ಈಗ ಎಲ್ಲೆಡೆ ಕೊರೋನಾ ವೈರಸ್‌ ಕಾಯಿಲೆಯದ್ದೇ ಸುದ್ದಿ. ತಮಗೆ ಆ ಕಾಯಿಲೆ ಇದೆಯೋ ಇಲ್ಲವೋ, ಪರೀಕ್ಷೆ ಮಾಡಿಸಿಕೊಳ್ಳಲು ಜನ ಸಾಲುಗಟ್ಟಿದ್ದಾರೆ. ಸ್ವಲ್ಪ ಆ ಲಕ್ಷಣಗಳು, ಕಾಯಿಲೆಯ ಆತಂಕ ಕಂಡುಬಂದರೂ ಸಾಕು- ತಾವೇ ಆಸ್ಪತ್ರೆಗೆ ಹೋಗುತ್ತಾರೆ. ಒಂದು ವೇಳೆ ನೀವು ವಿದೇಶದಿಂಧ ಬಂದಿದ್ದವರ ಸಂಪರ್ಕದಲ್ಲಿದ್ದರೆ, ಅಥವಾ ಸೋಂಕು ಪೀಡಿತರು ಎಂದು ಖಚಿತಗೊಂಡವರ ಸಹವಾಸ ಮಾಡಿದ್ದರೆ, ಅಂಥ ಸಂದರ್ಭದಲ್ಲಿ ಖಂಡಿತವಾಗಿಯೂ ನಿಮ್ಮನ್ನು ಐಸೋಲೇಶನ್‌ನಲ್ಲಿ ಇಡಲಾಗುತ್ತದೆ. ಹೀಗಾಗಿ ನಮ್ಮ ದೇಶದ ಬಹುತೇಕ ಎಲ್ಲ ಆಸ್ಪತ್ರೆಗಳೂ ಈಗ ನೊವೆಲ್‌ ಕೊರೊನಾ ವೈರಸ್‌ ಸೋಂಕಿತರು- ಶಂಕಿತರಿಗಾಗಿಯೇ ಮೀಸಲು ಆದಂತಿವೆ.

 

ಇದು ನಿಜ. ಹೆಚ್ಚಿನ ಬೃಹತ್, ದೊಡ್ಡ, ಸಣ್ಣ ಆಸ್ಪತ್ರೆಗಳಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಂದಾಗಿ ದಾಖಲಾದವರನ್ನು ಮನೆಗೆ ಕಳಿಸಲಾಗುತ್ತಿದೆ. ಸದ್ಯಕ್ಕೆ ನಿಮ್ಮ ಆರೋಗ್ಯ ನೀವೇ ನಿಭಾಯಿಸಿಕೊಳ್ಳಿ. ಏನಾದರೂ ಎನರ್ಜೆನ್ಸಿ ಕಂಡುಬಂದರೆ ಮಾತ್ರವೇ ಇಲ್ಲಿಗೆ ಬನ್ನಿ ಎಂಬ ಒಕ್ಕಣೆಯೊಡನೆ ಅವರನ್ನು ವಾಪಸ್‌ ಕಳಿಸಲಾಗುತ್ತಿದೆ. ತುರ್ತು ಪರಿಸ್ಥಿತಿ ಹೊರತುಪಡಿಸಿದರೆ ಇನ್ಯಾವ ಕೇಸಗಳನ್ನೂ ತಾವು ನೋಡೋಲ್ಲ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರು ಹಾಗೂ ಆಸ್ಪತ್ರೆಗಳಿಗೂ ಮೇಲಿನಿಂದ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸೂಚನೆ ಇದೆ. ಆಸ್ಪತ್ರೆ ಮಂಚಗಳನ್ನು ಹಾಗೂ ಐಸಿಯುಗಳನ್ನು, ವೆಂಟಿಲೇಟರ್‌ಗಳನ್ನು ಖಾಲಿ ಇಟ್ಟುಕೊಳ್ಳಿ. ಒಂದು ವೇಳೆ ಕೊರೋನಾ ಸೋಂಕಿತರ ಸಂಖ್ಯೆ ಉಲ್ಬಣಗೊಂಡರೆ ಬೇಕಾಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಆಸ್ಪತ್ರೆಗಳಲ್ಲೂ ಯಾರನ್ನೂ ಅಡ್ಮಿಟ್‌ ಮಾಡಿಕೊಳ್ಳಲಾಗುತ್ತಿಲ್ಲ.

 

ಇಂಥ ಸಂದರ್ಭದಲ್ಲಿ ನಾವು ಏನು ಮಾಡಬೇಕು?

ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು. ಆಸ್ಪತ್ರೆಗೆ ಹೋಗುವ ಪರಿಸ್ಥಿತಿಯನ್ನು ತಂದುಕೊಳ್ಳಲೇಬಾರದು. ಮನೆಯಲ್ಲಿ ವೃದ್ಧರು ಇದ್ದರೆ, ಅವರ ಆರೋಗ್ಯಕ್ಕೆ ಬೇಕಾದ ಐಟಂಗಳನ್ನು ತಂದಿರಿಸಿಕೊಳ್ಳಿ. ಉದಾಹರಣೆಗೆ ಅವರು ಮಧುಮೇಹ ಪೀಡಿತರಾಗಿದ್ದರೆ ಇನ್ಸುಲಿನ್, ಉಸಿರಾಟದ ಸಮಸ್ಯೆ ಇರುವವರಾಗಿದ್ದರೆ ಇನ್‌ಹೇಲರ್- ಇತ್ಯಾದಿ. ವೃದ್ಧರಿಗೆ ಅತಿ ಶೀತದ ಆಹಾರ ಕೊಡಬೇಡಿ.

 

3 ನೇ ಸ್ಟೇಜ್‌ನಲ್ಲಿ ಕೊರೋನಾ; ಡೇಂಜರ್‌ನಲ್ಲಿ ಭಾರತ...
 

ಮಕ್ಕಳ ಆರೋಗ್ಯ ಏರುಪೇರು ಆಗುವಂಥ ತಿಂಡಿ- ಆಹಾರ- ಪಾನೀಯಗಳನ್ನು ಕೊಡಬೇಡಿ. ಮಕ್ಕಳಿಗೆ ಕೋಲ್ಡ್ ಆಗದಂತೆ, ಕೆಮ್ಮು ಬಾಧಿಸದಂತೆ ನೋಡಿಕೊಳ್ಳಿ. ನೀವೂ ಅಂಥ ಆಹಾರಗಳಿಂದ ದೂರವಿರಿ. ಸಾಮಾನ್ಯ ಕೆಮ್ಮು ಆಗಿದ್ದರೆ ಅದಕ್ಕೆ ಮನೆ ಮದ್ದೇ ಸಾಕಾಗುತ್ತದೆ. ನಮ್ಮ ಅಡುಗೆ ಮನೆಗಳಲ್ಲಿರುವ ಜೀರಿಗೆ, ಶುಂಠಿ, ಕೊತ್ತಂಬರಿ, ಜ್ಯೇಷ್ಠಮಧು ಇತ್ಯಾದಿಗಳಿಂದ ಮಾಡಿದ ಕಷಾಯವೇ ಇವುಗಳನ್ನು ತಡೆಯಲು ಸಾಕಾಗುತ್ತದೆ.

ದಂತ ಚಿಕಿತ್ಸಾಲಯಗಳು ಬಂದ್‌ ಆಗಿವೆ. ಮುಂದಿನ ಸೂಚನೆ ಬರೋವರೆಗೂ ಅವುಗಳನ್ನು ಓಪನ್‌ ಮಾಡುವಂತಿಲ್ಲ. ಹೀಗಾಗಿ ಹಲ್ಲು ನೋವು ಬಂದರೆ ನಿಮಗೆ ನೀವೇ ಗತಿ. ಸಣ್ಣ ಮಟ್ಟಿನ ಹಲ್ಲು ಸೆಳುಕು ಆದರೆ ಲವಂಗ ಇಟ್ಟುಕೊಂಡರೆ ಸಾಕು, ಸರಿ ಹೋಗುತ್ತದೆ. ನೋವು ಹೆಚ್ಚಾದರೆ ಪೇನ್‌ ಕಿಲ್ಲರ್‌ ಸೇವಿಸಬಹುದು. ಆದರೆ ಪ್ರತಿದಿನ ಎರಡು ಬಾರಿ ಹಲ್ಲು ಕ್ಲೀನಾಗಿ ಉಜ್ಜಿಕೊಂಡು ದಂತ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ.

 

ಕೊರೋನಾ: ವಿದೇಶದಿಂದ ಈ ವರೆಗೆ ಬಂದಿದ್ದು 35 ಸಾವಿರಕ್ಕೂ ಅಧಿಕ ಜನ?

 

ಹುಷಾರಾಗಿ ನಡೆಯಿರಿ. ಮನೆ ಕ್ಲೀನಾಗಿರಲಿ. ಯಾವುದೇ ಕಾಯಿಲೆ ಅಥವಾ ಸೋಂಕು ಬರಿಸಿಕೊಳ್ಳಬೇಡಿ. ಜಾರಿ ಬಿದ್ದು ಕಾಲಿಗೆ ಏಟು ಮಾಡಿಕೊಂಡರೂ ವೈದ್ಯರು ನಿಮ್ಮನ್ನು ಅಟೆಂಡ್‌ ಮಾಡಲಾರರು. ನೀವೇ ಪೇಯ್ನ್‌ ಕಿಲ್ಲರ್‌ ತಿಂದು ಸುಧಾರಿಸಿಕೊಳ್ಳಬೇಕಾದೀತು.