Asianet Suvarna News Asianet Suvarna News

ಇನ್ಸುಲಿನ್‌ ಎಲೆಗಳನ್ನು ತಿಂದು ಡಯಾಬಿಟೀಸ್ ನಿಯಂತ್ರಿಸಬಹುದಾ ?

ಒತ್ತಡದ ಜೀವನಶೈಲಿ (Lifestyle), ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಎಲ್ಲರನ್ನೂ ಕಾಡುವ ಗಂಭೀರ ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಮಧುಮೇಹಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ವಯಸ್ಸಿನ ಅಂತರವಿಲ್ಲದೆ ಡಯಾಬಿಟೀಸ್‌ ಅಥವಾ ಶುಗರ್‌ ಪೇಷಂಟ್‌ಗಳು ಹೆಚ್ಚುತ್ತಲೇ ಇದ್ದಾರೆ. ಮಧುಮೇಹವನ್ನು ನಿಯಂತ್ರಿಸಲು ಹಲವಾರು ಔಷಧಿಗಳು ಲಭ್ಯವಿದೆ. ಆದರೆ ಇನ್ಸುಲಿನ್‌ ಗಿಡ (Insulin Plant)ದಿಂದ ಡಯಾಬಿಟೀಸ್ ನಿಯಂತ್ರಿಸಬಹುದು ಎನ್ನುತ್ತಾರೆ. ಇದು ನಿಜಾನ ?

Did You Know Insulin Plant Can Help Control Blood Sugar Levels Vin
Author
Bengaluru, First Published Apr 27, 2022, 6:51 PM IST

ಇತ್ತೀಚಿನ ದಿನಗಳಲ್ಲಿ ಮಧುಮೇಹದ (Diabetes) ಸಮಸ್ಯೆ ಹಲವರಲ್ಲಿ ಕಂಡು ಬರುತ್ತಿದೆ. ಒಂದು ಬಾರಿ ಮಧುಮೇಹ ದೇಹ ಸೇರಿದರೆ ಅದು ದೀರ್ಘಕಾಲದ ಕಾಯಿಲೆಯಾಗಿ ಉಳಿದುಬಿಡುತ್ತದೆ. ಆರೋಗ್ಯ ಸಮಸ್ಯೆ (Health Problem)ಗಳ ಉಲ್ಭಣಕ್ಕೆ ಕಾರಣವಾಗುತ್ತದೆ. ಹೀಗಾಗಿ ಡಯಾಬಿಟೀಸ್ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದುದು ತುಂಬಾ ಮುಖ್ಯ. ರಕ್ತದಲ್ಲಿನ ಸಕ್ಕರೆ (Sugar) ಅಥವಾ ಮಧುಮೇಹವನ್ನು ನಿಯಂತ್ರಿಸಲು ಹಲವಾರು ಔಷಧಿಗಳು ಲಭ್ಯವಿದ್ದರೂ, ಅವುಗಳ ಅತಿಯಾದ ಸೇವನೆಯು ಆರೋಗ್ಯಕ್ಕೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. 

ರಕ್ತದಲ್ಲಿನ ಸಕ್ಕರೆ ಮಟ್ಟ ಅಥವಾ ಮಧುಮೇಹವನ್ನು ನಿಯಂತ್ರಿಸಲು ಹಲವಾರು ಔಷಧಿಗಳು ಲಭ್ಯವಿದೆ. ಆದರೆ, ಅವುಗಳ ಅತಿಯಾದ ಸೇವನೆಯು ಆರೋಗ್ಯಕ್ಕೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಮಧುಮೇಹವನ್ನು ನಿಯಂತ್ರಿಸಲು ಅನೇಕ ಮೂಲಿಕೆಗಳೂ ಸಹಾಯ ಮಾಡುತ್ತವೆ. ಅವುಗಳಲ್ಲಿ 'ಇನ್ಸುಲಿನ ಪ್ಲ್ಯಾಂಟ್‌' ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಡಲು ಇದು ಪರಿಣಾಮಕಾರಿಯಾಗಿದೆ ಎಂದು ಹೇಳುತ್ತಾರೆ. ಇದು ಎಷ್ಟರಮಟ್ಟಿಗೆ ನಿಜ ತಿಳಿದುಕೊಳ್ಳೋಣ.

ಭಾರತದ ಅತ್ಯಧಿಕ ಮಧುಮೇಹಿಗಳಿಗೆ ರೋಗದ ಮೇಲೆ ನಿಯಂತ್ರಣವಿಲ್ವಂತೆ !

ಇನ್ಸುಲಿನ್‌ ಪ್ಲ್ಯಾಂಟ್‌ ಎಂದರೇನು ?
ತಮಿಳುನಾಡಿನ ಇಬ್ಬರು ಸಂಶೋಧಕರು 2012ರಲ್ಲಿ, ಕೊಲ್ಲಿ ಬೆಟ್ಟಗಳಲ್ಲಿರುವ (ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿದೆ) ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕವಾಗಿ ಡಯಾಬಿಟಿಸ್ ಚಿಕಿತ್ಸೆಗೆ ಉಪಯೋಗಿಸುವ ಗಿಡಗಳ ಅಧ್ಯಯನ ನಡೆಸಿದರು. ಆಗ ಕ್ಯೂಕಂಡ್ ಅಥವಾ ಕೋಸ್ಟಮ್ ಗಿಡದ ಎಳೆಗಳ ಬಳಕೆಯ ಬಗ್ಗೆ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂತು. ಈ ಗಿಡ ಮೂಲತಃ ಮಧ್ಯ ಮತ್ತು ದಕ್ಷಿಣ ಅಮೆರಿಕಾದ್ದು. ಮತ್ತು ತಡವಾಗಿ ಇದು ಭಾರತಕ್ಕೆ ಬಂತು. ಡಯಾಬಿಟಿಸ್‌ಗೆ ಸ್ವಾಭಾವಿಕವಾಗಿ ಸಿಗುವ ಪರಿಣಾಮಕಾರಿ ಔಷಧ ಎಂದು ಇಲ್ಲಿನ ಜನರಲ್ಲಿ ಪ್ರಚಾರವಾದ್ದರಿಂದ ಅದು ಇನ್ಸುಲಿನ್ ಗಿಡವೆಂದೇ ಹೆಸರುವಾಸಿಯಾಯಿತು.

ಈ ಇನ್ಸುಲಿನ್‌ ಗಿಡದಲ್ಲಿ ಹೇರಳವಾದ ಆಂಟಿ ಆಕ್ಸಿಡೆಂಟ್‌, ಪ್ರೋಟೀನ್‌ ಮತ್ತು ಕಬ್ಬಿಣಾಂಶದ ಗುಣಗಳಿವೆ ಎಂದು ಹೇಳಲಾಗುತ್ತದೆ. ಇದಕ್ಕೆ ಪುರಾವೆಯಾಗಿ ಹಲವು ಅಧ್ಯಯನಗಳೂ ನಡೆದಿವೆ. ಈ ಇನ್ಸುಲಿನ್‌ ಗಿಡ ಡಯಾಬಿಟೀಸ್‌ ಇರುವವರ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನಕ್ಕೆ ತರಲು ಸಹಾಯ ಮಾಡುತ್ತದೆ. ಈ ಗಿಡದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ರಾಸಾಯನಿಕ ಗುಣಗಳಿದೆ ಎಂದು ಹೇಳಲಾಗುತ್ತದೆ. ಈ ಇನ್ಸುಲಿನ್ ಗಿಡದಲ್ಲಿ ಪ್ರೋಟೀನ್, ಟೆರ್ಪೆನಾಯ್ಡ್ಗಳು, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕಗಳು, ಆಸ್ಕೋರ್ಬಿಕ್ ಆಮ್ಲ, ಕಬ್ಬಿಣ, ಬಿ-ಕ್ಯಾರೋಟಿನ್, ಕೊರೊಸೊಲಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳು ಹೇರಳವಾಗಿದೆ ಎಂದು ಹೇಳಲಾಗುತ್ತದೆ..

ಚಾಲನೆ ಮಾಡುವಾಗ ಮಧುಮೇಹ ರೋಗಿಗಳಿಗಿರಲಿ ಎಚ್ಚರಿಕೆ

ವಿಜ್ಞಾನ ಏನೆಂದು ಹೇಳುತ್ತದೆ?
ಇನ್ಸುಲಿನ್ ಗಿಡದ ಡಯಾಬಿಟಿಸ್ ನಿಯಂತ್ರಿಸುವ ಪ್ರಭಾವವನ್ನು ಪರೀಕ್ಷಿಸಲು ಹಲವಾರು ಸಂಶೋಧನೆಗಳನ್ನು ಮಾಡಲಾಯಿತು: ಪ್ರಾಣಿಗಳು ಮತ್ತು ಪ್ರಾಣಿ ಅಂಗಾಂಶದ ಮೇಲೆ 17 ವಿವಿಧ ಅಧ್ಯಯನ ಮಾಡಲಾಯಿತು. ಈ ಗಿಡದ ಎಳಲೆಗಳ ಸಾರದಿಂದ ರಕ್ತದ ಸಕ್ಕರೆ ಪ್ರಮಾಣವನ್ನು ಯಶಸ್ವಿಯಾಗಿ ಕಡಿಮೆ ಮಾಡಬಹುದೆಂದು ಈ ಅಧ್ಯಯನಗಳು ತೋರಿಸಿವೆ. 

ಮಧುಮೇಹಕ್ಕೆ ರಾಮಬಾಣದಂತಿರುವ ಈ ಇನ್ಸುಲಿನ್‌ ಗಿಡದಲ್ಲಿ ಮಧುಮೇಹವನ್ನು ನಿಯಂತ್ರಿಸಲು ಅಗತ್ಯವಾಗಿರುವ ವಿವಿಧ ಪೋಷಕಾಂಶಗಳ ಜೊತೆಗೆ ಕ್ಯಾರೋಸೋಲಿಕ್‌ ಆಸಿಡ್‌ನ್ನು ಹೊಂದಿದೆ. ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಈ ಘಟಕಾಂಶವು ಕೆಲಸ ಮಾಡುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವ ಮೂಲಕ ಶುಗರ್‌ ಲೆವಲ್‌ನ್ನು ನಿಯಂತ್ರಿಸುತ್ತದೆ.

ಇನ್ಸುಲಿನ್‌ ಗಿಡದಿಂದ ಡಯಾಬಿಟೀಸ್ ನಿಯಂತ್ರಿಸಬಹುದಾ ?
ಇಲ್ಲಿಯವರೆಗೆ, ಭಾರತದ ಕಸ್ತೂರಿ ಬಾ ವೈದ್ಯಕೀಯ ಕಾಲೇಜಿನಲ್ಲಿ ಡಯಾಬಿಟಿಸ್ ರೋಗಿಗಳ ಮೇಲೆ ಒಂದು ಅಧ್ಯಯನವನ್ನು ಮಾತ್ರ ಮಾಡಲಾಗಿದೆ. ಈ ಅಧ್ಯಯನದ ಪ್ರಕಾರ ಇನ್ಸುಲಿನ್ ಗಿಡದ ತಾಜಾ ಎಲೆಗಳನ್ನು ತಿನ್ನುವುದರಿಂದ ಅಥವಾ 1 ಚಮಚ ಒಣಗಿದ ಎಳೆಗಳ ಪುಡಿಯನ್ನು ದಿನಾ ತಿನ್ನುವುದರಿಂದ ರೋಗಿಯ ರಕ್ತದ ಸಕ್ಕರೆ ಪ್ರಮಾಣವನ್ನು ಹಿಡಿತದಲ್ಲಿಡಬಹುದು.

ಇನ್ಸುಲಿನ್‌ ಗಿಡದ ಬಳಕೆ ಹೇಗ?
ಇನ್ಸುಲಿನ್‌ ಗಿಡದಎಲೆಯನ್ನು ಬಾಯಿಗೆ ಹಾಕಿ ಜಗಿಯುವ ಮೂಲಕ ಈ ಸಸ್ಯವನ್ನು ಉಪಯೋಗಿಸಬಹುದಾಗಿದೆ. ಪ್ರತಿದಿನ ಒಂದು ಎಲೆಯನ್ನು ಜಗಿಯುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ. ಒಂದು ತಿಂಗಳ ಕಾಲ ಇದನ್ನು ಮಾಡುವುದರಿಂದ ಪರಿಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಬಹುದು. ಇನ್ಸುಲಿನ್‌ ಗಿಡದ ಎಲೆಗಳನ್ನು ಕೊಯ್ದು ಬಿಸಿಲಿನಲ್ಲಿ ಒಣಗಿಸಿ ಎಲೆಗಳನ್ನು ಪುಡಿಯ ರೂಪದಲ್ಲಿಯೂ ಸೇವಿಸಬಹುದು. ಈ ಔಷಧಿಯನ್ನು ದಿನಕ್ಕೆ ಒಂದು ಟೀಚಮಚ ಮಾತ್ರ ತೆಗೆದುಕೊಳ್ಳಿ.

ಇನ್ಸುಲಿನ್ ಗಿಡದ ಎಲೆಯನ್ನು ಅಧ್ಯಯನ ಮಾಡಿದಾಗ ಅದು ಮನುಷ್ಯರ ಸೇವನೆಗೆ ಸುರಕ್ಷಿತ ಎಂಬುವುದಲ್ಲದೇ, ಅದರಲ್ಲಿ ಹೆಚ್ಚಿನ ಪ್ರಮಾಣದ ಪಾಮೆಟಿಕ್ ಆ್ಯಸಿಡ್ ಇರುವುದು ಕಂಡುಬಂತು. ಈ ವಸ್ತುವು ಇಲಿಯ ಹೃದಯದ ಸ್ನಾಯುವಿನ ಜೀವಕೋಶಗಳಿಗೆ ಹಾನಿಯುಂಟುಮಾಡುವುದೆಂದು ಮತ್ತು ಮನುಷ್ಯರಲ್ಲಿ  ಅನಾರೋಗ್ಯಕಾರಿ ಕೊಲೆಸ್ಟೆರಾಲ್ (ಎಲ್ ಡಿ ಎಲ್) ಹೆಚ್ಚಿಸುತ್ತದೆಂದು ತಿಳಿಯಿತು. ಹಾಗಾಗಿ ಈ ಅಧ್ಯಯನದ ಸಂಶೋಧಕರು, ಈ ಗಿಡವನ್ನು ನಿರಂತರ ಹಾಗೂ ಹೆಚ್ಚು ದಿನಗಳ ಕಾಲ ಉಪಯೋಗಿಸಬಾರದೆಂದು ಹೇಳುತ್ತಾರೆ

Follow Us:
Download App:
  • android
  • ios