ಮಳೆಗಾಲದಲ್ಲಿ ಐಸ್ ಕ್ರೀಂ ತಿಂದು ಆರೋಗ್ಯ ಕೆಡಿಸ್ಕೊಳ್ಬೇಡಿ

ಆಯಾ ಋತುವಿಗೆ ಒಂದೊಂದು ಆಹಾರ ಸೇವನೆ ಮಾಡ್ಬೇಕೆಂಬ ನಿಯಮವಿದೆ. ಋತು ಬಿಟ್ಟು ಬೇರೆ ಸಮಯದಲ್ಲಿ ಕೆಲ ಆಹಾರ ತಿಂದ್ರೆ ಆರೋಗ್ಯ ಹದಗೆಡುತ್ತದೆ. ಐಸ್ ಕ್ರೀಂ ಕೂಡ ಹಾಗೆ. ಬೇಸಿಗೆ ಬಿಟ್ಟು ಮಳೆಗಾಲದಲ್ಲಿ ಇದ್ರ ಸೇವನೆ ಮಾಡಿದ್ರೆ ಸಮಸ್ಯೆ ಕಾಡೋದು ನಿಶ್ಚಿತ.
 

Eating Ice Cream In Monsoon Can Cause These Damages To The Body

ಐಸ್ ಕ್ರೀಂ ಅಂದ್ರೆ ಕೆಲವರಿಗೆ ಬಹಳ ಇಷ್ಟ. ಮಧ್ಯರಾತ್ರಿ ನಿದ್ದೆಯಲ್ಲಿ ಐಸ್ ಕ್ರೀಂ ನೀಡಿದ್ರೂ ತಿನ್ನುವವರಿದ್ದಾರೆ. ಮಕ್ಕಳಿಗೆ ಐಸ್ ಕ್ರೀಂ ಪಂಚಪ್ರಾಣ ಅಂದ್ರೆ ತಪ್ಪಾಗೋದಿಲ್ಲ. ಬೇಸಿಗೆ ಕಾಲದಲ್ಲಿ ಬಹುತೇಕರು ಐಸ್ ಕ್ರೀಂ ಸವಿ ಸವಿಯಲು ಬಯಸ್ತಾರೆ. ಇನ್ನು ಕೆಲವರಿಗೆ ಐಸ್ ಕ್ರೀಂ ತಿನ್ನಲು ಋತುವಿನ ಅಗತ್ಯವಿಲ್ಲ. ಹೊರಗೆ ಧಾರಾಕಾರವಾಗಿ ಮಳೆಯಾಗ್ತಿದ್ದರೆ ಬಿಸಿ ಬಿಸಿ ಟೀ ಕುಡಿಯಬೇಕು ಎನ್ನಿಸೋದು ಸಹಜ. ಕೆಲವರಿಗೆ ಮಳೆ ಮಧ್ಯೆ ಐಸ್ ಕ್ರೀಂ ತಿನ್ನೋದು ಇಷ್ಟ. ಐಸ್ ಕ್ರೀಂ ರುಚಿ ಹೌದು. ಬೇಸಿಗೆಯಲ್ಲಿ ದೇಹವನ್ನು ಸ್ವಲ್ಪ ಕೂಲ್ ಮಾಡೋದು ನಿಜ. ಆದ್ರೆ ಯಾವುದೇ ಕಾಲದಲ್ಲಿ ನೀವು ಐಸ್ ಕ್ರೀಂ ಸೇವನೆ ಮಾಡಿದ್ರೂ ಅದು ಗಂಟಲಿಗೆ ಒಳ್ಳೆಯದಲ್ಲ. ಅದ್ರಲ್ಲೂ ಮಳೆಗಾಲದಲ್ಲಿ ಐಸ್ ಕ್ರೀಂ ತಿನ್ನೋದು ಅನಾರೋಗ್ಯಕರ ಹವ್ಯಾಸ. ಮಳೆಯಲ್ಲಿ ಐಸ್ ಕ್ರೀಂ ತಿಂದ್ರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಋತುವಿನಲ್ಲಿ ಜ್ವರ, ನೆಗಡಿ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಕೆಮ್ಮು, ಸೋಂಕಿನ ಸಮಸ್ಯೆಯೂ ಎದುರಾಗುತ್ತದೆ. ಹಾಗಿರುವಾಗ ಐಸ್ ಕ್ರೀಂ ತಿಂದ್ರೆ ಏನಾಗ್ಬೇಡ. ನಾವಿಂದು ಮಳೆಗಾಲದಲ್ಲಿ ಐಸ್ ಕ್ರೀಂ ಸೇವನೆ ಮಾಡಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ಹೇಳ್ತೇವೆ.

ಪ್ರತಿಯೊಬ್ಬರೂ ಬೇಸಿಗೆ (Summer) ಯಲ್ಲಿ ಐಸ್ ಕ್ರೀಮ್ (Ice Cream ) ಸೇವಿಸಲು ಇಷ್ಟಪಡುತ್ತಾರೆ. ಆದರೆ ಮಾನ್ಸೂನ್ (Monsoon) ಸಮಯದಲ್ಲಿ ಐಸ್ ಕ್ರೀಂ ಸೇವಿಸುವುದರಿಂದ ದೇಹ (body) ಕ್ಕೆ ಹಲವಾರು ಹಾನಿ ಉಂಟಾಗುತ್ತದೆ. ನೀವು ಕೂಡ ಮಾನ್ಸೂನ್‌ನಲ್ಲಿ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಿದ್ದರೆ, ಅದನ್ನು ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಖಂಡಿತವಾಗಿ ತಿಳಿಯಿರಿ. ಉದಾಹರಣೆಗೆ ಗಂಟಲಿಗೆ ಐಸ್ ಕ್ರೀಂ ಸೇವನೆ ಯಾವುದೇ ಸೀಸನ್ ನಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸುವುದಿಲ್ಲ.ಇಂತಹ ಪರಿಸ್ಥಿತಿಯಲ್ಲಿ ಮಳೆಗಾಲದಲ್ಲಿ ಐಸ್ ಕ್ರೀಂ ತಿಂದರೆ ಆಗುವ ಅನನುಕೂಲಗಳೇನು ಎಂಬುದನ್ನು ಇಲ್ಲಿ ತಿಳಿಸುತ್ತೇವೆ. 

ತಲೆನೋವು (Headache) : ಮಾನ್ಸೂನ್‌ನಲ್ಲಿ ಐಸ್ ಕ್ರೀಮ್, ತಣ್ಣೀರು ಅಥವಾ ಐಸ್  ಸೇವಿಸುವುದರಿಂದ ಮೆದುಳು ಫ್ರೀಜ್ (Freeze) ಆಗುತ್ತದೆ. ವಾತಾವರಣವೂ ತಣ್ಣಗಿರುತ್ತದೆ, ಐಸ್ ಕ್ರೀಂ ಕೂಡ ತಣ್ಣಗಿರುತ್ತದೆ. ಈ ಸಂದರ್ಭದಲ್ಲಿ ಐಸ್ ಕ್ರೀಂ ಸೇವನೆ ಮಾಡಿದ್ರೆ ಮೆದುಳಿನ ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ತೀವ್ರ ತಲೆನೋವು ಉಂಟುಮಾಡುತ್ತದೆ. ಸೈನಸ್ ಸಮಸ್ಯೆ ಇರುವವರು ಮಳೆಗಾಲದಲ್ಲಿ ಐಸ್ ಕ್ರೀಮ್ ಅಪ್ಪಿತಪ್ಪಿಯೂ ಸೇವನೆ ಮಾಡ್ಬಾರದು.

ಎದೆ ಬಿಗಿತ : ಮಳೆಗಾಲದ ಸಮಯದಲ್ಲಿ ಐಸ್ ಕ್ರೀಮ್ ಸೇವನೆಯಿಂದ ನೆಗಡಿ, ಕೆಮ್ಮು, ಎದೆ ಬಿಗಿತದಂತಹ ಸಮಸ್ಯೆಗಳು ಎದುರಾಗುತ್ತವೆ. ಮಳೆಗಾಲದಲ್ಲಿ ಹಸಿವು ಹೆಚ್ಚು, ಸಿಹಿ ಪದಾರ್ಥ ಸೇವನೆ ಮಾಡಲು ಮನಸ್ಸು ಹಾತೊರೆಯುತ್ತದೆ. ಈ ಸಮಯದಲ್ಲಿ ಐಸ್ ಕ್ರೀಂ ಬದಲು ನೀವು ಹಲ್ವಾ ತಿನ್ನಬಹುದು. ಮಾನ್ಸೂನ್ ಸಮಯದಲ್ಲಿ  ನೀವು ಹೆಸರು ಬೇಳೆಯನ್ನು ತುಪ್ಪದಲ್ಲಿ ಹುರಿದು ಆರೋಗ್ಯಕರ ಖೀರ್ ಮಾಡಿ ಸೇವನೆ ಮಾಡಬಹುದು. 

ಉದ್ದ ಕೂದಲು ಬೇಕಾ, ಇಲ್ಲಿವೆ ಮಾಡಲೇಬಾಕದ ಟಿಪ್ಸ್

ಜೀರ್ಣ ಶಕ್ತಿ ದುರ್ಬಲ : ಮೊದಲೇ ಹೇಳಿದಂತೆ ಮಾನ್ಸೂನ್ ಸಮಯದಲ್ಲಿ ಸೋಂಕುಗಳು ಮತ್ತು ರೋಗಗಳ ಅಪಾಯವು ಹೆಚ್ಚಾಗುತ್ತದೆ. ಅದಕ್ಕಾಗಿಯೇ ನಾವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವನೆ ಮಾಡ್ಬೇಕೆ ಹೊರತು ರೋಗಕ್ಕೆ ಕಾರಣವಾಗುವ ಆಹಾರ ಸೇವನೆ ಮಾಡಬಾರದು. ಹಾಗೆಯೇ ಜೀರ್ಣ ಶಕ್ತಿ ಸುಲಭವಾಗುವ ಆಹಾರಕ್ಕೆ ಆದ್ಯತೆ ನೀಡ್ಬೇಕು.   

ಐ ಡ್ರಾಪ್ ಬಳಸೋವಾಗ ನಾವೆಲ್ಲ ಮಾಡ್ತೇವೆ ಈ ತಪ್ಪು

ಗಂಟಲಿನ ಸೋಂಕು : ಮಳೆಗಾಲದಲ್ಲಿ  ಐಸ್‌ಕ್ರೀಮ್‌ನ ಅತಿಯಾದ ಸೇವನೆಯು ಗಂಟಲಿನ ಸೋಂಕಿಗೆ ಕಾರಣವಾಗಬಹುದು. ಐಸ್ ಕ್ರೀಂ ಸೇವಿಸುವುದರಿಂದ ಗಂಟಲಿನ ಸೋಂಕಿನೊಂದಿಗೆ ಕಫದ ಸಮಸ್ಯೆಯೂ ಉಂಟಾಗುತ್ತದೆ. ಕಫದಿಂದಾಗಿ ಕೆಮ್ಮು ಮತ್ತು ಜ್ವರವೂ ಬರಬಹುದು.

Latest Videos
Follow Us:
Download App:
  • android
  • ios