ಕುಳಿತೇ ಕೆಲಸ ಮಾಡೋರು ನೀವಾಗಿದ್ರೆ ಸಾವಿನಿಂದ ಹೀಗೆ ದೂರವಿರಿ…
ಸಾವು ಹಾಗೂ ನಾವು ಮಾಡುವ ಕೆಲಸ ಎರಡಕ್ಕೂ ಸಂಬಂಧವಿದೆ. ಕೆಲವೊಮ್ಮೆ ನಮ್ಮ ಸಾವನ್ನು ನಾವೇ ಬೇಗ ತಂದುಕೊಳ್ತೇವೆ. ನಮ್ಮ ಆರೋಗ್ಯ ಚೆನ್ನಾಗಿರಬೇಕು, ಸಾವು ಹತ್ತಿರ ಬರ್ಬಾರದು ಅಂದ್ರೆ ಕೆಲ ಒಂದೇ ಒಂದು ನಿಯಮ ಪಾಲಿಸ್ಬೇಕು.
ಸಾವು ಹಾಗೂ ಕೆಲಸ ಎರಡಕ್ಕೂ ಸಂಬಂಧವಿದ್ಯಾ ಎನ್ನುವ ಬಗ್ಗೆ ಈಗಾಗಲೇ ಅನೇಕ ಸಂಶೋಧನೆಗಳು, ಸಮೀಕ್ಷೆ, ಅಧ್ಯಯನ ನಡೆದಿದೆ. ಒಬ್ಬ ವ್ಯಕ್ತಿ ದೈಹಿಕವಾಗಿ ಚಟುವಟಿಕೆಯಿಂದ ಇದ್ದಲ್ಲಿ ಆತನ ಜೀವಿತಾವಧಿ ಹೆಚ್ಚು ಎಂಬುದು ಪದೇ ಪದೇ ಸಾಭಿತಾಗ್ತಿದೆ. ದಿನದಲ್ಲಿ ನೀವು ಒಂದು ಗಂಟೆ ದೈಹಿಕ ಚಟುವಟಿಕೆ ನಡೆಸಬೇಕಾಗಿಲ್ಲ, ಕೆಲವೇ ಕೆಲವು ನಿಮಿಷ ನೀವು ನಿಮ್ಮ ಸಮಯವನ್ನು ದೈಹಿಕ ಚಟುವಟಿಕೆಗೆ ಮೀಸಲಿಟ್ಟರೆ ಸಾಕಾಗುತ್ತದೆ. ಇದ್ರಿಂದ ನಿಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದು. ಈಗ ಹೊಸ ಸಂಶೋಧನೆ ಕೂಡ ಇದನ್ನೇ ಹೇಳಿದೆ.
ಇಡೀ ದಿನ ಒತ್ತಡ (Pressure) ದ ಜೀವನ ನಡೆಸುವ ಜನರು, ದೈಹಿಕ ವ್ಯಾಯಾಮ ಮಾಡಲು ಸಮಯವಿಲ್ಲ ಎನ್ನುತ್ತಾರೆ. ವ್ಯಾಯಾಮ (Exercise), ಯೋಗ, ವಾಕಿಂಗ್, ಸೈಕ್ಲಿಂಗ್ ಸೇರಿದಂತೆ ದೇಹಕ್ಕೆ ಶ್ರಮ ನೀಡುವ ಯಾವುದೇ ಚಟುವಟಿಕೆಯಲ್ಲಿ ತೊಡಗುವುದಿಲ್ಲ. ಇದನ್ನು ಜಡ ಜೀವನಶೈಲಿ ಎನ್ನಲಾಗುತ್ತದೆ. ಈ ಜಡ ಜೀವನಶೈಲಿ (Lifestyle) ಯಿಂದ ಸಾವು ಬಹುಬೇಗ ನಮ್ಮ ಬಳಿ ಬರುತ್ತದೆ.
ಕಪ್ಪು ಒಣದ್ರಾಕ್ಷಿ ನೀರು ಸೇವಿಸಿದ್ರೆ ಗರ್ಭಧಾರಣೆ ಸುಲಭ, ಲೈಂಗಿಕ ಆರೋಗ್ಯಕ್ಕೂ ಬೆಸ್ಟ್ ಮದ್ದು!
ನಾರ್ವೆಯ ಟ್ರೋಮ್ಸೋ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಸಂಶೋಧನೆ ವರದಿ ಪ್ರಕಟವಾಗಿದೆ. ಇದರ ಪ್ರಕಾರ, ಜಡ ಜೀವನಶೈಲಿಯಿಂದ ಸಾವು ಬೇಗ ಬರುತ್ತದೆ. ಈ ಜಡ ಜೀವನಶೈಲಿಯ ಅಪಾಯವನ್ನು ನೀವು ಕಡಿಮೆ ಮಾಡ್ಬೇಕೆಂದ್ರೆ ಪ್ರತಿದಿನ ಕೇವಲ 20-25 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ನಡೆಸಿದ್ರೆ ಸಾಕು ಎಂದು ಸಂಶೋಧನೆ ಹೇಳಿದೆ.
ಈಗಿನ ದಿನಗಳಲ್ಲಿ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಅನೇಕರು ದಿನದಲ್ಲಿ ಹತ್ತು ಗಂಟೆಗೂ ಹೆಚ್ಚು ಕಾಲ ಕಂಪ್ಯೂಟರ್ ಮುಂದಿರುತ್ತಾರೆ. ಮತ್ತೆ ಕೆಲವರು ಜಡ ಜೀವನಶೈಲಿಯನ್ನು ಹೊಂದಿರುತ್ತಾರೆ. ಕೆಲಸ ಯಾವುದೇ ಇರಲಿ, ದಿನದಲ್ಲಿ ಬಹುತೇಕ ಸಮಯವನ್ನು ಕುಳಿತು ಕಳೆಯುತ್ತಾರೆ. ಟಿವಿ ವೀಕ್ಷಣೆ, ಮೊಬೈಲ್ ಗೇಮ್, ಸಾಮಾಜಿಕ ಜಾಲತಾಣ ವೀಕ್ಷಣೆ ಹೀಗೆ ಒಂದೇ ಸ್ಥಳದಲ್ಲಿ ಕುಳಿತು ಅವರು ಅನೇಕ ಗಂಟೆಗಳನ್ನು ಕಳೆದಿರುತ್ತಾರೆ. ಕುಳಿತುಕೊಳ್ಳುವುದು ಅನಿವಾರ್ಯವಾದಲ್ಲಿ ನೀವು ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ದಿನದಲ್ಲಿ ನಿಮಗಾಗಿ ೨೦ – ೨೫ ನಿಮಿಷ ಮೀಸಲಿಟ್ಟರೂ ಸಾಕು ಎನ್ನುತ್ತದೆ ಸಂಶೋಧನೆ. ಈ ಸಮಯದಲ್ಲಿ ನಿಮ್ಮ ದೇಹಕ್ಕೆ ದೈಹಿಕ ವ್ಯಾಯಾಮ ನೀಡಿದ್ರೆ ಸಾವಿನ ದಿನಾಂಕವನ್ನು ನೀವು ಮುಂದೂಡಬಹುದು. ದಿನಕ್ಕೆ 22 ನಿಮಿಷಗಳಿಗಿಂತ ಹೆಚ್ಚು ಮಧ್ಯಮ ಮತ್ತು ತೀವ್ರವಾದ ದೈಹಿಕ ಚಟುವಟಿಕೆ ಮಾಡಿದ್ರೆ ಲಾಭ ಮತ್ತಷ್ಟು ಹೆಚ್ಚು.
ಖಾಲಿ ಹೊಟ್ಟೇಲಿ ಹಸಿ ತೆಂಗಿನಕಾಯಿ ತುರಿ ತಿಂದ್ರೆ ಇಷ್ಟೆಲ್ಲಾ ಲಾಭ ಉಂಟಂತೆ!
ದೈಹಿಕ ಚಟುವಟಿಕೆಯು ಸಾವಿನ ನಡುವಿನ ಸಂಬಂಧವನ್ನು ಬದಲಿಸುತ್ತದೆಯೇ ಎಂದು ಕಂಡು ಹಿಡಿಯಲು ಸಂಶೋಧಕರು ನಾಲ್ಕು ಗುಂಪಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡಿದ್ದಾರೆ. 12 ಗಂಟೆಗಿಂತ ಹೆಚ್ಚು ಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವ ಜನರು 8 ಗಂಟೆಗಿಂತ ಕಡಿಮೆ ಸಮಯ ಕುಳಿತು ಕೆಲಸ ಮಾಡುವವರಿಗಿಂತ ಶೇಕಡಾ 38 ಪಟ್ಟು ಸಾವಿನ ಅಪಾಯ ಹೊಂದಿರುತ್ತಾರೆಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಆದ್ರೆ ೧೨ ಗಂಟೆ ಕೆಲಸ ಮಾಡುವವರು ಎಷ್ಟು ಸಮಯವನ್ನು ದೈಹಿಕ ಚಟುವಟಿಕೆಗೆ ಮೀಸಲಿಡ್ತಾರೆ ಎಂಬುದು ಕೂಡ ಮುಖ್ಯವೆಂದು ಸಂಶೋಧನೆ ಹೇಳಿದೆ. ದಿನದಲ್ಲಿ ೨೦ -೨೫ ನಿಮಿಷ ದೈಹಿಕ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರಲ್ಲಿ ಸಾವಿನ ಅಪಾಯ ಕಡಿಮೆ ಇರುತ್ತದೆ ಎಂದು ಸಂಶೋಧನೆ ಹೇಳಿದೆ.
ಕುಳಿತುಕೊಳ್ಳುವ ಪ್ರಮಾಣ ಎಷ್ಟೇ ಇರಲಿ, ದೈಹಿಕ ಚಟುವಟಿಕೆಗೆ ಆದ್ಯತೆ ನೀಡೋದು ಮುಖ್ಯ ಎಂಬುದನ್ನು ಸಂಶೋಧನೆ ಹೇಳಿದೆ. ಕಡಿಮೆ ದೈಹಿಕ ಚಟುವಟಿಕೆಯು ಮರಣದ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿ ತಂತ್ರವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.