ವಾಕಿಂಗ್ ಗೊತ್ತು, ಇನ್ಫಿನಿಟಿ ವಾಕಿಂಗ್ ಇನ್ನೂ ಒಳ್ಳೇದಂತೆ !

ಇತ್ತೀಚೆಗೆ ಬಹುತೇಕ ಜನ ಆರೋಗ್ಯ(Health) ಕಾಪಾಡಿಕೊಳ್ಳಲು ಮತ್ತೆ ಹಿಂದಿನ ಪದ್ಧತಿಗೆ ಜಾರುತ್ತಿದ್ದಾರೆ. ಅದು ಸೈಕ್ಲಿಂಗ್ (Cycling), ವಾಕಿಂಗ್ (Waking), ಯೋಗ (Yoga) ಯಾವುದೇ ಇರಲಿ ಮತ್ತೆ ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. ಇದರಿಂದ ಹಲವು ಖಾಯಿಲೆಗಳಿಗೆ ಪ್ರಭಾವಬೀರಿದಲ್ಲದೆ ಪರಿಣಾಮಕಾರಿಯಾಗಿ ಕೆಲಸವೂ ಮಾಡಿವೆ. ಅದರಲ್ಲಿ ಒಂದು ಈ ಸಿದ್ಧ ನಡಿಗೆ (Siddha walk). ಇದ್ನು ಇಂಗ್ಲಿಷ್‌ನಲ್ಲಿ ಇನ್ಫಿನಿಟಿ ವಾಕ್ (Infinity walk) ಅಥವಾ 8 ವಾಕ್(Eight Walk) ಎಂದು ಕರೆಯುತ್ತಾರೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ.

8 Shape may change your Health Problems

ಬೆಳಗ್ಗೆ(Morning) ಸಂಜೆ(Evening) ಎಲ್ಲರೂ ವಾಕಿಂಗ್(Walking) ಮಾಡ್ತಾರೆ. ಆದರೆ ವಾಕಿಂಗ್ ಮಾಡುವುದರಲ್ಲೂ ಥೆರಪಿಗಳಿವೆ(Therapy). ನಿರ್ದಿಷ್ಟವಾಗಿ 8ರ ಆಕಾರದಲ್ಲಿ ವಾಕಿಂಗ್ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.ಎಂಟರ ನಡಿಗೆ ಇದಕ್ಕೆ ಇಂಗ್ಲಿಷ್‌ನಲ್ಲಿ ಇನ್ಫಿನಿಟಿ ವಾಕ್(Infinity Walk) ಎಂದು ಕರೆಯುತ್ತಾರೆ. ಡಾ. ಡೆಬೊರಾ ಸುಂಡ್‌ಬೆಕ್(Dr. Deborah Sunbeck) ಮಕ್ಕಳು(Children) ಮತ್ತು ವಯಸ್ಕರಿಗೆ(Elders) ಸರಳವಾಗಿ 8 ಆಕಾರದಲ್ಲಿ ನಡೆಯುವುದನ್ನು ಪರಿಚಯಿಸಿದರು. ಹೀಗೆ ವಾಕ್ ಮಾಡುವ ಮೂಲಕ ಕಲಿಕೆ ಹೆಚ್ಚಿಸಲು ಮತ್ತು ವೇಗಗೊಳಿಸಲು ಈ ವ್ಯಾಯಾಮ ರಚಿಸಲಾಗಿದೆ. ಹೀಗೆ ಮಾಡುವುದರಿಂದ ಮಿದುಳಿನ(Mind) ಎರಡೂ ಕಡೆ ಚಟುವಟಿಕೆಗಳ ಕಾರ್ಯ ಹೆಚ್ಚಾಗುತ್ತದೆ. 

ಐತಿಹಾಸಿಕ ಹಿನ್ನಲೆಯಿದೆ
ಇನ್ಫಿನಿಟಿ ವಾಕ್ ಎಂಬುದು ಹಿಂದಿನಿAದಲೂ ಯೋಗಿಗಳು(Yogi's) ನಡೆಸಿಕೊಂಡು ಬಂದ ವಿಧಾನವಾಗಿದೆ. ಅವರು ಇದಕ್ಕೆ ಸಿದ್ಧ ನಡಿಗೆ(Siddha walk) ಎಂದು ಕರೆಯುತ್ತಿದ್ದರು. ಹಿಮಾಲಯದ(Himalaya) ತಮ್ಮೊಳಗಿನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಈ ವಿಧಾನವನ್ನು ಅಳವಡಿಸಿಕೊಂಡಿದ್ದರು.  ಇದು ಕೇವಲ ಆರೋಗ್ಯ ಸುಧಾರಿಸುವುದದಲ್ಲದೆ ದೇಹದಲ್ಲಿ ಹೊಸ ಚೈತನ್ಯ ತುಂಬುತ್ತದೆ. ವಿಟಮಿನ್ ಡಿ(Vitamin D) ಕೊರತೆ ಇರುವವರು ಈ ಸಿದ್ಧ ನಡಿಗೆಯನ್ನು ಬೆಳಗಿನ ಜಾವದಲ್ಲಿ ಪಟ್ಟುಬಿಡದೆ ಮಾಡಿದಲ್ಲಿ ಉತ್ತಮ ಫಲಿತಾಂಶ(Result) ಸಿಗುತ್ತದೆ.

ನಿಯಮವಿದೆ
ಇನ್ಫಿನಿಟಿ ವಾಕ್ ಎಂದರೆ ಅದು 8ರ ಆಕಾರ ಎಂದು. ಈ 8ನ್ನು ಬರೆಯಲು ಕೆಲ ನಿಯಮವಿದೆ. 
1. ಒಂದು ಟೇಪ್(Tape) ತೆಗೆದುಕೊಂಡು ಉತ್ತರ(North) ದಕ್ಷಿಣವನ್ನು(South) 6ಅಡಿ ಉದ್ದದಲ್ಲಿ 8 ಆಕಾರ ಬರುವಂತೆ ಎರಡು ಸರ್ಕಲ್ ಬಿಡಿಸಿಕೊಳ್ಳಿ. 
2. ಮನೆಯ ಹಾಲ್‌ನಲ್ಲಿ ಮಾಡುವುದಾದರೆ 3 ಅಡಿ ಅಂತರದಲ್ಲಿ ಎರಡು ಚೇರ್‌ಗಳನ್ನು(Chair) ಇರಿಸಿಕೊಂಡು ಅವುಗಳ ನಡುವೆ ವಾಕ್ ಮಾಡಬಹುದು.
3. ಬೆಳಗ್ಗೆ(Morning) ಅಥವಾ ಸಂಜೆ(Evening) 5-6 ವಾಕ್ ಮಾಡಲು ಸೂಕ್ತ ಸಮಯ. ಈ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ(Empty Stomach) ಹಾಗೂ ನಾರ್ಮಲ್(Normal) ಆಗಿ ನಡೆಯುವುದು ಒಳ್ಳೆಯದು.
4. ಇನ್ಫಿನಿಟಿ ವಾಕ್ ಬಗ್ಗೆ ಉತ್ತಮ ಫಲಿತಾಂಶ ಪಡೆಯಬೇಕೆಂದಲ್ಲಿ ಬರಿಗಾಲಿನಲ್ಲಿ(Bare foot) ನಡೆಯುವುದು ಬಹಳ ಒಳ್ಳೆಯದು. 

ವಾಕಿಂಗ್ ಮಾಡ್ತಿರೇನೋ ನಿಜ, ಆದ್ರೆ ಸರಿಯಾದ ರೀತಿಯಲ್ಲಿ ಮಾಡ್ತಿದ್ದೀರಾ ? ಇಲ್ಲಾಂದ್ರೆ ನೋ ಯೂಸ್ !

ಪ್ರಯೋಜನಗಳು
8 ಆಕಾರದಲ್ಲಿ ನಡೆಯುವುದರಿಂದ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇದರಿಂದ ನರ ದೌರ್ಬಲ್ಯ(Nervous Problem) ಕಡಿಮೆಯಾಗುವುದರ ಜೊತೆಗೆ ಕೈ(Hand), ಕಾಲು(leg), ಭುಜ(Shoulder) ಗಟ್ಟಿಗೊಳಿಸುತ್ತದೆ. ಅರ್ಥರಿಟಿಸ್‌(Arthiries) ನಂತಹ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಎಂಟರ ಆಕಾರದಲ್ಲಿ ನಡೆದರೆ ಮೂಗು ಕಟ್ಟುವುದು(Nose block), ಸೀನು ಕಡಿಮೆ ಮಾಡಿ ಉಸಿರಾಟ(Respiratory) ಸುಗಮಗೊಳಿಸುತ್ತದೆ. ಗರ್ಭಿಣಿಯರಿಗೆ ವಾಕಿಂಗ್ ಮಾಡಲು ಹೇಳಲಾಗುತ್ತದೆ. ಅವರು ಈ ನಡಿಗೆ ಮಾಡಿದಲ್ಲಿ ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯದಿಂದಿರುವರು. ಆಲೋಚನ ಶಕ್ತಿಯನ್ನು(Thinking capacity) ಹೆಚ್ಚಿಸುವ ಈ ನಡಿಗೆ ಧನಾತ್ಮಕ(Positive) ಚಿಂತನೆಗೆ ದಾರಿ ಮಾಡಿಕೊಡುತ್ತದೆ.
1. ಇನ್ಫಿನಿಟಿ ವಾಕ್ ಮಾಡುವಾಗ 8 ಸಂಖ್ಯೆ ಮೇಲೆ ಕೇಂದ್ರೀಕರಿಸುವುದರಿAದ ನಮ್ಮಲ್ಲಿ ಏಕಾಗ್ರತೆ(Concentration) ಹೆಚ್ಚಿಸುತ್ತದೆ.
2. ಬರಿಗಾಲಿನಲ್ಲಿ(Barefoot) ನಡೆಯುವುದರಿಂದ ಕಾಲಿನಲ್ಲಿ ಅಕ್ಯುಪ್ರಶರ್(Acque pressure) ಹೆಚ್ಚಿಸುತ್ತದೆ.
3. 8ರ ಆಕಾರದಲ್ಲಿ ನಡೆಯುವುದರಿಂದ ನಮ್ಮ ದೇಹ ತಿರುಗುತ್ತದೆ(Turns) ಹಾಗೂ ಟ್ವಿಸ್ಟ್(Twist) ಆಗುತ್ತದೆ. ಹಾಗಾಗಿ ಪೂರ್ಣ ಶರೀರಕ್ಕೆ ಇದರ ಉಪಯೋಗವಾಗುತ್ತದೆ.
4. ಕಣ್ಣು(Eye) ಹಾಗೂ ಕೈ(Hand) ಎರಡರ ಸಮನ್ವಯ ಹೆಚ್ಚುತ್ತದೆ. 
5. ಒಂದು ವರ್ಷದವರೆಗೂ 8ರ ವಾಕ್ ಮಾಡಿದರೆ ತಲೆನೋವು(Headache) ಸಮಸ್ಯೆ, ಜೀರ್ಣಕ್ರಿಯೆ (Digestion) ಸಮಸ್ಯೆ, ಥೈರಾಯ್ಡ್(Thyroid), ಮಲಬದ್ಧತೆಯಂತಹ(Constipation) ಸಮಸ್ಯೆಗಳು ದೂರವಾಗುತ್ತದೆ. 
6. ದೇಹದ ರಕ್ತ ಸಂಚಾರವನ್ನು(Blood Flow) ಸುಗಮಗೊಳಿಸುತ್ತದೆ. ಜೊತೆಗೆ ಡಯಾಬಿಟಿಸ್ (Diabetes) ಅನ್ನು ಕಂಟ್ರೋಲ್ ಮಾಡುತ್ತದೆ.
7. ನಿಮ್ಮ ಮೂಡ್ ರೀಫ್ರೆಶ್(Mood refresh) ಮಾಡುವುದರ ಜೊತೆಗೆ ದಿನವಿಡೀ ಉತ್ಸಾಹದಿಂದ ಕೆಲಸ ಮಾಡಲು ಉತ್ತೇಜಿಸುತ್ತದೆ.

ಹೈ ಹೀಲ್ಸ್‌ ಹಾಕಿ ವಾಕ್ ಮಾಡೋದು ಕಷ್ಟಾನ ? ಈ ಟ್ರಿಕ್ಸ್ ಫಾಲೋ ಮಾಡಿ, ನಡೆಯೋಕೇನು ತೊಂದ್ರೆ ಆಗಲ್ಲ

 

8 Shape may change your Health Problems

 
 

Latest Videos
Follow Us:
Download App:
  • android
  • ios