ಬಾಪೂಜಿ ಮಕ್ಕಳ ಆಸ್ಪತ್ರೆ ವೈದ್ಯರ ಅಪರೂಪದ ಶಸ್ತ್ರಚಿಕಿತ್ಸೆ, ಆಹಾರ, ನೀರು ಸೇವಿಸುತ್ತಿರುವ 3 ವರ್ಷದ ಮಗು

ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಯ ವೈದ್ಯರು ಮೂರು ವರ್ಷದ ಮಗುವಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದು, ಅದು ಯಶಸ್ವಿಯಾಗಿದೆ. ಇದೀಗ ಮಗು ಆಹಾರ, ನೀರು ಸೇವಿಸುವಂತಾಗಿದೆ.

Davanagere Bapuji Children Hospital Doctor successfully rare surgery For 3 Years child rbj

ದಾವಣಗೆರೆ (ಜುಲೈ 20) ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಯ ವೈದ್ಯರ ತಂಡ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಮೂರು ವರ್ಷದ ಮಗುವಿನ ಜೀವ ಉಳಿಸಿದೆ. ಅಪರೂಪದ ಶಸ್ತ್ರ ಚಿಕಿತ್ಸೆಯಿಂದ ಮಗು ಇದೀಗ ಆಹಾರ, ನೀರು ಸೇವನೆ ಮಾಡುತ್ತಿದೆ. ಇದರಿಂದ ಪೋಷಕರು ಸಂತಸಗೊಂಡಿದ್ದಾರೆ.

ವೀರಣ್ಣ ಎಂಬ ಶಿಶು ಅಪರೂಪದ ಜನ್ಮಜಾತ ವೈಪರೀತ್ಯದಿಂದ ಜನಿಸಿದ್ದನು. ಅಲ್ಲಿ ಅವನ ಅನ್ನನಾಳವು ಅಭಿವೃದ್ಧಿಯಾಗಿರಲಿಲ್ಲ. ಅವನಿಗೆ ಲಾಲಾರಸ ಮತ್ತು ಹಾಲು ಸಹ ನುಂಗಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಅವನು ಹೊಸಪೇಟೆಯಲ್ಲಿ ಜೀವ ಉಳಿಸುವ ಪ್ರಥಮ ಪ್ರಕ್ರಿಯೆಗೆ ಒಳಗಾದ್ದನು. ಆಗ ಅನ್ನನಾಳವನ್ನು ಕುತ್ತಿಗೆಯ ಭಾಗದಲ್ಲಿ ಇರಿಸಲಾಯ್ತು. ಅವನ ಲಾಲಾರಸವು ಕುತ್ತಿಗೆಯಿಂದ ಹೊರಬರುತ್ತಿತ್ತು ಮತ್ತು ಹೊಟ್ಟೆಗೆ ಹಾಕಿದ ಟ್ಯೂಬ್ ಮೂಲಕ ಆಹಾರವನ್ನು ನೀಡಲಾಗುತ್ತಿತ್ತು. 1 ವರ್ಷದ ವಯಸ್ಸಿನಲ್ಲಿ ನಿರ್ಣಾಯಕ ಕಾರ್ಯವಿಧಾನಕ್ಕಾಗಿ ಅವನನ್ನು ಹೊಸಪೇಟೆಯ ವೈದ್ಯರ ಸಲಹೆಯಿಂದ ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಗೆ ಸೇರಿಸಲಾಯ್ತು. 

ಇಮ್ಯೂನಿಟಿ ಪವರ್ ಬೂಸ್ಟ್ ಮಾಡಲು ಇವು ತುಂಬಾನೆ ಅಗತ್ಯ !

ಮಕ್ಕಳ ತಜ್ಞ ಡಾ.ಹರ್ಷ ಹೇಳಿದ್ದಿಷ್ಟು

ಇನ್ನು ಮಕ್ಕಳ ತಜ್ಞ ಹರ್ಷ ಶಸ್ತ್ರ ಚಿಕಿತ್ಸೆ ಹಾಗೂ ಮಗುವಿನ ಆರೋಗ್ಯದ ಪ್ರತಿಕ್ರಿಯಿಸಿದ್ದು, ನಾವು ಒಪಿಡಿಯಲ್ಲಿ ನೋಡಿದಾಗ ಅವನು 10 ಕೆಜಿ ತೂಕ ಹೊಂದಿದ ನಂತರ ಮತ್ತು ಹೊಟ್ಟೆಯ ಗಾತ್ರ ದೊಡ್ಡದಾದ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಸಲಹೆ ನೀಡಿದೆವು. ಇದರಿಂದ ಹೊಟ್ಟೆಯು ಕುತ್ತಿಗೆಯ ಮಟ್ಟಕ್ಕೆ ಬರಲು ಸಾಧ್ಯವಾಗುವುದು. 3 ವರ್ಷಗಳ ಕಾಲ ಅವನಿಗೆ ಟ್ಯೂಬ್ ಮೂಲಕ ಸ್ವಲ್ಪ ಸ್ವಲ್ಪ ಹಾಲನ್ನು ಮಾತ್ರ ನೀಡಲಾಗುತ್ತಿತ್ತು. ತಾಯಿ ಬೇರೆ ಆಹಾರವನ್ನು ಮಗುವಿಗೆ ನೀಡಲು ಹೆದರುತ್ತಿದ್ದರು ಮತ್ತು ಹೆಚ್ಚು ಆಹಾರವನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಅವನು ದೊಡ್ಡ ಶಸ್ತ್ರ ಚಿಕಿತ್ಸೆಯನ್ನು ತಡೆದುಕೊಳ್ಳುವಷ್ಟು ತೂಕವನ್ನು ಹೊದಿರಲಿಲ್ಲ. ಅವನನ್ನು 2 ತಿಂಗಳ ಕಾಲ ಎಸ್.ಎಸ್ ಕೇರ್ ಟ್ರಸ್ಟ್ ಅಡಿಯಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆಗೆ ಸೇರಿಸಲಾಯಿತು ಮತ್ತು ತೂಕವನ್ನು 10 ಕೆಜಿಗೆ ಹೆಚ್ಚಿಸಲಾಯಿತು. ಮಗು ನಂತರ ಜೂನ್  29‌ ರಂದು 6 ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗೆ ಒಳಗಾದನು ಎಂದು ಮಾಹಿತಿ ನೀಡಿದರು.

 ಅಲ್ಲಿ ಅವರ ಹಿಂದಿನ ಶಸ್ತ್ರಚಿಕಿತ್ಸೆಯನ್ನು ಬದಲಾಯಿಸಿ ಅನ್ನನಾಳದ ಅವಶೇಷವನ್ನು ಹೊರತೆಗೆಯಲಾಯಿತು, ಹೊಟ್ಟೆಯನ್ನು ಉದ್ದಗೊಳಿಸಲಾಯಿತು ಮತ್ತು ಟ್ಯೂಬುಲರೈಸ್‌ ಮಾಡಲಾಯಿತು ಮತ್ತು ಹೃದಯ ಮತ್ತು ಶ್ವಾಸಕೋಶದ ಹಿಂದೆ ಎದೆಯ ಮೂಲಕ ತಂದು ಕುತ್ತಿಗೆಯಲ್ಲಿ ಅನ್ನನಾಳಕ್ಕೆ ಹೊಲಿಗೆ ಹಾಕಲಾಯಿತು. ಆ ಮಗುವನ್ನು 48 ಗಂಟೆಗಳ ಕಾಲ ಚೆನ್ನಾಗಿ ಸ್ವತಃ ಆಹಾರ, ನೀರನ್ನು ಸೇವಿಸುತ್ತಿದ್ದಾನೆ. ಐಸಿಯುನಲ್ಲಿ ವೇಂಟಿಲೇಟ್ ಮಾಡಿ ಆಹಾರವನ್ನು ನಿಧಾನವಾಗಿ ಪ್ರಾರಂಭಿಸಲಾಯಿತು, ಸಧ್ಯ ತಾನೇ ಆಹಾರ ಹಾಗೂ ನೀರು ಸೇವನೆ ಮಾಡುತ್ತಿದ್ದಾನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಕೌಶಿಕ್,ಡಾ.ಜಿ.ಗುರುಪ್ರಸಾದ್,ಡಾ.ಉಮಾ,ಡಾ.ಕೌಜಲಗಿ,ಡಾ.ಪ್ರಕಾಶ್,ಡಾ.ಅಕ್ಷತಾ ಮಗುವಿನ ತಾಯಿ ನೇತ್ರಾ ಇದ್ದರು

Latest Videos
Follow Us:
Download App:
  • android
  • ios