Type 2 Diabetes :ವಾಕಿಂಗ್ ಮಾಡುವುದರಿಂದ ದೊಡ್ಡ ರಿಲೀಫ್
ವಯಸ್ಸಾದವರಲ್ಲಿ ಕಂಡುಬರುವ ಟೈಪ್ 2 ಡಯಾಬಿಟೀಸ್‌ಗೆ ಪ್ರತಿ ದಿನ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ವಿಷಯವನ್ನು ಇತ್ತೀಚೆಗೆ ಸಂಶೋಧನೆಯೊಂದು ಸಾಭೀತು ಪಡಿಸಿರುವ ವರದಿ ಇಲ್ಲಿದೆ.
ಇತ್ತೀಚಿನ ದಿನದಲ್ಲಿ ನಡೆಸಿದ ಹೊಸ ಸಂಶೋಧನೆಯ (Walking) ಪ್ರಕಾರ ಪ್ರತಿದಿನ ನಿಯಮಿತವಾಗಿ ನಡೆಯುವುದರಿಂದ 70 ರಿಂದ 80 ವರ್ಷ ವಯಸ್ಸಿನವರಲ್ಲಿ ಕಂಡುಬರುವ ಮಧುಮೇಹವನ್ನು (Diabetes) ಕಡಿಮೆ ಮಾಡಬಹುದು ಎಂಬ ವರದಿ ಬಂದಿದೆ.ಈ ಅಧ್ಯಯನದ ಪ್ರಕಾರ ನೀವು ನಡೆಯುವ ಪ್ರತಿ 1000 ಹೆಜ್ಜೆಗಳಷ್ಟು ನಡಿಗೆಯಿಂದ ಶೇಕಡ (Percent) 6 ರಷ್ಟು ಮದುಮೇಹವನ್ನು ಕಡಿಮೆ (Decrease) ಮಾಡಿಕೊಳ್ಳಬಹುದು. ಇದೇ ಲೆಕ್ಕಾಚಾರದ ಪ್ರಕಾರ 70 ರಿಂದ 80 ವರ್ಷ ವಯಸ್ಸಾದವರು ಪ್ರತಿದಿನವೂ 2000 ಹೆಜ್ಜೆಗಳಷ್ಟು ನಡೆಯಬೇಕು ಇದರಿಂದಾಗಿ 12 ಪರ್ಸೆಂಟ್ ಮದುಮೇಹದ ಅಪಾಯವನ್ನು (Risk) ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಮಧುಮೇಹ:
ಇತ್ತೀಚಿನ ದಿನಗಳಲ್ಲಿ ಮದುಮೇಹ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಮದುಮೇಹದ ತೀವ್ರತೆಯು ಒಂದೊಂದು ವಯಸ್ಸಿನವರಲ್ಲಿ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೆಯೇ ಅದಕ್ಕೆ ಪರಿಹಾರ ಕೂಡ ವಿಭಿನ್ನ ರೀತಿಯಲ್ಲಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: Food And Health: ಸೀಸನಲ್ ಫುಡ್ ಯಾಕೆ ಸೇವಿಸಬೇಕು ?
ಮಧುಮೇಹಕ್ಕೆ ಮುಖ್ಯ ಕಾರಣ (Reason):
ಈ ಡಯಾಬಿಟೀಸ್ ಕಾಣಿಸಿಕೊಳ್ಳಲು ಕೆಲವೊಮ್ಮೆ ನಮ್ಮ ಸೋಮಾರಿತನವೂ ಕಾರಣವಾಗಬಹುದು. ಅದರಲ್ಲಿಯೂ ಈಗಿನ ಕಾಲಮಾನದವರು ದೇಹ ದಂಡಿಸುವುದೇ ಕಷ್ಟ. ಎಲ್ಲಾ ಕೆಲಸಗಳು ಕುಳಿತಲ್ಲಿಂದಲೇ (Sitting) ಮಾಡಲು ಸಾಧ್ಯವಾಗುವುದೇ ಎಂದು ಪ್ರಯತ್ನ ಪಡುತ್ತಾರೆ. ಆದರೇ ಇದೇ ಕಾರಣದಿಂದ ಮುಂದೆ ಡಯಾಬಿಟೀಸ್ ನಂತಹ ಕಾಯಿಲೆಗೆ ತುತ್ತಾಗುವಂತೆ ಮಾಡಬಹುದು. ಹೆಚ್ಚಿನ ಸಂಶೋಧನೆಗಳು ತಿಳಿಸುವ ಪ್ರಕಾರ ಡಯಾಬಿಟಿಸ್‌ಗೆ ದೇಹವನ್ನು ಹೆಚ್ಚು ಚಲಿಸದೇ (Physical activity) ಇರುವುದು ಕೂಡ ಕಾರಣ, 65 ವರ್ಷ ಮೇಲ್ಪಟ್ಟವರು ಕೈ ಕಾಲು ನೋವು ಎಂಬ ಕಾರಣದಿಂದ ದೈಹಿಕ ಚಟುವಟಿಕೆ ಕಡಿಮೆ ಮಾಡುತ್ತಾರೆ ಇದರಿಂದಾಗಿ ಟೈಪ್ 2 (Type 2) ಮದುಮೇಹ ಕಾಣಿಸಿಕೊಳ್ಳುತ್ತದೆ.
ಮಧುಮೇಹಕ್ಕೆ ಪರಿಹಾರ
ಮಧುಮೇಹ ಅಪಾಯಕಾರಿ ನಿಜ ಆದರೆ ಇದಕ್ಕಾಗಿ ನೀವು ಗಾಬರಿ ಬೀಳುವುದು ಬೇಡ ಬದಲಿಗೆ ವೈದ್ಯರ (Doctor) ಸಲಹೆಯ ಪ್ರಕಾರ ನಿಯಮಿತ ಡಯಟ್ (Diet) ಪಾಲಸಿ ಜೊತೆಗೆ ವ್ಯಾಯಾಮ, ಜಾಗಿಂಗ್ (Jogging) ಹಾಗೂ ವಾಕಿಂಗ್ ನಂತಹ ಅಭ್ಯಾಸ ರೂಢಿಸಿಕೊಳ್ಳಿ. ಮಧ್ಯಮ ವಯಸ್ಸಿನಲ್ಲಿರುವವರು ಹೆಚ್ಚು ತೀವ್ರತೆ ಇರುವ ಎಕ್ಸಸೈಜ಼್ (Exercise)ಮಾಡುತ್ತೀರಿ ಆದರೆ 70 ವರ್ಷ ಮೇಲ್ಪಟ್ಟವರಿಗೆ ಇಂತಹ ಚಟುವಟಿಕೆ ಮಾಡಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಇವರು ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬಹುದು.
ವಾಕಿಂಗ್ ಮಾಡಲು ಪ್ರಾರಂಭ ಮಾಡಿದ ಒಂದೇ ದಿನಕ್ಕೆ ಹೆಚ್ಚು ದೂರ ನಡೆಯಲು ಸಾದ್ಯವಾಗುವುದಿಲ್ಲ. ಆದರೂ ಒತ್ತಾಯ ಪೂರ್ವಕವಾಗಿ ನಡೆದರೆ ಕಾಲುಗಂಟು, ಹಿಮ್ಮಡಿ ಹಾಗು ತೊಡೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಂದೇ ಬಾರಿಗೆ ಈ ಅಭ್ಯಾಸವನ್ನು ರೂಢಿಸಿಕೊಳ್ಳಲು ನಿಮ್ಮ ದೇಹಕ್ಕೆ (Body) ಸಾಧ್ಯವಾಗುವುದಿಲ್ಲ ಆದ್ದರಿಂದ ದಿನದಿಂದ ದಿನಕ್ಕೆ ಹೆಜ್ಜೆಯ (Steps) ಸಂಖ್ಯೆಗಳನ್ನು ಹೆಚ್ಚಿಸುತ್ತಾ ಬನ್ನಿ ಆಗ ನಿಮ್ಮ ದೇಹ ನಿಧಾನವಾಗಿ (Slowly) ವಾಕಿಂಗ್‌ಗೆ ಹೊಂದಿಕೊಳ್ಳುತ್ತಾ ಬರುತ್ತದೆ.
ಇದನ್ನೂ ಓದಿ: Barefoot Walk: ಬರಿಕಾಲಿನಲ್ಲಿ ನಡೆಯುವುದರಿಂದ ಬಹಳಷ್ಟು ಪ್ರಯೋಜನ
ವಾಕಿಂಗ್ ಮಾಡುವುದರಿಂದ ಹಲವಾರು ಸಮಸ್ಯೆಗಳಿಂದ (Problems) ದೂರ ಉಳಿಯಬಹುದು ರಕ್ತಸಂಚಾರ ಸುಗಮವಾಗುವುದರಿಂದ ಹೃದಯ (Heart) ಸಂಬಂಧಿ ತೊಂದರೆಗಳು ದೂರಾಗುತ್ತವೆ ಜೊತೆಗೆ ಕೊಲಸ್ಟ್ರಾಲ್ ದೂರ ಮಾಡಿ ದೇಹದ ತೂಕ ಕಡಿಮೆ (Weight loss) ಮಾಡುವುದಕ್ಕೆ ವಾಕಿಂಗ್ ಉತ್ತಮ ಮಾರ್ಗ ಅದೂ ಅಲ್ಲದೆ ವಾಕಿಂಗ್ ಮಾಡುವುದು ಬೇರೆ ವ್ಯಾಯಾಮಗಳನ್ನು ಮಾಡುವುದಕ್ಕಿಂತ ಸುಲಭವೂ ಆಗಿರುವುದರಿಂದ ವಯಸ್ಸಾದವರೂ ಮಾಡಬಹುದು. ಆದರೆ ವಾರದಲ್ಲಿ (Weekly) ಒಂದು ಅಥವಾ ಎರಡು ಬಾರಿ ವಾಕಿಂಗ್ ಮಾಡಿ ಮೂರನೇ ದಿಕ್ಕೆ ಮರೆತು ಬಿಟ್ಟರೆ ಯಾವುದೇ ಪ್ರಯೋಜನವಿರುವುದಿಲ್ಲ (Use). ನಿಯಮಿತವಾಗಿ ಮಾಡಿದಾಗ ಮಾತ್ರ ಫಲಿತಾಂಶ (Result) ದೊರೆಯುತ್ತದೆ.