀಡಬಹುದು. ಇವುಗಳಲ್ಲಿ ಆಹಾರ ಪಾನೀಯಗಳು, ಕಡಿಮೆ ಕ್ಯಾಲೋರಿ ಸಿಹಿತಿಂಡಿಗಳು, ಮೊಸರು(Curd) ಮತ್ತು ಮಿಠಾಯಿಗಳು ಸೇರಿವೆ. ಸಕ್ಕರೆಯ ಉಪಹಾರ ಧಾನ್ಯಗಳು ಮತ್ತು ಕೃತಕ ಕ್ರೀಮ್‌ಗಳು ತಲೆನೋವು ಪ್ರಚೋದಿಸಬಹುದು.

3. ಕೀಟನಾಶಕಗಳೊಂದಿಗೆ ಸಂಸ್ಕರಿಸಿದ ಆಹಾರ(Pesticides Food):  ಸಾವಯವವನ್ನು ತಿನ್ನಲು ರೂಢಿಮಾಡಿಕೊಳ್ಳಿ. ಏಕೆಂದರೆ ಕೀಟನಾಶಕಗಳೊಂದಿಗೆ ಚಿಕಿತ್ಸೆ ನೀಡುವ ಆಹಾರಗಳು ಕೆಲವರಿಗೆ ತಲೆನೋವು ತರಿಸುತ್ತದೆ. ವ್ಯಕ್ತಿಯೊಬ್ಬರಿಗೆ ಸೇಬು ಬಹಳ ಇಷ್ಟವಾಗಿದ್ದು ಅದನ್ನು ತಿಂದ ನಂತರ ಪ್ರತೀ ಬಾರಿಯೂ ತಲೆನೋವು ಕಾಣಿಸುತ್ತಿತ್ತು. ಆದರೆ ಅವರು ಸಾವಯವ ಸೇಬುಗಳನ್ನು ತಿನ್ನಲಾರಭಿಸಿದ ನಂತರ ತಲೆನೋವು ಕಡಿಮೆಯಾಯಿತು.

4. ಟ್ಯಾಪ್ ಬಿಯರ್(Tap Beer): ತಣ್ಣನೆಯ ಟ್ಯಾಪ್ ಬಿಯರ್ ನಿಮ್ಮ ತಲೆನೋವಿಗೆ ಕಾರಣವಿರಬಹುದು. ಹೌದು ಬಿಯರ್ ಆನ್ ಟ್ಯಾಪ್‌ನಲ್ಲಿ ಟೈರಮೈನ್ ಅಂಶವಿದೆ. ಇದು ತಲೆನೋವಿಗೆ ಸಂಬಂಧಿಸಿದ ರಾಸಾಯನಿಕಗಳಲ್ಲಿ ಒಂದಾಗಿದೆ.

ತಲೆಸ್ನಾನ ಆದ ಕೂಡ್ಲೇ ಸಿಕ್ಕಾಪಟ್ಟೆ ತಲೆನೋವಾ ? ಕಾರಣವೇನು ತಿಳ್ಕೊಳ್ಳಿ

5. ಸರಿಯಾದ ಊಟ(Right Food): ಬೇಕಾಬಿಟ್ಟಿ ಊಟ ತಿಂಡಿ ಮಾಡುವವರು ನೀವಾಗಿದ್ದರೆ ಈಗಲೇ ಬಿಟ್ಟುಬಿಡಿ. ಸರಿಯಾದ ಸಮಯ ಹಾಗೂ ಆಹಾರ ಸೇವನೆಯಲ್ಲಿ ಸರಿಯಾದ ಅಂತರವನ್ನು ಕಾಪಾಡಿಕೊಳ್ಳಿ. ಸರಿಯಾಗಿ ಆಹಾರ ಸೇವಿಸದಿದ್ದಲ್ಲಿ ತಲೆನೋವಿಗೆ ಕಾರಣವಾಗಬಹುದು. ಆರೋಗ್ಯಕರ ತಿಂಡಿಗಳ ನಡುವೆ ಸರಿಯಾದ ಅಂತರದೊಂದಿಗೆ ಪ್ರತೀ ದಿನ ಮೂರು ಊಟಗಳನ್ನು ಮಾಡುವ ಗುರಿ ಹೊಂದುವುದು ಮುಖ್ಯ. ಹೆಚ್ಚು ಹೊತ್ತು ತಿನ್ನದೇ ಇರುವುದು ಅಥವಾ ಒಂದೇ ಬಾರಿಗೆ ಹೆಚ್ಚು ತಿನ್ನುವುದೂ ಸಹ ತಲೆನೋವಿಗೆ ಪ್ರಚೋದಿಸಿದಂತೆ.

6. ನೀರು(Water): ದೇಹಕ್ಕೆ ನೀರು ಬೇಕೇಬೇಕು. ನಿರ್ಜಲೀಕರಣವೂ(Dehydrate) ಸಹ ತಲೆನೋವಿಗೆ ಕಾರಣವಾಗುತ್ತದೆ. ಸರಾಸರಿ ಮಹಿಳೆಯರಿಗೆ ದಿನಕ್ಕೆ ಎಂಟು ಗ್ಲಾಸ್ ನೀರು ಬೇಕಾಗುತ್ತದೆ ಹಾಗೂ ಪುರುಷರಿಗೆ ದಿನಕ್ಕೆ ಸುಮಾರು 10 ಗ್ಲಾಸ್ ನೀರು ಬೇಕಾಗುತ್ತದೆ.

7. ಉಳಿದ ಆಹಾರಗಳು(Fermented Food): ಉಳಿದುಹೋದ ಆಹಾರ ಸೇವಿಸುವುದು ಮನೆಯವರಲ್ಲಿನ ಸಾಮಾನ್ಯ ಅಭ್ಯಾಸ. ಹೀಗೆ ಮಾಡುವುದು ತಪ್ಪು. ಮೈಗ್ರೇನ್‌ನಿಂದ ಬಳಲುತ್ತಿರುವವರು ಹೆಚ್ಚಿದ ಟೈರಮೈನ್‌ನಿಂದ ತಲೆನೋವನ್ನು ತಡೆಗಟ್ಟಲು ಉಳಿದ ಆಹಾರವನ್ನು ಸೇವಿಸುವುದು ತಪ್ಪಿಸಬೇಕು. ಟೈರಮೈನ್ ವಾಸ್ತವವಾಗಿ ಬಹಳಷ್ಟು ಆಹಾರಗಳಲ್ಲಿ ಇರುವ ಅಮೈನೋ ಆಸಿಡ್ ಟೈರೋಸಿನ್‌ನಿಂದ ಪಡೆದ ವಸ್ತುವಾಗಿದೆ. ನೀವು ದೀರ್ಘಕಾಲದವರೆಗೆ ಆಹಾರವನ್ನು ಸಂಗ್ರಹಿಸಿದಾಗ ಹೆಚ್ಚು ಟೈರೋಸಿನ್ ಅನ್ನು ಟೈರಮೈನ್ ಆಗಿ ಪರಿವರ್ತಿಸಲಾಗುತ್ತದೆ. ಸರಿಯಾಗಿ ಸಂಗ್ರಹಿಸದ ಅಥವಾ ದೀರ್ಘಕಾಲದವರೆಗೆ ಶೀತದಲ್ಲಿ ಇಡದ ಆಹಾರಗಳಲ್ಲಿ ಟೈರಮೈನ್ ಪ್ರಮಾಣ ಹೆಚ್ಚಾಗಿರುತ್ತದೆ. ಒಂದು ವೇಳೆ ಆಹಾರ ಸಂಗ್ರಹಿಸಲು ಬಯಸಿದರೆ ಗಾಳಿಯಾಡದ ಪಾತ್ರೆಗಳನ್ನು ಬಳಸಿ.

ತಲೆನೋವಿನಲ್ಲೂ ಎಷ್ಟೊಂದು ವಿಧ ನೋಡಿ, ಕಾರಣ ತಿಳ್ಕೊಂಡು ಚಿಕಿತ್ಸೆ ಪಡೀರಿ

8. ಸಿಟ್ರಸ್ ಹಣ್ಣುಗಳು(Citrus Fruits): ದೇಹಕ್ಕೆ ಸಿಟ್ರಸ್ ಹಣ್ಣು ಎಷ್ಟು ಒಳ್ಳೆಯದೋ ಅಷ್ಟೇ ತೊಂದರೆಯೂ ಇದೆ. ಸಾಮಾನ್ಯವಾಗಿ ಹುಳಿ ಕಿತ್ತಳೆ(Orange), ನಿಂಬೆಹಣ್ಣು(Lemon) ಅಥವಾ ಮೊಸಂಬಿಗಳನ್ನು ತಿಂದ ನಂತರ ತಲೆನೋವು ಅನುಭವಿಸುತ್ತೇವೆ. ಹುಳಿ ಹಣ್ಣುಗಳು ಹೆಚ್ಚು ಆಮ್ಲೀಯವಾಗಿರುತ್ತವೆ ಮತ್ತು ರಕ್ತದ ಸಮತೋಲನವನ್ನು ತೊಂದರೆಗೊಳಿಸಬಹುದು. ಇದು ಮೆದುಳಿಗೆ ತಲುಪಿದಾಗ ತಲೆನೋವು ಕಾಣಿಸಿಕೊಳ್ಳುತ್ತದೆ. ಸಿಟ್ರಸ್ ಹಣ್ಣುಗಳು ಹಿಸ್ಟಮೈನ್‌ಗಳು ಮತ್ತು ಸಣ್ಣ ಪ್ರಮಾಣದ ಟೈರಮೈನ್ ಅನ್ನು ಇತರೆ ಪ್ರಚೋದಕಗಳಿಗೆ ಸೇರಿಸುತ್ತವೆ.

Follow Us:
Download App:
  • android
  • ios