ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ (Health Problem) ಹೆಚ್ಚಾಗ್ತಿದೆ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಜನರು ಹೃದಯಾಘಾತ (Heartattack)ಕ್ಕೊಳಗಾಗ್ತಿದ್ದಾರೆ. ಹೃದಯಾಘಾತವು ಬರುವ ಮೊದಲೇ ದೇಹವು (Body) ಅದನ್ನು ತಿಳಿದುಕೊಂಡರೆ ಜೀವಕ್ಕೆ ಅಪಾಯ (Danger)ವಾಗುವುದನ್ನು ತಪ್ಪಿಸಬಹುದು.
ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಕುಸಿದು ಬಿದ್ದು ಖ್ಯಾತ ಗಾಯಕ ಕೆಕೆ (KK) ಕೊನೆಯುಸಿರೆಳೆದಿದ್ದಾರೆ. 53 ವರ್ಷದ ಕೆಕೆ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗ, ಹಾಡುತ್ತಿರುವಾಗ ಅವರ ಆರೋಗ್ಯ (Health) ಹದಗೆಟ್ಟಿತ್ತು, ಹೀಗಿದ್ದರೂ ಅವರು ಇನ್ನೂ ಸ್ವಲ್ಪ ಸಮಯ ಹಾಡಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ ಮೈಕ್ ಕೆಳಗಿಟ್ಟು ತಮ್ಮ ತಂಡದೊಂದಿಗೆ ಕಾರ್ಯಕ್ರಮವನ್ನು ತೊರೆದರು. ಸದ್ಯಕ್ಕೆ ಇದನ್ನು ಅಸಹಜ ಸಾವು ಎಂದು ಹೇಳಲಾಗುತ್ತಿದ್ದರೂ, ಹೃದಯಾಘಾತ (Heartattack)ವಾಗಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ.
ಕೋಲ್ಕತ್ತಾದ ಕಾರ್ಡಿಯಾಕ್ ಕ್ಯಾಥ್ ಲ್ಯಾಬ್-ಕನ್ಸಲ್ಟೆಂಟ್ ಇಂಟರ್ವೆನ್ಷನ್ ಕಾರ್ಡಿಯಾಲಜಿಸ್ಟ್, ಮತ್ತು ಎಲೆಕ್ಟ್ರೋಫಿಸಿಯಾಲಜಿಸ್ಟ್, ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ, ಡಾ.ದಿಲೀಪ್ ಕುಮಾರ್ ಹೃದಯಾಘಾತ ಸಂಬಂಧಿತ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಪ್ರಶ್ನೆ 1: ಯಾರಾದರೂ ಹೃದಯಾಘಾತವನ್ನು ಹೇಗೆ ಗುರುತಿಸಬಹುದು ?
ಉತ್ತರ: ಯಾರಾದರೂ ಅಸಹನೀಯ ಅಥವಾ ಅತಿಯಾದ ಬೆವರುವಿಕೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇದು ಹೃದಯಾಘಾತದ ಲಕ್ಷಣವಾಗಿದೆ. ಇಂಥಾ ಸಮಯದಲ್ಲಿ ಸಮಯವನ್ನು ವ್ಯರ್ಥ ಮಾಡಬಾರದು ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಪ್ರತಿ ನಿಮಿಷವೂ ನಮ್ಮ ಜೀವನವನ್ನು ಹಠಾತ್ ಸಾವಿನಿಂದ ಉಳಿಸಬಹುದು.
ಗಾಯಕ ಕೆಕೆ ಸಾವು, ಯುವಜನರಲ್ಲಿ ದಿಢೀರ್ ಹೃದಯಾಘಾತಕ್ಕೆ ಕಾರಣವಾಗ್ತಿರೋದೇನು ?
ಪ್ರಶ್ನೆ 2: ಲೈವ್ ಕನ್ಸರ್ಟ್ ಮಾಡುವಾಗ ಕಲಾವಿದನ ಹೃದಯದ ಮೇಲೆ ಒತ್ತಡವಾಗೋದು ಹೇಗೆ ?
ಉತ್ತರ: ಗಾಯಕನ ಅಕಾಲಿಕ ಮರಣಕ್ಕೆ ನೇರ ಕಾರಣ ಸಂಗೀತ ಕಚೇರಿಯಲ್ಲ. ಗಾಯನವು ನಮ್ಮ ದೇಹಕ್ಕೆ ಹಾನಿಕಾರಕವಲ್ಲದ ವ್ಯಾಯಾಮದ ಒಂದು ರೂಪವಾಗಿ ಕಾರ್ಯನಿರ್ವಹಿಸುತ್ತದೆ. ಆದರೂ, ವಿಪರೀತ ಶಾಖ ಮತ್ತು ಅಸ್ವಸ್ಥತೆ ಉಸಿರಾಟವನ್ನು ಕಷ್ಟಕರವಾಗಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಹೃದಯಾಘಾತದ ಅಪಾಯ ಹೆಚ್ಚಿದೆ. ಇದು ಅಪಧಮನಿಯ ತಡೆಗಟ್ಟುವಿಕೆ ಮತ್ತು ಅಂತಿಮವಾಗಿ ಹಠಾತ್ ಹೃದಯದ ಸಾವಿಗೆ ಕಾರಣವಾಗಬಹುದು.
ಪ್ರಶ್ನೆ 3: ಉಸಿರುಗಟ್ಟಿದ ಸಭಾಂಗಣವು ಕಲಾವಿದನಿಗೆ ಹೇಗೆ ಮಾರಕವಾಗಬಹುದು ?
ಉತ್ತರ: ಯಾವುದೇ ಕೆಲಸ ಅಥವಾ ಪ್ರದರ್ಶನದ ಮೊದಲು ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಕಿಕ್ಕಿರಿದ ಸ್ಥಳ ಆಡಿಟೋರಿಯಂ ನಿರ್ಣಾಯಕವಾಗಬಹುದು. ಯಾಕೆಂದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೆ ಕೇವಲ 20 ನಿಮಿಷಗಳ ವ್ಯತ್ಯಾಸವೂ ಮುಖ್ಯವಾಗಬಹುದು. 20 ನಿಮಿಷಗಳ ಅಂತರದಲ್ಲಿ ಜೀವ ಉಳಿಯಬಹುದು ಅಥವಾ ಜೀವ ಹೋಗಬಹುದು ಎರಡು ಸಾಧ್ಯತೆಯೂ ಇದೆ.
ಪ್ರಶ್ನೆ 4: ಲೈವ್ ಕನ್ಸರ್ಟ್ ಮಾಡುವಾಗ ಕಲಾವಿದರು ಯಾವ ರೀತಿಯ ಪರಿಸರವನ್ನು ಕೇಳಬೇಕು?
ಉತ್ತರ: ಲೈವ್ ಕನ್ಸರ್ಟ್ ಮಾಡುವಾಗ ಯಾವುದೇ ಆಡಿಟೋರಿಯಂ ಅಥವಾ ಸರಿಯಾದ ಗಾಳಿಯ ಹಾದಿಯೊಂದಿಗೆ ತೆರೆದ ಸ್ಥಳವು ಪ್ರದರ್ಶನಕ್ಕೆ ಸೂಕ್ತವಾಗಿದೆ.
ಹೃದಯಾಘಾತದ ಲಕ್ಷಣ ಮುಖದ ಮೇಲೂ ಕಾಣಿಸಿಕೊಳ್ಳುತ್ತೆ, ಗಮನವಿರಲಿ !
ಪ್ರಶ್ನೆ 5: ಹೃದಯಾಘಾತ ಸಂಭವಿಸಿದಲ್ಲಿ ಜೀವವನ್ನು ಉಳಿಸಿಕೊಳ್ಳಲು ಏನು ಮಾಡಬಹುದು ?
ಉತ್ತರ: ಯಾರಾದರೂ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದರೆ, ತಕ್ಷಣದ ಎದೆಯ ಸಂಕೋಚನ ಅಥವಾ ಸಿಪಿಆರ್ ನಿರ್ಣಾಯಕವಾಗಿದೆ. ಯಾಕೆಂದರೆ ಆಸ್ಪತ್ರೆಗೆ ಹೋಗಲು ನಿರ್ಧಿಷ್ಟ ಸಮಯ ಬೇಕಾಗುತ್ತದೆ. ಹೀಗಾಗಿ ಇಂಥಾ ಸಂದರ್ಭಗಳು ಮತ್ತು ಘಟನೆಗಳನ್ನು ತಪ್ಪಿಸಲು, ಹೃದಯದ ಸ್ಥಿತಿಗಾಗಿ ಸ್ಕ್ರೀನಿಂಗ್ ಅನ್ನು 40 ನೇ ವಯಸ್ಸಿನಲ್ಲಿ ಪ್ರಾರಂಭಿಸಬೇಕು.
ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕುಟುಂಬದ ಇತಿಹಾಸ ಮತ್ತು ಬಹು ಅಪಾಯಕಾರಿ ಅಂಶಗಳನ್ನು ಹೊಂದಿರುವ ಜನರು 30 ವರ್ಷ ವಯಸ್ಸಿನಲ್ಲೇ ಸ್ಕ್ರೀನಿಂಗ್ ಅನ್ನು ಪ್ರಾರಂಭಿಸಬೇಕು. ಹೃದಯಾಘಾತದ ಸ್ಪಷ್ಟ ಚಿಹ್ನೆಗಳು ಮತ್ತು ರೋಗಲಕ್ಷಣಗಳೊಂದಿಗೆ ಯಾರಾದರೂ ಇದ್ದಕ್ಕಿದ್ದಂತೆ ಅಹಿತಕರ ಭಾವನೆಯನ್ನು ಅನುಭವಿಸಲು ಪ್ರಾರಂಭಿಸಿದರೆ, ತಕ್ಷಣದ ವೈದ್ಯಕೀಯ ಆರೈಕೆ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವ ಅಗತ್ಯವಿರುತ್ತದೆ.
