ಇಮ್ಯೂನಿಟಿ ಪವರ್ ಬೂಸ್ಟ್ ಮಾಡಲು ಇವು ತುಂಬಾನೆ ಅಗತ್ಯ !
ನಮ್ಮ ದೇಹಕ್ಕೆ ರೋಗಗಳಿಂದ ರಕ್ಷಿಸಲು ಬಲವಾದ ರೋಗನಿರೋಧಕ ಶಕ್ತಿಯ ಅಗತ್ಯವಿದೆ. ನಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಂಡರೆ, ರೋಗಗಳು ನಮ್ಮನ್ನು ಸುತ್ತುವರಿಯುತ್ತವೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳಬೇಕಾದ್ದು ಅತ್ಯಗತ್ಯ. ಅವುಗಳ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಇವುಗಳನ್ನು ಅಳವಡಿಸಿಕೊಂಡು, ಉತ್ತಮ ಆರೋಗ್ಯ ಕಾಪಾಡಿ.
ಮೆಟ್ಟಿಲುಗಳನ್ನು ಏರುವಾಗ ಉಸಿರಾಟದ ತೊಂದರೆ, ಬದಲಾಗುತ್ತಿರುವ ಹವಾಮಾನದಿಂದಾಗಿ ಸೀನುವುದು ಮತ್ತು ಕೆಮ್ಮುವುದು, ಬೇಗನೆ ದಣಿಯುವುದು ಇತ್ಯಾದಿಗಳು ನಮ್ಮ ದುರ್ಬಲ ರೋಗನಿರೋಧಕ ಶಕ್ತಿಯನ್ನು ಸೂಚಿಸುತ್ತವೆ. ನಮ್ಮ ರೋಗನಿರೋಧಕ ಶಕ್ತಿಯು ದೇಹವನ್ನು ಆರೋಗ್ಯಕರ ಮತ್ತು ರೋಗ ಮುಕ್ತವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಮಗೆ ಯಾವುದೇ ರೋಗ ಬರಲಿ, ಅದರ ವಿರುದ್ಧ ಹೋರಾಡುವಲ್ಲಿ ರೋಗನಿರೋಧಕ ಶಕ್ತಿಯು (immunity power) ಅತಿ ದೊಡ್ಡ ಆಯುಧವಾಗಿದೆ. ಕಳೆದ ಎರಡು ವರ್ಷಗಳಲ್ಲಿ, ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ, ಆದರೆ ಬಿಡುವಿಲ್ಲದ ಲೈಫ್ ಸ್ಟೈಲ್ ಮತ್ತು ತಪ್ಪು ಆಹಾರ ಕ್ರಮದಿಂದಾಗಿ, ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ.
ಅನಾರೋಗ್ಯ ಅಥವಾ ಸಿಗರೇಟುಗಳು ಮತ್ತು ಆಲ್ಕೋಹಾಲ್ ಸೇವನೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಸೈನ್ಯ ಬಲವಾಗಿದ್ದರೆ, ಯುದ್ಧವನ್ನು ಸುಲಭವಾಗಿ ಗೆಲ್ಲುವಂತೆ, ನಮ್ಮ ರೋಗನಿರೋಧಕ ಶಕ್ತಿಯು ಬಲವಾಗಿದ್ದರೆ, ನಾವು ಯಾವುದೇ ಗಂಭೀರ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತೆ. ಹಾಗಾದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸೋದು ಹೇಗೆ? ಈ ಮನೆಮದ್ದುಗಳು ದೇಹದ ದೌರ್ಬಲ್ಯವನ್ನು ನಿವಾರಿಸಲು ಮತ್ತು ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.
ಸಾಕಷ್ಟು ನಿದ್ರೆ ಅತ್ಯಗತ್ಯ
ಅಸಮರ್ಪಕ ಮತ್ತು ಕಳಪೆ ನಿದ್ರೆಯು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಉತ್ತಮ ರೋಗನಿರೋಧಕ ಶಕ್ತಿಗೆ ನಿಮ್ಮ ನಿದ್ರೆ ಬಹಳ ಮುಖ್ಯ. ಅನಾರೋಗ್ಯದಿಂದ ಬಳಲುತ್ತಿರುವಾಗ, ಹೆಚ್ಚು ನಿದ್ರೆ ಮಾಡುವುದು ಉತ್ತಮ. ಅದೇ ರೀತಿಯಲ್ಲಿ, ಗುಣಮಟ್ಟದ ನಿದ್ರೆಯು ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ವಯಸ್ಕರು ದಿನಕ್ಕೆ 7 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬೇಕು. ಮಕ್ಕಳಿಗೆ, 8 ರಿಂದ 10 ಗಂಟೆಗಳ ನಿದ್ರೆ ಬಹಳ ಮುಖ್ಯ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನಿದ್ರೆ ಸಿಕ್ಕಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಸಸ್ಯ ಆಧಾರಿತ ಆಹಾರ ಸೇವಿಸಿ
ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಬೀನ್ಸ್ ನಂತಹ ಆಹಾರಗಳು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇದು ದೇಹವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಹೃದಯ ಸಮಸ್ಯೆಗಳು, ಅಲ್ಝೈಮರ್ಸ್ ಮತ್ತು ಕ್ಯಾನ್ಸರ್ ನಂತಹ ರೋಗಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಸ್ಯ ಆಧಾರಿತ ಆಹಾರಗಳು ಸಹಾಯಕವಾಗಿವೆ. ಇದರಲ್ಲಿ ನಾರಿನಂಶ ಸಮೃದ್ಧವಾಗಿರೋದ್ರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿ
ಫಿಟ್ ಆಗಿರಲು ಮತ್ತು ಸ್ಥೂಲಕಾಯವನ್ನು ಕಡಿಮೆ ಮಾಡಲು ಅನೇಕ ಬಾರಿ ನಾವು ತುಪ್ಪ ಮತ್ತು ಎಣ್ಣೆಯನ್ನು ಸೇವಿಸುವುದನ್ನು ನಿಲ್ಲಿಸುತ್ತೇವೆ. ಆದರೆ ಈ ಆರೋಗ್ಯಕರ ಕೊಬ್ಬುಗಳು (healthy fat) ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿಮಗೆ ತಿಳಿದಿದೆಯೇ? ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಪ್ಪ, ಆಲಿವ್ ಎಣ್ಣೆ ಮತ್ತು ಸಾಸಿವೆ ಎಣ್ಣೆ ನಿಮ್ಮ ಆಹಾರದಲ್ಲಿ ಸೇರಿಸಿ. ಅಲ್ಲದೆ, ಚಿಯಾ ಬೀಜ ಮತ್ತು ಮೀನಿನಂತಹ ಒಮೆಗಾ -3 ಕೊಬ್ಬಿನಾಮ್ಲಗಳನ್ನು ತಿನ್ನಲು ಪ್ರಾರಂಭಿಸಿ.
ಮಾಡರೇಟರ್ ವ್ಯಾಯಾಮ ಮಾಡಿ
ಯಾವಾಗಲೂ ದುರ್ಬಲತೆಯನ್ನು ಅನುಭವಿಸುವುದು ಅಥವಾ ಸೋಮಾರಿಯ ಹಾಗೇ ಮಲಗೋದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಯಾಮವು ಅತ್ಯುತ್ತಮ ಮಾರ್ಗವಾಗಿದೆ. ನೀವು ಭಾರವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಮೋಡ್ರೆಟ್ ವ್ಯಾಯಾಮಗಳನ್ನು ಮಾಡಿ. ನೀವು ಸುಲಭವಾಗಿ ಮಾಡಬಹುದಾದ ವ್ಯಾಯಾಮಗಳನ್ನು ಆರಿಸಿ. ಅವುಗಳೆಂದರೆ ಚುರುಕಾದ ನಡಿಗೆ, ಸೈಕ್ಲಿಂಗ್, ಜಾಗಿಂಗ್, ಈಜು ಅಥವಾ ಜಾಗಿಂಗ್. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.