ಆರೋಗ್ಯ, ಸೌಂದರ್ಯ ವೃದ್ಧಿಗಾಗಿ ಏಳು ವರ್ಷದಿಂದ ಮೂತ್ರ ಕುಡಿಯುತ್ತಿದ್ದಾನೆ ವ್ಯಕ್ತಿ !
ಮನುಷ್ಯ (Human) ಅಂದ್ರೆ ಹಾಗೆಯೇ, ಅವನ ಸ್ವಭಾವ ಹೇಗೆಂದು ಊಹಿಸಲು ಸಾಧ್ಯವಿಲ್ಲ. ಚಿತ್ರ-ವಿಚಿತ್ತ ಚಟುವಟಿಕೆ (Activities)ಗಳನ್ನು ಮಾಡುತ್ತಲೇ ಇರುತ್ತಾನೆ. ಇತರರಿಗೆ ವಿಚಿತ್ರವೆನಿಸಿದ್ದು ಆತನ ಪಾಲಿಗೆ ಸಾಮಾನ್ಯವಾಗಿರುತ್ತದೆ. ಹಾಗೆಯೇ ಇಲ್ಲೊಬ್ಬ ಮನುಷ್ಯನ ವಿಚಿತ್ರ ವರ್ತನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಷ್ಟಕ್ಕೂ ಆತ ಮಾಡ್ತಿರೋದೇನು ?
ಆರೋಗ್ಯ (Health) ಮತ್ತು ಸೌಂದರ್ಯದ (Beauty) ಬಗ್ಗೆ ಯಾರಿಗೆ ತಾನೇ ಕಾಳಜಿಯಿಲ್ಲ ಹೇಳಿ. ಆರೋಗ್ಯ ಚೆನ್ನಾಗಿರಬೇಕೆಂದು ನಿಯಮಿತವಾಗಿ ಚೆಕಪ್ (Checkup) ಮಾಡಿಸುತ್ತಾರೆ. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ. ಇನ್ನು ಸೌಂದರ್ಯ ವೃದ್ಧಿಗಾಗಿ ಆರ್ಯುವೇದ, ಅಲೋಪತಿ ಎಂದು ಹಲವು ಚಿಕಿತ್ಸೆಯ ಮೊರೆ ಹೋಗುತ್ತಾರೆ. ಸಾಲ್ದು ಅಂತ ಕಾಸ್ಟ್ಲೀ ಕಾಸ್ಮೆಟಿಕ್ಸ್ (Cosmetics) ಸಹ ಬಳಸ್ತಾರೆ. ಆದ್ರೆ ಇಲ್ಲೊಬ್ಬ ಅದೆಲ್ಲವನ್ನೂ ಬಿಟ್ಟು ಆರೋಗ್ಯ ಕಾಪಾಡಿಕೊಳ್ಳಲು, ಸೌಂದರ್ಯ ವೃದ್ಧಿಗಾಗಿ ಎಂಥಾ ವಿಚಿತ್ರ ಕೆಲಸವನ್ನು ಮಾಡ್ತಿದ್ದಾನೆ ನೋಡಿ. ಇಲ್ಲೋರ್ವ ವ್ಯಕ್ತಿ ಪ್ರತಿನಿತ್ಯ ತನ್ನ ಮೂತ್ರವನ್ನು (Man Drinks Urine Daily) ಕುಡಿಯುತ್ತಾನೆ. ಇದರಿಂದ ಆತ 10 ವರ್ಷ ಚಿಕ್ಕವನಂತೆ ಕಾಣುತ್ತಾನೆ ಅಂತೆ. ಇದರ ಜೊತೆಗೆ ಖಿನ್ನತೆಯಿಂದ ಆತ ದೂರವಾಗಿ ನೆಮ್ಮದಿಯ ಜೀವನ ನಡೆಸುತ್ತಿರೋದಾಗಿ ಈ ವ್ಯಕ್ತಿ ಹೇಳಿಕೊಂಡಿದ್ದಾನೆ. ಆದ್ರೆ ಈ ಅಭ್ಯಾಸ (Habit)ದಿಂದ ಈತನ ಕುಟುಂಬ ಆತನಿಂದ ಅಂತರ ಕಾಯ್ದುಕೊಂಡಿದೆ.
ಮೂತ್ರ ಸೇವನೆಯಿಂದ ಕಡಿಮೆಯಾಯ್ತಂತೆ ಖಿನ್ನತೆಯ ಸಮಸ್ಯೆ
34 ವರ್ಷದ ಹ್ಯಾರಿ ಮಟಾಡೀನ್ ಅವರು 2016ರಿಂದ ತನ್ನದೇ ಮೂತ್ರವನ್ನು ಕುಡಿಯುತ್ತಿದ್ದಾನೆ. ಮೂತ್ರ ಕುಡಿಯಲು ಆರಂಭಿಸಿದ ನಂತರ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಚೆನ್ನಾಗಿದೆ ಎಂದು ಹೇಳಿದ್ದಾನೆ. ಹ್ಯಾರಿ ಯುಕೆಯ ಹ್ಯಾಂಪ್ ಶೈರ್ ನಲ್ಲಿ ವಾಸವಾಗಿದ್ದಾನೆ. ಹ್ಯಾರಿ ತಾನು ಶೇಖರಿಸಿಟ್ಟ ಎರಡು ತಿಂಗಳಷ್ಟು ಹಳೆಯದಾದ ಮೂತ್ರವನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುತ್ತಲೇ ಬಂದಿದ್ದಾನಂತೆ. ಹ್ಯಾರಿ ಪ್ರತಿದಿನ 200 ಮಿಲಿವರೆಗೆ ಮೂತ್ರ ಕುಡಿಯುತ್ತಾನೆ. ಇದರಿಂದ ಯೌವನ ಬಂದಿದೆ. ಜೊತೆ ಖಿನ್ನತೆಯೂ ದೂರವಾಗಿದೆ ಎನ್ನುತ್ತಾನೆ ಆತ. ಹೀಗಾಗಿಯೇ ಎಲ್ಲರೂ ಎಷ್ಟು ದೂಷಿಸಿದರೂ ಈ ಅಭ್ಯಾಸವನ್ನು ಬದಲಿಸಿಕೊಳ್ಳಲ್ಲ ಎಂದು ಹೇಳಿಕೊಂಡಿದ್ದಾನೆ.
ಈ ವಿಚಿತ್ರ Diabetes ಲಕ್ಷಣಗಳನ್ನು ನಿರ್ಲಕ್ಷಿಸಿದ್ರೆ ಅಪಾಯ ತಪ್ಪಿದ್ದಲ್ಲ
ಹ್ಯಾರಿ ತನ್ನ ಮೂತ್ರವು ಸೂಪರ್ ಕ್ಲೀನ್ ಎಂದು ಹೇಳುತ್ತಾನೆ. ಈಗ ಪ್ರತಿದಿನ 200ml ಮೂತ್ರ ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಹಲವು ವರ್ಷಗಳಿಂದ ಹ್ಯಾರಿ ಖಿನ್ನತೆಯ ಸಮಸ್ಯೆ ಅನುಭವಿಸುತ್ತಿದ್ದ ಎರಡು ತಿಂಗಳಷ್ಟು ಹಳೆಯ ಮೂತ್ರವನ್ನು ಸೇವಿಸಿದ ಕಾರಣದಿಂದ ಈಗ ಖಿನ್ನತೆ ಆತನಿಂದ ದೂರವಾಗಿದೆಯಂತೆ. ಈ ಅಭ್ಯಾಸದ ಬಳಿಕ ಜೀವನದಲ್ಲಿ ಖುಷಿಯಾಗಿರಲು ಸಾಧ್ಯವಾಯಿತು ಎನ್ನುತ್ತಾನೆ ಹ್ಯಾರಿ.
ಸೌಂದರ್ಯ ವೃದ್ಧಿಗೆ ಮುಖಕ್ಕೆ ಮೂತ್ರ ಸಿಂಪಡಿಕೆ
ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಹ್ಯಾರಿ ತಮ್ಮ ಮೂತ್ರವನ್ನು ಸೌಂದರ್ಯ (Beauty) ವೃದ್ಧಿಗೂ ಬಳಸಿಕೊಳ್ಳುತ್ತಾರಂತೆ. ಮೂತ್ರವನ್ನು ಮುಖದ ಮೇಲೆ ಸಿಂಪಡಿಸಿಕೊಳ್ಳುತ್ತಾನಂತೆ. ಈ ರೀತಿ ಮಾಡಿಕೊಳ್ಳುವದಿಂದ ಹ್ಯಾರಿಯ ಮುಖದ ಕಾಂತಿ ಹೆಚ್ಚಾಗಿದೆಯಂತೆ. ಶೇ.90ರಷ್ಟು ನೀರನ್ನು ಹೊಂದಿರುವ ಮೂತ್ರ ಹಲವು ಅಸ್ವಸ್ಥೆತೆಗಳನ್ನು ಗುಣಪಡಿಸುವ ಸಾಮಾರ್ಥ್ಯವನ್ನು ಹೊಂದಿದೆ ಎಂಬುವುದು ಹ್ಯಾರಿಯ ಅಭಿಪ್ರಾಯವಾಗಿದೆ.
Healt Tips : ಪಬ್ಲಿಕ್ ಟಾಯ್ಲೆಟ್ ನಲ್ಲಿ ಅರ್ಧಮರ್ಧ ಕುಳಿತು ಯೂರಿನ್ ಮಾಡ್ತೀರಾ? ಎಚ್ಚರ
2016ರಲ್ಲಿ ಮೂತ್ರ ಸೇವನೆ ಅದರಲ್ಲಿರುವ ಗುಣಗಳ ಬಗ್ಗೆ ಓದಿದ ಹ್ಯಾರಿ ಅಂದಿನಿಂದ ಮೂತ್ರ ಸೇವನೆ ಆರಂಭಿಸಿದ್ದನು. ಮೂತ್ರ ಸೇವನೆಯಿಂದಾಗಿ ಹ್ಯಾರಿಯ ಮೆದಳು ಉತ್ತಮವಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದು, ಇದರಿಂದ ಶಾಂತಿಯುತವಾಗಿ ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದಿದ್ದಾನೆ. ಆದರೆ ಹ್ಯಾರಿಯ ಮೂತ್ರ ಸೇವನೆಯ ಅಭ್ಯಾಸವನ್ನು ಆತನ ಕುಟುಂಬ ಕುಟವಾಗಿ ವಿರೋಧಿಸಿದೆ. ಈ ನಡವಳಿಕೆಯಿಂದ ಆತನ ಇಬ್ಬರೂ ಸೋದರಿಯರು ಸಹ ಇಷ್ಟಪಡುವದಿಲ್ಲ.
ಮೂತ್ರ ಸೇವನೆ ಮಾಡುವ ಹ್ಯಾರಿ ಸರಿಯಾದ ಸಮಯಕ್ಕೆ ಆಹಾರ ಸೇವಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಹ್ಯಾರಿ ಮೂತ್ರ ಸೇವನೆಯ ಜೊತೆಯಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ಸೇವಿಸುತ್ತಾನೆ. ಎರಡು ಹೊತ್ತು ಉಪವಾಸ ಆಚರಣೆ ಮಾಡುತ್ತಾನೆ. ನಾನು ಹಾಲಿನ ಕೆನೆಯ ಬದಲಾಗಿ ಮೂತ್ರವನ್ನು ಮುಖಕ್ಕೆ ಸಿಂಪಡಿಸಿಕೊಳ್ಳುತ್ತೇನೆ. ಇದರಿಂದ ನನ್ನ ಮುಖದ ಚರ್ಮ ಇಷ್ಟು ಚೆನ್ನಾಗಿ ಹೊಳೆಯುತ್ತದೆ ಎಂದು ಹ್ಯಾರಿ ಹೇಳುತ್ತಾನೆ. ಆದರೆ ಮೂತ್ರ ಸೇವನೆಯಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ. ಮೂತ್ರ ಸೇವನೆಯಿಂದ ದೇಹವ ನಿರ್ಜಲೀಕರಣ ಆಗುತ್ತದೆ. ಇದರ ಜೊತೆಗೆ ಬ್ಯಾಕ್ಟಿರೀಯಾ ಸೋಂಕುಗಳ ಸಹ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ.