Asianet Suvarna News Asianet Suvarna News

Health Tips: ಖಾಸಗಿ ಅಂಗದ ಕೂದಲು ಬಿಳಿಯಾಗಲು ಕಾರಣವೇನು?

ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತದೆ. ಜನರು ಆತಂಕಕ್ಕೊಳಗಾಗದೆ ಅದನ್ನು ಸ್ವೀಕರಿಸಬೇಕು. ಪ್ಯುಬಿಕ್ ಕೂದಲು ಬಿಳಿಯಾಗುವುದು ಕೂಡ ಒಂದು ಸಾಮಾನ್ಯ ಸಂಗತಿ. ಇದಕ್ಕೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ.
 

Everything You Ever Wanted Know About Your Pubic Hair
Author
First Published Sep 21, 2022, 5:53 PM IST

ತಲೆಯ ಮೇಲೆ ಬಿಳಿ ಕೂದಲು ಕಾಣಿಸಿಕೊಂಡ ತಕ್ಷಣ ಟೆನ್ಷನ್ ಜಾಸ್ತಿಯಾಗುತ್ತದೆ. ಕೂದಲು ಕಪ್ಪಗಾಗಲು ಏನ್ ಮಾಡ್ಬೇಕು ಅಂತಾ ಜನರು ಚಿಂತಿಸಲು ಶುರು ಮಾಡ್ತಾರೆ. ಬಣ್ಣ ಕಪ್ಪು ಮಾಡಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ತಲೆ ಕೂದಲು ಬೆಳ್ಳಗಾಗಲು ಅನೇಕ ಕಾರಣವಿದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಕಪ್ಪಗಿರುವ ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಹಾಗೆಯೇ ದಪ್ಪಗಿರುವ ಕೂದಲು ತೆಳ್ಳಗಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಪ್ಯುಬಿಕ್ ಕೂದಲು ಬೆಳ್ಳಗಾಗುವುದು ಸಹಜ. ಪ್ಯುಬಿಕ್ ಕೂದಲು ಬೆಳ್ಳಗಾಗ್ತಿದ್ದಂತೆ ಅನೇಕರು ಆಘಾತಕ್ಕೊಳಗಾಗ್ತಾರೆ. 

ಒಂದು ದಿನ ರೂಬಿಗೆ ಪ್ಯುಬಿಕ್ (Pubic) ಕೂದಲ ಬಣ್ಣ ಬದಲಾಗಿದ್ದು ತಿಳಿಯಿತು. ಆತಂಕಗೊಂಡ ಆಕೆ ವೈದ್ಯ (Doctor) ರ ಬಳಿ ಓಡಿದ್ದಳು. ಆದ್ರೆ ವೈದ್ಯರು ಇದಕ್ಕೆ ಆತಂಕಪಡುವ ಅಗತ್ಯವಿಲ್ಲವೆಂದ್ರು. ಕೂದಲು ಬಿಳಿಯಾಗುವುದು ಸಹಜವೆಂದಾಗ ರೂಬಿ ರಿಲ್ಯಾಕ್ಸ್ ಆದ್ಲು.  

ವೈದ್ಯರು ಹೇಳುವಂತೆ, ಪ್ಯುಬಿಕ್ ಕೂದಲು (Hair) ಬೆಳ್ಳಗಾಗ್ತಿದ್ರೆ ಗಾಬರಿಯಾಗುವ ಅಗತ್ಯವಿಲ್ಲ. ಪ್ಯುಬಿಕ್ ಕೂದಲು ಬಿಳಿಯಾಗುವುದು ತಲೆ ಕೂದಲು ಬಿಳಿಯಾದಂತೆ ಸಾಮಾನ್ಯ ಸಂಗತಿ. ಪ್ಯುಬಿಕ್ ಕೂದಲು ವೇಗವಾಗಿ ಬಿಳಿಯಾಗುತ್ತಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.  

ಪ್ಯುಬಿಕ್ ಕೂದಲು ಬಳಿಯಾಗಲು ಅನೇಕ ಕಾರಣವಿದೆ. ಅನಿಯಮಿತ ಆಹಾರ ಪದ್ಧತಿ ಮತ್ತು ಒತ್ತಡದಿಂದಾಗಿ ತಲೆಯ ಕೂದಲು ಬಿಳಿ ಮತ್ತು ತೆಳ್ಳಗಾಗಲು ಪ್ರಾರಂಭಿಸುತ್ತದೆ. ಅದೇ ರೀತಿ ಪ್ಯುಬಿಕ್ ಕೂದಲು ಕೂಡ ಬಿಳಿ ಮತ್ತು ತೆಳ್ಳಗಾಗಲು ಪ್ರಾರಂಭಿಸುತ್ತದೆ. ಹಾಗೆಯೇ ವಯಸ್ಸು ಹೆಚ್ಚಾಗ್ತಿದ್ದಂತೆ ಪ್ಯುಬಿಕ್ ಕೂದಲು ತೆಳ್ಳಗೆ ಮತ್ತು ಬೆಳ್ಳಗಾಗಲು ಶುರುವಾಗುತ್ತದೆ.  

ಬಿಳಿ ಕೂದಲು ಕಾಣಿಸಿಕೊಳ್ತಿದ್ದಂತೆ ಅದನ್ನು ತೆಗೆದು ಹಾಕುವ ನಿರ್ಧಾರಕ್ಕೆ ಬರಬೇಡಿ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿ. ನಾವಿಂದು ಪ್ಯುಬಿಕ್ ಕೂದಲು ಬಿಳಿಯಾಗಲು ಕಾರಣವೇನು ಎಂಬುದನ್ನು ಹೇಳ್ತೇವೆ.  

ಪ್ಯುಬಿಕ್ ಕೂದಲು ಬೆಳ್ಳಗಾಗಲು ಕಾರಣ : 

ಅನಿಯಮಿತ ಆಹಾರ ಪದ್ಧತಿ : ಪ್ಯುಬಿಕ್ ಕೂದಲು ಕೆಲವೊಮ್ಮೆ ಅನಿಯಮಿತ ಆಹಾರ ಪದ್ಧತಿಯಿಂದ ಬೆಳ್ಳಗೆ, ತೆಳ್ಳಗಾಗಲು ಶುರುವಾಗುತ್ತದೆ.  ಜೀನ್ಸ್ ಸಮಸ್ಯೆಯಿಂದ ಪ್ಯುಬಿಕ್ ಕೂದಲು ಬೆಳ್ಳಗಾಗುತ್ತದೆ. 

ವಿಟಮಿನ್ ಸಮಸ್ಯೆ : ಮೊದಲೇ ಹೇಳಿದಂತೆ ಪ್ಯುಬಿಕ್ ಕೂದಲು ಬೆಳ್ಳಗಾಗಲು ಅನೇಕ ಕಾರಣವಿದೆ. ಅದ್ರಲ್ಲಿ ವಿಟಮಿನ್ ಕೊರತೆ ಕೂಡ ಒಂದು. ವಿಟಮಿನ್ ಬಿ 12 ಮತ್ತು ಥೈರಾಯ್ಡ್ ಗ್ರಂಥಿಯ ಅಸ್ವಸ್ಥತೆ ಕೂಡ ಪ್ಯುಬಿಕ್ ಕೂದಲು ಬಿಳಿಯಾಗಲು ಕಾರಣ. ಕೆಲವು ಬಾರಿ ವಿಟಲಿಗೊ ಖಾಯಿಲೆ ಕೂಡ ಇದಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳ್ತಾರೆ. ಬಿಳಿ ಪ್ಯಾಚಸ್ ಅದ್ರ ಮೇಲೆ ಕಾಣಿಸಿಕೊಳ್ಳುವ ಕಾರಣ ಪ್ಯುಬಿಕ್ ಕೂದಲು ಬೆಳ್ಳಗಾಗುತ್ತದೆ. ಇದ್ರ ಬಗ್ಗೆ ಅನೇಕ ಸಂಶೋಧನೆ ಕೂಡ ನಡೆದಿದೆ. 

ಆನುವಂಶಿಕತೆ : ಅನೇಕ ಬಾರಿ ಆನುವಂಶೀಯತೆಯಿಂದಾಗಿ ಪ್ಯುಬಿಕ್ ಕೂದಲಿನ ಬಣ್ಣ ಬದಲಾಗುತ್ತದೆ. 

10 ವರ್ಷ ಚಿಕ್ಕವರಾಗಿ ಕಾಣ್ಬೇಕೆಂದ್ರೆ ವಾರಕ್ಕೊಮ್ಮೆ ಊಟ ಬಿಡಿ

ವಯಸ್ಸು : ವಯಸ್ಸು ಹೆಚ್ಚಾಗ್ತಿದ್ದಂತೆ  ಪ್ಯುಬಿಕ್ ಕೂದಲಿನ ಬಣ್ಣ ಬಿಳಿಯಾಗಲು ಶುರುವಾಗುತ್ತದೆ. ವಯಸ್ಸಾದಂತೆ ಮೆಲನಿನ್ ಉತ್ಪಾದನೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕೂದಲನ್ನು ಕಪ್ಪಾಗಿಸುವ ಕೆಲಸವನ್ನು ಮೆಲನಿನ್ ಮಾಡುತ್ತದೆ. ಆದ್ರೆ ಮೆಲನಿನ್ ಉತ್ಪಾದನೆ ಕಡಿಮೆಯಾದಂತೆ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ.

ಬಿಳಿ ಅಥವಾ ಪಿಂಕ್‌ ಪೇರಳೆ, ಆರೋಗ್ಯಕ್ಕೆ ಯಾವುದು ಬೆಸ್ಟ್‌?

ಪ್ಯುಬಿಕ್ ಕೂದಲು ಬೆಳ್ಳಗಾಗುವುದನ್ನು ತಡೆಯೋದು ಹೇಗೆ? : ಕೂದಲು ಬೆಳ್ಳಗಾಗುವುದು ಜೆನೆಟಿಕ್ ಆಗಿದ್ದರೆ ಅದನ್ನು ತಡೆಯುವುದು ಕಷ್ಟ. ಆದ್ರೆ ಕೆಲ ವಿಧಾನದ ಮೂಲಕ ಅದನ್ನು ತಡೆಯುವ ಪ್ರಯತ್ನ ನಡೆಸಬಹುದು. ಧೂಮಪಾನವನ್ನು ನಿಲ್ಲಿಸಬೇಕು. ಧೂಮಪಾನಿಗಳಲ್ಲಿ ಕೂದಲು ಬೆಳ್ಳಗಾಗುವ ಸಮಸ್ಯೆ ಹೆಚ್ಚು. ಹಾಗೆಯೇ ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕು. ವಿಟಮಿನ್ ಬಿ 12 ಹೆಚ್ಚಿರುವ ಆಹಾರ ಸೇವನೆ ಮಾಡುವ ಮೂಲಕ ಪ್ಯುಬಿಕ್ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

Follow Us:
Download App:
  • android
  • ios