Asianet Suvarna News Asianet Suvarna News

Distant Reiki : ಕೊರೊನಾ ಸಂದರ್ಭದಲ್ಲಿ ಹೆಚ್ಚಾಗ್ತಿರುವ ಮನೋರೋಗಕ್ಕೆ ಇದು ಮದ್ದು

ಇದು ಅನಿಶ್ಚಿತತೆಯ ಕಾಲ. ಭವಿಷ್ಯ ಅಸ್ಪಷ್ಟವಾಗಿದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈನಲ್ಲಿದೆ. ಅಂಗೈನಲ್ಲಿಯೇ  ಆರೋಗ್ಯವಿದೆ. ನಿಮ್ಮ ಮಾನಸಿಕ,ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹಿಂದಿನಿಂದಲೂ ಜಾರಿಯಲ್ಲಿದ್ದ ರೇಖಿ ಈಗ ಆನ್ಲೈನ್ ಮೂಲಕ ಮತ್ತಷ್ಟು ಪ್ರಸಿದ್ಧಿ ಪಡೆಯುತ್ತಿದೆ. 

Emotional Healing using Distant Reiki will benefit you for sure
Author
Bangalore, First Published Jan 5, 2022, 11:39 AM IST
  • Facebook
  • Twitter
  • Whatsapp

ಕೊರೊನಾ (Corona )ಹೊಸ ರೂಪಾಂತರ ಮತ್ತೆ ಆತಂಕ (Anxiety) ಸೃಷ್ಟಿಸಿದೆ. ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಗ್ತಿಲ್ಲ. ಸತತ ಎರಡು ವರ್ಷಗಳಿಂದ ವಿಶ್ವದ ಜನರು ಕೊರೊನಾ ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರು ಆರ್ಥಿಕ ಪರಿಸ್ಥಿತಿ,ವೆಚ್ಚದ ಬಗ್ಗೆ ಲೆಕ್ಕಾಚಾರ ಶುರು ಮಾಡಿದ್ದಾರೆ. ಲಾಕ್ ಡೌನ್,ಭಯ,ಮನೆಯಲ್ಲಿ ಬಂಧಿಯಾಗಿರುವ ಸ್ಥಿತಿ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಕೋಪ, ಖಿನ್ನತೆ ಮತ್ತು ಆತಂಕಕ್ಕೆ ಜನರು ಒಳಗಾಗ್ತಿದ್ದಾರೆ. ಸಾಮಾನ್ಯವಾಗಿ ನಮ್ಮ ಹತಾಶೆಯನ್ನು ವ್ಯಾಯಾಮದ ಮೂಲಕ, ಇತರ ಜನರೊಂದಿಗೆ ಮಾತನಾಡುವ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ. ಆದ್ರೆ ಇದು ನಕಾರಾತ್ಮಕ ಭಾವನೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದಿಲ್ಲ. ನಕಾರಾತ್ಮಕ ಭಾವನೆ ಹೊರಗೆ ಹಾಕಿ, ಮನಸ್ಸು ಸುಸ್ಥಿತಿಯಲ್ಲಿರಬೇಕೆಂದ್ರೆ ಸಾಂಪ್ರದಾಯಿಕ ಪದ್ಧತಿಗಳು ಅತ್ಯುತ್ತಮ. ಅನೇಕರು ಇದನ್ನು ಅರಿತಿದ್ದಾರೆ.

ಡಿಸ್ಟಂಟ್ ಹೀಲಿಂಗ್ (Distant Healing) 

ಮಾನಸಿಕ ಹಾಗೂ ದೈಹಿಕ ಸಮಸ್ಯೆಗೆ ಮುಕ್ತಿ ನೀಡಬಲ್ಲ ರೇಖಿ ಚಿಕಿತ್ಸೆಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದೇ ಕಾರಣಕ್ಕೆ  ಸಾಂಪ್ರದಾಯಿಕವಾಗಿ ಸೌಮ್ಯ ಸ್ಪರ್ಶದ ಮೂಲಕ ನಿರ್ವಹಿಸಲ್ಪಡುವ ಸಾಂಪ್ರದಾಯಿಕ ಶಕ್ತಿ ಹೀಲಿಂಗ್ ತಂತ್ರವಾದ ರೇಖಿಗೆ ಹೆಚ್ಚು ಮಹತ್ವ ಸಿಕ್ಕಿದೆ.  ಈಗ ಆನ್‌ಲೈನ್‌ ಮೂಲಕವೇ ಈ ಚಿಕಿತ್ಸೆಯ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಡಿಸ್ಟಂಟ್ ರೇಖಿ ಅಭ್ಯಾಸ ನಡೆಸುತ್ತಿದ್ದಾರೆ. 

ಆನ್‌ಲೈನ್ ನಲ್ಲಿಯೇ ಭಾವನಾತ್ಮಕ ಚಿಕಿತ್ಸೆ ಮತ್ತು ರೇಖಿ ಚಿಕಿತ್ಸೆ ಮೂಲಕ ಚಿಕಿತ್ಸಕರು, ಗ್ರಾಹಕರ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ ಗೊಂದಲದ ಭಾವನೆಗಳನ್ನು ತೊಡೆದುಹಾಕ್ತಿದ್ದಾರೆ. ಆನ್‌ಲೈನ್ ಮೂಲಕವೇ ಅನಾರೋಗ್ಯಕ್ಕೆ ಪರಿಹಾರ ನೀಡ್ತಿದ್ದಾರೆ. ಇದರ ಫಲಿತಾಂಶ ಉತ್ತಮವಾಗಿದ್ದು, ದಿನ ದಿನಕ್ಕೂ ಇದು ಹೆಚ್ಚು ಪ್ರಸಿದ್ದಿ ಪಡೆಯುತ್ತಿದೆ.  ಹೀಲಿಂಗ್ ರೇಖಿ ಅಥವಾ ಡಿಸ್ಟಂಟ್ ಹೀಲಿಂಗ್ ಒತ್ತಡವನ್ನು ಹೇಗೆ ನಿವಾರಿಸುತ್ತದೆ ಎಂಬುದನ್ನು ನಾವು ನೋಡೋಣ.

ಹೀಲಿಂಗ್ ರೇಖಿ ಚಿಕಿತ್ಸೆ ಪರಿಣಾಮವು ದೀರ್ಘಕಾಲದವರೆಗೆ ಅಥವಾ ಹಲವಾರು ದಿನಗಳವರೆಗೆ ಇರುತ್ತದೆ. ಚಿಕಿತ್ಸೆಯು ಪರ್ಯಾಯ ಔಷಧದ ಜನಪ್ರಿಯ ವಿಧಾನವಾಗಿದೆ. ಇದು ದೈಹಿಕ ಮತ್ತು ಮಾನಸಿಕ ಎರಡೂ ಪ್ರಯೋಜನಗಳನ್ನು ಒದಗಿಸುತ್ತದೆ. ರೇಖಿ ಚಿಕಿತ್ಸೆಯು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಥಿತಿಯನ್ನು ಬದಲಾಯಿಸುತ್ತದೆ.  

ರೇಖಿ ಚಿಕಿತ್ಸೆ ಎಂದರೇನು? ಅದರ ಪ್ರಯೋಜನವೇನು ? 

ರೇಖಿ ಚಿಕಿತ್ಸೆಯಲ್ಲಿ, ಅಂಗೈಗಳಿಂದ ಸ್ಪರ್ಶಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ಈ ವಿಧಾನವು ಸ್ಪರ್ಶ ಚಿಕಿತ್ಸೆಯ ವರ್ಗದಲ್ಲಿ ಬರುತ್ತದೆ. ರೇಖಿ ವೈದ್ಯನ ಎರಡೂ ಅಂಗೈಗಳಿಂದ ರೇಖಿ ಶಕ್ತಿಯು ಹರಿಯುತ್ತದೆ, ಇದು ಸ್ಪರ್ಶಿಸಿದಾಗ ಸ್ವತಃ ಅಥವಾ ಇತರ ವ್ಯಕ್ತಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆಯಾಸ, ತಲೆನೋವು, ಚರ್ಮ ರೋಗಗಳು, ಖಿನ್ನತೆ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಲ್ಲಿ ರೇಖಿ ಚಿಕಿತ್ಸೆಯು ಪ್ರಯೋಜನಕಾರಿಯಾಗಿದೆ. ಡಿಸ್ಟಂಟ್ ಚಿಕಿತ್ಸೆಯಲ್ಲಿ, ದೂರದಲ್ಲಿ ಕುಳಿತಿರುವ ವ್ಯಕ್ತಿಯ ಫೋಟೋದೊಂದಿಗೆ ಅವನ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.

Corona Virus ಎಂದರೆ ಬರೀ ಜ್ವರ, ಉಸಿರಾಟದ ಸಮಸ್ಯೆಯಲ್ಲ, ಇನ್ನೂ ಹಲ ಲಕ್ಷಣಗಳಿವೆ..

ರೇಖಿ ಚಿಕಿತ್ಸೆ ಪಡೆದ ವ್ಯಕ್ತಿಗೆ ಧನಾತ್ಮಕ ಶಕ್ತಿ ಹೆಚ್ಚಾಗಿ ತೂಕ ನಷ್ಟವಾಗುತ್ತದೆ. ರೇಖಿ ಚಿಕಿತ್ಸೆಯು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಏಕೆಂದರೆ ಒಬ್ಬ ವ್ಯಕ್ತಿಯು ಒತ್ತಡ ಅಥವಾ ಖಿನ್ನತೆಗೆ ಒಳಗಾದಾಗ, ಅವನ ತೂಕವು ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ. ಒತ್ತಡದ ಮಟ್ಟವು ಹೆಚ್ಚಾದಾಗ, ದೇಹವು ಅಡ್ರಿನಾಲಿನ್, ಕಾರ್ಟಿಸೋಲ್ ಮತ್ತು ಕಾರ್ಟಿಕೋಟ್ರೋಫಿನ್ ಎಂಬ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದನ್ನು ರೇಖಿ ಚಿಕಿತ್ಸೆಯು ತೆಗೆದುಹಾಕುತ್ತದೆ.

ರೇಖಿ ಚಿಕಿತ್ಸೆಯು ನಿಮ್ಮ ದೇಹಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಮಾಡುತ್ತದೆ. ಇದರಿಂದ ನೀವು ಉತ್ತಮ ನಿದ್ರೆ ಪಡೆಯುತ್ತೀರಿ.

Tattoo Side Effects : ಯುರೋಪಲ್ಲಿ ಹಚ್ಚೆ ಬಣ್ಣದ ಮೇಲೆ ಕಡಿವಾಣ! ಟ್ಯಾಟೂ ಹಾಕಿಸಿಕೊಳ್ಳೋ ಮುನ್ನ ಇದನ್ನೋದಿ

ರೇಖಿ ಚಿಕಿತ್ಸೆಯು ನಿಮ್ಮ ಹಾರ್ಮೋನ್ ಸಮತೋಲನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ರೇಖಿ ಚಿಕಿತ್ಸೆಯು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Follow Us:
Download App:
  • android
  • ios