ಇದ್ಯಾವ ರಿಸರ್ಚ್ ಅಪ್ಪೋ? ಗೋಮೂತ್ರಕ್ಕಿಂತ ಎಮ್ಮೆ ಮೂತ್ರವೇ ಬೆಸ್ಟ್ ಅಂತೆ!
ಗೋಮೂತ್ರ ಒಳ್ಳೆಯದೇ ಇಲ್ಲ ಕೆಟ್ಟದ್ದೇ ಈ ಪ್ರಶ್ನೆಗೆ ಸದಾ ಚರ್ಚೆಗಳು ನಡೆಯುತ್ತಿರುತ್ತವೆ. ಕೆಲವರು ಒಳ್ಳೆಯದು ಅಂದ್ರೆ ಮತ್ತೆ ಕೆಲವರು ಕೆಟ್ಟದ್ದು ಎನ್ನುತ್ತಾರೆ. ಈಗ ಅದ್ರ ಬಗ್ಗೆ ಮತ್ತೊಂದು ಸಂಶೋಧನೆ ನಡೆದಿದೆ. ಅದ್ರಲ್ಲೇನಿದೆ ಗೊತ್ತಾ?
ಗೋಮೂತ್ರ ಆರೋಗ್ಯಕ್ಕೆ ಒಳ್ಳೆಯದು. ಈ ಮಾತನ್ನು ನಾವು ಅನೇಕ ಕಡೆ, ಅನೇಕ ಬಾರಿ ಕೇಳಿರ್ತೇವೆ. ಆಯುರ್ವೇದದಲ್ಲಿ ಗೋಮೂತ್ರದ ಸಹಾಯದಿಂದ ಅನೇಕ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಷ್ಟೇ ಅಲ್ಲ ಗೋಮೂತ್ರದಿಂದ ಹಲವು ಔಷಧಗಳನ್ನು ತಯಾರಿಸುತ್ತಾರೆ. ಗೋಮೂತ್ರ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಎಂಬುದನ್ನು ನೀವು ಕೇಳಿರಬಹುದು. ಕೆಲ ಕಂಪನಿಗಳು ಗೋ ಮೂತ್ರವನ್ನು ಮಾರಾಟ ಮಾಡ್ತಿವೆ.
ಗೋ (Cow) ಮೂತ್ರ (Urine) ದ ಬಳಕೆ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ಹಿಂದೂ (Hindu) ಧರ್ಮದಲ್ಲಿ ಗೋಮೂತ್ರ ಬಳಕೆ ಮಾಡಲಾಗ್ತಿದೆ. ಈ ಗೋಮೂತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ಸಾಮಾನ್ಯ. ಗೋ ಮೂತ್ರದ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ. ಗೋಮೂತ್ರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಕಾರ್ಬೊನಿಕ್ ಆಮ್ಲ, ಪೊಟ್ಯಾಷ್, ಸಾರಜನಕ, ಅಮೋನಿಯಾ, ಮ್ಯಾಂಗನೀಸ್, 2.5 ರಷ್ಟು ಯೂರಿಯಾ, ಖನಿಜಗಳು, 24 ರೀತಿಯ ಲವಣಗಳು, ಹಾರ್ಮೋನುಗಳು ಮತ್ತು 2.5 ರಷ್ಟು ಕಿಣ್ವಗಳಿವೆ. ಇಷ್ಟೆಲ್ಲ ಅಂಶವಿರುವ ಈ ಗೋಮೂತ್ರ ಸೇವನೆ ಮಾಡುವ ಮುನ್ನ ಇದನ್ನೋದಿ. ಇತ್ತೀಚೆಗೆ, ದೇಶದ ಪ್ರತಿಷ್ಠಿತ ಸಂಸ್ಥೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಭಾರತೀಯ ಪಶುವೈದ್ಯಕೀಯ ಸಂಶೋಧನಾ (Research) ಸಂಸ್ಥೆಯ ಸಂಶೋಧನೆಯೊಂದನ್ನು ಪ್ರಕಟಿಸಿದೆ. ಇದ್ರಲ್ಲಿ ಗೋಮೂತ್ರಕ್ಕಿಂತ ಎಮ್ಮೆ ಮೂತ್ರ ಮನುಷ್ಯರಿಗೆ ಒಳ್ಳೆಯದು ಎನ್ನಲಾಗಿದೆ.
ನೀವು ಕುಡಿಯೋ ನೀರಲ್ಲಿ ಲಿಥಿಯಂ ಇದೆಯೇ? ಭ್ರೂಣವನ್ನು ಅಪಾಯಕ್ಕೆ ದೂಡುತ್ತೆ ಈ ಅಂಶ
ಐವಿಆರ್ಐ ಸಂಶೋಧನೆಯಲ್ಲಿ ಏನಿದೆ? : ಉತ್ತರ ಪ್ರದೇಶದ ಪ್ರಸಿದ್ಧ ಬರೇಲಿ ಜಿಲ್ಲೆಯ ಇಜ್ಜತ್‌ನಗರದಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (IVRI) ಸಂಶೋಧನೆ ನಡೆಸಿದೆ. ಭೋಜರಾಜ್ ಸಿಂಗ್ ಎಂಬುವವರು ತಮ್ಮ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳ ಜೊತೆ ಸಂಶೋಧನೆ ನಡೆಸಿದ್ದಾರೆ.
ಸಂಶೋಧನೆ ಪ್ರಕಾರ, ಆರೋಗ್ಯವಂತ ಹಸುಗಳ ಹಾಲಿನಲ್ಲಿ ಕನಿಷ್ಠ 14 ಬಗೆಯ ಬ್ಯಾಕ್ಟೀರಿಯಾ (Bacteria) ಗಳು ಕಂಡುಬರುತ್ತವೆಯಂತೆ. ಎಸ್ಚೆರಿಚಿಯಾ ಕೋಲಿಯ ಉಪಸ್ಥಿತಿಯು ಅದರಲ್ಲಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಇದರಿಂದಾಗಿ ಹೊಟ್ಟೆಯ ಸೋಂಕಿನ ಅಪಾಯವಿರುತ್ತದೆ.
Health Tips: ನಿಮ್ಮ ದೇಹದ ತೂಕ ಹೆಚ್ತಾ ಇದ್ಯಾ? ಈ ಲಕ್ಷಣಗಳ ಮೂಲಕ ತಿಳ್ಕೊಳ್ಳಿ
ಸಂಶೋಧನೆ ವೇಳೆ ಹಸು ಮತ್ತು ಎಮ್ಮೆಯ 73 ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ ಎಂದು ಐವಿಆರ್ ಐ ನ ಸಾಂಕ್ರಾಮಿಕ ರೋಗ ವಿಭಾಗದ ಎಚ್‌ಒಡಿ ಭೋಜರಾಜ್ ಸಿಂಗ್ ಹೇಳಿದ್ದಾರೆ. ಸಾಹಿವಾಲ್, ತಾರ್ಪಾರ್ಕರ್, ವಿಂದಾವಿ ತಳಿಯ ಹಸುಗಳ ಮೂತ್ರವನ್ನು ಪರೀಕ್ಷಿಸಲಾಗಿದೆ. ಸಂಶೋಧನೆ ವೇಳೆ ಗೋವಿನ ಮೂತ್ರಕ್ಕಿಂತ ಎಮ್ಮೆಯ ಮೂತ್ರ ಹೆಚ್ಚು ಪ್ರಯೋಜನಕಾರಿ ಎಂಬುದು ನಮಗೆ ತಿಳಿದು ಬಂತು ಎಂದು ಭೋಜರಾಜ್ ಹೇಳಿದ್ದಾರೆ. ಎಮ್ಮೆ ಮೂತ್ರದಲ್ಲಿ, ಎಸ್ ಎಪಿಡರ್ಮಿಡಿಸ್ (S Epidermidis) ಮತ್ತು ಇ ರಾಪಾಂಟಿಕ್ (E Rhapontici) ನಂತಹ ಬ್ಯಾಕ್ಟೀರಿಯಾಗಳು ಕಂಡು ಬಂದಿವೆ ಎಂದವರು ಹೇಳಿದ್ದಾರೆ. ಎಮ್ಮೆ ಮೂತ್ರದ ಜೊತೆ ಮನುಷ್ಯನ ಮೂತ್ರದ ಪರೀಕ್ಷೆಯೂ ನಡೆದಿದೆ. ಕಳೆದ ಜೂನ್ ನಿಂದ ನವೆಂಬರ್ ವರೆಗೆ ಈ ಸಂಶೋಧನೆ ನಡೆದಿದೆ. ಸಂಶೋಧನೆಯಲ್ಲಿ ಆರೋಗ್ಯವಂತ ವ್ಯಕ್ತಿಯ ಮೂತ್ರದಲ್ಲೂ ಅಪಾಯಕಾರಿ ಬ್ಯಾಕ್ಟೀರಿಯಾ ಇರುತ್ತದೆ ಎಂಬುದನ್ನು ಅವರು ಪತ್ತೆ ಮಾಡಿದ್ದಾರೆ.
ಹಸುವಿನ ಹಾಲು ಮತ್ತು ಗೋ ಮೂತ್ರ : ಹಸುವಿನ ಹಾಲು ಬ್ಯಾಕ್ಟೀರಿಯಾ ವಿರೋಧಿ. ಹಾಗಂತ ಮೂತ್ರ ಕೂಡ ಬ್ಯಾಕ್ಟೀರಿಯಾ ಹೊಂದಿರುವುದಿಲ್ಲ ಎಂದಲ್ಲ. ಹಸುವಿನ ಮೂತ್ರ ಮನುಷ್ಯರಿಗೆ ಒಳ್ಳೆಯದಲ್ಲ. ಆದ್ರೆ ಡಿಸ್ಟಲ್ ಯೂರಿನ್ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಇನ್ನೂ ಸಂಶೋಧನೆ ನಡೆದಿಲ್ಲ ಎಂದು ಭೋಜರಾಜ್ ಹೇಳಿದ್ದಾರೆ. ಹಸುವಿನ ಡಿಸ್ಟಲ್ ಯೂರಿನ್ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತುಗಳು ಮೊದಲಿನಿಂದಲೂ ಕೇಳಿ ಬರ್ತಿವೆ. ಇದು ಕ್ಯಾನ್ಸರ್ ಮತ್ತು ಕೋವಿಡ್ ವಿರುದ್ಧ ಹೋರಾಡಲು ಸಹಕಾರಿ ಎಂದು ತಜ್ಞರು ಹೇಳಿದ್ದಾರೆ.