ಹಣದಿಂದ ನೆಮ್ಮದಿ ಕೊಳ್ಳಬಹುದಾ? ದುಡ್ಡಿದ್ದಷ್ಟೂ ಖುಷಿ ಹೆಚ್ಚಾಗುತ್ತಾ?

ಹೆಚ್ಚು ಗಳಿಸಬೇಕು, ಹಣ ಮಾಡಬೇಕು ಎನ್ನುವ ಧಾವಂತ ಎಲ್ಲರಲ್ಲೂ ಇರುವುದರಿಲ್ಲ. ಜೀವನಕ್ಕೆ ಬೇಕಾದಷ್ಟು ದುಡಿಯಬೇಕು ಎನ್ನುವುದೇ ಬಹುತೇಕ ಜನರ ಇಚ್ಛೆ. ಹಣ ಯಾವ ಪ್ರಮಾಣದಲ್ಲಿ ಅಗತ್ಯ ಎನ್ನುವುದಕ್ಕೆ ಉತ್ತರವಿಲ್ಲ. ಆದರೆ, ಹೆಚ್ಚು ಹಣವಿದ್ದರೆ ಹೆಚ್ಚು ಸಂತಸ ಕಾಣಲು ಸಾಧ್ಯ ಎನ್ನುತ್ತದೆ ಹೊಸದೊಂದು ಅಧ್ಯಯನ.

does money bring happiness in life how it impacts on life sum

“ಹಣದಿಂದ ನೆಮ್ಮದಿ ಕೊಂಡ್ಕೊಳೋಕೆ ಆಗುತ್ತಾ?’ ಎನ್ನುವುದು ಸಾಮಾನ್ಯ ಡೈಲಾಗ್. ಇಲ್ಲವೇ ಇಲ್ಲ ಎಂದು ನಾವೆಲ್ಲರೂ ದೃಢವಾಗಿ ನಂಬಿದ್ದೇವೆ. ಹೀಗಾಗಿ, ಹಣದ ಬಗ್ಗೆ ಒಂದು ರೀತಿಯ ಜಿಗುಪ್ಸೆ. ಹಣ ಬೇಕು ಎನ್ನುವ ಆಸೆ, ಆದರೆ, ಹಣದಿಂದಲೇ ಎಲ್ಲೂ ಅಲ್ಲ ಎನ್ನುವ ಒಣ ಹೇಳಿಕೆ ಹೇಳಿಕೊಂಡು ಸುಮ್ಮನಿರುತ್ತೇವೆ. ಸಾಕಷ್ಟು ದುಡಿಯುವ ಅವಕಾಶವನ್ನು ಯಾರೂ ಕಳೆದುಕೊಳ್ಳುವುದಿಲ್ಲವಾದರೂ, ಕೆಲವರಿಗೆ ಹಣದ ಬಗ್ಗೆ ಹೆಚ್ಚಿನ ಮೋಹ ಇಲ್ಲದಿರುವುದರಿಂದ ಅದನ್ನು ಬೆಂಬತ್ತುವುದಿಲ್ಲ. ಮೊದಲೇ ಹೇಳಿದರಂತೆ, ಹಣದಿಂದ ನೇರವಾಗಿ ನೆಮ್ಮದಿ ಖರೀದಿಸಲು ಸಾಧ್ಯವಿಲ್ಲವಾದರೂ ನೆಮ್ಮದಿ ನೀಡುವಂತಹ ಹಲವು ವಿಧಾನಗಳ ಮೊರೆ ಹೋಗಲು ಸಾಧ್ಯವಿದೆ ಎನ್ನುವುದನ್ನು ನಾವೆಲ್ಲ ಜಾಣತನದಿಂದ ಮರೆತುಬಿಡುತ್ತೇವೆ. ಹೀಗಾಗಿ, ಮೊಟ್ಟಮೊದಲು ಹಣದ ಕುರಿತಾಗಿ ನಮ್ಮಲ್ಲಿರುವ ಹಿಂಜರಿಕೆಯನ್ನು ತೊಡೆದು ಹಾಕಬೇಕು. ಹಣ ಗಳಿಸುವ ಎಲ್ಲ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಏಕೆಂದರೆ, ಹಣದಿಂದ ಖಂಡಿತವಾಗಿ ಖುಷಿ ದೊರೆಯುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೆಚ್ಚು ಆದಾಯ ಹೊಂದಿರುವವರು ಹೆಚ್ಚು ಸುಖಿಗಳಾಗಿರುತ್ತಾರೆ. ಕಡಿಮೆ ಆದಾಯದವರಿಗಿಂತಲೂ ಹೆಚ್ಚಿನ ಸಂತಸ ಅವರಲ್ಲಿರುತ್ತದೆ ಎಂದು ಹೊಸ ಅಧ್ಯಯನಗಳು ಹೇಳಿವೆ. ಆದರೆ, ನಮ್ಮಲ್ಲಿ ನೆಮ್ಮದಿ ಮೂಡಲು ಹಣದೊಂದಿಗೆ ತೃಪ್ತಿಯ ಮಟ್ಟವೂ ಹೆಚ್ಚಿನ ಪ್ರಮಾಣದಲ್ಲಿರಬೇಕು ಎಂದು ಹೇಳಲಾಗಿದೆ.

ಅನುಭವ ಗಳಿಕೆಗೆ ಹಣ (Money)
ಹಣದಿಂದ ಖುಷಿಯಾಗಿರಲು ಸಾಧ್ಯ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಏಕೆಂದರೆ, ಹಣವಿದ್ದಾಗ ಖುಷಿ (Happiness) ಪಡುವುದಕ್ಕೆ ಏನೆಲ್ಲ ಬೇಕೋ ಅವುಗಳನ್ನು ಗಳಿಸಲು ಸಾಧ್ಯವಿದೆ. ಕೇವಲ ಬೇಕುಬೇಕಾದ ಸಲಕರಣೆಗಳನ್ನು (Things) ಕೊಳ್ಳುವುದಷ್ಟೇ ಅಲ್ಲ, ನಿಜವಾಗಿಯೂ ಆಂತರಿಕವಾಗಿ ಖುಷಿ ನೀಡುವ ಅನುಭವ (Experience) ಗಳಿಸಲು ಹಣವಿದ್ದಾಗ ಸಾಧ್ಯವಾಗುತ್ತದೆ. ಮಟೀರಿಯಲಿಸ್ಟಿಕ್ ವಸ್ತುಗಳ ಖರೀದಿಗಿಂತ ಹೊಸ ಅನುಭವಕ್ಕಾಗಿ ಹಣ ವೆಚ್ಚ (Spend) ಮಾಡುವುದು ಹೆಚ್ಚು ಸಂತಸ ನೀಡುತ್ತದೆ. ಅಲ್ಲದೆ, ಜನರ ಅಗತ್ಯಗಳಿಗಾಗಿಯೂ ವೆಚ್ಚ ಮಾಡಲು ಹಿಂದೆ ಮುಂದೆ ನೋಡಬೇಕಾಗುವುದಿಲ್ಲ. ನಿಮ್ಮಲ್ಲೇ ಹೆಚ್ಚು (More) ಹಣವಿದ್ದಾಗ ನಿಮ್ಮ ಕೆಲವು ಕೆಲಸಕಾರ್ಯಕ್ಕಾಗಿ ಮತ್ತೊಬ್ಬರನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅವರಿಗೆ ಉದ್ಯೋಗ (Job) ನೀಡಿದ ತೃಪ್ತಿ ನಿಮ್ಮದಾಗುತ್ತದೆ. ಯಾವುದರಲ್ಲಿ ನಿಮಗೆ ಖುಷಿ ಎನಿಸುತ್ತದೆಯೋ ಆ ಕೆಲಸ ಮಾಡುವ ಸ್ವಾತಂತ್ರ್ಯ (Freedom) ದೊರೆಯುತ್ತದೆ.

ಜಾಣರು ಮತ್ಸರದ ಭಾವನೆಗೆ ನೀರೆರೆಯೋದಿಲ್ಲ, ಅದ್ಯಾಕೆ ನೋಡಿ

•    ಹಣದಿಂದ ಆಯ್ಕೆ (Choice)
ನಿಮ್ಮಲ್ಲಿ ಹಣವಿದ್ದಾಗ ನಿಮಗೆ ಏನು ಬೇಕೋ ಅದನ್ನು ಮಾಡುವ ಆಯ್ಕೆ ಹೆಚ್ಚಾಗುತ್ತದೆ. ಪ್ರವಾಸ (Travel) ಮಾಡಬಹುದು, ಹೂಡಿಕೆ (Invest) ಮಾಡಬಹುದು, ಮಕ್ಕಳು-ಪಾಲಕರು, ಸಮೀಪದ ಸಂಬಂಧಿಗಳಿಗೆ ಹೊಸ ಅನುಭವ ದೊರಕಿಸಬಹುದು. ಅನೇಕ ಆಯ್ಕೆಗಳು ದೊರೆಯುವುದರಿಂದ ಸಹಜವಾಗಿ ಸಂತಸ ಹೆಚ್ಚುತ್ತದೆ. ಆಯ್ಕೆಗಳಿಲ್ಲದಿದ್ದ ಕಡೆ ಅಸಂತೋಷ ಹೆಚ್ಚು.

•    ಸಮಸ್ಯೆಗಳಿಂದ (Problems) ಹೊರಬರಲು ಹಣ ಬೇಕು
ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಮೂಲ ಹಣವೇ ಆಗಿರುತ್ತದೆ. ಹಣಕಾಸು ಸ್ಥಿರತೆ (Financial Stability) ಇರುವಾಗ ಎಷ್ಟೋ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಆಗ ಸಹಜವಾಗಿ ಜೀವನಮಟ್ಟ ಹೆಚ್ಚುತ್ತದೆ. ಏನಾದರೂ ಅವಘಡವಾದಾಗಲೂ ಹಣವಿದ್ದರೆ ಒತ್ತಡವಾಗುವುದಿಲ್ಲ. ಸಮಸ್ಯೆಗಳಿರುವಾಗ ಹಣವಿಲ್ಲವಾದರೆ ಮನಸ್ಥಿತಿ (Mentality) ಕೆಡುವುದು ಸಹಜ.

•    ದುಃಖದಿಂದ ಪಾರು
ಖುಷಿ, ಸಂತಸದಿಂದ ನಮ್ಮನ್ನು ದೂರ ಮಾಡುವ ಅನೇಕ ಅಂಶಗಳಿಂದ ದೂರವಿರಲು ಹಣ ಬೇಕು. ಹಣಕಾಸು ಸಾಕಷ್ಟಿರುವಾಗ ಬಹಳಷ್ಟು ಸಮಸ್ಯೆ ಸುಲಭವಾಗಿ ಬಗೆಹರಿದುಹೋಗುವುದರಿಂದ ಜೀವನಕ್ಕೆ ಕಂಫರ್ಟ್ ಲಭಿಸುತ್ತದೆ. ನಿಮ್ಮ ಅನುಭವಕ್ಕೂ ಬಂದಿರಬಹುದು, ಹಣವಿಲ್ಲವಾದರೆ ಸಾಮಾಜಿಕವಾಗಿಯೂ ಮನ್ನಣೆ ಕಡಿಮೆ. 

Relationship Tips: ನಿಮ್ಮ ಸುತ್ತ ಇರೋ ನೆಗೆಟಿವ್ ಜನರಿಂದ ಅಂತರ ಕಾಯ್ಕೊಳ್ಳೋದು ಹೇಗೆ?

ಹಣವಿಲ್ಲವಾದ್ರೆ ಕುಗ್ಗಬೇಕಿಲ್ಲ
ಹೆಚ್ಚಿನ ಸಂತೋಷಕ್ಕೆ ಹೆಚ್ಚು ಹಣವಿದ್ದರೆ ಅನುಕೂಲ ಎನ್ನುವುದೇನೋ ಸರಿ. ಆದರೆ, ಆ ಹಣ ಗಳಿಕೆಯ ಹಂಬಲಕ್ಕೆ ಮಿತಿ ಇಲ್ಲವಾದರೆ, ಜೀವನವನ್ನು ಆಸ್ವಾದಿಸುವುದು ಸಾಧ್ಯವಿಲ್ಲ. ಒಂದೊಮ್ಮೆ ಅಷ್ಟೊಂದು ಹಣವಿಲ್ಲವಾದರೂ ನೆಮ್ಮದಿಯಿಂದ ವಂಚಿತರಾಗಬೇಕಿಲ್ಲ. ಏಕೆಂದರೆ, ವಿಜ್ಞಾನವೇ ಹೇಳುವ ಪ್ರಕಾರ, ಸರಳವಾದ ಜೀವನಶೈಲಿಯ ಮೂಲಕವೂ ಸಂತಸ ಗಳಿಸಬಹುದು. ದಿನವೂ ವ್ಯಾಯಾಮ ಮಾಡುವುದರಿಂದ, ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದರಿಂದ, ಧನಾತ್ಮಕ (Positive) ಜನರೊಂದಿಗೆ ಒಡನಾಡುವುದರಿಂದ, ಕೃತಜ್ಞತಾ (Gratitude) ಭಾವವನ್ನು ಉದ್ದೀಪಿಸುವುದರಿಂದಲೂ ಜೀವನದಲ್ಲಿ (Life) ಸಂತಸ ಕಾಣಬಹುದು. 
 

Latest Videos
Follow Us:
Download App:
  • android
  • ios