78ರ ವೈದ್ಯನಿಗೆ 58ರ ಆರೋಗ್ಯ! ದೀರ್ಘಾಯುಷ್ಯದ ಗುಟ್ಟು ಈ 6 ಟಿಪ್ಸ್‌ಗಳಲ್ಲಿದೆ!

ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ 78 ವರ್ಷದ ಮುಖ್ಯ ಆರೋಗ್ಯಾಧಿಕಾರಿ ಡಾ. ಮೈಕೆಲ್ ರೋಯ್ಜೆನ್ ಅವರ ಜೈವಿಕ ವಯಸ್ಸು ಕೇವಲ 58. ತಮ್ಮ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನದ ಆರು ಗುಟ್ಟುಗಳನ್ನು ಅವರು ಇಲ್ಲಿ ತೆರೆದಿಟ್ಟಿದ್ದಾರೆ.

doctor with age 78 and bio age 58 gives 6 tips for healthy long life bni

ಇವರು ಅಮೆರಿಕಾದ ಒಬ್ಬ ವೈದ್ಯ. ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಮುಖ್ಯ ಆರೋಗ್ಯಾಧಿಕಾರಿ, ಹೆಸರು ಡಾ. ಮೈಕೆಲ್ ರೋಯ್ಜೆನ್. ಇವರ ನಿಜ ವಯಸ್ಸು 78. ಆದರೆ ಜೈವಿಕ ವಯಸ್ಸು 58. ಅಂದರೆ ಇವರ ದೇಹದ ಆರೋಗ್ಯದ ಮಾನದಂಡಗಳ ಮೂಲಕ ನೋಡಿದಾಗ, ಇವರಿಗೆ 58ರ ಬಳಿಕ ವಯಸ್ಸೇ ಆಗಿಲ್ಲ. ಅಥವಾ ನಾವೆಲ್ಲ ಒಂದು ವರ್ಷ ಎನ್ನುವುದು ಇವರ ಪಾಲಿಗೆ ಮುಕ್ಕಾಲು ವರ್ಷ ಇರಬಹುದು. ಹೀಗೂ ಬದುಕಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿರುವ ಈ ವೈದ್ಯ, ತನ್ನ ರೋಗರಹಿತ ದೃಢಕಾಯ ಬದುಕಿನ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ ದೀರ್ಘಾಯುಷ್ಯ ಅಥವಾ ವಯಸ್ಸಾಗದಿರುವಿಕೆಯನ್ನು 6 ಟಿಪ್ಸ್‌ಗಳಲ್ಲಿ ಹಿಡಿದಿಡಬಹುದಂತೆ.  

ಜೈವಿಕ ವಯಸ್ಸನ್ನು ಅಳೆಯಲು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ವ್ಯಾಖ್ಯಾನ ಅಥವಾ ವಿಧಾನವೇನಿಲ್ಲ. ಆದರೆ ರೋಜೆನ್ ಅವರ ವಿಧಾನ ಸರಳವಾದ ಹಾಗೂ  ಪರಿಣಾಮಕಾರಿ ಜೀವನಶೈಲಿಯನ್ನು ಒತ್ತಿಹೇಳುತ್ತೆ. ಜೀವನಶೈಲಿಯಲ್ಲಿ ಸಣ್ಣ ಹೊಂದಾಣಿಕೆಗಳು ಸಹ ದೀರ್ಘಾಯುಷ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಬಹುದಂತೆ. ಹಾಗೆ ಅವರು ಪ್ರತಿಪಾದಿಸುವ ಆರು ಅಂಶಗಳು ಈ ಕೆಳಗಿನಂತಿವೆ:

1) ರೋಜೆನ್ ದೈನಂದಿನ ದಿನಚರಿಯಲ್ಲಿ ಹೆಚ್ಚಿನ ವಾಕಿಂಗ್‌ ಮಾಡಬೇಕು ಎನ್ನುತ್ತಾರೆ. ಅವರು ದಿನಕ್ಕೆ 10,000 ಹೆಜ್ಜೆಗಳಷ್ಟು ನಡೆಯುತ್ತಾರಂತೆ. ಅವರು ತಮ್ಮ ಕೆಲಸದ ಸ್ಥಳದಿಂದ ದೂರದಲ್ಲಿ ಕಾರು ಪಾರ್ಕಿಂಗ್ ಮಾಡುತ್ತಾರೆ. ಉಳಿದ ದಾರಿಯನ್ನು ನಡೆದು ಕ್ರಮಿಸುತ್ತಾರೆ. 10,000 ಹೆಜ್ಜೆಗಳ ದೈನಂದಿನ ವಾಕಿಂಗ್‌ನ ಪ್ರಯೋಜನಗಳು ಸಂಶೋಧನೆಯಿಂದ ಬೆಂಬಲಿತವಾಗಿವೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ 2023ರ ಅಧ್ಯಯನವು, ವಾರಕ್ಕೆ ಕೇವಲ 75 ನಿಮಿಷಗಳ ವೇಗದ ನಡಿಗೆಯು ಸಾವು, ಹೃದಯರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ.

2) ಆಹಾರದಲ್ಲಿ ಅವಕಾಡೊ (ಬೆಣ್ಣೆಹಣ್ಣು), ಸಾಲ್ಮನ್ (ಮೀನು) ಮತ್ತು ಆಲಿವ್ ಎಣ್ಣೆಯನ್ನು ಸೇರಿಸಿಕೊಳ್ಳಿ. ಇವು ಮೂರು ಆಹಾರಗಳು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಅವರು ದೀರ್ಘಾಯುಷ್ಯಕ್ಕಾಗಿ ಏಳು ಆಹಾರಗಳನ್ನು ಗುರುತಿಸಿದ್ದು, ಅವುಗಳಲ್ಲಿ ಈ ಮೂರು ಪ್ರಮುಖ. 

3) ಸ್ನೇಹ, ಗೆಳೆತನ ತುಂಬ ಇಂಪಾರ್ಟೆಂಟು. ಇವುಗಳನ್ನು ಬದುಕಿನ ಮೊದಲ ಹಂತದಿಂದಲೂ ಪೋಷಿಸುತ್ತ ಬನ್ನಿ. ಇವು ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹೆಚ್ಚಿಸಲು ಮುಖ್ಯ. ರೋಜೆನ್ ಸಾಮಾಜಿಕ ಸಂಪರ್ಕಗಳನ್ನು ಆರೋಗ್ಯವನ್ನು ಸುಧಾರಿಸುವ "ಮೋಜಿನ" ಮಾರ್ಗವೆಂದು ವಿವರಿಸುತ್ತಾರೆ. ಸಂಶೋಧನೆಯು ಈ ದೃಷ್ಟಿಕೋನವನ್ನು ಬೆಂಬಲಿಸುತ್ತದೆ. ಡಬ್ಲಿನ್‌ನ ಟ್ರಿನಿಟಿ ಕಾಲೇಜ್‌ನಲ್ಲಿ ವಯಸ್ಸಾದವರ ಮೇಲೆ ನಡೆಸಿದ ಅಧ್ಯಯನದ ಫಲಿತಾಂಶವನ್ನು ಹೇಳುವಾಗ, ಪ್ರಮುಖ ಸಂಶೋಧಕಿ ರೋಸ್ ಆನ್ನೆ ಕೆನ್ನಿ, ಗಟ್ಟಿಯಾದ ಸಾಮಾಜಿಕ ಸಂಬಂಧಗಳು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರದಂತೆ ದೀರ್ಘಾಯುಷ್ಯಕ್ಕೆ ನಿರ್ಣಾಯಕ ಎಂದಿದ್ದರು. 

4) ಅರಿವಿನ ಆರೋಗ್ಯವನ್ನು ಹೆಚ್ಚಿಸಲು ಮೆದುಳನ್ನು ಚುರುಕಾಗಿಡುವ, ಮೆದುಳಿಗೆ ತರಬೇತಿ ನೀಡುವ ಆಟಗಳು ಮುಖ್ಯ. ನಿರ್ದಿಷ್ಟವಾಗಿ "ಡಬಲ್ ಡಿಸಿಷನ್" ಮತ್ತು "ಫ್ರೀಜ್ ಫ್ರೇಮ್" ಆಟಗಳು ಮೆದುಳಿನ ಆರೋಗ್ಯಕ್ಕೆ ಚೆನ್ನವಂತೆ. ಇದು ಮೆದುಳಿನ ವೇಗವನ್ನು ಸುಧಾರಿಸುತ್ತದೆ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಆಲ್ಝೈಮರ್ಸ್ & ಡಿಮೆನ್ಶಿಯಾ ಕುರಿತು ನಡೆಸಿದ 2017ರ ಒಂದು ಅಧ್ಯಯನವಿದೆ. ಆರು ವಾರಗಳಲ್ಲಿ ಅಂತಹ ಆಟಗಳ ಹತ್ತು ಅವಧಿಗಳನ್ನು ಪೂರ್ಣಗೊಳಿಸಿದ ವಯಸ್ಕರು, 10 ವರ್ಷಗಳ ನಂತರ ಬುದ್ಧಿಮಾಂದ್ಯತೆಯ ಅಪಾಯವನ್ನು 29% ಕಡಿಮೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಐದು ವಾರಗಳಲ್ಲಿ ವಾರದಲ್ಲಿ ಎರಡು ಗಂಟೆಗಳ ಕಾಲ ಈ ಆಟಗಳನ್ನು ಆಡಲು ರೋಜೆನ್ ಸಲಹೆ ನೀಡುತ್ತಾರೆ. 

ಕಾಫಿ ಕುಡಿಯೋಕೆ ಬೆಸ್ಟ್ ಟೈಮ್ ಯಾವುದು?: ಈ ವಿಚಾರಗಳು ನಿಮಗೆ ಗೊತ್ತಿರಲಿ

5) ಮಲ್ಟಿವಿಟಮಿನ್‌ಗಳು ದೀರ್ಘಾಯುಷ್ಯಕ್ಕೆ ಪೂರಕ. ಇವುಗಳ ದೀರ್ಘಕಾಲೀನ ಬಳಕೆದಾರರಲ್ಲಿ ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಯ ಅಪಾಯಗಳು ಕಡಿಮೆಯಂತೆ. ಈ ಕುರಿತು ನಡೆಸಿದ ದೊಡ್ಡ ಅಧ್ಯಯನಗಳ ಫಲಿತಾಂಶ ಇನ್ನೂ ಬರಬೇಕಿದೆ. ಆದರೆ ಸ್ಥಿರವಾದ ವಿಟಮಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಮಲ್ಟಿವಿಟಮಿನ್‌ಗಳನ್ನು ತೆಗೆದುಕೊಳ್ಳುವುದನ್ನು  ತಾನು ಮುಂದುವರಿಸಿದ್ದೇನೆ ಎಂದು ರೋಜೆನ್ ಹೇಳುತ್ತಾರೆ. 

6) ರೋಜೆನ್ ಆರೋಗ್ಯಕರ ವಯಸ್ಸಿನ ಭಾಗವಾಗಿ ಫ್ಲೂ ಲಸಿಕೆಯನ್ನು ಹೈಲೈಟ್ ಮಾಡುತ್ತಾರೆ. ಇನ್ಫ್ಲುಯೆಂಝಾವನ್ನು ತಡೆಗಟ್ಟುವ ಫ್ಲೂ ಲಸಿಕೆ ಸೋಂಕನ್ನು ತಡೆಗಟ್ಟುವುದು ಮಾತ್ರವಲ್ಲ, ಮೆದುಳಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಅವರು ಸೂಚಿಸುತ್ತಾರೆ.

ಚಳಿಗಾಲದಲ್ಲಿ ಪಾಲಕ್ ಸೊಪ್ಪು ತಿನ್ನೋದು ಒಳ್ಳೇದು, ಅತಿಯಾದರೆ ಈ ತೊಂದರೆಗಳು ತಪ್ಪಿದ್ದಲ್ಲ!
 

Latest Videos
Follow Us:
Download App:
  • android
  • ios