Run ಮಾಡುವುದಕ್ಕೂ, ಬುದ್ಧಿವಂತರಾಗೋದಕ್ಕೂ ಏನಾದರೂ ಲಿಂಕ್ ಇದೆಯಾ?

ಪ್ರಸ್ತುತ ಕಾಲಮಾನದಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚಿನ ಜನರು ಗಮನಹರಿಸುತ್ತಾರೆ ಹಾಗೂ ಇದಕ್ಕಾಗಿ ಯೋಗ ಎಕ್ಸಸೈಜ್ ವಾಕಿಂಗ್ ಮಾಡುತ್ತಾರೆ ಜೊತೆಗೆ ರನ್ನಿಂಗ್ ಅಭ್ಯಾಸ ಕೂಡ ಬೆಳೆಸಿಕೊಂಡಿರುತ್ತಾರೆ ಓಡುವುದರಿಂದ ದೇಹದ ಆರೋಗ್ಯ ಹೆಚ್ಚುವುದರ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ಬುದ್ಧಿವಂತಿಕೆ ಕೂಡ ಹೆಚ್ಚುತ್ತದೆ!!

Does running directly linked with increase of IQ

ಪ್ರತಿದಿನ ಬೆಳಗ್ಗೆ ಯೋಗ, ಎಕ್ಸಸೈಸ್, ಧ್ಯಾನ ಹಾಗೂ ವಾಕಿಂಗ್ ಇವುಗಳ ಜೊತೆಗೆ ಓಡುವ ಅಭ್ಯಾಸ ಕೂಡ ಹಲವರು ಬೆಳೆಸಿಕೊಂಡಿರುತ್ತಾರೆ. ಓಡುವುದು ಅಥವಾ ರನ್ನಿಂಗ್ ಮಾಡುವುದರಿಂದ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತದೆ. ಈ ಕಾರಣದಿಂದಾಗಿ ಹಲವಾರು ಜನರು ತಮ್ಮ ನಿತ್ಯದ ದಿನಚರಿಯಲ್ಲಿ ಜಾಗಿಂಗ್ ಕೂಡ ಸೇರಿಸಿ ಕೊಂಡಿರುತ್ತಾರೆ. ಓಡುವುದರಿಂದ ಮೆಟಬಾಲಿಸಂ ಹೆಚ್ಚುತ್ತದೆ. ಇದರಿಂದಾಗಿ, ದೇಹದಲ್ಲಿರುವ ಅನಾವಶ್ಯಕ ಕೊಬ್ಬು ಕರಗುತ್ತದೆ ಎನ್ನುವ ವಿಷಯ ಎಲ್ಲರಿಗೂ ತಿಳಿದಿರುತ್ತದೆ. ತಜ್ಞರು ಹೇಳುವ ಪ್ರಕಾರ- ಓಡುವ ಅಭ್ಯಾಸದಿಂದ ನಿಮ್ಮ ಮಾನಸಿಕ ಸ್ಥೈರ್ಯ ಹಾಗೂ ಆಲೋಚನಾಶಕ್ತಿ ವೃದ್ಧಿಯಾಗುತ್ತದೆ. ಅದಷ್ಟೇ ಅಲ್ಲದೆ ನಿಮ್ಮ ಮೂಡನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ರನ್ನಿಂಗ್ ಒಳ್ಳೆಯ ಅಭ್ಯಾಸ.‌ ಇದರಿಂದಾಗಿ ಸ್ಟ್ರೆಸ್ ಕಡಿಮೆಯಾಗುತ್ತದೆ, ಮಾನಸಿಕ ತಳಮಳ ದೂರವಾಗುತ್ತದೆ ಹಾಗೂ ಇಲ್ಲಸಲ್ಲದ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಣ ಮಾಡುವುದನ್ನು ತಡೆಯಬಹುದು.

ಓಡುವುದರಿಂದ ಒತ್ತಡ (Stress) ಕಡಿಮೆಯಾಗುತ್ತದೆ
ಪ್ರತಿದಿನ ಓಡುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ಕ್ರಮೇಣವಾಗಿ ಒತ್ತಡ ಹಾಗೂ ಉದ್ವೇಗ ಕಡಿಮೆಯಾಗುತ್ತದೆ. ಒತ್ತಡವನ್ನು ಹೆಚ್ಚಿಸುವಂತಹ ಹಾರ್ಮೋನುಗಳ ಬೆಳವಣಿಗೆಯನ್ನು ರನ್ನಿಂಗ್ ಕಡಿಮೆ ಮಾಡುತ್ತದೆ. ಬೆಳಗಿನ ಮಂಜು ಕವಿದ ವಾತಾವರಣದಲ್ಲಿ ಓಡುವುದರಿಂದ, ಶುದ್ಧ ಗಾಳಿ ಸೇವಿಸುವುದರಿಂದ ಮನಸ್ಸು ಸ್ಥಿಮಿತಕ್ಕೆ (Control) ಬರುತ್ತದೆ. ಮಾನಸಿಕ ಒತ್ತಡ ಹೆಚ್ಚಾದಂತೆ ಇಲ್ಲಸಲ್ಲದ ಆಲೋಚನೆಗಳು ನಿಮ್ಮ ತಲೆಯನ್ನು ಮುತ್ತಿಬಿಡುತ್ತವೆ ಫಲಿತಾಂಶ ಸ್ಟ್ರೆಸ್‌ ಹೆಚ್ಚುತ್ತದೆ. ಸುಲಭವಾಗಿ ಆದಷ್ಟು ಬೇಗ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ಪ್ರತಿದಿನ ಓಡುವ ಅಭ್ಯಾಸ ರೂಢಿಸುಕೊಳ್ಳುವುದು ಸುಲಭ (Easy) ಉಪಾಯ.

Bad Breath Remedies: ಬಾಯಿ ವಾಸನೆಯಿಂದ ಪಾರಾಗೋಕೆ ಮನೆಯಲ್ಲೇ ಇವೆ ಮದ್ದು
 

‌‍‌ ಪ್ರೊಡಕ್ಟಿವಿಟಿ (Productivity) ಯನ್ನು ಹೆಚ್ಚಿಸುತ್ತದೆ.
ಪ್ರತಿದಿನ ಓಡುವುದರಿಂದ ಹಾಗೂ ವ್ಯಾಯಾಮ ಮಾಡುವುದರಿಂದ ನಿಮ್ಮ ಉತ್ಪಾದನಾ ಶಕ್ತಿ ಹೆಚ್ಚುತ್ತದೆ. ಮನಸ್ಸು ಮರ್ಕಟದಂತೆ, ಒಂದೇ ಸಲಕ್ಕೆ ನೂರಾರು ಯೋಜನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದಾಗ ಯಾವುದೇ ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ಕೇಂದ್ರಿಕರಿಸಲು (Concentration) ಕಷ್ಟವಾಗುತ್ತದೆ. ಆದರೆ, ವ್ಯಾಯಾಮ (Excercise) ಹಾಗೂ ರನ್ನಿಂಗ್ ಇಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಈ ಕಾರಣದಿಂದಾಗಿ ನಿಮಗೆ ಬೇಕಾಗಿರುವ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಿ ಇದರಿಂದ ನಿಮ್ಮ ಪ್ರೊಡಕ್ಟಿವಿಟಿ ಹೆಚ್ಚುತ್ತದೆ.

ಆತ್ಮವಿಶ್ವಾಸ (Confidence) ಹೆಚ್ಚುತ್ತದೆ 
ನೀವು ಪ್ರತಿದಿನ ಓಡುವುದರಿಂದ ದಿನದಿಂದ ದಿನಕ್ಕೆ ನಿಮ್ಮ ಓಡುವಿಕೆ ವೇಗ  ಹೆಚ್ಚುತ್ತ ಹೋಗುತ್ತದೆ. ಇದರಿಂದಾಗಿ, ನೀವು ದಿನಕ್ಕೊಂದು ಗುರಿ (Goal) ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಕ್ರಮಬದ್ಧವಾಗಿ ನಿಮ್ಮ ವೇಗ ಹೆಚ್ಚಿಸಿಕೊಳ್ಳುತ್ತಾ ಹೋದಂತೆ ನಿಮ್ಮ ಆತ್ಮಶಕ್ತಿ ಹೆಚ್ಚುತ್ತದೆ. ಇದರಿಂದ ನಿಮಗೆ ನಿಮ್ಮ ಬಗ್ಗೆ ಆತ್ಮವಿಶ್ವಾಸ ಬೆಳೆಯುತ್ತದೆ. ತೆಗೆದುಕೊಂಡ ನಿರ್ಧಾರವನ್ನು (Decision) ಸಾಧಿಸುವ ತನಕ ನಿಲ್ಲಬಾರದು ಎಂಬ ಛಲ ನಿಮ್ಮ ಸಾಧನೆಗೆ ಹಾದಿಯಾಗುತ್ತದೆ. 

Type 2 Diabetes :ವಾಕಿಂಗ್‌ ಮಾಡುವುದರಿಂದ ದೊಡ್ಡ ರಿಲೀಫ್
 

ನಿಮ್ಮ ಜಾಣ್ಮೆಯನ್ನು (Intelligence) ಹೆಚ್ಚಿಸುತ್ತದೆ
ಇದನ್ನು ಕೇಳಿದರೆ ಸ್ವಲ್ಪ ಆಶ್ಚರ್ಯವಾಗಬಹುದು ಆದರೆ ಕ್ರಮಬದ್ಧವಾಗಿ ರನ್ನಿಂಗ್ ಮಾಡುವುದರಿಂದ ನಿಮ್ಮ ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ. ಮನಸ್ಸಿನ ಆರೋಗ್ಯ ದೇಹದ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ದೇಹ ಎಷ್ಟು ಸದೃಢವಾಗಿರುತ್ತದೆಯೋ, ಮನಸ್ಸು ಕೂಡ ಅಷ್ಟೇ ಸದೃಢವಾಗಿರುತ್ತದೆ. ಆರೋಗ್ಯದಲ್ಲಿ ಸಮಸ್ಯೆಗಳು ಕಡಿಮೆಯಾದಾಗ ನಿಮ್ಮ ಮೆದುಳು (Brain) ಹೊಸ ಹೊಸ ಯೋಚನೆಗಳ ಬಗ್ಗೆ ಗಮನಹರಿಸುತ್ತದೆ ಹಾಗೂ ಈ ಎಲ್ಲಾ ಕಾರಣಗಳಿಂದಾಗಿ ಜಾಣ್ಮೆ ಹಾಗೂ ಬುದ್ಧಿವಂತಿಕೆ ಕೂಡ ಹೆಚ್ಚುತ್ತದೆ.

ಪ್ರತಿದಿನ ನಿಯಮಿತವಾಗಿ ಓಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದಾಗಿ, ದೈಹಿಕವಾಗಿ ಸದೃಢವಾಗುತ್ತ ಬರುತ್ತೀರಾ ಇದರ ಜೊತೆಗೆ ಮಾನಸಿಕ ಸ್ಥಿಮಿತವನ್ನು  ಕೂಡ ಕಂಡುಕೊಳ್ಳಬಹುದು ಇಷ್ಟೆಲ್ಲ ಉಪಯೋಗ ಇರುವಾಗ ಓಡುವುದನ್ನು ರೂಢಿ (Routine) ಮಾಡಿಕೊಳ್ಳಿ..

Latest Videos
Follow Us:
Download App:
  • android
  • ios