Health Tips: ಕಮೋಡ್ ಮುಚ್ಚಳ ಮುಚ್ಚದೇ ಫ್ಲಶ್ ಮಾಡ್ಬೇಡಿ
ಪ್ರತಿ ನಿತ್ಯ ನಾವು ಮಾಡುವ ಕೆಲಸದಲ್ಲೇ ಅನೇಕ ತಪ್ಪುಗಳಿರುತ್ತವೆ. ಅವು ನಮ್ಮ ಆರೋಗ್ಯವನ್ನು ಅರಿವಿಲ್ಲದೆ ಹಾಳು ಮಾಡಿರುತ್ತವೆ. ಅದ್ರಲ್ಲಿ ಶೌಚಾಲಯ ಕೂಡ ಒಂದು. ನಿತ್ಯ ಬಳಸುವ ಈ ಶೌಚಾಲಯದ ಫ್ಲಶ್ ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ.
ಶೌಚಾಲಯಕ್ಕೆ ಹೋಗಿ ಬಂದ ಮಕ್ಕಳಿಗೆ ಪಾಲಕರು ನಾನಾ ಪ್ರಶ್ನೆ ಕೇಳ್ತಾರೆ. ಕ್ಲೀನ್ ಮಾಡಿಕೊಂಡ್ಯಾ, ನೀರು ಚೆನ್ನಾಗಿ ಹಾಕಿದ್ಯಾ, ಕೈ ಸೋಪ್ ಹಚ್ಚಿ ಕ್ಲೀನ್ ಮಾಡಿಕೊಂಡ್ಯಾ ಹೀಗೆ ಪ್ರಶ್ನೆ ಅನೇಕ ಇರುತ್ತೆ. ಇದನ್ನು ಕೇಳೋಕೆ ಅನೇಕರಿಗೆ ಅಸಹ್ಯ ಎನ್ನಿಸಬಹುದು. ಆದ್ರೆ ಮಕ್ಕಳಿಗೆ ನಾವು ಸ್ವಚ್ಛತೆ ಬಗ್ಗೆ ಕಲಿಸುವಾಗ ಈ ಎಲ್ಲ ಪ್ರಶ್ನೆಗಳನ್ನು ಕೇಳಿ, ಅವರು ಅದ್ರ ಬಗ್ಗೆ ಗಮನ ಹರಿಸುವಂತೆ ಮಾಡ್ಬೇಕು. ಈಗಿನ ದಿನಗಳಲ್ಲಿ ಕಮೋಡ್ ಹೆಚ್ಚಾಗಿ ಬಳಕೆ ಆಗ್ತಿರುವ ಕಾರಣ, ಕೆಲ ಪಾಲಕರು ಈ ಎಲ್ಲ ಪ್ರಶ್ನೆ ಜೊತೆ ಕಮೋಡ್ ಮುಚ್ಚಳ ಮುಚ್ಚಿ ಫ್ಲಶ್ ಮಾಡು ಎಂಬುದನ್ನು ನೀವು ಕೇಳಿರಬೇಕು. ಅನೇಕರಿಗೆ ಇದು ವಿಚಿತ್ರ ಎನ್ನಿಸಿರುತ್ತದೆ. ಯಾಕೆಂದ್ರೆ ನೂರರಲ್ಲಿ ತೊಂಭತ್ತು ಮಂದಿ, ಕಮೋಡ್ ಮುಚ್ಚಳ ಮುಚ್ಚಿ ಫ್ಲಶ್ ಮಾಡೋದಿಲ್ಲ. ಹಾಗೆಯೇ ಫ್ಲಶ್ ಮಾಡಿ ಹೊರಗೆ ಬರ್ತಾರೆ. ನೀವೂ ಈ ಅಭ್ಯಾಸವನ್ನು ಹೊಂದಿದ್ದರೆ ಇಂದೇ ಇದನ್ನು ಬದಲಿಸಿ. ಎಷ್ಟೂ ವರ್ಷಗಳಿಂದ ಹೀಗೆ ಮಾಡ್ತಿದ್ದೇವೆ ಎಂಬ ರಾಗ ಎಳೆಯಬೇಡಿ. ಇಂಡಿಯನ್ ಟಾಯ್ಲೆಟ್ ನಲ್ಲಿ ಇದಕ್ಕೆ ಅವಕಾಶವಿಲ್ಲದೆ ಹೋದ್ರೂ ಕಮೋಡ್ ನಲ್ಲಿ ಮುಚ್ಚಳ ಮುಚ್ಚಿ ಫ್ಲಶ್ ಮಾಡುವ ಅವಕಾಶ ಇದೆ. ನೀವು ಹೀಗೆ ಮಾಡಿದ್ರೆ ಅನೇಕ ಬ್ಯಾಕ್ಟೀರಿಯಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
ಕಮೋಡ್ (Commode) ಮುಚ್ಚಳ ಮುಚ್ಚಿ ಫ್ಲಶ್ (Flush) ಮಾಡೋದರ ಪ್ರಯೋಜನ : ನಾವು ಸುಮ್ಮನೆ ಹೇಳ್ತಿಲ್ಲ. ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ (Research) ನಡೆಸಿದ್ದಾರೆ. ಅದ್ರ ಆಧಾರದ ಮೇಲೆ ನಿಮಗೆ ಈ ಸಲಹೆ ನೀಡ್ತಿದ್ದೇವೆ. ಸಂಶೋಧನೆ ವರದಿ ಪ್ರಕಾರ, ನೀವು ಫ್ಲಶ್ ಮಾಡುವಾಗ ಮುಚ್ಚಳ ಮುಚ್ಚದೆ ಹೋದ್ರೆ ಅನೇಕ ಬ್ಯಾಕ್ಟೀರಿಯಾಗಳು ಗಾಳಿ ಸೇರುತ್ತವೆ. ಈ ವೇಳೆ ಶೌಚಾಲಯ ಗಾಳಿಯಲ್ಲಿ ಒಂದು ಜೆಟ್ ಉತ್ಪಾದನೆ ಮಾಡುತ್ತದೆ. ಅದು ಕಮೋಡ್ ನಿಂದ ಐದು ಅಡಿಗಳಷ್ಟು ಎತ್ತರಕ್ಕೆ ಕಣವನ್ನು ಸಾಗಿಸುತ್ತದೆ. ಈ ಕಣದಲ್ಲಿ ಬ್ಯಾಕ್ಟೀರಿಯಾ, ಸೂಕ್ಷ್ಮಾಣುಜೀವಿ ಹಾಗೂ ವೈರಸ್ ಸೇರಿರುತ್ತವೆ.
ಊಟದಲ್ಲಿ ಚಪಾತಿ, ಅನ್ನ ಎರಡೂ ತಿನ್ನಬೇಡಿ ಅಂತಿದ್ದಾರೆ ಬಾಬಾ ರಾಮ್ ದೇವ್, ಅದು ಯಾಕೆ?
ಫ್ಲಶ್ ಮಾಡಿ ನೀವು ಅರೆ ಕ್ಷಣದಲ್ಲಿ ಹೊರಗೆ ಬರ್ತೇವೆ ಎನ್ನಬಹುದು. ಆದ್ರೆ ಈ ಬ್ಯಾಕ್ಟೀರಿಯಾ, ವೈರಸ್ ಗಳು ಎಂಟು ಕ್ಷಣದಲ್ಲಿ ನಿಮ್ಮನ್ನು ತಲುಪುತ್ತವೆ. ಇ ಕೊಲಿ, ನೊರೊವೈರಸ್, ಮತ್ತು ಕೊರೊನಾವೈರಸ್ ಕೂಡ ಇದ್ರಲ್ಲಿ ಸೇರಿದೆ. ಇದನ್ನು ನೀವು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಲೇಸರ್ ಬಳಸಿ ಈ ಬ್ಯಾಕ್ಟೀರಿಯಾ ಪತ್ತೆ ಮಾಡಬೇಕಾಗುತ್ತದೆ.
ಮಕ್ಕಳು ಸಿಕ್ಕಾಪಟ್ಟೆ ಸಣ್ಣಗಿದ್ದಾರೆ ಅನ್ನೋ ಚಿಂತೇನಾ, ಈ ಸೂಪರ್ ಫುಡ್ ಕೊಡಿ ಸಾಕು
ಈ ಕಣಗಳು ಸಾಕಷ್ಟು ವೇಗವನ್ನು ಹೊಂದಿವೆ. ಈ ಕಣಗಳು ಪ್ರತಿ ಸೆಕೆಂಡಿಗೆ 6.6 ಅಡಿ ವೇಗದಲ್ಲಿ ಚಲಿಸಬಹುದು ಮತ್ತು 1.5 ಮೀಟರ್ ಎತ್ತರವನ್ನು ತಲುಪಬಹುದು. ನಿಮ್ಮ ಉಸಿರಾಟದ ಮೂಲಕ ಅವು ದೇಹವನ್ನು ಸೇರುತ್ತವೆ. ಮೂಗಿನ ಕೂದಲಿನಿಂದ ತಪ್ಪಿಸಿಕೊಂಡು ಒಳ ಸೇರುವ ಈ ಕಣಗಳು ಶ್ವಾಶಕೋಶದ ಆಳಕ್ಕೆ ಸೇರಿ ನಿಮ್ಮನ್ನು ಅಸ್ಥವ್ಯಸ್ಥಗೊಳಿಸುತ್ತವೆ.
ಕೆಲವರು ಶೌಚಾಲಯದ ಸೀಟ್ ಮೇಲೆ ಕುಳಿತುಕೊಂಡೇ ಫ್ಲಶ್ ಮಾಡ್ತಾರೆ. ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬೇಡಿ ಎನ್ನುತ್ತಾರೆ ತಜ್ಞರು. ಫ್ಲಶ್ ಮಾಡಿದಾಗ ನೀರು ಸುರಳಿ ಸೃಷ್ಟಿ ಮಾಡುವುದರಿಂದ ಮೊದಲೇ ಹೇಳಿದಂತೆ ಬ್ಯಾಕ್ಟೀರಿಯಾ ಕಣಗಳು ಇಡೀ ಶೌಚಾಲಯವನ್ನು ಆವರಿಸುತ್ತವೆ. ನೀವು ಅಲ್ಲೇ ಕುಳಿತಿದ್ದರೆ ಅದು ನಿಮ್ಮ ದೇಹವನ್ನು ಬಹುಬೇಗ ತಲುಪುತ್ತದೆ.
ನಮ್ಮ ದೇಹ, ಕೊಳಕನ್ನು ಮಲದ ರೂಪದಲ್ಲಿ ಹೊರಗೆ ಹಾಕುವುದರಿಂದ ಪ್ರತಿ ದಿನ ಮಲವಿಸರ್ಜನೆ ಮಾಡುವುದು ಬಹಳ ಮುಖ್ಯ. ಹಾಗಂತ ಹತ್ತು ನಿಮಿಷಕ್ಕಿಂತ ಹೆಚ್ಚು ಸಮಯ ಅಲ್ಲೇ ಕುಳಿತಿರಬಾರದು. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.