Asianet Suvarna News Asianet Suvarna News

ಸ್ನಾನ ಮಾಡುವಾಗ ಜೊತೆಯಲ್ಲೇ ಮೂತ್ರ ಮಾಡ್ತೀರಾ ? ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ತಿಳ್ಕೊಳ್ಳಿ

ಸ್ನಾನ (Bath) ಮಾಡುವಾಗ ಜೊತೆಯಲ್ಲೇ ಮೂತ್ರ (Urine) ವಿಸರ್ಜಿಸುವ ಅಭ್ಯಾಸವನ್ನು ಹೆಚ್ಚಿನವರು ಹೊಂದಿರುತ್ತಾರೆ. ಇದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಮತ್ತು ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದ್ರೆ ಈ ರೀತಿ ಸ್ನಾನ ಮಾಡುವಾಗ ಜತೆಯಲ್ಲೇ ಮೂತ್ರ ಮಾಡೋದ್ರಿಂದ ಆರೋಗ್ಯ (Health) ಕ್ಕೆಷ್ಟು ಅಪಾಯವಿದೆ ಗೊತ್ತಾ ?

Experts Reveal Shocking Reason Why People Should Stop Urinating In The Shower Vin
Author
Bengaluru, First Published Jun 1, 2022, 1:31 PM IST

ಸ್ನಾನ (Bath) ಮಾಡುವುದು ಎಂದರೆ ಧೂಳು, ಬೆವರಿನಿಂದ ಆವೃತವಾಗಿರುವ ದೇಹ (Body)ವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಪ್ರಕ್ರಿಯೆಯಾಗಿದೆ. ಸ್ನಾನ ಮಾಡುವಾಗ ಸಾಮಾನ್ಯವಾಗಿ ಎಲ್ರೂ ಶೌಚಾದಿಗಳನ್ನು ಪೂರೈಸಿಕೊಂಡು ಬರ್ತಾರೆ. ಆದ್ರೆ ಕೆಲವೊಬ್ಬರು ಸ್ನಾನ ಮಾಡುವಾಗಲೇ ಮೂತ್ರ (Urine) ವಿಸರ್ಜಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಕೇಳಲು ಸಾಮಾನ್ಯವೆನಿಸಿದರೂ, ಪ್ರಕ್ರಿಯೆಯೂ ಸಾಮಾನ್ಯವಾಗಿದ್ದರೂ ಇದರಿಂದಾಗುವ ಆರೋಗ್ಯ ಸಮಸ್ಯೆ (Health Problem) ಗಳು ಒಂದೆರಡಲ್ಲ. ಇದರಿಂದಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞರು ಬಹಿರಂಗಪಡಿಸಿದ್ದಾರೆ

ಹೆಚ್ಚು ಚಿಂತಿಸದೆ ಶವರ್‌ (Shower)ನಲ್ಲಿ ಮೂತ್ರ ವಿಸರ್ಜಿಸುವ ಸಹಜವಾದ ಪ್ರಚೋದನೆಯನ್ನು ನಾವು ಹೆಚ್ಚಾಗಿ ಹೊಂದಿರುತ್ತೇವೆ. ಇದನ್ನು ಬದಲಾಯಿಸುವ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ ಏಕೆಂದರೆ ನಾವು ತಕ್ಷಣ ನೀರಿನಿಂದ ತೊಳೆಯುತ್ತೇವೆ ಮತ್ತು ಮೂತ್ರವನ್ನು ತೆರವುಗೊಳಿಸುತ್ತೇವೆ. ಹೀಗಾಗಿ ಇದರಿಂದೇನು ಸಮಸ್ಯೆಯಿಲ್ಲ ಎಂದೇ ನಾವು ಭಾವಿಸುತ್ತೇವೆ. ಆದ್ರೆ ಈ ರೀತಿ ಸ್ನಾನ ಮಾಡುವಾಗ ಜೊತೆಯಲ್ಲೇ ಮೂತ್ರ ಮಾಡೋದ್ರಿಂದ ಆರೋಗ್ಯಕ್ಕಾಗುವ ತೊಂದರೆಗಳು ಹಲವು. 

ಮೂತ್ರದ ಸೋಂಕು ಕಾಡುತ್ತಿದೆಯೇ? ಮಾನಸಿಕ ಸಮಸ್ಯೆಯೇ ಇದಕ್ಕೆ ಕಾರಣ….

ಜನರು ಶವರ್‌ನಲ್ಲಿ ಮೂತ್ರ ವಿಸರ್ಜನೆಯನ್ನು ಏಕೆ ನಿಲ್ಲಿಸಬೇಕು ಎಂಬ ಆಘಾತಕಾರಿ ಕಾರಣವನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಶವರ್‌ನಲ್ಲಿ ಮೂತ್ರ ವಿಸರ್ಜಿಸುವುದು ಪುರುಷರು ಮತ್ತು ಮಹಿಳೆಯರ ಆರೋಗ್ಯಕ್ಕೆ ಏಕೆ ಹಾನಿಕಾರಕ ಎಂಬುದನ್ನು ತಿಳಿಸಿದ್ದಾರೆ. 

ಮೂತ್ರಶಾಸ್ತ್ರಜ್ಞ ಡಾ.ತೆರೇಸಾ ಇರ್ವಿನ್, ಸ್ನಾನಕ್ಕೆ ಹೋಗುವವರು ಜೊತೆಯಲ್ಲೇ ಮೂತ್ರ ಮಾಡುವ ತಮ್ಮ ಅಭ್ಯಾಸ (Habit)ಗಳನ್ನು ಬದಲಾಯಿಸಿಕೊಳ್ಳಬೇಕು. ಏಕೆಂದರೆ ಇದನ್ನು ನಿಯಮಿತವಾಗಿ ಮಾಡುವುದರಿಂದ ಹರಿಯುವ ನೀರಿನ ಶಬ್ದ ಮತ್ತು ಮೂತ್ರ ವಿಸರ್ಜನೆಯ ಕ್ರಿಯೆಯ ನಡುವೆ ಸಹಾಯವಿಲ್ಲದ ಮಾನಸಿಕ ಸಂಬಂಧಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಸ್ನಾನ ಮಾಡುವಾಗ ಸುಲಭವಾಗಿ ಮೂತ್ರಕೋಶವನ್ನು ಖಾಲಿ ಮಾಡಲು ನಿಮಗೆ ಸಾಧ್ಯವಾಗಬಹುದು, ಆದರೆ ಇದರಿಂದ ಅಪಾಯವೇ ಹೆಚ್ಚು ಎನ್ನುತ್ತಾರೆ. 

ಇದು ನೀರು  ಹರಿಯುವ ನೀರಿನ ಶಬ್ದವನ್ನು ಕೇಳಿದಾಗಲೆಲ್ಲಾ ಮೂತ್ರ ವಿಸರ್ಜನೆಯನ್ನು ಬಿಡುಗಡೆ ಮಾಡಲು ನಿಮ್ಮ ಮೆದುಳಿಗೆ ತರಬೇತಿ ನೀಡುತ್ತದೆ ಎಂದು ತಿಳಿಸಿದ್ದಾರೆ. ಸ್ನಾನ ಮಾಡುವಾಗ ಮೂತ್ರ ಮಾಡುವ ಅಭ್ಯಾಸದಿಂದ ನೀವು ಪ್ರತಿ ಬಾರಿ ನೀರಿನ ಶಬ್ದವನ್ನು ಕೇಳಿದಾಗ ನಿಮ್ಮ ಮೂತ್ರಕೋಶವು ಮೂತ್ರ ವಿಸರ್ಜಿಸಲು ಬಯಸುತ್ತದೆ ಎಂದು ತಜ್ಞರು (Expert) ವಿವರಿಸಿದ್ದಾರೆ. 

ಆರೋಗ್ಯ, ಸೌಂದರ್ಯ ವೃದ್ಧಿಗಾಗಿ ಏಳು ವರ್ಷದಿಂದ ಮೂತ್ರ ಕುಡಿಯುತ್ತಿದ್ದಾನೆ ವ್ಯಕ್ತಿ !

ನೀರು (Water) ಹರಿಯುತ್ತಿರುವಾಗ ಮೂತ್ರ ವಿಸರ್ಜಿಸಿದರೆ, ಹರಿಯುವ ನೀರಿನ ಶಬ್ದ ಮತ್ತು ಮೂತ್ರ ವಿಸರ್ಜನೆಯ ಮಧ್ಯೆ ಮೆದುಳಿನಲ್ಲಿ ಒಂದು ಸಂಬಂಧ ರಚನೆಗೊಳ್ಳುತ್ತದೆ. ಆದ್ದರಿಂದ ನೀವು ಎಂದಾದರೂ ಶವರ್ ನೀರನ್ನು ಆನ್ ಮಾಡುವ ಮೊದಲು ಮೂತ್ರ ವಿಸರ್ಜಿಸಲು ಪ್ರಯತ್ನಿಸಿ ಎಂದು ತಜ್ಞರು ಸೂಚಿಸುತ್ತಾರೆ. ಮೂತ್ರವು ಶವರ್ ಫ್ಲೋರ್‌ಗೆ ಬರುವ ಏಕೈಕ ದೈಹಿಕ ದ್ರವವಲ್ಲ. ಬೆವರು, ಲೋಳೆ, ಮುಟ್ಟಿನ ರಕ್ತ, ಮತ್ತು ಮಲವು ಕೂಡ ಆ ಉತ್ತಮ, ಬಿಸಿ ಶವರ್‌ನೊಂದಿಗೆ ಮಿಶ್ರಣವಾಗಬಹುದು. ಹೀಗಾಗಿ ಸ್ನಾನ ಮಾಡುವಾಗ ಜೊತೆಯಲ್ಲೇ ಮೂತ್ರ ಮೂಡಿದರೆ ಇದೆಲ್ಲವೂ ದೇಹವನ್ನು ತಗುಲಿ ಹೋಗುವ ಕಾರಣ ದೇಹಕ್ಕೂ ಅಲರ್ಜಿಯಾಗಿ ಪರಿಣಮಿಸಬಹುದು ಎಂದು ಹೇಳಲಾಗಿದೆ.

ಹೀಗಾಗಿ ಸ್ನಾನ ಮಾಡುವಾಗ ಎಲ್ಲಾ ಒಟ್ಟಿಗೇ ಆಗ್ಲಿ ಅಂತ ಮೂತ್ರ ಮಾಡುವ ಅಭ್ಯಾಸ ನಿಮ್ಮದು ಸಹ ಆಗಿದ್ದರೆ, ಇಲ್ಲೇ ಬಿಟ್ಬಿಡಿ. ಇಲ್ಲಾಂದ್ರೆ ಹೊಸ ಆರೋಗ್ಯ ಅಪಾಯಗಳನ್ನು ಎದುರಿಸಬೇಕಾದೀತು.

Follow Us:
Download App:
  • android
  • ios