Asianet Suvarna News Asianet Suvarna News

Eyes beauty: ಕಣ್ಣುಗಳು ಅರಳಿದ ಕಮಲಗಳಂತಾಗಬೇಕೆ? ಹೀಗೆ ಮಾಡಿ

ಕಣ್ಣು ಮನಸ್ಸಿನ ಚೆಲುವನ್ನು ಬಿಂಬಿಸುವ ಅಂಗ. ಯಾರನ್ನಾದರೂ ನೋಡಿದಾಗ ಮೊದಲು ಕಾಣುವುದೇ ಕಣ್ಣುಗಳು. ಕಣ್ಣುಗಳು ಸುಂದರವಾಗಿಯೂ ಇರಬೇಕು, ಆರೋಗ್ಯಪೂರ್ಣವಾಗಿಯೂ ಇರಬೇಕು. ಹಾಗೆ ಅವು ಆರೋಗ್ಯಪೂರ್ಣವಾಗಿರಬೇಕು ಎಂದರೆ ಅವುಗಳ ಬಗೆಗೆ ಕಾಳಜಿ ವಹಿಸಬೇಕು. ಸ್ಕ್ರೀನ್ ವೀಕ್ಷಣೆಯ ಇಂದಿನ ದಿನಗಳಲ್ಲಿ ಇದು ಅತ್ಯಂತ ಅಗತ್ಯ.

Eyes beauty and smartness
Author
Bangalore, First Published Dec 5, 2021, 4:30 PM IST
  • Facebook
  • Twitter
  • Whatsapp

ವನಿತಾ ಮಗುವನ್ನು ಕರೆದುಕೊಂಡು ಕಾರ್ಯಕ್ರಮವೊಂದಕ್ಕೆ ಹೋಗಿದ್ದಳು. ಅಲ್ಲಿ ಹಿರಿಯ ಮಹಿಳೆಯೊಬ್ಬರು ಆಕೆಯನ್ನು “ಮಗುವಿನ ಕಣ್ಣುಗಳೇಕೆ ಕಳಾಹೀನವಾಗಿವೆ? ಕೆಳಗೇಕೆ ಕಪ್ಪಾಗಿದೆ? ರಾತ್ರಿ ಸರಿಯಾಗಿ ನಿದ್ದೆ ಮಾಡುತ್ತದೆ ತಾನೇ?’ ಎಂದು  ಪ್ರಶ್ನಿಸಿದರು. ಹೌದು, ಆಕೆಯ ಮಗು ರಾತ್ರಿ ಸಮಯದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುವುದೇ ಕಡಿಮೆಯಾಗಿತ್ತು. ಆಗಾಗ ಬೆಚ್ಚಿದಂತೆ ಎಚ್ಚರಗೊಳ್ಳುವುದು ಸಾಮಾನ್ಯವಾಗಿತ್ತು. ಅದು ಕಣ್ಣುಗಳಲ್ಲೂ ಬಿಂಬಿತವಾಗುತ್ತಿತ್ತು. ಅಂದರೆ, ಕಣ್ಣುಗಳೇ ಕೆಲವು ಆರೋಗ್ಯ ಸಮಸ್ಯೆಗಳನ್ನು ತೋರಬಲ್ಲವು. 

ಕಣ್ಣುಗಳನ್ನು (eyes) ಅಂದವಾಗಿರಿಸಿಕೊಳ್ಳಲು ಎಲ್ಲರಿಗೂ ಇಷ್ಟ. ಆದರೆ, ಅವುಗಳ ಆರೋಗ್ಯ (health) ವನ್ನು ಕಡೆಗಣಿಸಿಬಿಡುತ್ತಾರೆ. ಇಂದಿನ ಲ್ಯಾಪ್ ಟಾಪ್, ಕಂಪ್ಯೂಟರ್, ಮೊಬೈಲ್ ದಿನಗಳಲ್ಲಂತೂ ಕಣ್ಣುಗಳ ಬಗೆಗೆ ಕಾಳಜಿ ವಹಿಸುವುದು ಅತ್ಯಗತ್ಯ. ಮಕ್ಕಳಾದಿಯಾಗಿ ಎಲ್ಲರೂ ಸ್ಕ್ರೀನ್ (screen) ಮೇಲೆ ಹೆಚ್ಚು ಅವಲಂಬಿತರಾಗಿರುವುದು ಎಲ್ಲೆಡೆ ಕಂಡುಬರುತ್ತದೆ. ಕಣ್ಣುಗಳ ಅಂದಚೆಂದಕ್ಕೆ ನೀಡುವ ಸಮಯದಲ್ಲಿ ಅರ್ಧದಷ್ಟಾದರೂ ಸಮಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ನೀಡಿದರೆ ಸಾಕು. ಕಣ್ಣುಗಳು ಫಳಫಳ (glittering eyes) ಹೊಳೆಯುತ್ತವೆ. ನಾಲ್ಕು ಜನರ ಮಧ್ಯವೂ ನಮ್ಮನ್ನು ಗುರುತಿಸುವಂತೆ ಮಾಡುತ್ತವೆ. 

Eyes beauty and smartness

ವಾಯುಮಾಲಿನ್ಯದಿಂದ ಕಣ್ಣುಗಳು ಕಳಾಹೀನಗೊಳ್ಳುತ್ತಿವೆ. ಡ್ರೈ ಐ (dry eye) ಸಮಸ್ಯೆ ಹೆಚ್ಚುತ್ತಿದೆ. ಸ್ಕ್ರೀನ್ ವೀಕ್ಷಣೆಯ ಸಮಯ ಹೆಚ್ಚುತ್ತಿರುವುದರಿಂದ ಕಣ್ಣುಗಳಿಗೆ ಸಾಕಷ್ಟು ಶ್ರಮವಾಗುತ್ತಿದೆ. ಇಂತಹ ಸಮಯದಲ್ಲಿ ಅವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸವಾಲೂ ಹೌದು.ಆದರೆ, ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

ಕಂಪ್ಯೂಟರ್ ನೋಡಿ ಕಣ್ಣು ಬಳಲುತ್ತಿದೆಯೇ? ಪರಿಹಾರ ಇಲ್ಲಿದೆ

ಕಣ್ಣುಗಳ ಆರೋಗ್ಯಕ್ಕೆ ಹೀಗ್ಮಾಡಿ
•    ದಿನವೂ ರಾತ್ರಿ ಮಲಗುವ ಮುನ್ನ ಕಣ್ಣುಗಳ ಸುತ್ತ ವಿಟಮಿನ್ ಇ ತೈಲ ಅಥವಾ ತೆಂಗಿನೆಣ್ಣೆಯನ್ನು ಸವರಿಕೊಳ್ಳಬೇಕು. ಇದರಿಂದ ಕಣ್ಣುಗಳಿಗೆ ಅಗತ್ಯವಾದ ವಿಶ್ರಾಂತಿ ಲಭಿಸುತ್ತದೆ. ಕಣ್ಣುಗಳ ಸುತ್ತ ರಕ್ತಪರಿಚಲನೆಯೂ ಸುಗಮವಾಗಿ ಕಪ್ಪು ಕಲೆ (black) ದೂರವಾಗುತ್ತದೆ. 
•    ಕಣ್ಣುಗಳ ಆರೋಗ್ಯಕ್ಕೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ವಿಟಮಿನ್ ಸಿ, ವಿಟಮಿನ್ ಎ, ಸತು, ವಿಟಮಿನ್ ಎ ಅಂಶಗಳು ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು. ಇದರಿಂದಾಗಿ ಕಣ್ಣಿಗೆ ಸಾಮಾನ್ಯವಾಗಿ ಎದುರಾಗುವ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ. ನಮ್ಮ ಆಹಾರದಲ್ಲಿ ಪ್ರತಿದಿನ ಕ್ಯಾರಟ್, ಪಪ್ಪಾಯ, ಮೊಸರು, ಮಜ್ಜಿಗೆ, ತುಪ್ಪವನ್ನು ನಿಯಮಿತವಾಗಿ ಸೇವನೆ ಮಾಡಿದರೆ ಈ ಎಲ್ಲ ಅಂಶಗಳು ಲಭಿಸುತ್ತವೆ. 
•    ಇದು ವರ್ಕ್ ಫ್ರಾಮ್ ಹೋಮ್ (work from home) ಯುಗ. ಪ್ರತಿದಿನ 8-10 ಗಂಟೆಗಳ ಕಾಲ ಕನಿಷ್ಠ ಲ್ಯಾಪ್ ಟ್ಯಾಪ್ ಮುಂದಿರುವುದು ಸಾಮಾನ್ಯ. ಅಂಥವರು ಮಲಗುವಾಗ ತಣ್ಣಗಿನ ಹಾಲಿಗೆ ಎರಡು ಹನಿ ಪನ್ನೀರನ್ನು ಸೇರಿಸಿ, ಹತ್ತಿಯಲ್ಲಿ ಅದ್ದಿ ಕಣ್ಣುಗಳ ಮೇಲಿಟ್ಟುಕೊಳ್ಳಿ. ಇದರಿಂದಲೂ ಕಣ್ಣುಗಳಿಗೆ ವಿಶ್ರಾಂತಿ ದೊರೆಯುತ್ತದೆ.  
•    ಕೆಲಸದ ನಡುವೆಯೂ ಕಣ್ಣಿಗಳಿಗೆ ವಿಶ್ರಾಂತಿ ನೀಡಬಹುದು. ಆಗಾಗ ಕಣ್ಣುಗಳನ್ನು ಅತ್ತಿತ್ತ ಹೊರಳಿಸಬೇಕು. ದೂರಕ್ಕೆ ದೃಷ್ಟಿ ಬೀರಬೇಕು. ಹೀಗೆ ಮಾಡುವುದರಿಂದ ದೃಷ್ಟಿ ದೋಷ ಉಂಟಾಗುವುದು ತಪ್ಪುತ್ತದೆ. ಹೊರಗೆಲ್ಲಾದರೂ ಹಸಿರು ವಾತಾವರಣವಿದ್ದರೆ ಇನ್ನೂ ಉತ್ತಮ. 

ಕಣ್ಣಿನ ಆರೋಗ್ಯ ಚೆನ್ನಾಗಿರಬೇಕೆಂದರೆ ಫುಡ್ ಡಯಟ್ ಹೀಗಿರಿಬೇಕು ನೋಡಿ

•    ಸೌತೆಕಾಯಿ ಹೋಳನ್ನು ಕಣ್ಣುಗಳ ಮೇಲಿಟ್ಟುಕೊಳ್ಳಬೇಕು. ಇದರಿಂದ ಕಣ್ಣುಗಳ ಸುತ್ತ ಕಪ್ಪುಕಲೆ ಬರುವುದಿಲ್ಲ. 
•    ಪ್ರತಿದಿನ ರಾತ್ರಿ 6-8 ಗಂಟೆಗಳಷ್ಟು ಸಮಯ ನಿದ್ರೆ ಮಾಡಲೇಬೇಕು. ನಿದ್ರೆಯಿಂದ ದೊರೆಯುವಷ್ಟು ವಿಶ್ರಾಂತಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ. 
•    ಕಣ್ಣುಗಳ ರೆಪ್ಪೆಗಳಿಗೆ ಹರಳಣ್ಣೆ ಲೇಪಿಸಿಕೊಳ್ಳಬಹುದು. ಇದರಿಂದ ರೆಪ್ಪೆಗಳ ಕೂದಲು ದಟ್ಟವಾಗುತ್ತದೆ. 

ಕನ್ನಡಕ ಕ್ಲೀನ್‌ ಮಾಡಿ ಎಷ್ಟುಹೊತ್ತಾಯ್ತು? ವೈದ್ಯರ ಮಾತು ಕೇಳಿ

•    ಪ್ರತಿದಿನ ರಾತ್ರಿ ಅಂಗಾಲಿಗೆ ತೆಂಗಿನೆಣ್ಣೆ ಸವರಿಕೊಳ್ಳಬೇಕು.  
•    ವರ್ಷಕ್ಕೊಮ್ಮೆಯಾದರೂ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಗ್ಲುಕೋಮಾದಂಥ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಹೆಚ್ಚಿನ ಅಪಾಯ ಉಂಟಾಗುವುದಿಲ್ಲ. 


 

Follow Us:
Download App:
  • android
  • ios