ಮಹಿಳೆಯ ಹೊಟ್ಟೆಯಿಂದ 20 ನಿಮಿಷದಲ್ಲಿ 1000 ಕಲ್ಲು ತೆಗೆದ ವೈದ್ಯ
ತೀವ್ರ ಹೊಟ್ಟೆನೋವು, ಎದೆಯುರಿ ಬಂದಾಗ ನಾವದನ್ನು ನಿರ್ಲಕ್ಷ್ಯ ಮಾಡ್ತೇವೆ. ಇದಕ್ಕೆ ಪಿತ್ತಗಲ್ಲು ಕಾರಣವಾಗಿರಬಹುದು. ಗಾತ್ರದಲ್ಲಿ ಸಣ್ಣದಿದ್ರೂ ಹೆಚ್ಚು ನೋವು ನೀಡುವ ಈ ಕಲ್ಲನ್ನು ಎರಡು ವಿಧಾನದಲ್ಲಿ ತೆಗೆಯಬಹುದು. ಸದ್ಯ ಮಹಿಳೆಯೊಬ್ಬಳ ಪಿತ್ತಕೋಶದಲ್ಲಿದ್ದ 1000 ಕಲ್ಲನ್ನು ತೆಗೆಯಲಾಗಿದೆ.
ಪುಣೆಯ ಲ್ಯಾಪರೊ ಒಬೆಸೊ ಸೆಂಟರ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 30 ವರ್ಷದ ಮಹಿಳೆಯ ಪಿತ್ತಕೋಶದಿಂದ 1,000 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆಯಲಾಗಿದೆ. ಲ್ಯಾಪರೊಸ್ಕೋಪಿಕ್ ಮತ್ತು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಕ ಡಾ. ಶಶಾಂಕ್ ಷಾ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಶಾಂಕ್ ಷಾ, ಕೇವಲ ಮೂರು ಛೇದಗಳನ್ನು ಮಾಡಿ, 20 ನಿಮಿಷಗಳಲ್ಲಿ ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ.
ಲ್ಯಾಪರೊಸ್ಕೋಪಿಕ್ (Laparoscopic ) ಕೊಲೆಸಿಸ್ಟೆಕ್ಟಮಿ ಮಾಡಿದ ಶಶಾಂಕ್, ಪಿತ್ತಕೋಶ (Gall Bladder) ದಿಂದ 1,000 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದಿದ್ದಾರೆ. ಈ ಚಿಕಿತ್ಸೆ ನಂತ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರೋಗಿ ಚೇತರಿಸಿಕೊಂಡಿದ್ದಾಳೆ. ಗರ್ಭಿಣಿಯಾಗಿದ್ದ ಮಹಿಳೆಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಳ್ಳಲು ಶುರುವಾಗಿತ್ತಂತೆ. ಇದ್ರಿಂದ ನಿತ್ಯದ ಕೆಲಸ ಮಾಡಲು ಆಕೆಗೆ ಬಹಳ ಕಷ್ಟವಾಯ್ತು. ನಂತ್ರ ಆಕೆ ವೈದ್ಯರನ್ನು ಭೇಟಿಯಾಗಿದ್ದಳು. ಹೆಚ್ಚುವರಿ ಪರೀಕ್ಷೆ ವೇಳೆ ಆಕೆಯ ಪಿತ್ತಕೋಶದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿದೆ. ಆಕೆ ಗರ್ಭಿಣಿಯಾಗಿದ್ದ ಕಾರಣ ಶಸ್ತ್ರಚಿಕಿತ್ಸೆ ಸುಲಭವಾಗಿರಲಿಲ್ಲ. ಗರ್ಭಧಾರಣೆ ಮತ್ತು ಮುಂಬರುವ ಹೆರಿಗೆಯ ಕಾರಣ ಆಕೆಯ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿತ್ತು. ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಡಾ. ಶಶಾಂಕ್ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದರು.
ಕೋವಿಡ್ ಹೊಸ ರೂಪಾಂತರಿ ಸೋಂಕು ಪತ್ತೆ; WHO ವಾರ್ನಿಂಗ್, ಆತಂಕ ಪಡೋ ವಿಷ್ಯಾನ?
ಈ ಮಧ್ಯೆ ರೋಗಿಯು ಪಿತ್ತಕೋಶದಲ್ಲಿದ್ದ ಕಲ್ಲುಗಳಿಂದಾಗಿ ಹೊಟ್ಟೆ ನೋವು ವಿಪರೀತವಾಗಲು ಶುರುವಾಗಿತ್ತು. ನಂತ್ರ ವೈದ್ಯರು ಸೋನೋಗ್ರಫಿ ಮೂಲಕ ಆಕೆ ಪಿತ್ತಕೋಶದ ಸ್ಥಿತಿಯನ್ನು ಪರೀಕ್ಷಿಸಿದ್ದರು. ಕಲ್ಲುಗಳ ಗಣನೀಯ ಶೇಖರಣೆ ಅವಳ ನೋವಿಗೆ ಕಾರಣವಾಗಿತ್ತು. ನೋವು ತಡೆಯಲಾರದೆ ಆಕೆ ಜೋರಾಗಿ ಕಿರುಚುತ್ತಿದ್ದಳು. ತುಂಬಾ ತೊಂದರೆ ಅನುಭವಿಸಿದ್ದಳು. ಅವಳ ಪಿತ್ತಕೋಶದಲ್ಲಿ ತೀವ್ರ ಹಿಗ್ಗುವಿಕೆ ಮತ್ತು ಅಸ್ವಸ್ಥತೆ ಉಂಟಾಗಿತ್ತು. ಪರೀಕ್ಷೆಯ ನಂತರ ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ಪರಿಗಣಿಸಿದ ವೈದ್ಯರು, ಅವರು ಕೇವಲ ಮೂರು ಛೇದಗಳನ್ನು ಮಾಡಿ ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿಗೆ ಒಳಪಡಿಸಿದ್ದಲ್ಲದೆ 20 ನಿಮಿಷಗಳಲ್ಲಿ 1000 ಕಲ್ಲುಗಳನ್ನು ಹೊರಗೆ ತೆಗೆದ್ರು. ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, 20 ಗಂಟೆಗಳ ಒಳಗೆ ಡಿಸ್ಚಾರ್ಜ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ ಆಕೆ ತನ್ನ ಮಗುವಿಗೆ ಹಾಲುಣಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಪಿತ್ತಕೋಶದ ಕಲ್ಲು ಎಂದರೇನು? : ಪಿತ್ತಕೋಶದ ಕಲ್ಲನ್ನು ಪಿತ್ತಗಲ್ಲು ಎಂದು ಕರೆಯಲಾಗುತ್ತದೆ. ಪಿತ್ತಕೋಶದಲ್ಲಿ ಇವು ರೂಪಗೊಳ್ಳುತ್ತವೆ. ಸಣ್ಣದಾಗಿ, ಪೇರಳೆ ಆಕಾರದಲ್ಲಿ ಇರುತ್ತವೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ಹಾಗೂ ಬೈಲುರಿಬಿನ್ ಇದ್ದಾಗ ಪಿತ್ತಕೋಶದಲ್ಲಿ ಕಲ್ಲು ಕಾಣಿಸಿಕೊಳ್ಳುತ್ತದೆ.
Health Tips: ಕಣ್ರೆಪ್ಪೆ ಊದಿಕೊಳ್ಳುತ್ತದೆಯೇ? ಮನೆಯಲ್ಲೇ ಸಿಂಪಲ್ ಪರಿಹಾರಗಳಿವೆ!
ಪಿತ್ತಗಲ್ಲುಗಳ ಚಿಹ್ನೆಗಳು ಮತ್ತು ರೋಗಲಕ್ಷಣಗಳು : ಪಿತ್ತಕೋಶದಲ್ಲಿ ಕಲ್ಲು ಕಾಣಿಸಿಕೊಂಡಾಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ನಮಗೆ ಆಗಾಗ ಜ್ವರ ಬರುತ್ತದೆ. ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಬಲ ಭಾಗದಲ್ಲಿ ಹಾಗೂ ಪಕ್ಕೆಲುಬುಗಳ ಕೆಳಗೆ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಹೃದಯ ಬಡಿತ ವೇಗಗೊಳ್ಳುತ್ತದೆ. ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ತಿರುಗುವ ಜೊತೆಗೆ ಕಾಮಾಲೆ ಕಾಡುತ್ತದೆ. ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳುವುದಲ್ಲದೆ, ಅತಿಸಾರ ಕಾಡುತ್ತದೆ. ಮನಸ್ಸಿನಲ್ಲಿ ಗೊಂದಲ್ಲ, ತಲೆತಿರುಗುವಿಕೆ ನಿಮ್ಮಲ್ಲಿ ಕಾಣಿಸಿಕೊಳ್ಳುತ್ತದೆ. ಹಸಿವಾಗದೆ ಇರುವುದು ಕೂಡ ಪಿತ್ತಕೋಶದಲ್ಲಿ ಕಲ್ಲಿರುವ ಲಕ್ಷಣವಾಗಿರಬಹುದು.
ಪಿತ್ತಕೋಶದಲ್ಲಿ ಕಲ್ಲಿರೋದನ್ನು ಪತ್ತೆ ಹಚ್ಚೋದು ಹೇಗೆ? : ರಕ್ತ ಪರೀಕ್ಷೆಗಳು, ಅಲ್ಟ್ರಾಸೌಂಡ್, ಸಿ ಟಿ ಸ್ಕ್ಯಾನ್, ಇಯುಎಸ್ ಮತ್ತು ಹಿಡಾ ಸ್ಕ್ಯಾನ್ ಮೂಲಕ ಇದನ್ನು ಪತ್ತೆ ಮಾಡಬಹುದಾಗಿದೆ. ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ ಮತ್ತು ಓಪನ್ ಕೊಲೆಸಿಸ್ಟೆಕ್ಟಮಿ ಮೂಲಕ ಕಲ್ಲನ್ನು ತೆಗೆಯಲಾಗುತ್ತದೆ. ಜೀವನ ಶೈಲಿಯಲ್ಲಿ ಬದಲಾವಣೆ , ಹೆಚ್ಚಿನ ಫೈಬರ್ ಯುಕ್ತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಸೇರಿದಂತೆ ಕೆಲ ಮನೆ ಮದ್ದಿನಿಂದ ನೀವು ಪರಿಹಾರ ಕಂಡುಕೊಳ್ಳಬಹುದು.