MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Deepika Padukone ಸೇರಿದಂತೆ ಡ್ರಗ್ಸ್' ವ್ಯಸನದ ಆರೋಪವಿರುವ ಟಾಪ್‌ ನಟಿಯರು ಇವರೇ

Deepika Padukone ಸೇರಿದಂತೆ ಡ್ರಗ್ಸ್' ವ್ಯಸನದ ಆರೋಪವಿರುವ ಟಾಪ್‌ ನಟಿಯರು ಇವರೇ

ಬಾಲಿವುಡ್‌ನಲ್ಲಿ ಮತ್ತೊಮ್ಮೆ ಡ್ರಗ್ಸ್ ಪ್ರಕರಣ ಸದ್ದು ಮಾಡುತ್ತಿದೆ. ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್  (Siddhanth Kapoor)  ನನ್ನು ಬಂಧಿಸಲಾಗಿದೆ. ಬಿ ಟೌನ್ ಮತ್ತು ಡ್ರಗ್ಸ್‌ಗೆ ಹಳೆಯ ಸಂಪರ್ಕವಿದೆ. ಸುಶಾಂತ್ ಸಿಂಗ್ ರಜಪೂತ್ (Suashant Singh Rajput) ಸಾವಿನ ನಂತರವೂ ಡ್ರಗ್ ಪ್ರಕರಣದಲ್ಲಿ ಹಲವು ಸೆಲೆಬ್ರಿಟಿಗಳ ಹೆಸರು ಬಹಿರಂಗವಾಗಿದೆ. ಇದರಲ್ಲಿ ಹಲವು ನಟಿಯರು ಭಾಗಿಯಾಗಿದ್ದರು. ರಿಯಾ ಚಕ್ರವರ್ತಿ (Rhea chakraborty) ಕೂಡ ಡ್ರಗ್ಸ್ ಸಂಪರ್ಕಕ್ಕಾಗಿ ಒಂದು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ದೀಪಿಕಾ ಪಡುಕೋಣೆ (Deepika Padukone), ಶ್ರದ್ಧಾ ಕಪೂರ್ (Shraddha Kapoor) ಸೇರಿದಂತೆ ಆರು ನಟಿಯರ ಮೇಲೆ ಡ್ರಗ್ಸ್ ಸೇವಿಸಿದ ಆರೋಪ ಕೇಳಿ ಬಂದಿದೆ. 

2 Min read
Author : Suvarna News
Published : Jun 13 2022, 05:12 PM IST
Share this Photo Gallery
  • FB
  • TW
  • Linkdin
  • Whatsapp
16

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, NCB ಅಂದರೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಾಲಿವುಡ್‌ನಲ್ಲಿ ಡ್ರಗ್ಸ್ ಸಂಪರ್ಕವನ್ನು ತನಿಖೆ ಮಾಡಲು ಪ್ರಾರಂಭಿಸಿತು. ಮೊದಲು ಮಾದಕ ವ್ಯಸನಿಗಳೊಂದಿಗೆ ನಟಿ ನಟಿ ರಿಯಾ ಚಕ್ರವರ್ತಿ ಸಂಪರ್ಕ ಬೆಳಕಿಗೆ ಬಂದಿದೆ. ನಂತರ ಅವರನ್ನು ಎನ್‌ಸಿಬಿ ಬಂಧಿಸಿತ್ತು. 67, ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ಆಕೆ ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲೇ ಇದ್ದರು. ಆ ಬಳಿಕ ಜಾಮೀನು ಪಡೆದಿದ್ದರು.


 

26

ಡ್ರಗ್ಸ್ ಪ್ರಕರಣದಲ್ಲಿ ಶಕ್ತಿ ಕಪೂರ್ ಅವರ ಮಗಳು ಶ್ರದ್ಧಾ ಕಪೂರ್ ಹೆಸರು ಕೂಡ ಮುನ್ನೆಲೆಗೆ ಬಂದಿತ್ತು. ಈ ಪ್ರಕರಣದಲ್ಲಿ ನಟಿಯನ್ನು ಎನ್‌ಸಿಬಿ ಕೂಡ ವಿಚಾರಣೆ ನಡೆಸಿತ್ತು. ಶ್ರದ್ಧಾ ಕಪೂರ್ ಅವರ ಚಾಟ್ ಹೊರಹೊಮ್ಮಿತು. ಇದರಲ್ಲಿ ಅವರು ಟ್ಯಾಲೆಂಟ್ ಮ್ಯಾನೇಜರ್ ಜಯ ಸಾಹ್ ಅವರಿಂದ ಸಿಡಿಬಿ ಎಣ್ಣೆಯನ್ನು ಕೇಳುತ್ತಿದ್ದರು. ವಿಚಾರಣೆ ವೇಳೆ ಜಯಾ, ನಟಿ ತನ್ನಿಂದ ಸಿಬಿಡಿ ಆಯಿಲ್ ಖರೀದಿಸಿದ್ದರು ಎಂದು ಹೇಳಿದ್ದರು. CBD ತೈಲವನ್ನು ಸೆಣಬಿನ ಬೀಜಗಳಿಂದ ತಯಾರಿಸಲಾಗುತ್ತದೆ 

36

ಡ್ರಗ್ಸ್ ಸೇವನೆಯಲ್ಲಿ ಸಾರಾ ಅಲಿ ಖಾನ್ ಹೆಸರು ಕೂಡ ಕೇಳಿಬಂದಿತ್ತು. ಸಾರಾ ಅಲಿ ಖಾನ್ ಕೂಡ ಸುಶಾಂತ್ ರಜಪೂತ್ ಡ್ರಗ್ ಪಾರ್ಟಿಗಳಿಗೆ ಹಾಜರಾಗುತ್ತಿದ್ದರು ಎಂದು ರಿಯಾ ಚಕ್ರವರ್ತಿ ಎನ್‌ಸಿಬಿಗೆ ತಿಳಿಸಿದ್ದಾರೆ. ಸುಶಾಂತ್ ರಜಪೂತ್ ಒಮ್ಮೆ ಸಾರಾ ಅಲಿ ಖಾನ್ ಅವರೊಂದಿಗೆ ಭಾರೀ ಪ್ರಮಾಣದ ಡ್ರಗ್ಸ್ ಸೇವಿಸಿದ್ದಾರೆ ಎಂದು ಅವರು ಹೇಳಿದರು. ಸಾರಾ ಮತ್ತು ಸುಶಾಂತ್ ಕೇದಾರನಾಥ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ಪ್ರಕಾರ, ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರೂ ಡ್ರಗ್ಸ್ ಸೇವಿಸುತ್ತಿದ್ದರು.

46

ರಿಯಾ ಚಕ್ರವರ್ತಿ ಅವರ ವಿಚಾರಣೆಯಲ್ಲೂ ರಾಕುಲ್‌ಪ್ರೀತ್ ಸಿಂಗ್ ಹೆಸರು ಕೇಳಿಬಂದಿದೆ. ರಾಕುಲ್‌ಪ್ರೀತ್ ಸಿಂಗ್ ಕೂಡ ಸುಶಾಂತ್ ಪಾರ್ಟಿಗೆ ಹಾಜರಾಗುತ್ತಿದ್ದರು ಎಂದು ನಟಿ ಎನ್‌ಸಿಬಿಗೆ ತಿಳಿಸಿದ್ದರು. ಈ ಪ್ರಕರಣದಲ್ಲಿ ರಾಕುಲ್ ಪ್ರೀತ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮಾಧ್ಯಮ ವಿಚಾರಣೆಯ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅವರ ವಿರುದ್ಧ ನಡೆಯುತ್ತಿರುವ ಮಾಧ್ಯಮ ವಿಚಾರಣೆಗಳ ಕುರಿತು ನ್ಯಾಯಾಲಯವು ಕೇಂದ್ರದಿಂದ ಪ್ರತಿಕ್ರಿಯೆಯನ್ನು ಕೇಳಿದೆ. ಆದರೆ, ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.


 

56

ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಹೆಸರು ಕೂಡ ಕೇಳಿ ಬಂದಿತ್ತು. ಅವರನ್ನೂ ಎನ್‌ಸಿಬಿ ವಿಚಾರಣೆಗೊಳಪಡಿಸಿದೆ. ಚಾಟ್‌ನಲ್ಲಿ ದೀಪಿಕಾ ಹೆಸರು ಕೂಡ ಕೇಳಿಬಂದಿದೆ ಎಂಬ ಪ್ರಶ್ನೆಗಳಿಗೆ ಉತ್ತರಿಸುವಾಗ ದೀಪಿಕಾ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

66

ಡ್ರಗ್ಸ್ ಪ್ರಕರಣದಲ್ಲಿ ದಿಯಾ ಮಿರ್ಜಾ ಹೆಸರು ಹೊರಬಿದ್ದ ನಂತರ ನಟಿ ಕೋಪಗೊಂಡಿದ್ದರು. ನನ್ನ ಇಮೇಜ್ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ನಾನು ಕಾನೂನು ಹೋರಾಟ ನಡೆಸುತ್ತೇನೆ. ನನ್ನ ಜೀವನದಲ್ಲಿ ನಾನು ಯಾವುದೇ ರೂಪದಲ್ಲಿ ಮಾದಕ ದ್ರವ್ಯ ಅಥವಾ ನಿಷೇಧಿತ ವಸ್ತುಗಳನ್ನು ಬಳಸಿಲ್ಲ ಎಂದಿದ್ದಾರೆ ನಟಿ ದಿಯಾ ಮಿರ್ಜಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ದೀಪಿಕಾ ಪಡುಕೋಣೆ
ಸಾರಾ ಅಲಿ ಖಾನ್

Latest Videos
Recommended Stories
Recommended image1
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
Recommended image2
ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!
Recommended image3
ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved