Health Tips : ಆಯಸ್ಸು ಹೆಚ್ಚಿಸಬೇಕಂದ್ರೆ ತಿನ್ನಿ ಈ ಆಹಾರ
ಸದಾ ಯುವಕರಂತೆ ಕಾಣ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ವಯಸ್ಸನ್ನು ಮುಚ್ಚಿಡುವುದು ಕಷ್ಟ. ಅದ್ರ ಜೊತೆಗೆ ಸಾವು ಕೂಡ ನಿಶ್ಚಿತ. ಆದ್ರೆ ಕೆಲವರು ಎಷ್ಟೇ ವಯಸ್ಸಾದ್ರು ಯಂಗ್ ಆಗಿ ಕಾಣ್ತಾರೆ. ಅದು ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ನೀವೂ ಸದಾ ಯುವಕರಂತೆ ಕಾಣ್ಬೇಕು,ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಬೇಕೆಂದ್ರೆ ಇದನ್ನ ಓದಿ,
ಆರೋಗ್ಯ (Health )ಕರ ಜೀವನ (Life) ಕ್ಕೆ ಆಹಾರ (Food )ಬಹುಮುಖ್ಯ ಪಾತ್ರವಹಿಸುತ್ತದೆ. ನೀವು ಏನನ್ನು ಸೇವನೆ ಮಾಡ್ತೀರಿ ಮತ್ತೆ ಎಷ್ಟು ಸೇವನೆ ಮಾಡ್ತೀರಿ ಎಂಬುದನ್ನು ನೀವು ಮೊದಲು ಸರಿಯಾಗಿ ತಿಳಿಯಬೇಕು. ಸಾಮಾನ್ಯವಾಗಿ ಜನರು ಹೊಟ್ಟೆ (Stomach )ತುಂಬುವಷ್ಟು ತಿನ್ನುತ್ತಾರೆ. ಅದ್ರಲ್ಲಿ ಎಷ್ಟು ಕ್ಯಾಲೋರಿ ಇದೆ,ಕ್ಯಾಲ್ಸಿಯಂ ಇದೆ, ಪೋಷಕಾಂಶವಿದೆ ಎಂಬುದನ್ನು ತಿಳಿಯುವುದಿಲ್ಲ. ಆಹಾರ ಮತ್ತು ಆರೋಗ್ಯದ ಬಗ್ಗೆ ಸಾಕಷ್ಟು ಅಧ್ಯಯನ,ಸಂಶೋಧನೆ,ಸಮೀಕ್ಷೆಗಳು ನಡೆದಿವೆ. ಈಗ ಹೊಸ ಅಧ್ಯಯನವೊಂದರಲ್ಲಿ ಕಡಿಮೆ ಆಹಾರ ಸೇವನೆ ಮಾಡುವವರು ಹೆಚ್ಚು ವರ್ಷ ಜೀವಂತವಾಗಿರ್ತಾರೆಂಬುದು ತಿಳಿದು ಬಂದಿದೆ. ಅದರಲ್ಲೂ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಮಾಡುವ ಜನರ ಆಯಸ್ಸು ಹೆಚ್ಚೆಂದು ಸಂಶೋಧಕರು ಹೇಳಿದ್ದಾರೆ. ಯಾರು ಸಂಶೋಧನೆ ನಡೆಸಿದ್ದಾರೆ ಹಾಗೆ ಸಂಶೋಧನೆ ಫಲಿತಾಂಶವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಆಯಸ್ಸು ವೃದ್ಧಿ ಮಾಡುತ್ತೆ ಕಡಿಮೆ ಕ್ಯಾಲೋರಿ (Calorie) ಆಹಾರ : ಯೇಲ್ (Yale) ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದು ಅತ್ಯುತ್ತಮ ಎಂದಿದ್ದಾರೆ. ಕಡಿಮೆ ಕ್ಯಾಲೋರಿ ಆಹಾರ ಸೇವನೆ ಮಾಡುವುದ್ರಿಂದ ಪ್ರತಿರಕ್ಷಣಾ ವ್ಯವಸ್ಥೆ ಆರೋಗ್ಯವಾಗುತ್ತದೆ. ಪುನರ್ಯೌವನಗೊಳಿಸಲು ಇದು ನೆರವಾಗುತ್ತದೆ ಎಂದಿದ್ದಾರೆ.
Kids Food: ಮಕ್ಳು ತಿನ್ತಿಲ್ಲಾಂತ ದೂರೋದನ್ನು ಬಿಟ್ಚಿಡಿ, ಹೆಲ್ದೀ ಪಾನೀಯ ಕೊಟ್ಟು ನೋಡಿ
ಸುಮಾರು ಶೇಕಡಾ 14ರಷ್ಟು ಕಡಿಮೆ ಕ್ಯಾಲೋರಿಗಳನ್ನು ಸೇವಿಸುವ ಯುವಜನರ ಥೈಮಸ್ ಗ್ರಂಥಿ (Thymus Gland)ಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಥೈಮಸ್ ಗ್ರಂಥಿಯು ಹೃದಯದ ಮೇಲ್ಭಾಗದಲ್ಲಿದೆ. ಇದು ರೋಗದ ವಿರುದ್ಧ ಹೋರಾಡುವ ಟಿ-ಕೋಶಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯು ಥೈಮೋಸಿನ್ ಎಂಬ ಹಾರ್ಮೋನ್ ಅನ್ನು ಸ್ರವಿಸುತ್ತದೆ. ಥೈಮಸ್ ಗ್ರಂಥಿ ಕಣ್ಮರೆಯಾಗ್ತಿದ್ದಂತೆ ಮಾನವರಲ್ಲಿ ವಯಸ್ಸಾಗುವಿಕೆ ಕಾಣಿಸುತ್ತದೆ. ಮಕ್ಕಳಲ್ಲಿ ಈ ಗ್ರಂಥಿಯು ದೊಡ್ಡದಾಗಿರುತ್ತದೆ.
ದೀರ್ಘಕಾಲದವರೆಗೆ ನೀವು ಬದುಕಬೇಕೆಂದ್ರೆ ಥೈಮಸ್ ಗ್ರಂಥಿ ಕಣ್ಮರೆಯಾಗದಂತೆ ನೋಡಿಕೊಳ್ಳಬೇಕು. ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಆಹಾರ ತಜ್ಞ ವಿಶ್ವ ದೀಪ್ ದೀಕ್ಷಿತ್ ಕೂಡ ಇದೇ ಸಂಗತಿಯನ್ನು ಹೇಳ್ತಾರೆ. ತುಂಬಾ ವರ್ಷಗಳ ಕಾಲ ನೀವು ಬದುಕಬೇಕೆಂದ್ರೆ ಹಾಗೂ ನಿಮಗೆ ವಯಸ್ಸಾಗದಂತೆ ನೋಡಿಕೊಳ್ಳಬೇಕೆಂದ್ರೆ ಈ ಗ್ರಂಥಿಯನ್ನು ರಕ್ಷಿಸಿಕೊಳ್ಳಬೇಕು. ಇದೇ ವೇಳೆ ಸಂಶೋಧಕರು ಇನ್ನೊಂದು ಸಂಗತಿಯನ್ನು ಹೇಳಿದ್ದಾರೆ. ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದರಿಂದ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.
ಕಡಿಮೆ ಕ್ಯಾಲೋರಿ ಸೇವನೆಗೆ ಸಲಹೆ : ವಿಜ್ಞಾನದಲ್ಲಿ ಪ್ರಕಟವಾದ 26 ವರ್ಷದಿಂದ 47 ವರ್ಷ ವಯಸ್ಸಿನ 238 ತೆಳ್ಳಗಿನ ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಅವರಲ್ಲಿ ಮೂರನೇ ಎರಡರಷ್ಟು ಜನರಿಗೆ ಆಹಾರದಲ್ಲಿ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಹೇಳಲಾಗಿತ್ತಂತೆ. ಈ ಅಧ್ಯಯನದಲ್ಲಿ ತೊಡಗಿರುವ ಜನರ ದೇಹದ ತೂಕವನ್ನು ಪ್ರತಿ ದಿನ ಅಳೆಯಲಾಗುತ್ತಿತ್ತಂತೆ.
BUTTERMILK BENIFITS: ಆಯುರ್ವೇದಲ್ಲಿ ಮಜ್ಜಿಗೆಗೇಕೆ ಇಷ್ಟೊಂದು ಪ್ರಾಶಸ್ತ್ಯ?
ಸಂಶೋಧನೆ ಫಲಿತಾಂಶ : ಎರಡು ವರ್ಷಗಳ ನಂತರ ಸಂಶೋಧಕರು ಇವರೆಲ್ಲರ ಎಂಆರ್ ಐ (MRI) ಸ್ಕ್ಯಾನ್ ಮಾಡಿದ್ದಾರೆ. ಆಗ ಅಚ್ಚರಿಯ ಫಲಿತಾಂಶ ಸಿಕ್ಕಿದೆ. ಆಹಾರದಲ್ಲಿ ಕಡಿಮೆ ಕ್ಯಾಲೋರಿ ಸೇವನೆ ಮಾಡ್ತಿದ್ದವರ ಥೈಮಸ್ ಗ್ರಂಥಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ ಎಂದು ಸಂಶೋಧಕರು ವರದಿ ನೀಡಿದ್ದಾರೆ. ಸಂಶೋಧಕರು ಥೈಮಸ್ ಗ್ರಂಥಿಯ ಸುತ್ತ ಇರುವ ಟಿ-ಕೋಶಗಳ ಸಂಖ್ಯೆ ಮತ್ತು ಕೊಬ್ಬಿನ ಮಟ್ಟವನ್ನು ಸಹ ಪರಿಶೀಲಿಸಿದ್ದಾರೆ. ಥೈಮಸ್ ಗ್ರಂಥಿಯ ಆಸುಪಾಸಿನಲ್ಲಿ ಸಂಗ್ರಹವಾಗಿದ್ದ ಕೊಬ್ಬಿನ ಮಟ್ಟ,ಕಡಿಮೆ ಕ್ಯಾಲೋರಿ ಡಯಟ್ ಫಾಲೋ ಮಾಡ್ತಿದ್ದ ಜನರಲ್ಲಿ ಸಾಮಾನ್ಯ ಡಯಟ್ ಅನುಸರಿಸುತ್ತಿದ್ದವರಿಗಿಂತ ಕಡಿಮೆಯಿತ್ತು ಎಂದು ಸಂಶೋಧಕರು ಹೇಳಿದ್ದಾರೆ. ಯೇಲ್ ಸೆಂಟರ್ ಫಾರ್ ರಿಸರ್ಚ್ ಆನ್ ಏಜಿಂಗ್ ನ ನಿರ್ದೇಶಕ ಹಾಗೂ ಹಿರಿಯ ಲೇಖಕ ಪ್ರೊಫೆಸರ್ ದೀಕ್ಷಿತ್ ಪ್ರಕಾರ, ಎರಡು ವರ್ಷಗಳ ಕಾಲ ಕಡಿಮೆ ಕ್ಯಾಲೋರಿಗಳನ್ನು ಸೇವಿಸಿದ ಜನರಲ್ಲಿ ಟಿ ಕೋಶಗಳ ಉತ್ಪಾದನೆ ಕೂಡ ಹೆಚ್ಚಾಗಿತ್ತು ಎಂದಿದ್ದಾರೆ.