ಕನ್ನಡಕ ಕ್ಲೀನ್ ಮಾಡಿ ಎಷ್ಟುಹೊತ್ತಾಯ್ತು? ವೈದ್ಯರ ಮಾತು ಕೇಳಿ
ಕನ್ನಡಕ ಏರಿಸಿಕೊಂಡು ಸಿಸ್ಟಮ್ ಮುಂದೆ ಕೂರುವವರು ಗಮನಿಸಲೇ ಬೇಕಾದ ವಿಷ್ಯ ಇದು. ವೈದ್ಯರ ಮಾತು ಕೇಳಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ.
ಕೋವಿಡ್ ಸಾಂಕ್ರಾಮಿಕ ಹೆಚ್ಚುತ್ತಿರುವ ಟೈಮ್‌ನಲ್ಲೂ ಹೆಚ್ಚಿನವರು ತಾವು ತೊಡುವ ಸನ್‌ಗ್ಲಾಸ್ ಅಥವಾ ಕನ್ನಡಕದ ಬಗ್ಗೆ ಅಂಥಾ ಗಮನ ಕೊಡಲ್ಲ.
ಆದರೆ ಕೊಡಲೇ ಬೇಕಾದ ಅಗತ್ಯ ಇದೆ. ಆಗಾಗ ಕನ್ನಡಕವನ್ನು ಸ್ವಚ್ಛ ಮಾಡುವ ಅಭ್ಯಾಸ ಮಾಡ್ಕೊಳ್ಳಿ ಅಂತಾರೆ ವೈದ್ಯರು.
ಕೀಟಾಣುಗಳು, ವೈರಸ್‌ಗಳು ಕಣ್ಣಿನ ಸಂಪರ್ಕಕ್ಕೆ ಬರುವ ಸಾಧ್ಯತೆ ಈಗ ಹೆಚ್ಚಿದೆ.
ಸುಮ್ಮನೆ ಕನ್ನಡಕ ಉಜ್ಜಿದ ಮಾತ್ರಕ್ಕೆ ಅದನ್ನು ಕ್ಲೀನ್ ಮಾಡಿದಂತಾಗೋದಿಲ್ಲ.
ಮೊದಲು ಉಗುರು ಬೆಚ್ಚಗಿನ ನೀರನ್ನು ಗ್ಲಾಸ್ ಮೇಲೆ ಹಾಕಿ. ಜಿಡ್ಡಿನಂಶ ಇಲ್ಲದ ಸೋಪ್ ಸ್ವಲ್ಪ ಹಾಕಿ ಮೃದುವಾಗಿ ತಿಕ್ಕಿ.
ಬಳಿಕ ಇನ್ನೊಮ್ಮೆ ನೀರಿನಿಂದ ಕ್ಲೀನ್ ಆಗಿ ತೊಳೆಯಿರಿ. ಸ್ವಚ್ಛ ಹತ್ತಿ ಬಟ್ಟೆಯಿಂದ ಇದನ್ನು ಒರೆಸಿ. ಸ್ವಲ್ಪ ಹೊತ್ತು ತಡೆದು ಬಳಸಿ.