Asianet Suvarna News Asianet Suvarna News

Health Tips : ಖಾಲಿ ಹೊಟ್ಟೇಲಿ ಏಲಕ್ಕಿ ನೀರು ಕುಡಿದ್ನೋಡಿ!

ಏಲಕ್ಕಿ ಎಲ್ಲರ ಮನೆಯಲ್ಲೂ ಇರುವ ಮಸಾಲೆ. ಅನೇಕ ಆಹಾರಗಳಿಗೆ ಇದನ್ನು ಬಳಸುವ ನಾವು ಆರೋಗ್ಯ ಕೆಟ್ಟಾಗ್ಲೂ ಬಳಸ್ತೇವೆ. ಆದ್ರೆ ಅನೇಕರಿಗೆ ಏಲಕ್ಕಿ ನೀರಿನ ಪ್ರಯೋಜನ ತಿಳಿದಿಲ್ಲ. ಸಾಕಷ್ಟು ಪೋಷಕಾಂಶ ಹೊಂದಿರುವ ಏಲಕ್ಕಿ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. 
 

Drink Cardamom Water On An Empty Stomach For These 4 Health Benefits
Author
First Published Sep 16, 2022, 3:53 PM IST

ಎಲ್ಲರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು. ವಿವಿಧ ಖಾದ್ಯಗಳಿಗೆ ಏಲಕ್ಕಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ. ಆಯುರ್ವೇದದಲ್ಲಿ ಏಲಕ್ಕಿಗೆ ಮಾನ್ಯತೆಯಿದೆ. ಏಲಕ್ಕಿಯಲ್ಲಿ ಅನೇಕ ಪೋಷಕಾಂಶಗಳಿವೆ. ಏಲಕ್ಕಿ  ದೇಹವನ್ನು ಆರೋಗ್ಯವಾಗಿಡಲು ಸಹಕಾರಿ. ಏಲಕ್ಕಿಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ. ಹಿಂದಿನ ಕಾಲದಲ್ಲಿ ಏಲಕ್ಕಿ (Cardamom) ಬಳಕೆ ಹೆಚ್ಚಿತ್ತು. ಜನರು ಯಾವುದೇ ಅನಾರೋಗ್ಯ (Illness) ಕಾಡಿದ್ರೂ ಏಲಕ್ಕಿ ಬಾಯಿಗೆ ಹಾಕಿಕೊಳ್ತಿದ್ದರು. ಏಲಕ್ಕಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.

ಏಲಕ್ಕಿಯಲ್ಲಿ ಕಂಡು ಬರುವ ಪೋಷಕಾಂಶ :  
ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಏಲಕ್ಕಿಯಲ್ಲಿ ಕಂಡುಬರುತ್ತವೆ. ಏಲಕ್ಕಿ ಫೈಬರ್‌ (Fiber) ನ ಒಳ್ಳೆಯ ಮೂಲವಾಗಿದೆ. ಏಲಕ್ಕಿಯಲ್ಲಿ ಪೊಟ್ಯಾಸಿಯಮ್ (Potassium), ಕ್ಯಾಲ್ಸಿಯಂ (calcium), ಕಬ್ಬಿಣ (Iron), ಮೆಗ್ನೀಸಿಯಮ್ ಮತ್ತು ರಂಜಕವೂ ಇದೆ. ಏಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿದೆ.ಏಲಕ್ಕಿ ನೀರಿನ ಸೇವನೆಯಿಂದ ಪ್ರಯೋಜನ ತಿಳಿಯುವ ಮೊದಲು ಏಲಕ್ಕಿ ನೀರನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.   

ಏಲಕ್ಕಿ ನೀರು (Cardamom Water) ತಯಾರಿಸುವ ವಿಧಾನ : 
ನಾಲ್ಕರಿಂದ ಐದು ಏಲಕ್ಕಿಯ ಸಿಪ್ಪೆ ತೆಗೆದು, ಬೀಜವನ್ನು ಒಂದು ಲೀಟರ್ ನೀರಿನಲ್ಲಿ ನೆನೆ ಹಾಕಿ. ರಾತ್ರಿ ಪೂರ್ತಿ ಏಲಕ್ಕಿ ನೀರಿನಲ್ಲಿ ನೆನೆಯಬೇಕು. ಮರುದಿನ ಬೆಳಿಗ್ಗೆ  ಈ ನೀರನ್ನು ಕುದಿಸಬೇಕು. ನಂತ್ರ    ಫಿಲ್ಟರ್ (Filter) ಮಾಡಬೇಕು.ಈ ನೀರನ್ನು ಪಾತ್ರೆಯಲ್ಲಿ ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತ್ರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಏಲಕ್ಕಿ ನೀರನ್ನು ಕುಡಿಯಿರಿ. ಒಂದೇ ಬಾರಿ ಒಂದು ಲೀಟರ್ ನೀರು ಕುಡಿಯಲು ಸಾಧ್ಯವಿಲ್ಲ ಎನ್ನುವವರು ದಿನದಲ್ಲಿ ಮೂರ್ನಾಲ್ಕು ಬಾರಿ ನೀರನ್ನು ಕುಡಿಯಬೇಕು. 

Health Tips: ಇಮ್ಯುನಿಟಿ ಬೂಸ್ಟರ್ ಆಗಿ ಕೆಲಸ ಮಾಡುತ್ತೆ ಈ ಸೊಪ್ಪು

ಏಲಕ್ಕಿ ನೀರಿನ ಪ್ರಯೋಜನಗಳು :
ತೂಕ ಇಳಿಕೆಗೆ ಏಲಕ್ಕಿ ನೀರು :
ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಏಲಕ್ಕಿ ನೀರನ್ನು ಸೇವನೆ ಮಾಡಬಹುದು.  ಅನೇಕ ಅಧ್ಯಯನಗಳಿಂದಲೂ ಇದು ಸಾಭೀತಾಗಿದೆ.  ಏಲಕ್ಕಿಯಲ್ಲಿರುವ ಆಂಟಿ-ಆಕ್ಸಿಡೆಂಟ್ ಫೈಬರ್ ಮತ್ತು ಇತರ ಪ್ರಮುಖ ಪೋಷಕಾಂಶಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

ಉತ್ತಮ ಜೀರ್ಣಕ್ರಿಯೆ (Digestive System) : ಏಲಕ್ಕಿಯಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ ಪೋಷಕಾಂಶವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.  ಹೊಟ್ಟೆ ನೋವಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಏಲಕ್ಕಿ ಸಹಾಯ ಮಾಡುತ್ತದೆ. ಏಲಕ್ಕಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ಏಲಕ್ಕಿ ನೀರನ್ನು ನಿಯಮಿತವಾಗಿ ಸೇವನೆ ಮಾಡಿದ್ರೆ ಹೊಟ್ಟೆ ಸ್ವಚ್ಛವಾಗುತ್ತದೆ.  ಊಟದ ನಂತ್ರ ಒಂದು ಏಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಜಗಿದ್ರೆ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ (Cholesterol level Control) : ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ನೀವು ಏಲಕ್ಕಿ ನೀರನ್ನು ಬಳಸಬಹುದು. ಏಲಕ್ಕಿ ನೀರನ್ನು  ನಿಯಮಿತವಾಗಿ ಬಳಕೆ ಮಾಡುವುದ್ರಿಂದ ಕೊಲೆಸ್ಟ್ರಾಲ್ ಮಟ್ಟ ಸಮತೋಲನಕ್ಕೆ ಬರುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಏಲಕ್ಕಿ ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿದ್ದರೆ ಅದನ್ನು ತಡೆಯುವ ಕೆಲಸವನ್ನು ಏಲಕ್ಕಿ ಮಾಡುತ್ತದೆ.

ಕಾಟನ್ ಬೆಡ್‌ಶೀಟ್‌ ಬಳಸಿದ್ರೆ ಉಸಿರಾಟದ ಸಮಸ್ಯೆ ಕಾಡಲ್ಲ

ಮಧುಮೇಹಿಗಳಿಗೆ (Diabetic) ಒಳ್ಳೆಯದು ಏಲಕ್ಕಿ : ಏಲಕ್ಕಿ ನೀರು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿದ್ದವರು ಏಲಕ್ಕಿ ನೀರನ್ನು ಸೇವನೆ ಮಾಡಬೇಕು. ಏಲಕ್ಕಿಯನ್ನು ನಿಯಮಿತವಾಗಿ ಸೇರಿಸಿದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
 

Follow Us:
Download App:
  • android
  • ios