ಡಯಾಬಿಟೀಸ್‌ ಇದ್ಯಾ? ಹಾಗಾದ್ರೆ ದೀಪಾವಳಿ ಹೀಗೆ ಆಚರಿಸಿ

ದೀಪಾವಳಿ ಹಬ್ಬ ಎಂದರೆ ಸಿಹಿತಿಂಡಿ ಮತ್ತು ಕ್ಯಾಲೊರಿ ಹೆಚ್ಚಿರುವ ಆಹಾರಗಳು. ಮಧುಮೇಹ ಹೊಂದಿರುವವರು ಇದನ್ನು ಆರೋಗ್ಯಕ್ಕೆ ಧಕ್ಕೆಯಾಗದಂತೆ ಆಚರಿಸೋದು ಹೇಗೆ?

Expert Diet tips diabetics should follow for a healthy Diwali

ದೀಪಾವಳಿ (Diwali) ಎಂದರೆ ಹಿಂದೂಗಳ ಹಬ್ಬದ (Festival) ಉತ್ಸಾಹದ ಪರಾಕಾಷ್ಠೆ. ಈ ಹಬ್ಬವನ್ನು ಮನಸ್ಫೂರ್ತಿ ಆಚರಿಸದ ಹಿಂದೂಗಳೇ ಇಲ್ಲ ಎನ್ನಬಹುದು. ಮನೆಗಳನ್ನು ದೀಪಗಳಿಂದ ಬೆಳಗಿಸುವುದು, ಸಿಹಿ ತಿನ್ನುವುದು ಮತ್ತು ಹಂಚುವದು, ಇದ್ದದ್ದೇ. ಹಬ್ಬಕ್ಕೆ ಮಾಡುವ ತಿಂಡಿಗಳಲ್ಲಿ ಹೆಚ್ಚಿನವು ಸಕ್ಕರೆ ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುತ್ತವೆ. ದೀಪಾವಳಿಯ ಸಿಹಿತಿಂಡಿಗಳು ಮತ್ತು ಖಾರಗಳು ಅತ್ಯಂತ ರುಚಿಕರ.

ಆದರೆ ಅವು ನಿಮ್ಮ ಹೊಟ್ಟೆ ಮತ್ತು ಸೊಂಟದ ಮಡಿಕೆಗಳ ಮೇಲೆ ಒತ್ತಡ ಉಂಟುಮಾಡುವುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಮುಖ್ಯವಾಗಿ, ದೀಪಾವಳಿಯ ವಿಶೇಷ ತಿಂಡಿಗಳ ಮಿತಿಮೀರಿದ ಸೇವನೆಯು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಹಾನಿಕಾರಕವಾಗಿದೆ, ವಿಶೇಷವಾಗಿ ಮಧುಮೇಹ, ಅಧಿಕ ರಕ್ತದೊತ್ತಡ(Blood pressure) ಗಳಿಂದ ಬಳಲುತ್ತಿರುವವರಿಗೆ.

ದೀಪಾವಳಿಯ ಸಮಯದಲ್ಲಿ ಮಧುಮೇಹಿಗಳು (Diabetis) ಸಕ್ಕರೆ (sugar) ಸೇರಿಸಿದ ಮತ್ತು ಕ್ಯಾಲೊರಿ (calorie) ಹೆಚ್ಚಾಗಿರುವ ಭಕ್ಷ್ಯಗಳನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಅಥವಾ ಸೇವಿಸಬಾರದು ಎಂಬುದು ಅವರ ವೈಯಕ್ತಿಕ ಸ್ಥಿತಿಯನ್ನು ಅವಲಂಬಿಸಿದೆ. ಅವರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುತ್ತಿದ್ದರೆ ಮತ್ತು ದಿನನಿತ್ಯದ ವ್ಯಾಯಾಮವನ್ನು ಮಾಡುತ್ತಿದ್ದರೆ, ಅವರು ಮಿತವಾಗಿ ಸಿಹಿತಿಂಡಿ ಸೇವಿಸಬಹುದು. ಈ ಬಗ್ಗೆ ಡಾಕ್ಟರ್‌ಗಳು ಏನು ಹೇಳುತ್ತಾರೆ ತಿಳಿದುಕೊಳ್ಳೋಣ:

1. ತಿಂಡಿ ಜೊತೆಯಲ್ಲಿರಲಿ

ಸಾಮಾನ್ಯವಾಗಿ ದೀಪಾವಳಿ ಸಮಯದಲ್ಲಿ ಜನ ಪ್ರಯಾಣಿಸುತ್ತಿರುತ್ತಾರೆ. ಬಂಧುಗಳ ಮನೆಗೆ ಅಥವಾ ಇತರ ಪ್ರದೇಶಗಳಿಗೆ ಹೋಗುತ್ತಾರೆ. ಈ ಸಮಯದಲ್ಲಿ ನಗರಗಳಲ್ಲಿ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುವುದು ಸಾಮಾನ್ಯ. ಆದ್ದರಿಂದ ಮಧುಮೇಹಿಗಳು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುವ ಸಮಯ ಮತ್ತು ಅವರು ತಿನ್ನುವ ಸಮಯ ಬಂದಾಗ ಆರೋಗ್ಯಕರ ತಿಂಡಿಗಳನ್ನು ತಮ್ಮೊಂದಿಗೆ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾದಾ ಪಾಪ್‌ಕಾರ್ನ್, ಹುರಿಯದ ಹಾಗೂ ಉಪ್ಪಿನಂಶ ಕಡಿಮೆಯಿರುವ ಆಹಾರವನ್ನು ಮಧುಮೇಹಿಗಳು ಪ್ರಯಾಣಿಸುವಾಗ ಪ್ಯಾಕ್‌ಅಪ್ ಮಾಡಿ ಕೊಂಡೊಯ್ಯಬಹುದು.

2. ನೀವು ಕುಡಿಯಲು ಬಯಸಿದರೆ ತಿನ್ನಿರಿ

ಹಬ್ಬದ ಸಮಯ ಎಂದರೆ ಪಾರ್ಟಿಗಳಿಗೆ ಹಲವಾರು ಆಮಂತ್ರಣಗಳು ಬರುತ್ತವೆ. ಅಲ್ಲಿ ಕೆಲವು ಗ್ಲಾಸ್ ವೈನ್ ಅಥವಾ ಇತರ ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ಸೇವಿಸುವ ಪ್ರಲೋಭನೆಯನ್ನು ವಿರೋಧಿಸುವುದು ಕಷ್ಟ. ಮಧುಮೇಹಿಗಳು ಆಲ್ಕೋಹಾಲ್ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಮಿತವಾಗಿ ಮಾಡಬೇಕು.

ಖಾಲಿ ಹೊಟ್ಟೆಗೆ ಲಿಕ್ಕರ್‌ ಸೇವನೆ ಸಲ್ಲದು. ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳು ಜೊತೆಗಿದ್ದರೆ ಮಿತಿಯಲ್ಲಿ ಲಿಕ್ಕರ್‌ ಸೇವಿಸಬಹುದು. ಕರಿದ, ಹುರಿದ, ಅತಿಯಾದ ಸಿಹಿತಿಂಡಿ ಇತ್ಯಾದಿ ಬೇಡ. ಪ್ರೋಟೀನ್-ಭರಿತ ಬೀಜಗಳು, ಹುರಿದ ಕಡಲೆ ಅಥವಾ ಸ್ವಲ್ಪ ಕಾಟೇಜ್ ಚೀಸ್ ಸೇವಿಸಬಹುದು.

ದೀಪಾವಳಿ ಪೂಜೆಗೆ ಏನು ಮಾಡಬೇಕು? ಏನು ಮಾಡಬಾರದು ಇಲ್ಲಿದೆ ನೋಡಿ...

3. ಸಕ್ಕರೆ ಮುಕ್ತವಾಗಿರಿ

ದೀಪಾವಳಿಯಲ್ಲಿ ಸಿಹಿತಿಂಡಿಗಳನ್ನು ಬಿಡುವುದು ತುಂಬಾ ಕಷ್ಟ. ಆದರೆ ಅದೃಷ್ಟವಶಾತ್ ದೀಪಾವಳಿಯಲ್ಲಿ ಮಧುಮೇಹಿಗಳ ಪ್ರಯೋಜನಕ್ಕಾಗಿ ಹಲವಾರು ಬ್ರಾಂಡ್‌ಗಳು ಮತ್ತು ಸಿಹಿ ಅಂಗಡಿಗಳು ಸಕ್ಕರೆ ಮುಕ್ತ ಭಾರತೀಯ ಸಿಹಿತಿಂಡಿಗಳನ್ನು ನೀಡಲು ಆರಂಭಿಸಿವೆ. ಉತ್ತಮ ಗುಣಮಟ್ಟದ ಸಕ್ಕರೆ ರಹಿತ ಸಿಹಿತಿಂಡಿಗಳಿಗೆ ಸಮಯ ಮೀಸಲಿಡಲು ಇದು ಸಹಾಯಕ.

4. ಸಾಧ್ಯವಾದಷ್ಟು ಆರೋಗ್ಯಕರ ದಿನಚರಿ

ಮಧುಮೇಹಿಗಳು ಆರೋಗ್ಯಕರ ದಿನಚರಿ, ನಿಗದಿತ ಊಟ ಮತ್ತು ಲಘು ಉಪಾಹಾರದ ಸಮಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಮಧುಮೇಹಿಗಳು ತಮ್ಮ ಆರೋಗ್ಯಕರ ದಿನಚರಿಗಳಿಗೆ ಸಾಧ್ಯವಾದಷ್ಟು ಅಂಟಿಕೊಳ್ಳಲು ಪ್ರಯತ್ನಿಸಬೇಕು. ದೀಪಾವಳಿಯ ಸಮಯದಲ್ಲಿ ನಿಮ್ಮ ನಿಯಮಿತ ಸಮಯದಲ್ಲಿ ತಿನ್ನಲು ಸಾಧ್ಯವಾಗದಿದ್ದರೆ, ನಿಮ್ಮ ಕ್ಯಾಲೊರಿಗಳ ಪ್ರಮಾಣವು ಹಬ್ಬದ ಪೂರ್ವದ ದಿನಗಳಂತೆಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಊಟವನ್ನು ತಿಂಡಿಗಳಾಗಿ ವಿಂಗಡಿಸಿ. ಮಧುಮೇಹಿಗಳು ತಮ್ಮ ದೈನಂದಿನ ವ್ಯಾಯಾಮವನ್ನು ಸಾಧ್ಯವಾದಾಗಲೆಲ್ಲಾ ಮಾಡುವುದರಿಂದ ಪ್ರಯೋಜನ ಪಡೆಯಬಹುದು.

Deepavaliಗೆ ಮನೆಯಲ್ಲೇ ಬಿಸ್ಕೆಟ್‌ನಿಂದ ತಯಾರಿಸಿ ಟೇಸ್ಟಿ ಗುಲಾಬ್ ಜಾಮೂನ್

5. ಆರೋಗ್ಯಕರ ಆಹಾರ ಆಯ್ಕೆ

ಮಧುಮೇಹದಿಂದ ಬಳಲುತ್ತಿರುವ, ಇನ್ಸುಲಿನ್ ಅವಲಂಬಿತ ಜನರು ದೀಪಾವಳಿಯ ಸಮಯದಲ್ಲಿ ತಮ್ಮ ಆಹಾರದ ಬಗ್ಗೆ ಹೆಚ್ಚಿನ ಜಾಗರೂಕರಾಗಿರಬೇಕು. ಹಬ್ಬದ ಯಾವುದೇ ದಿನದಂದು ಸಿಹಿತಿಂಡಿಗಳನ್ನು ಅತಿಯಾಗಿ ಸೇವಿಸುವುದು ಸರಿಯಲ್ಲ. ಇನ್ಸುಲಿನ್ ಅವಲಂಬಿತವಲ್ಲದ ಡಯಾಬಿಟಿಸ್‌ ಹೊಂದಿರುವವರು ಮಿತಿಯಲ್ಲಿ ಸಿಹಿತಿಂಡಿ ಸೇವಿಸಬಹುದು. ಮಧುಮೇಹಿಗಳು ಹಾಗೂ ಅಧಿಕ ರಕ್ತದೊತ್ತಡ ಹೊಂದಿರುವವರು ಆರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳಲೇಬೇಕು.

ಅಶ್ವಗಂಧದಿಂದ ಬ್ಲೂ ಬೆರ್ರಿವರೆಗೆ, 30 ವರ್ಷ ಕಳೆದ ಬಳಿಕ ಯಾವ ಆಹಾರ ಸೇವಿಸಬೇಕು

6. ಪರೀಕ್ಷೆ ಮಾಡಿಸಿಕೊಳ್ಳಿ

ಮಧುಮೇಹಿಗಳು ತಮ್ಮ ರೋಗಲಕ್ಷಣಗಳ ಬಗ್ಗೆ ಬಹಳ ಜಾಗೃತರಾಗಿರಬೇಕು. ಅವರ ದೇಹವು ಅವರಿಗೆ ಏನು ಹೇಳುತ್ತಿದೆ ಎಂಬುದನ್ನು ಕೇಳಬೇಕು. ಕಳೆದ ಎರಡು ಬಾರಿಯ ಪರೀಕ್ಷೆಯಲ್ಲಿ ನಿಮ್ಮ ದೇಹದ ಸಕ್ಕರೆ ಮತ್ತು ರಕ್ತದೊತ್ತಡ ಮಟ್ಟಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನೀವು ದೀಪಾವಳಿಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಬಹುದು.

Latest Videos
Follow Us:
Download App:
  • android
  • ios