Asianet Suvarna News Asianet Suvarna News

Exercise Tips: ಸಂಧಿನೋವಿದ್ಯಾ ? ವ್ಯಾಯಾಮ ಮಾಡುವಾಗ ಈ ತಪ್ಪು ಮಾಡ್ಲೇಬೇಡಿ

ಸಂಧಿನೋವು, ಗಂಟು ನೋವಿನ ಸಮಸ್ಯೆಯಿಂದ ಬಳಲ್ತಿದ್ದೀರಾ. ಜಾಯಿಂಟ್‌ ಪೈನ್‌ನಿಂದ ಆರೋಗ್ಯ (Health)  ಸಮಸ್ಯೆ ಹೆಚ್ಚಾಗ್ತಿದ್ಯಾ ? ಹಾಗಿದ್ರೆ ವ್ಯಾಯಮ (Exercise) ಮಾಡುವಾಗ ಈ ತಪ್ಪುಗಳನ್ನು ಮಾಡ್ಬೇಬೇಡಿ. ಇದ್ರಿಂದ ಜಾಯಿಂಟ್ ಪೈನ್ (Joint Pain) ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.

Exercise Mistakes That Make Your Joint Issues Worse
Author
Bengaluru, First Published Feb 19, 2022, 6:35 PM IST

ಜೀವನಶೈಲಿ (Lifestyle), ದೈಹಿಕ ಚಟುವಟಿಕೆಯ ಕೊರತೆ, ಅಗತ್ಯವಾದ ಪೋಷಕಾಂಶಗಳ ಕೊರತೆ ಹಲವಾರು ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ, ಕೀಲು ನೋವಿನ ಸಮಸ್ಯೆಯು ವಯಸ್ಸಾದವರಲ್ಲಿ ಮಾತ್ರವಲ್ಲ ಕಿರಿಯರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ.. ಯುವಜನರಲ್ಲಿ ಹೆಚ್ಚುತ್ತಿರುವ ಕೀಲು ನೋವಿನ ಸಮಸ್ಯೆಗೆ ಮುಖ್ಯ ಕಾರಣವೆಂದರೆ ವ್ಯಾಯಾಮ. ದೈಹಿಕವಾಗಿ ಸಕ್ರಿಯವಾಗಿರುವುದು ಮೂಳೆಗಳನ್ನು ಬಲಪಡಿಸುತ್ತದೆ. ಚಲನೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ವ್ಯಾಯಾಮವನ್ನು ತಪ್ಪಾಗಿ ಮಾಡಿದರೆ, ಜಾಯಿಂಟ್ ನೋವಿಗೆ ಕಾರಣವಾಗಬಹುದು ಅಥವಾ ಅವುಗಳನ್ನು ಇನ್ನಷ್ಟು ಹದಗೆಡಿಸಬಹುದು. ಹೀಗಾಗಿ ಸ್ನಾಯು ನೋವಿದ್ದರು ವ್ಯಾಯಾಮ (Exercise) ಮಾಡುವಾಗ ಇಂಥಹಾ ತಪ್ಪುಗಳನ್ನು ಮಾಡಲೇಬೇಡಿ.

ತೂಕ ಎತ್ತುವುದನ್ನು ತಪ್ಪಿಸುವುದು
ದೇಹದ ಸಂಪೂರ್ಣ ಆರೋಗ್ಯಕ್ಕೆ ಕಾರ್ಡಿಯೋ ವರ್ಕೌಟ್‌ (Workout)ನಂತೆ ತೂಕ ಎತ್ತುವ ಎಕ್ಸರ್ಸೈಸ್ ಅಗತ್ಯವಾಗಿದೆ. ತೂಕವನ್ನು ಎತ್ತುವುದನ್ನು ಶಕ್ತಿ ತರಬೇತಿ ಎಂದೂ ಕರೆಯುತ್ತಾರೆ. ಈ ವ್ಯಾಯಾಮ ಮೂಳೆಗಳನ್ನು ಬಲಪಡಿಸಲು ಮತ್ತು ನಿಮ್ಮ ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ರೀತಿಯ ವ್ಯಾಯಾಮವನ್ನು ಮಾಡುವುದನ್ನು ತಪ್ಪಿಸುವುದರಿಂದ ನೀವು ಸ್ನಾಯುವಿನ ಒತ್ತಡದ ಅಪಾಯವನ್ನು ಎದುರಿಸಬಹುದು. ಕಾರ್ಡಿಯೋ ವರ್ಕೌಟ್‌ ಕೀಲುಗಳನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ. ತೂಕ ಎತ್ತುವಿಕೆಯು ನಿಮ್ಮ ತಾಲೀಮು ಅವಧಿಯ ನಂತರ ಹೆಚ್ಚಿನ ಕ್ಯಾಲೊರಿ (Calorie)ಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.

Easy Exercise: ಬಾತ್ ಟವೆಲ್ ಬಳಸಿಯೂ ವ್ಯಾಯಾಮ ಮಾಡ್ಬೋದು

ವಾರ್ಮ್-ಅಪ್ ಮತ್ತು ಕೂಲ್-ಡೌನ್ ಸೆಷನ್‌ನಿಂದ ತಪ್ಪಿಸಿಕೊಳ್ಳಬೇಡಿ
ವ್ಯಾಯಾಮ ಮಾಡುವ ಸಂದರ್ಭದಲ್ಲಿ ಮುಖ್ಯವಾಗಿ ವಾರ್ಮ್-ಅಪ್ ಮತ್ತು ಕೂಲ್-ಡೌನ್ ಸೆಷನ್‌ನಿಂದ ತಪ್ಪಿಸಿಕೊಳ್ಳಬೇಡಿ. ಇದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ವಾರ್ಮಿಂಗ್ ಅಪ್ ಮತ್ತು ಕೂಲ್ ಡೌನ್ ನಿಮ್ಮ ದೇಹವನ್ನು ತೀವ್ರವಾದ ತಾಲೀಮು ಮಾಡಲು ಸಿದ್ಧಗೊಳಿಸಲು ಸಹಾಯ ಮಾಡುತ್ತದೆ. ಇದು ಕೈ, ಕಾಲು, ಸ್ನಾಯುಗಳು, ಕೀಲುಗಳು ಅತಿಯಾಗಿ ಆಯಾಸಗೊಳಿಸದಂತೆ ತಡೆಯುತ್ತದೆ. ವಾರ್ಮ್-ಅಪ್ ಮತ್ತು ಕೂಲ್-ಡೌನ್ ಸೆಷನ್‌ನಿಂದ ತಪ್ಪಿಸಿಕೊಂಡಾಗ ಮೂಳೆಗಳು ಮತ್ತು ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಪರಿಣಾಮವಾಗಿ ವ್ಯಾಯಾಮ ದೇಹದ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ನೋವುಂಟು ಮಾಡುತ್ತದೆ.

ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಿ
ನಿರ್ದಿಷ್ಟ ವ್ಯಾಯಾಮವನ್ನು ಮಾತ್ರ ನಿರ್ವಹಿಸುವುದರಿಂದ ನಿಮ್ಮ ವ್ಯಾಯಾಮದ ಅವಧಿಯಿಂದ ಯಾವುದೇ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಕೀಲುಗಳು ಮತ್ತು ಸ್ನಾಯುಗಳನ್ನು ಗಾಯದ ಅಪಾಯಕ್ಕೆ ಒಳಪಡಿಸದೆ, ಅದರ ಪ್ರಯೋಜನಗಳನ್ನು ಪಡೆಯಲು ನೀವು ಪ್ರತಿ ವ್ಯಾಯಾಮವನ್ನು ಸರಿಯಾಗಿ ನಿರ್ವಹಿಸಬೇಕು. ಯಾವುದೇ ವ್ಯಾಯಾಮವನ್ನು ತಪ್ಪಾಗಿ ನಿರ್ವಹಿಸುವುದು ನಿರ್ದಿಷ್ಟ ವ್ಯಾಯಾಮದ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ನೀವು ವ್ಯಾಯಾಮವನ್ನು ಸರಿಯಾಗಿ ನಿರ್ವಹಿಸದಿದ್ದರೆ ವ್ಯಾಯಾಮ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.

Exercise Tips: ದಿನಕ್ಕೆ ಜಸ್ಟ್ ಮೂರು ಸೆಕೆಂಡ್ ವ್ಯಾಯಾಮ ಮಾಡಿದರೂ ಸಾಕು !

ವಿಶ್ರಾಂತಿ ಹಂತವನ್ನು ನಿರ್ಲಕ್ಷಿಸುವುದು
ವ್ಯಾಯಾಮ ಮಾಡುವಾಗ ವಿಶ್ರಾಂತಿಯ ಸಮಯವನ್ನು ನಿರ್ಲಕ್ಷಿಸುವುದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸತತವಾದ, ಸುದೀರ್ಘವಾದ ವ್ಯಾಯಾಮಯ ಕೀಲುಗಳ ಮೇಲೆ ಹೆಚ್ಚು ಒತ್ತಡ (Pressure)ವನ್ನು ಉಂಟುಮಾಡಬಹುದು ಮತ್ತು ನಿಮ್ಮ ನರಮಂಡಲದ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಹೀಗಾಗಿ ವ್ಯಾಯಾಮದ ಮಧ್ಯೆ ಪುಟ್ಟ ವಿಶ್ರಾಂತಿಯ ಹಂತವನ್ನು ನಿರ್ಲಕ್ಷಿಸಬೇಡಿ. ವ್ಯಾಯಾಮದ ಅವಧಿಯ ನಡುವೆ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಮೂಳೆಗಳು ಮತ್ತು ಸ್ನಾಯುಗಳ ಸವೆತದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ನೀವು ಒಂದು ಗಂಟೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ, ಪ್ರತಿ ವಾರ 1-2 ದಿನಗಳ ಕಾಲ ವಿಶ್ರಾಂತಿ ಪಡೆಯಿರಿ.

ಹಳೆಯ ಶೂ ಧರಿಸುವುದು
ವ್ಯಾಯಾಮವನ್ನು ಮಾಡುವಾಗ ಸರಿಯಾದ ಶೂಗಳನ್ನು ಧರಿಸಬೇಕಾದುದು ಅತೀ ಅಗತ್ಯ. ಕಾಲು ನೋವು, ಪಾದದ ಉಳುಕಿನ ಅಪಾಯವನ್ನು ಕಡಿಮೆ ಮಾಡಲು ಸರಿಯಾದ ಬೂಟುಗಳನ್ನು ಧರಿಸಬೇಕು. ಬೂಟುಗಳು ಹಳೆಯದಾಗಿರಬಾರದು ಅಥವಾ ಸವೆದು ಹೋಗಿರುವದ್ದು ಆಗಿರಬಾರದು. ಇದರಿಂದ ಕಾಲು ನೋವು, ಸ್ನಾಯು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೃದುವಾದ ಮತ್ತು ಆರಾಮದಾಯಕ ಬೂಟುಗಳು ಸ್ನಾಯು ನೋವನ್ನು ತಪ್ಪಿಸುತ್ತದೆ.

Follow Us:
Download App:
  • android
  • ios