Face Mapping: ಮುಖ ನೋಡಿದರೆ ಸಾಕು, ನಿಮ್ಮ ಹೃದಯದ ಆರೋಗ್ಯ ಗೊತ್ತಾಗುತ್ತೆ! ಇದೇ ಫೇಸ್ ಮ್ಯಾಪಿಂಗ್!
ನಿಮ್ಮ ಮುಖದಲ್ಲಿ ದಿನಂಪ್ರತಿ ಆಗುವ ಹಲವು ಸಂಗತಿಗಳನ್ನು ಗಮನಿಸಿದರೆ ನಿಮ್ಮ ದೇಹದ ಒಳಗಿನ ಅಂಗಗಳು ಹೇಗಿವೆ ಎಂದು ಹೇಳಿಬಿಡಬಹುದಂತೆ. ಇದು ಹಲವು ವರ್ಷಗಳಿಂದ ʼಫೇಸ್ ಮ್ಯಾಪಿಂಗ್ʼ ಮಾಡುತ್ತಿರುವ ಆಯುರ್ವೇದ ಪ್ರಾಕ್ಟೀಷನರ್ ಆಗಿರುವ ಒಬ್ಬ ವೈದ್ಯೆ ಹೇಳಿರುವ ಮಾತು.
ಈಕೆಯ ಹೆಸರು ಡಿಂಪಲ್ ಜಾಂಗ್ಡಾ. ಇನ್‌ಸ್ಟಾಗ್ರಾಂನಲ್ಲಿ ಈಕೆಯ ಚಾನೆಲ್ ಇದೆ. ಆರೋಗ್ಯದ ಬಗ್ಗೆ ಹಲವು ಸೂಕ್ಷ್ಮಗಳನ್ನು ತಿಳಿಸುತ್ತಿರುತ್ತಾಳೆ. ಸಾಮಾನ್ಯವಾಗಿ ಫೇಸ್ ಮ್ಯಾಪಿಂಗ್ ಮಾಡಿ ನಿಮ್ಮ ಆರೋಗ್ಯ ಹೇಗಿದೆ ಅಂತ ಹೇಳಿಬಿಡುತ್ತಾಳೆ. ಮುಕದ ಮೇಲೆ ಎಲ್ಲಿ ಮೊಡವೆ ಮೂಡಿದೆ, ಎಲ್ಲಿ ಹುಣ್ಣಾಗಿದೆ, ಎಲ್ಲಿ ಚರ್ಮ ಇಳಿಬಿದ್ದಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಿಮ್ಮ ಹೃದಯ, ಕಿಡ್ನಿ, ಲಿವರ್ ಇತ್ಯಾದಿ ಹೇಗಿದೆ ಎಂದು ಹೇಳಿಬಿಡಬಹುದಂತೆ. ಆಕೆ ಹಾಗನ್ನುತ್ತಾಳೆ. ಯಾಕೆಂದರೆ ಮುಖವೇ ಆಂತರಿಕ ಆರೋಗ್ಯದ ಕೀಲಿಕೈ.
ಈಕೆ ಮಾಡುವ ಫೇಸ್ ಮ್ಯಾಪಿಂಗ್ ಅನ್ನು ಫೇಶಿಯಲ್ ರಿಫ್ಲೆಕ್ಸೋಲಜಿ ಅಥವಾ ಫೇಸ್ ರೀಡಿಂಗ್ ಎಂದೂ ಕರೆಯುತ್ತಾರೆ. ಇದು ಸಾಂಪ್ರದಾಯಿಕ ಚೀನೀ ಔಷಧ ಮತ್ತು ಆಯುರ್ವೇದದಲ್ಲಿ ಬೇರೂರಿರುವ ಅಭ್ಯಾಸ. ಇದು ದೇಹದೊಳಗಿನ ಅಂಗಗಳ ಆರೋಗ್ಯವನ್ನು ನಿರ್ಧರಿಸಲು ಮುಖವನ್ನು ವಿಶ್ಲೇಷಿಸುವುದನ್ನು ಒಳಗೊಂಡಿರುತ್ತದೆ. ಮುಖದ ವಿವಿಧ ಪ್ರದೇಶಗಳು ದೇಹದೊಳಗಿನ ನಿರ್ದಿಷ್ಟ ಅಂಗಗಳು ಅಥವಾ ದೇಹದ ಕಾರ್ಯಗಳಿಗೆ ಸಂಬಂಧಿಸಿರುತ್ತದೆ ಎಂಬುದು ಇದರ ಹಿಂದಿನ ಪರಿಕಲ್ಪನೆ.
ಈ ವೈದ್ಯೆ ಹೇಳುವಂತೆ, ನಿಮ್ಮ ಜೀರ್ಣವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ನಿಮ್ಮ ಕಣ್ಣುಗಳ ಕೆಳಭಾಗದ ಕಪೋಲ ಪ್ರದೇಶದಲ್ಲಿ ಮೊಡವೆಗಳು ಆಗುತ್ತವೆ. ನಿಮ್ಮ ಕಣ್ಣಿನ ನೇರ ಕೆಳಗೆ ತುಂಬಾ ನೀರು ಸೇರಿದಂತೆ ಇದ್ದಲ್ಲಿ, ತೀರಾ ಕಪ್ಪು ಇದ್ದಲ್ಲಿ ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ. ಲೇಟ್ ನೈಟ್ ಮದ್ಯಪಾನ ಮಾಡುತ್ತಿರುವವರಲ್ಲಿ ಇದನ್ನು ಗಮನಿಸಬಹುದು. ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ಬಾಯಿಯ ಎರಡೂ ಬದಿಗಳಲ್ಲಿ ಮೊಡವೆ ಉಂಟಾಗುತ್ತದೆ. ಗಲ್ಲದ ಮೇಲೆ ಕಲೆ ಅಥವಾ ಮೊಡವೆ ಉಂಟಾದಲ್ಲಿ ಹಾರ್ಮೋನ್ ಸಮಸ್ಯೆ ಪುರುಷರಿಗೆ ಹೀಗಾದಲ್ಲಿ ಫಲವತ್ತತೆಯ ಸಮಸ್ಯೆಯಂತೆ.
ಫೇಸ್ ಮ್ಯಾಪಿಂಗ್ ತಿಳಿಸುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಹಣೆ: ಸಾಮಾನ್ಯವಾಗಿ ಜೀರ್ಣಾಂಗ ವ್ಯವಸ್ಥೆ ಮತ್ತು ಮೂತ್ರಕೋಶದೊಂದಿಗೆ ಸಂಬಂಧಿಸಿದೆ. ಇಲ್ಲಿ ಮೊಡವೆ, ಹುಣ್ಣು, ಕಲೆ ಕಂಡುಬಂದರೆ ಅದು ನಿಮ್ಮ ಕಳಪೆ ಜೀರ್ಣಕ್ರಿಯೆ ಅಥವಾ ಒತ್ತಡದಂತಹ ಸಮಸ್ಯೆಗಳನ್ನು ಸೂಚಿಸಬಹುದು.
ಮೂಗು: ಹೃದಯ ಮತ್ತು ಹೃದಯ ರಕ್ತನಾಳದ ವ್ಯವಸ್ಥೆಗೆ ಸಂಬಂಧಿಸಿದೆ. ಇಲ್ಲಿ ಆಗುವ ಕೆಂಪು ಅಥವಾ ಕಲೆಗಳು ರಕ್ತದೊತ್ತಡ ಅಥವಾ ರಕ್ತಪರಿಚಲನೆಯ ಸಮಸ್ಯೆಗಳನ್ನು ಸೂಚಿಸಬಹುದು. ಈ ವೈದ್ಯೆ ಹೇಳುವಂತೆ, ಈಕೆಯ ತಂದೆಗೆ ಮೂಗಿನ ಮೇಲೆ ದೊಡ್ಡ ಮೊಡವೆ ಮೂಡುತ್ತಿತ್ತು. ತಂದೆ ಹೃದಯದ ಬ್ಲಾಕ್ ಅನುಭವಿಸಿ ಮೃತಪಟ್ಟರಂತೆ.
ರಾತ್ರಿ ಮಲಗುವ ಮುನ್ನ ಎರಡು ಆಹಾರದ ಸಂಯೋಜನೆ ತಿಂದ್ರೆ ಪುರುಷರ ಆರೋಗ್ಯದಲ್ಲಾಗುತ್ತೆ ಚಮತ್ಕಾರ!
ಕೆನ್ನೆಗಳು: ಇವು ಉಸಿರಾಟದ ವ್ಯವಸ್ಥೆಗೆ ಸಂಪರ್ಕ ಹೊಂದಿದೆ. ಈ ಪ್ರದೇಶದಲ್ಲಿನ ತೊಂದರೆಗಳು ಉಸಿರಾಟದ ಪರಿಸ್ಥಿತಿಗಳು ಅಥವಾ ಅಲರ್ಜಿಗಳನ್ನು ಪ್ರತಿಬಿಂಬಿಸಬಹುದು. ಕೆಲವರಿಗೆ ಪ್ರಾಯ ಹೆಚ್ಚೇನೂ ಆಗದಿದ್ದರೂ ಕೆನ್ನೆಗಳು ಇಳಿಬಿದ್ದಿರುತ್ತವೆ. ಅಂಥವರು ಉಸಿರಾಟದ ವ್ಯವಸ್ಥೆ ಸಡಿಪಡಿಸಿಕೊಳ್ಳಬೇಕು.
ಗಲ್ಲ ಮತ್ತು ದವಡೆ: ಇದು ಹಾರ್ಮೋನ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಇಲ್ಲಿ ಉಂಟಾಗುವ ಕಲೆಗಳು ಹಾರ್ಮೋನ್ ಅಸಮತೋಲನವನ್ನು ಸೂಚಿಸಬಹುದು. ಪುರುಷರಲ್ಲಿ ಗಲ್ಲದ ಮೇಲೆ ಮೊಡವೆ ಇದ್ದಲ್ಲಿ ಫರ್ಟಿಲಿಟಿ ಸಮಸ್ಯೆ ಇರಬಹುದು. ಹೆಣ್ಣುಮಕ್ಕಳಲ್ಲಿ ಇದ್ದಲ್ಲಿ ಅವರು ಗೈನಕಾಲಜಿಸ್ಟ್ ಭೇಟಿ ಮಾಡಬೇಕು.
ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಹೃದಯ ಸಮಸ್ಯೆ ಇರೋರು ನೋಡ್ಬಾರ್ದಾ? ಏನಾಗ್ತಿದೆ ಇಲ್ಲಿ!
ಒಬ್ಬರ ಆರೋಗ್ಯದ ಒಳನೋಟಗಳನ್ನು ಒದಗಿಸಲು ಫೇಸ್ ಮ್ಯಾಪಿಂಗ್ ಅನ್ನು ರೋಗನಿರ್ಣಯದ ಸಾಧನವಾಗಿ ಬಳಸಲಾಗುತ್ತದೆ, ಆಹಾರ, ಜೀವನಶೈಲಿಯ ಬದಲಾವಣೆಗಳು ಅಥವಾ ವೈದ್ಯಕೀಯ ಸಲಹೆಯನ್ನು ಪಡೆಯುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ, ಅನೇಕ ಜನರು ಆಧುನಿಕ ವೈದ್ಯಕೀಯ ಅಭ್ಯಾಸಗಳಿಗೆ ಪೂರಕವಾಗಿ ಇದನ್ನು ಬಳಸುತ್ತಿದ್ದಾರೆ.