ಈ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗ್ತಿದ್ಯಾ ?

ಕೋವಿಡ್ ಲಸಿಕೆ ವ್ಯಾಪಕವಾಗಿ ಹರಡುತ್ತಿದ್ದ ದಿನಗಳಲ್ಲಿ ಕೊರೋನಾ ಲಸಿಕೆ ಜನರ ಜೀವರಕ್ಷಕವಾಗಿ ಕಾರ್ಯ ನಿರ್ವಹಿಸಿದ್ದವು. ವ್ಯಾಕ್ಸಿನ್ ಹಾಕಿಸಿಕೊಂಡರೆ ಸೋಂಕು ಸುಲಭವಾಗಿ ತಗಲುವುದಿಲ್ಲ ಎಂದು ಜನರು ನಿರಾಳವಾಗಿದ್ದರು. ಕೆಲವೊಬ್ಬರು ಲಸಿಕೆ ಹಾಕಿಸಿಕೊಂಡರೆ ಆರೋಗ್ಯ ಸಮಸ್ಯೆ ಕಾಡುತ್ತೆ ಅನ್ನೋ ಆತಂಕ ವ್ಯಕ್ತಪಡಿಸಿದ್ದರು. ತಜ್ಞರು ಸಹ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಕೆಲವೊಂದು ಲಸಿಕೆ ಹೃದಯ ಸಂಬಂಧಿ ಸಮಸ್ಯೆಯನ್ನು ಹೆಚ್ಚು ಮಾಡುತ್ತೆ ಎಂದಿದ್ದಾರೆ.

Covid mRNA Vaccines Increase Cardiac Related Death Risk Vin

ಕಳೆದ ಎರಡು ವರ್ಷಗಳ ಹಿಂದೆ ಆರಂಭವಾದ ಕೊರೋನಾ ಸೋಂಕು ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತ್ತು. ಸಾಕಷ್ಟು ಸಂಶೋಧನೆಗಳ ನಂತರ ವೈರಸ್‌ಗೆ ಪರಿಣಾಮಕಾರಿ ಲಸಿಕೆಯನ್ನು ಕಂಡು ಹಿಡಿಯಲಾಯಿತು. ಜನರು ಸರತಿ ಸಾಲಿನಲ್ಲಿ ನಿಂತು ಕೋವಿಶೀಲ್ಡ್‌, ಕೋವ್ಯಾಕ್ಸಿನ್ ಮೊದಲಾದ ಲಸಿಕೆಗಳನ್ನು ಹಾಕಿಸಿಕೊಂಡರು. ಆದ್ರೆ ಈ ನಿರ್ಧಿಷ್ಟ ಕೊರೋನಾ ಲಸಿಕೆಯ ಬಳಕೆಯಿಂದ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗ್ತಿದೆ ಅನ್ನೋ ಮಾಹಿತಿ ಅಧ್ಯಯನದಿಂದ ಬಯಲಾಗಿದೆ. ಹೌದು, ಕೋವಿಡ್ mRNA ಲಸಿಕೆಗಳು ಹೃದಯ ಸಂಬಂಧಿ ಸಾವಿನ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ಫ್ಲೋರಿಡಾ ಸರ್ಜನ್ ಜನರಲ್ ಡಾ.ಜೋಸೆಫ್ ಎ ಲಡಾಪೋ ಅದರ ಬಳಕೆಯ ವಿರುದ್ಧ ಶಿಫಾರಸು ಮಾಡುವಾಗ ಹೇಳಿದರು ಸಂಶೋಧನೆಯ ಪ್ರಕಾರ, 18-39 ವರ್ಷ ವಯಸ್ಸಿನ ಪುರುಷರಲ್ಲಿ ಹೃದಯ ಸಂಬಂಧಿ ಸಾವಿನ ಹೆಚ್ಚಿನ ಅಪಾಯವನ್ನು ತೋರಿಸಿದೆ ಎಂದು ಡಾ ಲಡಾಪೋ ಹೇಳಿದ್ದಾರೆ. 

'ನಾವು ಸಾರ್ವಜನಿಕರು ತಿಳಿದಿರಬೇಕಾದ ಕೋವಿಡ್ mRNA ಲಸಿಕೆಗಳ (Vaccine) ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದ್ದೇವೆ. ಈ ವಿಶ್ಲೇಷಣೆಯು 18-39 ಪುರುಷರಲ್ಲಿ ಹೃದಯ ಸಂಬಂಧಿ ಸಾವಿನ (Death) ಹೆಚ್ಚಿನ ಅಪಾಯವನ್ನು ತೋರಿಸಿದೆ' ಎಂದು ಡಾ.ಲಪಾಡೊ ಹೇಳಿದರು. ಫ್ಲೋರಿಡಾ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ (ಇಲಾಖೆ) ಸ್ವಯಂ-ನಿಯಂತ್ರಿತ ಕೇಸ್ ಸರಣಿಯ ಮೂಲಕ ವಿಶ್ಲೇಷಣೆಯನ್ನು ನಡೆಸಿತು. ಇದು ಮೂಲತಃ ಲಸಿಕೆ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಅಭಿವೃದ್ಧಿಪಡಿಸಿದ ತಂತ್ರವಾಗಿದೆ. ಇದು ಕೋವಿಡ್ mRNA ವ್ಯಾಕ್ಸಿನೇಷನ್ ನಂತರದ ಮರಣದ ಅಪಾಯವನ್ನು ಅಧ್ಯಯನ (Study) ಮಾಡಿದೆ. 

ಇನ್ಮುಂದೆ ಕೋವಿಡ್ ವ್ಯಾಕ್ಸಿನ್‌ ಸೂಜಿಮುಕ್ತ, ಇನ್ಹೇಲ್ ಆವೃತ್ತಿಗೆ ಚೀನಾ ಅನುಮೋದನೆ

ಲಸಿಕೆ ತೆಗೆದುಕೊಳ್ಳುವ ಬಗ್ಗೆ ಯಾರು ಜಾಗರೂಕರಾಗಿರಬೇಕು?
ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್‌ನಂತಹ ಮೊದಲೇ ಅಸ್ತಿತ್ವದಲ್ಲಿರುವ ಹೃದಯ ಸಂಬಂಧಿ ಕಾಯಿಲೆ (Heart disease)ಗಳನ್ನು ಹೊಂದಿರುವ ರೋಗಿಗಳು (Patients) ವ್ಯಾಕ್ಸಿನೇಷನ್ ಅನ್ನು ಹಾಕಿಸಿಕೊಳ್ಳುವಾಗ ಹೆಚ್ಚು ಜಾಗರೂಕರಾಗಿರಬೇಕು. ಲಸಿಕೆ ಹಾಕುವ ಮೊದಲು ವೈದ್ಯರೊಂದಿಗೆ ಚರ್ಚಿಸಬೇಕು ಎಂದು ಡಾ.ಲಡಾಪೋ ಹೇಳಿದ್ದಾರೆ. 

mRNA ಅಲ್ಲದೆ ಉಳಿದ ಲಸಿಕೆಗಳು ಅಪಾಯಕಾರಿಯೇ ?
ಕೋವಿಡ್‌ಗೆ ಹೆಚ್ಚಿನ ಮಟ್ಟದ ಜಾಗತಿಕ ರೋಗನಿರೋಧಕ ಶಕ್ತಿ (Immunity power)ಯೊಂದಿಗೆ, ಈ ವಯಸ್ಸಿನ ಪುರುಷರಲ್ಲಿ ಹೃದಯ ಸಂಬಂಧಿ ಸಾವಿನ ಅಸಹಜವಾಗಿ ಹೆಚ್ಚಿನ ಅಪಾಯದಿಂದ ವ್ಯಾಕ್ಸಿನೇಷನ್ ಪ್ರಯೋಜನವನ್ನು ಮೀರಿಸುತ್ತದೆ. mRNA ಅಲ್ಲದ ಲಸಿಕೆಗಳು ಈ ಹೆಚ್ಚಿನ ಅಪಾಯಗಳನ್ನು ಹೊಂದಿರುವುದು ಕಂಡುಬಂದಿಲ್ಲ.

mRNA ಕೋವಿಡ್ ಲಸಿಕೆ ಹೇಗೆ ಭಿನ್ನವಾಗಿದೆ ?
ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ, ಜಾಗತಿಕವಾಗಿ ಮಾನವ ಪ್ರಯೋಗ(Test)ಗಳನ್ನು ಪ್ರವೇಶಿಸಿದ ಮೊದಲ ಲಸಿಕೆ mRNA. USನಲ್ಲಿ ಬಳಕೆಗೆ ಲಭ್ಯವಾದ ಮೊದಲ ಎರಡು ಲಸಿಕೆಗಳು mRNA ತಂತ್ರಜ್ಞಾನವನ್ನು ಆಧರಿಸಿವೆ. ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಲು,  ದೇಹದಲ್ಲಿ ದುರ್ಬಲಗೊಂಡ ಅಥವಾ ನಿಷ್ಕ್ರಿಯಗೊಂಡ ವೈರಸ್ ಅನ್ನು ಹಾಕುವ ಲಸಿಕೆಗಳಿಗಿಂತ ಭಿನ್ನವಾಗಿ, ಈ ಎರಡು COVID-19 ಲಸಿಕೆಗಳು (Pfizer-BioNTech ಮತ್ತು Moderna) ಪ್ರತಿರಕ್ಷಣಾ ವ್ಯವಸ್ಥೆಗೆ ಸಂದೇಶವನ್ನು ತಲುಪಿಸಲು RNA ಅಥವಾ mRNA ಅನ್ನು ಬಳಸುತ್ತವೆ.

ಮಾಸ್ಕ್ ಹಾಕ್ಕೊಳ್ಳಿ, ಹರಡ್ತಿದೆ ಡೇಂಜರಸ್‌ ಓಮಿಕ್ರಾನ್ ರೂಪಾಂತರ BF.7 ತಳಿ

ಮೂಲಭೂತವಾಗಿ, ತಂತ್ರಜ್ಞಾನವು ಕೋವಿಡ್ ವೈರಸ್‌ನ ಮೇಲ್ಮೈಯಲ್ಲಿ ಕಂಡುಬರುವ ಎಸ್-ಪ್ರೋಟೀನ್ ಅನ್ನು ಮಾಡಲು ಜೀವಕೋಶಗಳಿಗೆ ಸೂಚನೆ ನೀಡಲು ತಳೀಯವಾಗಿ ವಿನ್ಯಾಸಗೊಳಿಸಲಾದ mRNA ಯನ್ನು ಬಳಸುತ್ತದೆ. US-ಆಧಾರಿತ ಮೇಯೊ ಕ್ಲಿನಿಕ್‌ನ ವರದಿಗಳ ಪ್ರಕಾರ, ವ್ಯಾಕ್ಸಿನೇಷನ್ ನಂತರ, ಸ್ನಾಯು ಕೋಶಗಳು S-ಪ್ರೋಟೀನ್ ತುಣುಕುಗಳನ್ನು ತಯಾರಿಸಲು ಪ್ರಾರಂಭಿಸುತ್ತವೆ ಮತ್ತು ಅವುಗಳನ್ನು ಜೀವಕೋಶದ ಮೇಲ್ಮೈಗಳಲ್ಲಿ ಪ್ರದರ್ಶಿಸುತ್ತವೆ. ಇದು ದೇಹವು ಪ್ರತಿಕಾಯಗಳನ್ನು ಸೃಷ್ಟಿಸಲು ಕಾರಣವಾಗುತ್ತದೆ.

ಭಾರತದಲ್ಲಿ 1ನೇ mRNA ಕೋವಿಡ್ ಲಸಿಕೆ ಶೀಘ್ರದಲ್ಲೇ ಲಭ್ಯ
ಭಾರತದ ಮೊದಲ mRNA ಕೋವಿಡ್-19 ಲಸಿಕೆ ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆಯಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಶೀಘ್ರದಲ್ಲೇ Gennova ನ mRNA ಲಸಿಕೆಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವ ನಿರೀಕ್ಷೆಯಿದೆ. ಲಸಿಕೆ ಸುರಕ್ಷತೆ, ಇಮ್ಯುನೊಜೆನಿಸಿಟಿ ಮತ್ತು ಸಹಿಷ್ಣುತೆಯನ್ನು ಮೌಲ್ಯಮಾಪನ ಮಾಡಲು ಕಂಪನಿಯು 4000 ಭಾಗವಹಿಸುವವರ ಮೇಲೆ ಹಂತ 2 ಮತ್ತು ಹಂತ 3 ಡೇಟಾ ಪ್ರಯೋಗಗಳನ್ನು ನಡೆಸಿದೆ

Latest Videos
Follow Us:
Download App:
  • android
  • ios