Tattoo Side Effects : ಯುರೋಪಲ್ಲಿ ಹಚ್ಚೆ ಬಣ್ಣದ ಮೇಲೆ ಕಡಿವಾಣ! ಟ್ಯಾಟೂ ಹಾಕಿಸಿಕೊಳ್ಳೋ ಮುನ್ನ ಇದನ್ನೋದಿ
ಹಚ್ಚೆಗೆ ವಯಸ್ಸಿನ ಮಿತಿಯಿಲ್ಲ. ಇತ್ತೀಚಿನ ದಿನಗಳಲ್ಲಿ ವಯಸ್ಕರು ಮಾತ್ರವಲ್ಲ ಹಿರಿಯರು ಕೂಡ ಹಚ್ಚೆ ಹಾಕಿಸಿಕೊಳ್ತಿದ್ದಾರೆ. ಭಾರತಕ್ಕಿಂತ ವಿದೇಶಗಳಲ್ಲಿ ಇದ್ರ ಕ್ರೇಜ್ ಜಾಸ್ತಿಯಿದೆ. ಎಲ್ಲರ ಗಮನ ಸೆಳೆಯುವ, ಸ್ಟೈಲಿಶ್ ಲುಕ್ ನೀಡುವ ಈ ಟ್ಯಾಟೂ ತುಂಬಾ ಅಪಾಯಕಾರಿ.
ಟ್ಯಾಟೂ(Tattoo) ಹಾಕಿಸಿಕೊಳ್ಳುವುದನ್ನು ಕೂಲ್ (Cool) ಫ್ಯಾಶನ್ (Fashion) ಎಂದು ಪರಿಗಣಿಸಲಾಗುತ್ತದೆ. ಜನರು ದೇಹದ ಪ್ರತಿಯೊಂದು ಭಾಗದಲ್ಲೂ ಬಣ್ಣಬಣ್ಣದ ಟ್ಯಾಟೂಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಟ್ಯಾಟೂ ಪ್ರೇಮಿಗಳ ಸಂಖ್ಯೆ ವಿಶ್ವದಾದ್ಯಂತ ಸಾಕಷ್ಟಿದೆ. ಜನರು ತಮಗಿಷ್ಟವಾದ ಹೆಸರಿನಿಂದ ಹಿಡಿದು ಡಿಸೈನ್ ವರೆಗೆ ಎಲ್ಲವನ್ನೂ ಹಚ್ಚೆ ಹಾಕಿಸಿಕೊಳ್ತಾರೆ. ಹಿಂದಿನ ಕಾಲದಿಂದಲೂ ಈ ಹಚ್ಚೆ ಪದ್ಧತಿಯಿದೆ. ಆದ್ರೆ ಆಗ ಹಚ್ಚೆಯ ಬಣ್ಣ ಹೆಚ್ಚಾಗಲು ರಾಸಾಯನಿಕಗಳನ್ನು ಬಳಸ್ತಿರಲಿಲ್ಲ. ಇದು ಫ್ಯಾಷನ್ ಯುಗ. ಇಲ್ಲಿ ಎಲ್ಲವೂ ಹೊಳೆಯಬೇಕು. ಹಾಗಾಗೇ ಟ್ಯಾಟೂ ಸುಂದರವಾಗಿ ಕಾಣಲಿ ಎಂಬ ಕಾರಣಕ್ಕೆ ಸಾಕಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ಹಚ್ಚೆ ಬಣ್ಣವನ್ನು ಡಾರ್ಕ್ ಮಾಡುತ್ವೆ ನಿಜ. ಆದ್ರೆ ಇದು ದೊಡ್ಡ ರೋಗಕ್ಕೆ ಕಾರಣವಾಗ್ತಿದೆ.
ಜನರ ಆರೋಗ್ಯ ಕಾಪಾಡಲು ಯುರೋಪ್ ನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಇನ್ಮುಂದೆ ಯುರೋಪನ್ ನಲ್ಲಿ ಬಳಸುವ ಟ್ಯಾಟೂ ಬಣ್ಣ ಮಸುಕಾಗಲಿದೆ. ಯಸ್. ಜನವರಿ ನಾಲ್ಕರಿಂದ ಟ್ಯಾಟೂಗೆ ಬಳಸುವ 4 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳ ಮೇಲೆ ನಿಷೇಧ ಹೇರಲಾಗಿದೆ. ಯುರೋಪಿಯನ್ ಯೂನಿಯನ್ (European Union )ನಲ್ಲಿ ಬಣ್ಣದ ಶಾಯಿ ಮೇಲೆ ನಿಷೇಧ ಹೇರಲಾಗಿದೆ. 2020ರಲ್ಲಿಯೇ ಇದರ ಘೋಷಣೆಯಾಗಿದೆ. ಆದ್ರೆ ಬೇರೆ ಮಾರ್ಗ ಹುಡುಕುವವರೆಗೆ ಅವಕಾಶ ನೀಡುವಂತೆ ನೋಂದಣಿ, ಮೌಲ್ಯಮಾಪನ, ದೃಢೀಕರಣ ಮತ್ತು ರಾಸಾಯನಿಕಗಳ ನಿರ್ಬಂಧ ರೀಚ್ಗೆ ಮನವಿ ಮಾಡಲಾಗಿತ್ತು. ಈಗ ರೀಚ್ ನೀಡಿದ್ದ ಅವಧಿ ಮುಗಿದಿದೆ.
ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ?
ಈಗಾಗಲೇ ಕೆಲ ರಾಸಾಯನಿಕಗಳನ್ನು ರೀಚ್ ನಿಷೇಧಿಸಿದೆ. ಹಚ್ಚೆಗೆ ಬಳಸುವ ರಾಸಾಯನಿಕಗಳು ಚರ್ಮದ ಕ್ಯಾನ್ಸರ್ ಹಾಗೂ ಆನುವಂಶಿಕ ಬದಲಾವಣೆಗೆ ಕಾರಣವಾಗ್ತಿವೆ ಎಂದು ರೀಚ್ ಹೇಳಿದೆ. ಯುರೋಪಿಯನ್ ಒಕ್ಕೂಟದಲ್ಲಿ ಹಚ್ಚೆಗಳ ಮೇಲೆ ನೇರವಾಗಿ ನಿಷೇಧ ಹೇರುವುದಿಲ್ಲ. ಬದಲಾಗಿ ಟ್ಯಾಟೂಗೆ ಹಾಕುವ ರಾಸಾಯನಿಕ ಶಾಯಿಗಳ ಮೇಲೆ ಮಾತ್ರ ನಿಷೇಧ ಹೇರುತ್ತೇವೆ ಎಂದು ರೀಚ್ ಹೇಳಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ ಶಾಯಿಗಳನ್ನು ಬಳಸುವಂತೆ ಸಂಸ್ಥೆ ಹೇಳಿದೆ. ಯುರೋಪ್ ಮಾತ್ರವಲ್ಲ ಎಲ್ಲ ದೇಶಗಳೂ ಟ್ಯಾಟೂ ಶಾಯಿಗೆ ಬಳಸುವ ರಾಸಾಯನಿಕಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಈ ರಾಸಾಯನಿಕಗಳು ದೇಹದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತವೆ.
Fashion Tips : ಪುರುಷರ ಡ್ರೆಸ್ ಧರಿಸುವ ಹುಡುಗಿಯರಿಗೆ ಇಲ್ಲಿವೆ ಬೆಸ್ಟ್ ಟಿಪ್ಸ್
ಟ್ಯಾಟೂವಿನಿಂದ ಚರ್ಮಕ್ಕೆ ಹಾನಿ
ಇತ್ತೀಚಿನ ಸಂಶೋಧನೆಯ ಪ್ರಕಾರ, ಹಚ್ಚೆಗಳಲ್ಲಿ ಬಳಸುವ ಶಾಯಿಯ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ. ಶಾಯಿಯಲ್ಲಿರುವ ಸೂಕ್ಷ್ಮ ವಿಷಕಾರಿ ಕಣಗಳು ಚರ್ಮದ ಮೂಲಕ ದೇಹದ ಇತರ ಭಾಗಗಳನ್ನು ತಲುಪಬಹುದು. ಇದರ ಪರಿಣಾಮವು ತ್ವರಿತವಲ್ಲ, ಆದರೆ ದೀರ್ಘಾವಧಿಯಲ್ಲಿ ಕಂಡುಬರುತ್ತದೆ. ಟ್ಯಾಟೂಗೆ ಬಳಸುವ ಟೈಟಾನಿಯಂ ಡೈಆಕ್ಸೈಡ್ ನ ಸೂಕ್ಷ್ಮ ಕಣಗಳು ದೇಹ ಸೇರುತ್ತವೆ. ಟ್ಯಾಟೂ ತೆಗೆದರೂ ಇದು ತ್ವಚೆಯಿಂದ ಹೊರಗೆ ಹೋಗುವುದಿಲ್ಲ.
ವಿಷಕಾರಿ ವಸ್ತುಗಳ ಅಪಾಯ
ಟ್ಯಾಟೂಗಳನ್ನು ತಯಾರಿಸಲು ವಿಭಿನ್ನ ರೀತಿಯ ಶಾಯಿಯನ್ನು ಬಳಸಲಾಗುತ್ತದೆ. ಇದು ನಮ್ಮ ಚರ್ಮಕ್ಕೆ ತುಂಬಾ ಅಪಾಯಕಾರಿ. ಅಲ್ಯೂಮಿನಿಯಂ ಮತ್ತು ಕೋಬಾಲ್ಟ್ ಒಳಗೊಂಡಿರುವ ಹಚ್ಚೆಗಾಗಿ ನೀಲಿ ಬಣ್ಣದ ಶಾಯಿಯನ್ನು ಬಳಸಲಾಗುತ್ತದೆ. ನೀಲಿ ಬಣ್ಣವನ್ನು ಹೊರತುಪಡಿಸಿ, ಕ್ಯಾಡ್ಮಿಯಮ್, ಕ್ರೋಮಿಯಂ, ನಿಕಲ್ ಮತ್ತು ಟೈಟಾನಿಯಂನಂತಹ ಅನೇಕ ಲೋಹಗಳು ಇತರ ಬಣ್ಣಗಳಲ್ಲಿ ಕಂಡುಬರುತ್ತವೆ.
ಹೊಸ ಅಧ್ಯಯನದ ಪ್ರಕಾರ, ಶಾಯಿಯ ಈ ಕಣಗಳು 100 ನ್ಯಾನೊಮೀಟರ್‌ಗಳಷ್ಟು ಚಿಕ್ಕದಾಗಿದೆ. ಇದರಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.
Business Ideas : ಹಳ್ಳಿಯಲ್ಲಿರುವ ಮಹಿಳೆಯರಿಗೆ ಕೈ ತುಂಬಾ ಹಣ ಬರೋ ಬ್ಯುಸಿನೆಸ್ ಟಿಪ್ಸ್
ಹಚ್ಚೆಗೂ ಮುನ್ನ ಎಚ್ಚರಿಕೆ ಅಗತ್ಯ
ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂಬುದು ಗೊತ್ತಿದ್ದೂ ಹಚ್ಚೆ ಹುಚ್ಚು ಬಿಡ್ತಿಲ್ಲವೆಂದ್ರೆ ಟ್ಯಾಟೂ ಮೊದಲು ಎಚ್ಚರಿಕೆ ಕ್ರಮಕೈಗೊಳ್ಳಿ. ಹಚ್ಚೆ ಹಾಕಿಸಿಕೊಳ್ಳುವ ಮೊದಲು ಹೆಪಟೈಟಿಸ್ ಬಿ ಇಂಜೆಕ್ಷನ್ ಹಾಕಿಸಿಕೊಳ್ಳಿ. ಪರಿಣತಿ ಹೊಂದಿರುವ ತಜ್ಞರಿಂದ ಮಾತ್ರ ಹಚ್ಚೆ ಹಾಕಿಸಿಕೊಳ್ಳಿ. ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಟ್ಯಾಟೂ ಹಾಕಿಸಿಕೊಂಡ ಜಾಗದಲ್ಲಿ ಪ್ರತಿನಿತ್ಯ ಆ್ಯಂಟಿಬಯೋಟಿಕ್ ಕ್ರೀಮ್ ಹಚ್ಚಿ.